ಕನ್ನಡ ಸುದ್ದಿ  /  ಜೀವನಶೈಲಿ  /  Snacks Ideas: ಪನೀರ್ ಟಿಕ್ಕಾದಿಂದ ತಂದೂರಿ ವಿಂಗ್ಸ್‌ವರೆಗೆ ಮನೆಯಲ್ಲೇ ಮಾಡಿ ಈ 7 ಟೇಸ್ಟಿ ರೆಸಿಪಿ: ತೂಕ ಹೆಚ್ಚಾಗುತ್ತೇ ಅನ್ನೋ ಚಿಂತೆಯೇ ಬೇಡ

Snacks ideas: ಪನೀರ್ ಟಿಕ್ಕಾದಿಂದ ತಂದೂರಿ ವಿಂಗ್ಸ್‌ವರೆಗೆ ಮನೆಯಲ್ಲೇ ಮಾಡಿ ಈ 7 ಟೇಸ್ಟಿ ರೆಸಿಪಿ: ತೂಕ ಹೆಚ್ಚಾಗುತ್ತೇ ಅನ್ನೋ ಚಿಂತೆಯೇ ಬೇಡ

ಬಾಯಲ್ಲಿ ನೀರೂರಿಸುವ ಬಗೆ-ಬಗೆಯ ತಿಂಡಿಗಳು. ಬಾಯಿಗೆ ಹಾಕಿಕೊಳ್ಳೋಣ ಅಂದ್ರೆ ತೂಕ ಹೆಚ್ಚಾಗುವ ಭಯ ಹಲವರದ್ದು. ಆದರೆ, ಎಲ್ಲಾ ತಿನಿಸುಗಳಲ್ಲೂ ತೂಕ ಹೆಚ್ಚಳವಾಗುವ ಅಪಾಯವಿಲ್ಲ. ಈ ದೇಸಿ ಶೈಲಿಯ ಟ್ರೀಟ್ ಅನ್ನು ಮನೆಯಲ್ಲೇ ತಯಾರಿಸಿ, ಸವಿಯಿರಿ. ಆರೋಗ್ಯಕರ ಹಾಗೂ ರುಚಿಕರವಾದ ಈ ತಿನಿಸುಗಳನ್ನು ಸೇವಿಸುವುದು ತೂಕ ನಷ್ಟಕ್ಕೂ ಸಹಕಾರಿ.

ಪನೀರ್ ಟಿಕ್ಕಾದಿಂದ ತಂದೂರಿ ವಿಂಗ್ಸ್‌ವರೆಗೆ ಮನೆಯಲ್ಲೇ ಮಾಡಿ ಈ 7 ಟೇಸ್ಟಿ  ರೆಸಿಪಿ: ತೂಕ ಹೆಚ್ಚಾಗುತ್ತೇ ಅನ್ನೋ ಚಿಂತೆಯೇ ಬೇಡ
ಪನೀರ್ ಟಿಕ್ಕಾದಿಂದ ತಂದೂರಿ ವಿಂಗ್ಸ್‌ವರೆಗೆ ಮನೆಯಲ್ಲೇ ಮಾಡಿ ಈ 7 ಟೇಸ್ಟಿ ರೆಸಿಪಿ: ತೂಕ ಹೆಚ್ಚಾಗುತ್ತೇ ಅನ್ನೋ ಚಿಂತೆಯೇ ಬೇಡ

ಟೇಸ್ಟಿ ಟ್ರೀಟ್‌ಗಳನ್ನು ಸವಿದರೆ ತೂಕ ಹೆಚ್ಚಾಗುವುದಿಲ್ಲ. ಮನೆಯಲ್ಲೇ ತಯಾರಿಸುವ ಆರೋಗ್ಯಕರ ತಿನಿಸುಗಳನ್ನು ನೀವು ಪ್ರಯತ್ನಿಸಬಹುದು. ನೀವು ರುಚಿಕರ ತಿಂಡಿಗಳಿಗಾಗಿ ಹಾತೊರೆಯುತ್ತಿದ್ದು, ತೂಕ ಹೆಚ್ಚಾಗಬಹುದು ಎಂಬ ಭಯದಿಂದ ತಿನ್ನದೇ ಇರಬಹುದು. ಆದರೆ, ಆರೋಗ್ಯಕರ ತಿನಿಸುಗಳನ್ನು ಮನೆಯಲ್ಲೇ ತಯಾರಿಸುವುದರಿಂದ ತೂಕದಲ್ಲಿ ಹೆಚ್ಚಳವಾಗುವುದಿಲ್ಲ. ಭಾರತೀಯ ಶೈಲಿಯ ಆರು ಬಗೆಯ ಕಡಿಮೆ ಕ್ಯಾಲೋರಿ ತಿಂಡಿಗಳನ್ನು ನಿಮಗೆ ಪರಿಚಯಿಸುತ್ತಿದ್ದೇವೆ. ನಾಲಿಗೆಗೂ ರುಚಿ, ಹೊಟ್ಟೆಯೂ ಸಂಪನ್ನ. ತೂಕ ನಷ್ಟಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ಹಾಗಿದ್ದರೆ ಬನ್ನಿ ಆ ತಿನಿಸುಗಳು ಯಾವುದು? ಅದನ್ನು ತಯಾರಿಸುವ ಬಗೆ ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ..

