Mpox: ಕೇರಳದಲ್ಲಿ 2ನೇ ಎಂಪಾಕ್ಸ್‌ ಪ್ರಕರಣ ಪತ್ತೆ, ಕೇಂದ್ರದಿಂದ ಮಾರ್ಗಸೂಚಿ ಪ್ರಕಟ; ಎಂಪಾಕ್ಸ್‌ಗೂ ಕೋವಿಡ್‌ 19ಗೂ ಇರುವ ವ್ಯತ್ಯಾಸಗಳೇನು?-health news kerala confirms second mpox case what is difference between mpox and covid 19 centre advisory pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Mpox: ಕೇರಳದಲ್ಲಿ 2ನೇ ಎಂಪಾಕ್ಸ್‌ ಪ್ರಕರಣ ಪತ್ತೆ, ಕೇಂದ್ರದಿಂದ ಮಾರ್ಗಸೂಚಿ ಪ್ರಕಟ; ಎಂಪಾಕ್ಸ್‌ಗೂ ಕೋವಿಡ್‌ 19ಗೂ ಇರುವ ವ್ಯತ್ಯಾಸಗಳೇನು?

Mpox: ಕೇರಳದಲ್ಲಿ 2ನೇ ಎಂಪಾಕ್ಸ್‌ ಪ್ರಕರಣ ಪತ್ತೆ, ಕೇಂದ್ರದಿಂದ ಮಾರ್ಗಸೂಚಿ ಪ್ರಕಟ; ಎಂಪಾಕ್ಸ್‌ಗೂ ಕೋವಿಡ್‌ 19ಗೂ ಇರುವ ವ್ಯತ್ಯಾಸಗಳೇನು?

Mpox In India: ಕೇರಳದಲ್ಲಿ ಎಂಪಾಕ್ಸ್‌ ಸೋಂಕಿನ ಎರಡನೇ ಪ್ರಕರಣ ಪತ್ತೆಯಾಗಿದೆ. ಕೇಂದ್ರ ಸರಕಾರವು ಮಂಕಿಪಾಕ್ಸ್‌ಗೆ ಸಂಬಂಧಪಟ್ಟಂತೆ ಮಾರ್ಗಸೂಚಿ ಪ್ರಕಟಿಸಿದೆ. ಎಂಪಾಕ್ಸ್‌ಗೂ ಕೋವಿಡ್‌ 19ಗೂ ಇರುವ ವ್ಯತ್ಯಾಸವೇನು? ಎಂದು ತಿಳಿಯುವುದು ಅತ್ಯಂತ ಅಗತ್ಯವಾಗಿದೆ. ಕೋವಿಡ್‌ 19 ಹೋಲುವ ಲಕ್ಷಣಗಳಿದ್ದರೂ, ದೇಹದಲ್ಲಿ ದದ್ದುಗಳು ಇದ್ದರೆ ಅದು ಎಂಪಾಕ್ಸ್‌ ಆಗಿರಬಹುದು.

ಎಂಪಾಕ್ಸ್‌ ಸೋಂಕು (ಸಾಂದರ್ಭಿಕ ಚಿತ್ರ)(REUTERS)
ಎಂಪಾಕ್ಸ್‌ ಸೋಂಕು (ಸಾಂದರ್ಭಿಕ ಚಿತ್ರ)(REUTERS) (HT_PRINT)

