Jaggery Types: ಬಾಯಿ ಸಿಹಿ ಮಾಡುವ ಬೆಲ್ಲದಲ್ಲುಂಟು ಬಹುಬಗೆ; ಇದರಲ್ಲಿ ಯಾವುದು ಆರೋಗ್ಯಕ್ಕೆ ಹೆಚ್ಚು ಉತ್ತಮ; ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ಜೀವನಶೈಲಿ  /  Jaggery Types: ಬಾಯಿ ಸಿಹಿ ಮಾಡುವ ಬೆಲ್ಲದಲ್ಲುಂಟು ಬಹುಬಗೆ; ಇದರಲ್ಲಿ ಯಾವುದು ಆರೋಗ್ಯಕ್ಕೆ ಹೆಚ್ಚು ಉತ್ತಮ; ಇಲ್ಲಿದೆ ಮಾಹಿತಿ

Jaggery Types: ಬಾಯಿ ಸಿಹಿ ಮಾಡುವ ಬೆಲ್ಲದಲ್ಲುಂಟು ಬಹುಬಗೆ; ಇದರಲ್ಲಿ ಯಾವುದು ಆರೋಗ್ಯಕ್ಕೆ ಹೆಚ್ಚು ಉತ್ತಮ; ಇಲ್ಲಿದೆ ಮಾಹಿತಿ

ಬೆಲ್ಲ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ, ಆದ್ರೆ ಬೆಲ್ಲದಲ್ಲೂ ವಿಧಗಳಿಗೆ ಎಂಬುದು ಹಲವರಿಗೆ ತಿಳಿದಿರಲಿಕ್ಕಿಲ್ಲ. ಹೌದು ಮೂರ್ನ್ಕಾಲು ರೀತಿಯ ಬೆಲ್ಲಗಳಿವೆ. ಈ ವಿವಿಧ ರೀತಿಯ ಬೆಲ್ಲಗಳು ತಮ್ಮದೇ ಆದ ಪ್ರಯೋಜನಗಳನ್ನು ಹೊಂದಿವೆ. ಇವುಗಳಲ್ಲಿ ಯಾವುದು ಆರೋಗ್ಯಕ್ಕೆ ಹೆಚ್ಚು ಉತ್ತಮ, ಇಲ್ಲದೆ ಮಾಹಿತಿ.

ಬಾಯಿ ಸಿಹಿ ಮಾಡುವ ಬೆಲ್ಲದಲ್ಲುಂಟು ಬಹುಬಗೆ
ಬಾಯಿ ಸಿಹಿ ಮಾಡುವ ಬೆಲ್ಲದಲ್ಲುಂಟು ಬಹುಬಗೆ

ಬೆಲ್ಲ ಎಂದಾಕ್ಷಣ ಬಾಯಲ್ಲಿ ನೀರೂರದೇ ಇರುವುದಿಲ್ಲ, ಬೆಲ್ಲದ ಸವಿಯೇ ಅಂಥದ್ದು. ಆದರೆ ಇತ್ತೀಚಿನ ದಿನಗಳಲ್ಲಿ ತೂಕ ಏರಿಕೆಯ ಭಯದಿಂದ ಜನರು ಬೆಲ್ಲದ ಸೇವನೆಗೆ ಹಿಂದೇಟು ಹಾಕುತ್ತಿದ್ದಾರೆ. ಆದರೆ ಸಕ್ಕರೆಗೆ ಹೋಲಿಸಿದರೆ ಬೆಲ್ಲ ಆರೋಗ್ಯ ಉತ್ತಮ ಎಂಬುದು ಸುಳ್ಳಲ್ಲ. ಬೆಲ್ಲದಿಂದ ಮಾಡಿದ ಸಿಹಿತಿನಿಸುಗಳ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಇಂತಹ ಅದ್ಭುತ ಪ್ರಯೋಜನಗಳನ್ನು ಹೊಂದಿರುವ ಬೆಲ್ಲದಲ್ಲಿ ಸಾಕಷ್ಟು ಬಗೆ ಬಗೆಗಳಿವು ಎಂಬುದು ಹಲವರಿಗೆ ತಿಳಿದಿರಲಿಕ್ಕಿಲ್ಲ.

ಬಹಳ ಹಿಂದಿನ ಕಾಲದಿಂದಲೂ ಬೆಲ್ಲದ ಬಳಕೆ ರೂಢಿಯಲ್ಲಿತ್ತು. ಹಿಂದಿನ ಕಾಲದಲ್ಲಿ ಚಹಾ, ಕಾಫಿಗೂ ಬೆಲ್ಲ ಹಾಕುತ್ತಿದ್ದರು. ಹಲವಾರು ಭಾರತೀಯ ಸಾಂಪ್ರದಾಯಿಕ ಖಾದ್ಯಗಳು ಬೆಲ್ಲವಿಲ್ಲದೇ ತಯಾರಾಗುತ್ತಿರಲಿಲ್ಲ. ಇಂತಹ ಬಹುಮುಖಿ ಬೆಲ್ಲದಲ್ಲಿ ಬಹುಬಗೆ ಇದೆ. ಅವುಗಳು ಯಾವುವು, ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ.

