Child Health: ನೂಡಲ್ಸ್‌ನಿಂದ ಪಿಜ್ಜಾದವರೆಗೆ ಮಕ್ಕಳ ಆರೋಗ್ಯ ಕೆಡಿಸುವ 10 ಜನಪ್ರಿಯ ಜಂಕ್ ಫುಡ್‌ಗಳಿವು
ಕನ್ನಡ ಸುದ್ದಿ  /  ಜೀವನಶೈಲಿ  /  Child Health: ನೂಡಲ್ಸ್‌ನಿಂದ ಪಿಜ್ಜಾದವರೆಗೆ ಮಕ್ಕಳ ಆರೋಗ್ಯ ಕೆಡಿಸುವ 10 ಜನಪ್ರಿಯ ಜಂಕ್ ಫುಡ್‌ಗಳಿವು

Child Health: ನೂಡಲ್ಸ್‌ನಿಂದ ಪಿಜ್ಜಾದವರೆಗೆ ಮಕ್ಕಳ ಆರೋಗ್ಯ ಕೆಡಿಸುವ 10 ಜನಪ್ರಿಯ ಜಂಕ್ ಫುಡ್‌ಗಳಿವು

ʼನನ್ನ ಮಗು ಊಟವನ್ನೇ ತಿನ್ನುವುದಿಲ್ಲʼ ಎನ್ನುವುದು ಇತ್ತೀಚೆಗೆ ಬಹುತೇಕ ತಾಯಂದಿರ ದೂರು. ಆದರೆ ಜಂಕ್‌ಫುಡ್‌ ಕಂಡರೆ ಮಕ್ಕಳು ಬೇಡ ಎನ್ನುವುದಿಲ್ಲ. ಮಕ್ಕಳ ಬಾಯಿಗೆ ರುಚಿಸುವ ಜಂಕ್‌ ಆರೋಗ್ಯಕ್ಕೆ ಖಂಡಿತ ಒಳ್ಳೆಯದಲ್ಲ. ಮಕ್ಕಳ ಆರೋಗ್ಯ ಕೆಡಿಸುವ ಈ 10 ಜನಪ್ರಿಯ ಜಂಕ್‌ಪುಡ್‌ಗಳಿಂದ ಮಕ್ಕಳನ್ನು ದೂರವಿರಸಲು ಮರೆಯದಿರಿ.

ಮಕ್ಕಳ ಆರೋಗ್ಯ ಕೆಡಿಸುವ ಜಂಕ್‌ ಫುಡ್‌ಗಳು
ಮಕ್ಕಳ ಆರೋಗ್ಯ ಕೆಡಿಸುವ ಜಂಕ್‌ ಫುಡ್‌ಗಳು

ಮಕ್ಕಳ ಆರೋಗ್ಯದಲ್ಲಿ ಪೌಷ್ಟಿಕಾಂಶವು ನಿರ್ಣಾಯಕ ಪಾತ್ರ ವಹಿಸುತ್ತದೆ. ಈ ವಿಷಯ ಪೋಷಕರಿಗೆ ಅರಿವಿದ್ದರೂ ಕೂಡ ಮಕ್ಕಳ ಸಮಗ್ರ ಕ್ಷೇಮವನ್ನು ಉತ್ತೇಜಿಸುವ ಆಹಾರವನ್ನು ನೀಡುವಲ್ಲಿ ಪೋಷಕರು ಸೋಲುತ್ತಾರೆ. ಮಕ್ಕಳಿಗೆ ಆರೋಗ್ಯಕ್ಕೆ ಹಿತ ಎನ್ನಿಸುವ ಆಹಾರಕ್ಕಿಂತ ಬಾಯಿಗೆ ರುಚಿ ಎನ್ನಿಸುವ ಆಹಾರ ಸೇವಿಸಲು ಹೆಚ್ಚು ಇಷ್ಟಪಡುತ್ತಾರೆ. ಬಾಯಿಗೆ ರುಚಿ ಎನ್ನಿಸುವ ಕಾರಣಕ್ಕೆ ಜಂಕ್‌ ಫುಡ್‌ ಮಕ್ಕಳನ್ನು ಹೆಚ್ಚು ಆಕರ್ಷಿಸುತ್ತವೆ. ಈ ಆಹಾರಗಳಲ್ಲಿನ ಅತಿಯಾದ ಸಕ್ಕರೆ, ಉಪ್ಪು ಹಾಗೂ ಕೊಬ್ಬಿನಾಂಶವು ಡೊಪಮೈನ್‌ ಬಿಡುಗಡೆಯನ್ನು ಉತ್ತೇಜಿಸುತ್ತದೆ. ಇದು ಅಂತಹ ತಿನಿಸುಗಳಿಗೆ ಮಕ್ಕಳು ಹೆಚ್ಚು ಹಂಬಲಿಸುವಂತೆ ಮಾಡುತ್ತದೆ. ಅಲ್ಲದೆ, ದಾಲ್‌, ಅನ್ನ, ರೊಟ್ಟಿ ಸಬ್ಬಿ, ಹಣ್ಣುಗಳಂತಜ ಸಾಂಪ್ರದಾಯಿಕ ತಿನಿಸುಗಳು ಮಕ್ಕಳ ಬಾಯಿಗೆ ರುಚಿ ಎನ್ನಿಸುವುದಿಲ್ಲ.

ಪಿಜ್ಜಾ, ಬರ್ಗರ್‌, ಚಿಪ್ಸ್‌ನಂತಹ ಜಂಕ್‌ಫುಡ್‌ಗಳ ಸಮಸ್ಯೆ ಎಂದರೆ ಅವು ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ಬೆಂಬಲಿಸುವ ಪ್ರಮುಖ ಜೀವಸತ್ವಗಳು, ಖನಿಜಗಳು, ಫೈಬರ್ ಮತ್ತು ಇತರ ಅಗತ್ಯ ಪೋಷಕಾಂಶಗಳನ್ನು ಹೊಂದಿರುವುದಿಲ್ಲ. ಇವು ಆರೋಗ್ಯವನ್ನು ಇನ್ನಷ್ಟು ಹಾಳು ಮಾಡುವ ಅಂಶಗಳನ್ನು ಹೊಂದಿರಬಹುದು. ವಾರದಲ್ಲಿ ಹಲವಾರು ಬಾರಿ ಜಂಕ್‌ ಫುಡ್‌ ತಿನ್ನುವುದರಿಂದ ಪೌಷ್ಟಿಕಾಂಶದ ಕೊರತೆಗೆ ಕಾರಣವಾಗಬಹುದು. ಅಲ್ಲದೆ ಇದು ಮಕ್ಕಳಲ್ಲಿ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನೂ ಹೆಚ್ಚಿಸಬಹುದು.

ಜಂಕ್‌ಫುಡ್‌ನ ಈ ದುಷ್ಪರಿಣಾಮಗಳನ್ನು ಎದುರಿಸಲು, ಹೆಚ್ಚಿನ ನಾರಿನಾಂಶ ಇರುವ ಸಿರಿಧಾನ್ಯ, ಬೇಳೆಕಾಳುಗಳು, ಸೋಯಾ, ಡೇರಿ ಉತ್ಪನ್ನಗಳು, ಹಣ್ಣು-ತರಕಾರಿಗಳು, ಮಾಂಸ, ಮೀನು, ಮೊಟ್ಟೆ, ಒಣಹಣ್ಣು-ಬೀಜ ಇಂತಹ ಅಗತ್ಯ ಸಮತೋಲಿತ ಆಹಾರ ನೀಡುವುದು ಅವಶ್ಯ. ಈ ಮೇಲೆ ತಿಳಿಸಿದ ಪದಾರ್ಥಗಳಿಂದ ವಿವಿಧ ಬಗೆಯ ಭಿನ್ನ ರುಚಿ ರುಚಿಯಾದ ರುಚಿಯಾದ ಖಾದ್ಯಗಳನ್ನು ತಯಾರಿಸುವ ಮೂಲಕ ಜಂಕ್‌ಫುಡ್‌ಗೆ ಬಾಯ್‌ ಹೇಳಬಹುದು.

ಮಕ್ಕಳಿಂದ ಈ ತಿನಿಸುಗಳನ್ನು ದೂರವಿಡಿ

ಸಿಹಿ ಅಂಶ ಹೆಚ್ಚಿರುವ ಸಿರಲ್ಸ್‌ಗಳು

ಮಕ್ಕಳು ಊಟ, ತಿಂಡಿ ತಿನ್ನದೇ ಇರುವ ಕಾರಣಕ್ಕೆ ಸಿರಲ್ಸ್‌(ಧಾನ್ಯಗಳಿಂದ ಮಾಡಿದ ಪುಡಿ) ಗಳನ್ನು ನೀಡುತ್ತಾರೆ. ಆದರೆ ಕೆಲವು ಸಿರಲ್ಸ್‌ಗಳು ಬೆಳಗಿನ ಉಪಾಹಾರಕ್ಕೆ ಕೇಕ್‌ ಮತ್ತು ಪೇಸ್ಟ್ರಿಗಳನ್ನು ತಿಂದಷ್ಟೇ ಅನಾರೋಗ್ಯಕಾರಿ. ಅವುಗಳು ಸಾಮಾನ್ಯಗಳಿಗೆ ಸಕ್ಕರೆ ಹಾಗೂ ಕ್ಯಾಲೊರಿ ರಹಿತವಾಗಿರುತ್ತವೆ. ಇದರಲ್ಲಿ ಪೌಷ್ಟಿಕಾಂಶದ ಮೌಲ್ಯವು ಕಡಿಮೆ ಇರುತ್ತದೆ. ಆ ಕಾರಣಕ್ಕೆ ಅವುಗಳಲ್ಲಿ ಏನೇನು ಅಂಶಗಳನ್ನು ಸೇರಿಸಲಾಗಿದೆ ಎಂದು ಎಚ್ಚರಿಕೆಯಿಂದ ಪರಿಶೀಲಿಸುವುದು ಅಗತ್ಯ.

ಇನ್‌ಸ್ಟಂಟ್‌ ನೂಡಲ್ಸ್‌

ತಕ್ಷಣಕ್ಕೆ ರೆಡಿಯಾಗುವ ಮಕ್ಕಳ ಬಾಯಿಗೆ ರುಚಿಸುವ ಇನ್‌ಸ್ಟಂಟ್‌ ನೂಡಲ್ಸ್‌ ಅತಿಯಾದ ಸೋಡಿಯಂ ಅಂಶವನ್ನು ಹೊಂದಿರುತ್ತದೆ ಮತ್ತು ಅದರಲ್ಲಿ ಅಗತ್ಯ ಪೋಷಕಾಂಶಗಳು ಇರುವುದಿಲ್ಲ. ನೂಡಲ್ಸ್‌ನಲ್ಲಿ ಆಹಾರದ ನಾರಿನಾಂಶವು ಕಡಿಮೆ ಇರುತ್ತದೆ. ಸುವಾಸನೆಯ ಕಾರಣಕ್ಕೆ ಇದರಲ್ಲಿ ಹಾನಿಕಾರಕ ರಾಸಾಯನಿಕಗಳನ್ನು ಬಳಸಿರುತ್ತಾರೆ.

ಆಲೂಗೆಡ್ಡೆ ಚಿಪ್ಸ್‌

ಚಿಪ್ಸ್‌ ತಿನ್ನಲು ಚೆನ್ನಾಗಿರುತ್ತದೆ. ಒಮ್ಮೆ ತಿಂದರೆ ತಿಂತಾನೇ ಇರಬೇಕು ಅನ್ನಿಸುತ್ತದೆ. ಆದರೆ ಇದರಲ್ಲಿ ಕ್ಯಾನ್ಸರ್‌ಗೆ ಸಂಬಂಧಿಸಿದ ಅಕ್ರಿಲಾಮೈಡ್‌ನಂತಹ ಹಾನಿಕಾರಣ ಪದಾರ್ಥ ಇರುತ್ತದೆ. ಇದರ ಅತಿಯಾದ ಸೇವನೆಯು ಹೃದಯದ ಸಮಸ್ಯೆ ಅಧಿಕ ರಕ್ತದೊತ್ತಡ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಚಿಕನ್‌ ನಗೆಟ್ಸ್‌ ಮತ್ತು ಫಿಂಗರ್ಸ್‌

ಎಣ್ಣೆಯಲ್ಲಿ ಕರಿಯುವ ಈ ಖಾದ್ಯಗಳು ಮಕ್ಕಳಿಗೆ ಅಚ್ಚುಮೆಚ್ಚು. ಆದರೆ ಇವು ಖಂಡಿತ ಆರೋಗ್ಯಕ್ಕೆ ಉತ್ತಮವಲ್ಲ. ಇದರಲ್ಲಿ ದೇಹದ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡುವ ಅಂಶಗಳಿದ್ದು, ಆರೋಗ್ಯ ಸಮಸ್ಯೆಯನ್ನು ಉಂಟು ಮಾಡುತ್ತದೆ.

ಸಕ್ಕರೆ ಅಂಶ ಹೆಚ್ಚಿರುವ ಪಾನೀಯಗಳು

ಸೋಡಾ, ಹಣ್ಣಿನ ರಸ, ಎನರ್ಜಿ ಡ್ರಿಂಕ್‌ನಂತಹ ಪಾನೀಯಗಳನ್ನು ಮಕ್ಕಳು ಸೇವಿಸುವುದು ಖಂಡಿತ ಒಳ್ಳೆಯದಲ್ಲ. ಇದರಲ್ಲಿ ಸ್ವಲ್ಪವು ಪೋಷಕಾಂಶವಿರುವುದಿಲ್ಲ. ಕೆಲವೊಮ್ಮೆ ಸಿಹಿ ಹೆಚ್ಚಿಸುವ ಕಾರಣಕ್ಕೆ ಕೃತಕ ಸಿಹಿಕಾರಕಗಳನ್ನೂ ಬಳಸುತ್ತಾರೆ. ಈ ಪಾನೀಯಗಳು ಅತಿಯಾದ ಕ್ಯಾಲೊರಿ ಅಂಶ ದೇಹವನ್ನು ಸೇರುವಂತೆ ಮಾಡುತ್ತದೆ. ಇದು ತೂಕ ಹೆಚ್ಚುವುದು, ಟೈಪ್‌ 2 ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.

ಕರಿದ ತಿನಿಸುಗಳು

ಆಲೂಗೆಡ್ಡೆ ಚಿಪ್ಸ್‌, ಫ್ರೆಂಚ್‌ ಫ್ರೈಗಳಂತಹ ಕರಿದ ತಿನಿಸುಗಳಲ್ಲಿ ಅನಾರೋಗ್ಯಕರ ಕರಗದ ಕೊಬ್ಬಿನಾಂಶ, ಸೋಡಿಯಂ ಮತ್ತು ಕ್ಯಾಲೊರಿ ಅಂಶ ಅಧಿಕವಾಗಿರುತ್ತದೆ. ಈ ತಿನಿಸುಗಳು ತೂಕ ಹೆಚ್ಚಿಸುವುದು ಮಾತ್ರವಲ್ಲ ಹೃದ್ರೋಗ ಮತ್ತು ಅಧಿಕ ರಕ್ತದೊತ್ತಡದ ಅಪಾಯವನ್ನೂ ಹೆಚ್ಚಿಸುತ್ತವೆ. ಅವುಗಳ ಬದಲು ಮಕ್ಕಳಿಗೆ ಪಾಪ್‌ಕಾರ್ನ್‌, ಸಿಹಿಗೆಣಸಿನಂತಹ ನೈಸರ್ಗಿಕ ಪದಾರ್ಥಗಳನ್ನು ನೀಡಬಹುದು.

ಕ್ಯಾಂಡಿ ಮತ್ತು ಸಿಹಿ

ಮಿಠಾಯಿಗಳು, ಚಾಕೊಲೇಟ್‌ಗಳು ಮತ್ತು ಇತರ ಸಕ್ಕರೆ ಪದಾರ್ಥಗಳು ಕ್ಯಾಲೊರಿ ಅಂಶ ಇರುವುದಿಲ್ಲ. ಅಲ್ಲದೆ, ಇದರಿಂದ ತೂಕ ಹೆಚ್ಚುವುದು, ಹಲ್ಲು ವಸಡಿನ ಸಮಸ್ಯೆ ಕಾಣಿಸಬಹುದು.

ಸಂಸ್ಕರಿತ ಮಾಂಸಗಳು

ಸಾಸೇಜ್‌, ಹಾಟ್‌ಡಾಗ್‌, ರೆಡಿ ಟು ಕುಕ್‌ ಮಾಂಸ, ಪ್ರೋಜನ್‌ ನಗ್ಗೆಟ್ಸ್‌ನಂತಹ ಪದಾರ್ಥಗಳಲ್ಲಿ ಪ್ರಿಸರ್ವೇಟಿವ್‌ ಹಾಗೂ ಸೋಡಿಯಂ ಅಂಶ ಹೆಚ್ಚಿರುತ್ತದೆ. ಇವುಗಳ ನಿರಂತರ ಸೇವನೆಯು ಕ್ಯಾನ್ಸರ್‌ ಮತ್ತು ಹೃದ್ರೋಗದಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.

ಪ್ಯಾಕೆಟ್‌ನಲ್ಲಿರುವ ಸ್ನಾಕ್ಸ್‌ಗಳು

ಕುಕ್ಕಿ, ಕ್ರ್ಯಾಕರ್‌, ಗ್ರಾನೋಲಾ ಬಾರ್‌ನಂತಹ ಪ್ಯಾಕೆಟ್‌ಗಳಲ್ಲಿ ಸಂಗ್ರಹಿಸುವ ಲಘು ಆಹಾರಗಳಲ್ಲಿ ಸಂಸ್ಕರಿಸಿದ ಹಿಟ್ಟು, ಸಕ್ಕರೆ, ಅನಾರೋಗ್ಯಕರ ಕೊಬ್ಬಿನಾಂಶ ಅಧಿಕವಾಗಿರುತ್ತದೆ. ಇವು ಅಗತ್ಯ ಪೋಷಕಾಂಶಗಳನ್ನು ಹೊಂದಿರುವುದಿಲ್ಲ. ಇವು ಆರೋಗ್ಯ ಅಪಾಯ.

ಬರ್ಗರ್‌ ಫಿಜ್ಜಾ

ಫಾಸ್ಟ್ ಫುಡ್ ಬರ್ಗರ್‌ಗಳು ಮತ್ತು ಪಿಜ್ಜಾಗಳು ಸ್ಯಾಚುರೇಟೆಡ್ ಕೊಬ್ಬುಗಳು, ಸೋಡಿಯಂ ಮತ್ತು ಕ್ಯಾಲೋರಿಗಳಲ್ಲಿ ಸಾಮಾನ್ಯವಾಗಿ ಅಧಿಕವಾಗಿರುತ್ತವೆ. ನಿಯಮಿತ ಸೇವನೆಯು ತೂಕ ಹೆಚ್ಚಾಗುವುದು, ಅಧಿಕ ಕೊಲೆಸ್ಟ್ರಾಲ್ ಮಟ್ಟಗಳು ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ.

Whats_app_banner