Mpox In India: ಕೇರಳದಲ್ಲಿ ಎಂಪಾಕ್ಸ್‌ ಎರಡನೇ ಪ್ರಕರಣ ಪತ್ತೆಯಾಗಿದೆ. ಇದು ಮಂಕಿಪಾಕ್ಸ್‌ ವೈರಸ್‌ ಉಂಟುಮಾಡುವ ಕಾಯಿಲೆ. ಯುಎಇಯಿಂದ ಆಗಮಿಸಿದ್ದ ಕೇರಳದ ರೋಗಿಯನ್ನು ಎರ್ನಾಕುಲಂನಲ್ಲಿ ಆಸ್ಪತ್ರೆಗೆ ಸೇರಿಸಲಾಗಿದೆ. ಆತನ ಆರೋಗ್ಯ ಸ್ಥಿರವಾಗಿದೆ. ಕಳೆದ ವಾರ ಮಲಪ್ಪುರಂನಲ್ಲಿ 38 ವರ್ಷದ ವ್ಯಕ್ತಿಯೊಬ್ಬರಲ್ಲಿ ಕೇರಳದ ಮೊದಲ ಎಂಪಾಕ್ಸ್‌ ಕಾಣಿಸಿಕೊಂಡಿತ್ತು. ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ಎಂಪಾಕ್ಸ್‌ ಅನ್ನು ಅಂತಾರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ" ಎಂದು ಘೋಷಿಸಿದೆ. ಈಗಾಗಲೇ ಕೇರಳದಲ್ಲಿ ಎರಡನೇ ವ್ಯಕ್ತಿಯಲ್ಲಿ ಎಂಪಾಕ್ಸ್‌ ಕಾಣಿಸಿಕೊಂಡಿರುವುದರಿಂದ "ವಿದೇಶದಿಂದ ಪ್ರಯಾಣ ಮಾಡಿ ಬಂದವರಲ್ಲಿ ಎಂಪಾಕ್ಸ್‌ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು" ಎಂದು ಆರೋಗ್ಯ ಸಚಿವೆ ವೀನಾ ಚಾರ್ಜ್‌ ಹೇಳಿದ್ದಾರೆ. ಇಂತಹ ಪ್ರಕರಣಗಳು ಕಂಡುಬಂದ ತಕ್ಷಣ ರೋಗಿಗಳನ್ನು ಐಸೋಲೇಷನ್‌ನಲ್ಲಿಡಲು ರಾಜ್ಯದ್ಯಾಂತ 14 ಆಸ್ಪತ್ರೆಗಳನ್ನು ಸಜ್ಜುಗೊಳಿಸಲಾಗಿದೆ.

Mpox: ಕೇಂದ್ರ ಸರಕಾರದಿಂದ ಮಾರ್ಗಸೂಚಿ ಪ್ರಕಟ

ಈಗಾಗಲೇ ಕೇಂದ್ರ ಸರಕಾರವು ಎಂಪಾಕ್ಸ್‌ಗೆ ಸಂಬಂಧಪಟ್ಟಂತೆ ಎಲ್ಲಾ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಾರ್ಗಸೂಚಿ ಪ್ರಕಟಿಸಿದೆ. ಈ ಅಡ್ವೈಸರಿಯಲ್ಲಿ ಎಂಪಾಕ್ಸ್‌ ತಡೆ ಮತ್ತು ನಿಯಂತ್ರಣಕ್ಕೆ ಸೂಚನೆಗಳನ್ನು ನೀಡಲಾಗಿದೆ. ಈ ಹಿಂದೆ ಎಂಪಾಕ್ಸ್‌ ಅನ್ನು ಮಂಕಿಪಾಕ್ಸ್‌ ಎಂದು ಕರೆಯಲಾಗುತ್ತಿತ್ತು.

ಎಂಪಾಕ್ಸ್‌ ಹರಡದಂತೆ ಇರಲು ಏನು ಮಾಡಬೇಕು?

  • ಸಾರ್ವಜನಿಕ ಜಾಗೃತಿ ಹೆಚ್ಚಳ. ಎಂಪಾಕ್ಸ್‌ ಲಕ್ಷಣಗಳು, ಹರಡುವ ರೀತಿ, ತಕ್ಷಣ ಆಸ್ಪತ್ರೆಗೆ ದಾಖಲಾಗುವ ಅಗತ್ಯದ ಕುರಿತು ಸಾರ್ವಜನಿಕ ಜಾಗೃತಿ ಹೆಚ್ಚಿಸಬೇಕು.
  • ಸಂಶಯಿತ ಪ್ರಕರಣಗಳ ಕುರಿತು ತಕ್ಷಣ ಕಾಳಜಿ ವಹಿಸಬೇಕು. ರೋಗಿಯನ್ನು ತಕ್ಷಣ ಐಸೋಲೇಟ್‌ ಮಾಡಬೇಕು. ಆ ಸ್ಥಳದಲ್ಲಿ ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು.
  • ಐಸೋಲೇಷನ್‌ ಸೌಲಭ್ಯಗಳನ್ನು ಆಸ್ಪತ್ರೆಗಳು ಹೊಂದಬೇಕು. ಸಂಶಯಿತ ಮತ್ತು ಖಚಿತಗೊಂಡ ಪ್ರಕರಣಗಳಿಗೆ ತಕ್ಕಂತೆ ಐಸೋಲೇಷನ್‌ ವ್ಯವಸ್ಥೆ ಮಾಡಬೇಕು.
  • ರೋಗಲಕ್ಷಣ ಆಧರಿಸಿ ಚಿಕಿತ್ಸೆ ನೀಡಬೇಕು.
  • ಪರೀಕ್ಷೆಗೆ ಸ್ಯಾಂಪಲ್‌ ಕಳುಹಿಸಬೇಕು.
  • *ಐಸಿಎಂಆರ್‌ ಅಂಗೀಕೃತ ಲ್ಯಾಬ್‌ಗಳು, ಪಿಸಿಆರ್‌ ಕಿಟ್‌ಗಳನ್ನು ಹೆಚ್ಚಿಸಬೇಕು.

ಮಾಡಬಾರದ ವಿಷಯಗಳು

  • ಸಾರ್ವಜನಿಕರಲ್ಲಿ ಭಯ ಹುಟ್ಟಿಸಬಾರದು. ಎಂಪಾಕ್ಸ್‌ ಕುರಿತು ಸ್ಪಷ್ಟ ಸಾರ್ವಜನಿಕ ಸಂವಹನ ನಡೆಯಬೇಕು.
  • ಕಾಯಿಲೆ ಇರುವವರು ಕಂಡುಬಂದರೆ ಸಂಬಂಧಪಟ್ಟ ವಿಭಾಗಕ್ಕೆ ತಕ್ಷಣ ಮಾಹಿತಿ ನೀಡಬೇಕು. ಇದನ್ನು ವಿಳಂಬ ಮಾಡಬಾರದು.
  • ಆಸ್ಪತ್ರೆಗಳಲ್ಲಿ ಅನಗತ್ಯ ದಟ್ಟಣೆ ಉಂಟುಮಾಡಬಾರದು. ರೋಗಲಕ್ಷಣಗಳಿದ್ದರೆ ಮಾತ್ರ ಆಸ್ಪತ್ರೆಗೆ ದಾಖಲಿಸಬೇಕು.
  • ಸಣ್ಣಪುಟ್ಟ ರೋಗಲಕ್ಷಣಗಳಿದ್ದರೂ ಟೆಸ್ಟ್‌ ಮಾಡಬೇಕು, ಅಗತ್ಯಬಿದ್ದರೆ ಐಸೋಲೇಟ್‌ ಮಾಡಬೇಕು.

ಎಂಪಾಕ್ಸ್‌ಗೂ ಕೊರೊನಾ (ಕೋವಿಡ್‌-19)ಗೂ ಇರುವ ವ್ಯತ್ಯಾಸಗಳೇನು?

ಇವೆರಡೂ ವೈರಲ್‌ ಸೋಂಕುಗಳು. ಜ್ವರ, ಕೆಮ್ಮು, ಆಯಾಸದಂತಹ ಲಕ್ಷಣಗಳನ್ನು ಹೊಂದಿರುತ್ತವೆ. ಇವೆರಡೂ ನಿಕಟ ಲಕ್ಷಣಗಳನ್ನು ಹೊಂದಿರುವುದರಿಂದ ಸೂಕ್ತ ಪರೀಕ್ಷೆ ಇಲ್ಲದೆ ಆರಂಭಿಕ ಹಂತದಲ್ಲಿ ರೋಗಿಯಲ್ಲಿ ಇರುವ ನಿರ್ದಿಷ್ಟ ಸೋಂಕು ಗುರುತಿಸುವುದು ಸವಾಲಾಗಬಹುದು. ಎಂಪಾಕ್ಸ್‌ ಅತ್ಯಂತ ವೇಗವಾಗಿ ಹರಡುತ್ತಿದೆ. ಬಹುತೇಕ 120 ದೇಶಗಳಲ್ಲಿ ಆವರಿಸಿಕೊಂಡಿದೆ. ಜಾಗತಿಕ ಪ್ರಭಾವದ ದೃಷ್ಟಿಯಿಂದ ಎಂಪಾಕ್ಸ್‌ ಅನ್ನು ಕೋವಿಡ್‌ 19ಗೆ ಹೋಲಿಸಲಾಗುತ್ತಿದೆ. ಆದರೆ, ಇದು ಕೋವಿಡ್‌-19ನಂತೆ ಅಲ್ಲ. ಕೋವಿಡ್‌ಗೂ ಎಂಪಾಕ್ಸ್‌ಗೂ ಇರುವ ವ್ಯತ್ಯಾಸ ತಿಳಿಯವುದು ಅಗತ್ಯವಾಗಿದೆ.

ಎಂಪಾಕ್ಸ್‌ ಮತ್ತು ಕೋವಿಡ್‌-19ನ ಆರಂಭಿಕ ರೋಗಲಕ್ಷಣಗಳು ಒಂದೇ ರೀತಿ ಕಾಣಿಸಿದರೂ ಅವು ವಿಭಿನ್ನ ಗುಣಲಕ್ಷಣಗಳನ್ನು ಹೊಂದಿವೆ. ಹೀಗಾಗಿ, ಯಾವ ಸೋಂಕು ಎಂದು ಪತ್ತೆಹಚ್ಚಬಹುದು.

ಎಂಪಾಕ್ಸ್‌ ರೋಗಲಕ್ಷಣಗಳು

ದೇಹದಲ್ಲಿ ವಿಶಿಷ್ಟ ದದ್ದು ಉಂಟಾಗುತ್ತದೆ. ಇದು ಚಪ್ಪಟ್ಟೆಯಾದ ದ್ರವ ತುಂಬಿದ ಗುಳ್ಳೆಗಳಂತೆ ಇರುತ್ತದೆ. ಸಾಮಾನ್ಯವಾಗಿ ಮುಖದ ಮೇಲೆ ಆರಂಭವಾಗುತ್ತದೆ. ಬಳಿಕ ದೇಹದ ಇತರೆ ಭಾಗಗಳಿಗೆ ಹರಡುತ್ತದೆ. ಜ್ವರ, ತಲೆನೋವು, ಸ್ನಾಯುನೋವು, ಬೆನ್ನು ನೋವು, ಶೀತ, ನಿಶ್ಯಕ್ತಿಯಂತಹ ಸಾಮಾನ್ಯ ಲಕ್ಷಣಗಳನ್ನು ಹೊಂದಿವೆ.

ಕೋವಿಡ್‌ 19 ಲಕ್ಷಣಗಳು

ಕೋವಿಡ್‌ 19 ಸೋಂಕು ಉಂಟಾದರೆ ಸಾಮಾನ್ಯವಾಗಿ ಜ್ವರ, ಕೆಮ್ಮೆಉ, ಉಸಿರಾಟದ ತೊಂದರೆ, ಆಯಾಸ, ಸ್ನಾಯು ಅಥವಾ ದೇಹದ ನೋವು, ರುಚಿ ಅಥವಾ ವಾಸನೆ ನಷ್ಟ, ಗಂಟಲು ನೋವು, ಸ್ರವಿಸುವ ಮೂಗು, ವಾಕರಿಕೆ, ಅತಿಸಾರದಂತಹ ಜಠರಗರುಳಿನ ರೋಗಲಕ್ಷಣಗಳನ್ನು ಹೊಂದಿವೆ.

ಇವೆರಡೂ ಸೋಂಕು ಪೀಡಿತರಲ್ಲಿ ಜ್ವರ ಮತ್ತು ಇತರೆ ಅಸ್ವಸ್ಥತೆಗಳು ಸಾಮಾನ್ಯವಾಗಿದೆ. ಈ ಲಕ್ಷಣದೊಂದಿಗೆ ದೇಹದಲ್ಲಿ ದದ್ದುಗಳು ಮೂಡಿದರೆ ಅದು ಎಂಪಾಕ್ಸ್‌ ಆಗಿರಬಹುದು.

ಎಂಪಾಕ್ಸ್‌ ಯಾರಿಗೆ ಹೆಚ್ಚು ಅಪಾಯಕಾರಿ?

ಚಿಕ್ಕ ಮಕ್ಕಳು, ರೋಗ ನಿರೋಧಕ ಶಕ್ತಿ ದುರ್ಬಲಗೊಂಡವರು (ಎಚ್‌ಐವಿ ಇತ್ಯಾದಿ ಹೊಂದಿರುವವರು ಒಳಗೊಂಡಂತೆ), ಗರ್ಭಿಣಿಯರಿಗೆ ಹೆಚ್ಚಿನ ಅಪಾಯ ಉಂಟಾಗುತ್ತದೆ ಎಂದು ಹೇಳಲಾಗಿದೆ.

ಎಂಪಾಕ್ಸ್‌ ಚಿಕಿತ್ಸೆ ಏನು? ತಡೆಗಟ್ಟುವಿಕೆ ಹೇಗೆ?

ಎಂಪಾಕ್ಸ್‌ನ ರೋಗಲಕ್ಷಣಗಳನ್ನು ಆಧರಿಸಿ ಚಿಕಿತ್ಸೆ ನೀಡಲಾಗುತ್ತದೆ. ಹೆಚ್ಚಿನ ಅಪಾಯ ಇರುವವರಿಗೆ ಲಸಿಕೆ ನೀಡಲು ಶಿಫಾರಸು ಮಾಡಬಹುದು. ಎಂಪಾಕ್ಸ್‌ ತಡೆಗಟ್ಟಲು ಉತ್ತಮ ವೈಯಕ್ತಿಕ ನೈರ್ಮಲ್ಯದ ಅಭ್ಯಾಸ ಅಗತ್ಯ. ಸೋಂಕಿತ ವ್ಯಕ್ತಿಗಳ ನಿಕಟ ಸಂಪರ್ಕವನ್ನು ತಪ್ಪಿಸಬೇಕು.

mysore-dasara_Entry_Point