ಕಬ್ಬಿನ ಬೆಲ್ಲ

ಕಂದು ಬಣ್ಣದ ಬೆಲ್ಲ ಕಬ್ಬಿನ ಬೆಲ್ಲವಾಗಿದೆ. ಇದು ಬಹುತೇಕ ಕಡೆ ವ್ಯಾಪಕವಾಗಿ ಬಳಸಲಾಗುತ್ತಿದೆ. ಇದನ್ನು ಕಬ್ಬಿನಿಂದ ತೆಗೆದ ಸಂಸ್ಕರಿಸಿದ ರಸದಿಂದ ಮಾಡಲಾಗುತ್ತದೆ. ಸಾಂಪ್ರದಾಯಿಕ ತಂತ್ರಗಳನ್ನು ಬಳಸಿಕೊಂಡು ಕೈಯಾರೆ ಬೆಲ್ಲವನ್ನು ತಯಾರಿಸುತ್ತಾರೆ. ಹೀಗೆ ಮಾಡುವುದರಿಂದ ಬೆಲ್ಲಕ್ಕೆ ವಿಶೇಷ ರುಚಿ ಸಿಗುತ್ತದೆ. ಹಳೆಯ ವಿಧಾನದಲ್ಲಿ ಕುದಿಸಿ, ಫಿಲ್ಟರ್‌ ಮಾಡಿ ತಯಾರಿಸುವ ಬೆಲ್ಲದ ಘಮವೇ ಅದ್ಭುತ.

ತಾಳೆ ಬೆಲ್ಲ

ತಾಳೆ ಗಿಡದಿಂದ ತಯಾರಿಸುವ ಬೆಲ್ಲವು ತುಂಬಾ ಸಿಹಿಯಾಗಿರುತ್ತದೆ. ಇದು ಬಾಯಲ್ಲಿ ಇಟ್ಟಾಕ್ಷಣಕ್ಕೆ ಕರಗುವ ಗುಣ ಹೊಂದಿದೆ. ತಾಳೆ ಬೆಲ್ಲವು ಖರ್ಜೂರ ಹಣ್ಣಿನ ರುಚಿಯನ್ನು ಹೊಂದಿರುತ್ತದೆ ಮಾತ್ರವಲ್ಲ, ಇದು ಪೌಷ್ಟಿಕಾಂಶ ಸಮೃದ್ಧವಾಗಿರುತ್ತದೆ.

ತೆಂಗಿನ ಬೆಲ್ಲ

ಇದು ಬೆಲ್ಲದ ಇನ್ನೊಂದು ರೂಪ. ದಕ್ಷಿಣ ಭಾರತದಲ್ಲಿ ಬೆಲ್ಲದ ಈ ಬಗೆಯನ್ನು ಕಾಣಬಹುದು. ತೆಂಗಿನಕಾಯಿಯಿಂದ ತಯಾರಿಸುವ ಬೆಲ್ಲ ಹರಳುಗಳ ರಚನೆಯನ್ನು ಹೊಂದಿರುತ್ತದೆ. ಮೊದಲಿನ ಎರಡು ವಿಧಗಳಿಗೆ ಹೋಲಿಸಿದರೆ ಈ ಬೆಲ್ಲವು ಹೆಚ್ಚು ಸಿಹಿ ರುಚಿಯನ್ನು ಹೊಂದಿದೆ.

ಬೆಲ್ಲದ ಆರೋಗ್ಯ ಪ್ರಯೋಜನಗಳು

ಜೀರ್ಣಕ್ರಿಯೆಯನ್ನು ವೃದ್ಧಿಸುತ್ತದೆ: ಬೆಲ್ಲವನ್ನು ನಿಯಮಿತವಾಗಿ ಸೇವಿಸುವುದರಿಂದ ಜೀರ್ಣಕ್ರಿಯೆ ವೃದ್ಧಿಸುತ್ತದೆ. ಜೀರ್ಣಕ್ರಿಯೆಗೆ ನೆರವಾಗುವ ಕಿಣ್ವಗಳನ್ನು ಕ್ರಿಯಾಶೀಲವಾಗಿಸುವುದು ಮಾತ್ರವಲ್ಲ, ಮಲಬದ್ಧತೆಯಂತಹ ಸಮಸ್ಯೆಯನ್ನೂ ನಿವಾರಿಸುತ್ತದೆ. ಬೆಲ್ಲದ ಸೇವನೆಯು ಚಯಾಪಚಯ ಕ್ರಿಯೆಯನ್ನೂ ವೃದ್ಧಿಸುತ್ತದೆ.