1. ಸಿಹಿ ಆಲೂಗಡ್ಡೆ ಫ್ರೈಸ್

ಈ ಸುಲಭವಾದ ತಿನಿಸು ಮಾಡಲು, ಸಿಹಿ ಆಲೂಗಡ್ಡೆಗಳನ್ನು ಚೆನ್ನಾಗಿ ಕುದಿಸಿ ನಂತರ ಅದರ ಸಿಪ್ಪೆ ತೆಗೆಯಿರಿ. ಬಳಿಕ ಅವುಗಳನ್ನು ತೆಳುವಾಗಿ ಉದ್ದುದ್ದಕ್ಕೆ ಕತ್ತರಿಸಿ. ಕತ್ತರಿಸಿಟ್ಟ ಆಲೂಗಡ್ಡೆಗೆ 1 ಟೀ ಸ್ಪೂನ್ ಎಣ್ಣೆ, ನಿಂಬೆ ರಸ, ಚಾಟ್ ಮಸಾಲಾ, ಕೆಂಪು ಮೆಣಸಿನ ಪುಡಿ, ಉಪ್ಪು ಮತ್ತು ಕರಿಮೆಣಸಿನೊಂದಿಗೆ ಮಿಶ್ರಣ ಮಾಡಿ. ಅವುಗಳನ್ನು ಬೇಕಿಂಗ್ ಶೀಟ್‌ನಲ್ಲಿ ಇರಿಸಿ ಏರ್ ಫ್ರೈಯರ್‌ನಲ್ಲಿ ಹುರಿಯಿರಿ. ಎಣ್ಣೆಯಲ್ಲಿ ಸಹ ಗೋಲ್ಡನ್ ಬ್ರೌನ್ ಆಗುವವರೆಗೆ ಕರಿಯಬೇಕು. ಆದರೆ, ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆಯಲ್ಲಿ ಕರಿದರೆ ಉತ್ತಮ. ಇದು ಕೊಬ್ಬಿನಾಂಶ ಇಲ್ಲದೆ ಇರುವುದರಿಂದ ಈ ಎಣ್ಣೆಯಲ್ಲಿ ಕರಿಯುವುದು ಸೂಕ್ತ.

2. ಮಸಾಲೆ ಹುರಿದ ಕಡಲೆ

ನೆನೆಸಿದ ಮತ್ತು ಬೇಯಿಸಿದ ಕಡಲೆಯನ್ನು ಜೀರಿಗೆ, ಮೆಣಸಿನ ಪುಡಿ ಮತ್ತು ಬೆಳ್ಳುಳ್ಳಿ ಪುಡಿಯಲ್ಲಿ ಚೆನ್ನಾಗಿ ಮಿಕ್ಸ್ ಮಾಡಬೇಕು. ನಂತರ ಏರ್ ಫ್ರೈಯರ್‌ನಲ್ಲಿ ಹುರಿಯಿರಿ. ಫೈಬರ್ ಮತ್ತು ಪ್ರೊಟೀನ್‌ನಿಂದ ಸಮೃದ್ಧವಾಗಿರುವ ಈ ಹುರಿದ ಕಡಲೆಯು ಸಂಜೆಯ ಚಹಾದೊಂದಿಗೆ ಸವಿಯಲು ಸೂಕ್ತ.

ಟ್ರೆಂಡಿಂಗ್​ ಸುದ್ದಿ

3. ತರಕಾರಿ ಸ್ಟಿಕ್‌ಗಳೊಂದಿಗೆ ಸೌತೆಕಾಯಿ ರೈತಾ

ಈ ದೇಸಿ ಟ್ರೀಟ್‌ನೊಂದಿಗೆ ನಿಮ್ಮ ಚಿಟ್ ಚಾಟ್ ಸಮಯಕ್ಕೆ ರುಚಿಕರವಾದ ಟ್ವಿಸ್ಟ್ ಅನ್ನು ನೀಡಿ, ಆಯ್ಕೆಯ ಕುರುಕುಲಾದ ತರಕಾರಿ ಸ್ಟಿಕ್‌ಗಳ ಜೊತೆಗೆ ರಿಫ್ರೆಶ್ ಸೌತೆಕಾಯಿ ರೈತಾವನ್ನು ಮಾಡಿ. ಕೊಬ್ಬು ತುಂಬಿದ ಮಾಯನೀಸ್‌ಗೆ ಪರ್ಯಾಯವಾಗಿ ಮೊಸರು ಆಧಾರಿತ ರೈತಾವನ್ನು ಪ್ರಯತ್ನಿಸಬಹುದು. ಇದು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ.

4. ಪನೀರ್ ಟಿಕ್ಕಾ

ಈ ರುಚಿಕರವಾದ ಪನೀರ್ ಟಿಕ್ಕಾವನ್ನು ತಯಾರಿಸಲು ಸ್ವಲ್ಪ ಮೊಸರು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕೆಂಪು ಮೆಣಸಿನ ಪುಡಿ, ಉಪ್ಪು ಮತ್ತು ಮೆಣಸು, ಪನೀರ್ ಅನ್ನು ತುಂಡುಗಳನ್ನಾಗಿ ಮಾಡಿ ಮ್ಯಾರಿನೇಟ್ ಮಾಡಿ. ಪ್ಯಾನ್ ಅಥವಾ ಗ್ರಿಲ್ ಅನ್ನು ಬಿಸಿ ಮಾಡಿ. ನಾನ್ ಸ್ಟಿಕ್ ಪ್ಯಾನ್‌ನಲ್ಲಿ ಸ್ವಲ್ಪ ಎಣ್ಣೆಯನ್ನು ಪ್ಯಾನ್‌ ಮೇಲೆ ಸವರಿ, ಗೋಲ್ಡನ್ ಬ್ರೌನ್ ಆಗುವವರೆಗೆ ಬೇಯಿಸಿ. ಇದನ್ನು ಪುದೀನ ಚಟ್ನಿಯೊಂದಿಗೆ ಸವಿಯಬಹುದು.

5. ಮಸಾಲಾ ಕಡಲೆ

ಕಪ್ಪು ಕಡಲೆಯನ್ನು ರಾತ್ರಿಯಿಡೀ ನೆನೆಸಿ, ಕುಕ್ಕರ್ ನಲ್ಲಿ ಎರಡು ಸೀಟಿಗಳಿಗೆ ಬೇಯಿಸಿ. ಈ ಮಧ್ಯೆ ಸ್ವಲ್ಪ ಈರುಳ್ಳಿ, ಟೊಮೆಟೊ, ಹಸಿರು ಮೆಣಸಿನಕಾಯಿಗಳು, ಕೊತ್ತಂಬರಿ ಸೊಪ್ಪುಗಳನ್ನು ಕತ್ತರಿಸಿ, ಖಾರದ ಪುಡಿ, ಚಾಟ್ ಮಸಾಲ, ಆಮ್ಚೂರ್ ಪುಡಿ, ಉಪ್ಪು ಮಿಶ್ರಣ ಮಾಡಿ ಮತ್ತು ರುಚಿಗೆ ತಕ್ಕಂತೆ ನಿಂಬೆ ರಸವನ್ನು ಸೇರಿಸಿ. ಬೇಯಿಸಿದ ಕಡಲೆಗೆ ಇದೆಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಬೆಳಗ್ಗೆ ಅಥವಾ ಸಂಜೆ ಸ್ನಾಕ್ಸ್ ಗೆ ಸವಿಯಬಹುದು.

6. ತಂದೂರಿ ಚಿಕನ್ ವಿಂಗ್ಸ್

ಕೋಳಿಯ ರೆಕ್ಕೆಗಳನ್ನು ಮೊಸರು ಮತ್ತು ತಂದೂರಿ ಮಸಾಲಾ, ಕೆಂಪು ಮೆಣಸಿನ ಪುಡಿ, ಉಪ್ಪು ಮತ್ತು ಮೆಣಸು ಮಿಶ್ರಣದಲ್ಲಿ ಮ್ಯಾರಿನೇಟ್ ಮಾಡಿ. ನಂತರ ಗೋಲ್ಡನ್ ಮತ್ತು ಗರಿಗರಿಯಾಗುವವರೆಗೆ ಬೇಯಿಸಿ. ಇದನ್ನು ಪುದೀನ ಚಟ್ನಿಯಲ್ಲಿ ಸವಿಯಿರಿ.

ತೂಕ ನಷ್ಟದ ವಿಚಾರಕ್ಕೆ ಬಂದಾಗ ಈ ರೀತಿಯ ಆಹಾರಗಳನ್ನು ಸೇವಿಸಲು ಬಹುತೇಕರು ಹಿಂದೇಟು ಹಾಕುತ್ತಾರೆ. ಆದರೆ, ಮನೆಯಲ್ಲಿಯೇ ಆರೋಗ್ಯಕರವಾಗಿ ತಯಾರಿಸುವುದರಿಂದ ಈ ಟೇಸ್ಟಿ ಆಹಾರಗಳನ್ನು ನಿಶ್ಚಿಂತೆಯಿಲ್ಲದೆ ಸವಿಯಬಹುದು. ಹಾಗಿದ್ದರೆ ಇನ್ಯಾಕೆ ತಡ, ನೀವು ಮನೆಯಲ್ಲಿ ಪ್ರಯತ್ನಿಸಿ.

ಲೇಖನ: ಪ್ರಿಯಾಂಕ ಗೌಡ