ಯಕೃತ್ತನ್ನು ನಿರ್ವಿಷಗೊಳಿಸುತ್ತದೆ: ನಿಯಮಿತ ಪ್ರಮಾಣದಲ್ಲಿ ಬೆಲ್ಲವನ್ನು ಸೇವಿಸುವುದರಿಂದ ಇದು ದೇಹವನ್ನು ನಿರ್ವಿಷಗೊಳಿಸುತ್ತದೆ. ಇದು ನೈಸರ್ಗಿಕವಾಗಿ ದೇಹದಲ್ಲಿ ವಿಷವನ್ನು ಹೊರ ಹಾಕಲು ಸಹಾಯ ಮಾಡುತ್ತದೆ. ಅಲ್ಲದೆ, ಯಕೃತ್ತನ್ನೂ ನಿರ್ಮಿಷಗೊಳಿಸುತ್ತದೆ. ಜೊತೆಗೆ ಇದು ರಕ್ತ ಶುದ್ಧೀಕರಣಕ್ಕೂ ನೆರವಾಗುತ್ತದೆ. ಇದು ರೋಗಗಳ ವಿರುದ್ಧ ಪ್ರತಿರೋಧವನ್ನು ಹೆಚ್ಚಿಸುತ್ತದೆ.

ಈ ಮೂರು ವಿಧದ ಬೆಲ್ಲದಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ?

ಮೂರು ವಿಧದ ಬೆಲ್ಲಗಳು ಖನಿಜಾಂಶ ಹಾಗೂ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಆದರೆ ಫ್ರಕ್ಟೋಸ್‌ ಹಾಗೂ ಗ್ಲೊಕೋಸ್‌ ಅಂಶಗಳ ಆಧಾರದ ಮೇಲೆ ಅವುಗಳ ಆರೋಗ್ಯ ಅಂಶವನ್ನು ಪ್ರತ್ಯೇಕಿಸಲಾಗುತ್ತದೆ. ಕಬ್ಬಿನ ಬೆಲ್ಲವನ್ನು ಫಿಲ್ಟರ್‌ ಮಾಡದ ಕಬ್ಬಿನ ರಸದಿಂದ ತಯಾರಿಸಲಾಗುತ್ತದೆ. ಆದ್ದರಿಂದ ಇದು ತೂಕ ಇಳಿಕೆ ಮಾಡಿಕೊಳ್ಳಲು ಬಯಸುವವರಿಗೆ ಹಾಗೂ ಮಧುಮೇಹಿಗಳಿಗೆ ಒಳ್ಳೆಯದಲ್ಲ ಎನ್ನುತ್ತಾರೆ.

ತೆಂಗಿನಕಾಯಿ ಬೆಲ್ಲ ಉತ್ಕರ್ಷಣ ನಿರೋಧಕಗಳು ಮತ್ತು ಕಬ್ಬಿಣ ಫೋಲೇಟ್‌ ಮತ್ತು ಮೆಗ್ನೀಸಿಯಂನಂತಹ ಖನಿಜಾಂಶಗಳನ್ನು ಹೊಂದಿರುತ್ತದೆ. ಕಬ್ಬಿನ ಬೆಲ್ಲ ಹೋಲಿಸಿದರೆ ತೆಂಗಿನ ಬೆಲ್ಲ ಆರೋಗ್ಯಕ್ಕೆ ಹೆಚ್ಚು ಉತ್ತಮ. ಇನ್ನು ತಾಳೆ ಬೆಲ್ಲವೂ ಕಬ್ಬಿಣಾಂಶ, ಫೋಲೆಟ್‌, ಪೊಟ್ಯಾಶಿಯಂ ಹಾಗೂ ಕ್ಯಾಲ್ಸಿಯಂನಂತಹ ಪೋಷಕಾಂಶಗಳಿಗೆ ಸಮೃದ್ಧವಾಗಿದೆ. ಇದರಲ್ಲಿ ಗ್ಲೈಸೆಮಿಕ್‌ ಅಂಶವೂ ಕಡಿಮೆ ಇದೆ. ಇದು ಕೂಡ ಕಬ್ಬಿನ ಬೆಲ್ಲಕ್ಕಿಂತ ಆರೋಗ್ಯಕ್ಕೆ ಉತ್ತಮ. ಆದರೆ ಯಾವುದೇ ಬೆಲ್ಲವನ್ನಾಗಲೀ ಮಿತವಾಗಿ ಸೇವಿಸುವುದು ಬಹಳ ಮುಖ್ಯ. ಅತಿಯಾದರೆ ಅಮೃತವೂ ವಿಷ ಎಂಬುದನ್ನ ಬೆಲ್ಲ ಸೇವನೆಯ ವಿಚಾರದಲ್ಲೂ ಮರೆಯಬಾರದು.

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner