ಕೊಲೆಸ್ಟ್ರಾಲ್ ಎಂದರೇನು, ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದ್ರೆ ಏನಾಗುತ್ತೆ, ಇದನ್ನು ನಿಯಂತ್ರಿಸುವ ಸೂಪರ್‌ಫುಡ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ-health news lower cholesterol naturally include these top 7 superfoods in your daily diet for quick results rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಕೊಲೆಸ್ಟ್ರಾಲ್ ಎಂದರೇನು, ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದ್ರೆ ಏನಾಗುತ್ತೆ, ಇದನ್ನು ನಿಯಂತ್ರಿಸುವ ಸೂಪರ್‌ಫುಡ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ

ಕೊಲೆಸ್ಟ್ರಾಲ್ ಎಂದರೇನು, ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದ್ರೆ ಏನಾಗುತ್ತೆ, ಇದನ್ನು ನಿಯಂತ್ರಿಸುವ ಸೂಪರ್‌ಫುಡ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ

ಇತ್ತೀಚಿನ ಜಡಜೀವನಶೈಲಿ ಹಾಗೂ ಆಹಾರಕ್ರಮಗಳು ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಲು ಕಾರಣವಾಗುತ್ತಿವೆ. ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಅತಿಯಾದ್ರೆ ಇದರಿಂದ ಪ್ರಾಣಕ್ಕೆ ಅಪಾಯ. ಹಾಗಾಗಿ ನೈಸರ್ಗಿಕ ವಿಧಾನದಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಸಂಗ್ರಹವಾಗದಂತೆ ನೋಡಿಕೊಳ್ಳಬೇಕು. ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುವ 7 ಸೂಪರ್‌ಪುಡ್‌ಗಳು ಯಾವುವು ನೋಡಿ.

ಕೊಲೆಸ್ಟ್ರಾಲ್
ಕೊಲೆಸ್ಟ್ರಾಲ್ (PC: Canva )

ಆಗಾಗ ವಿವರಿಸಲಾಗದಷ್ಟು ಆಯಾಸ, ದೈಹಿಕ ಚಟುವಟಿಕೆಯ ನಂತರ ಉಸಿರಾಟದ ಸಮಸ್ಯೆಯಾಗುವುದು ಹಾಗೂ ಪದೇ ಪದೇ ಎದೆನೋವು ಬರುವುದು ಇಂತಹ ಸಮಸ್ಯೆಗಳನ್ನು ನೀವು ಎದುರಿಸುತ್ತಿದ್ದೀರಾ? ಇವು ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗಿರುವುದರ ಸೂಚಕವಾಗಿರಬಹುದು. ಇದು ನಿಜಕ್ಕೂ ನಿರ್ಲಕ್ಷ್ಯ ಮಾಡುವ ವಿಚಾರವಲ್ಲ. ಕೊಲೆಸ್ಟ್ರಾಲ್ ಹೆಚ್ಚಾದರೆ ಹೃದಯಕ್ಕೆ ತೊಂದರೆ, ಹೃದಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೊಲೆಸ್ಟ್ರಾಲ್ ಪ್ರಮಾಣವನ್ನು ನಿಯಂತ್ರಿಸುವುದು ಬಹಳ ಮುಖ್ಯ. ಕೊಲೆಸ್ಟ್ರಾಲ್ ಅತಿಯಾದ್ರೆ ಸದ್ದಿಲ್ಲದೇ ಸಾವು ಬರಬಹುದು.

ಕೊಲೆಸ್ಟ್ರಾಲ್ ಎಂದರೇನು?

ಕೊಲೆಸ್ಟ್ರಾಲ್ ಎನ್ನುವುದು ನಮ್ಮ ದೇಹದ ಪ್ರತಿ ಜೀವಕೋಶದಲ್ಲೂ ಕಂಡುಬರುವ ಮೇಣದಂತಹ, ಕೊಬ್ಬಿನಂತಹ ವಸ್ತು. ಹಾರ್ಮೋನುಗಳು, ವಿಟಮಿನ್ ಡಿ ಮತ್ತು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುವ ವಸ್ತುಗಳನ್ನು ಉತ್ಪಾದಿಸಲು ಇದು ಅತ್ಯಗತ್ಯ.ದೇಹಕ್ಕೆ ಅಗತ್ಯವಿರುವ ಎಲ್ಲಾ ಕೊಲೆಸ್ಟ್ರಾಲ್ ಅನ್ನು ದೇಹವೇ ಉತ್ಪಾದಿಸುತ್ತದೆ. ಆದರೆ ಇದು ಕೋಳಿ ಮಾಂಸ, ಇತರ ಮಾಂಸಗಳು ಹಾಗೂ ಸಂಪೂರ್ಣ ಕೊಬ್ಬಿನಾಂಶ ಇರುವ ಡೈರಿ ಉತ್ಪನ್ನಗಳಲ್ಲೂ ಕಂಡುಬರುತ್ತದೆ.

ಕೊಲೆಸ್ಟ್ರಾಲ್ ಹೆಚ್ಚಲು ಕಾರಣ?

ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ​​(AHA) ಪ್ರಕಾರ, ಅನಾರೋಗ್ಯಕರ ಆಹಾರ ಪದ್ಧತಿ, ದೈಹಿಕ ಚಟುವಟಿಕೆಯ ಕೊರತೆ ಮತ್ತು ಧೂಮಪಾನದಂತಹ ಜೀವನಶೈಲಿಯ ಆಯ್ಕೆಗಳಿಂದ ಹೆಚ್ಚಿನ ಕೊಲೆಸ್ಟ್ರಾಲ್ ಉಂಟಾಗಬಹುದು. ಹೆಚ್ಚುವರಿಯಾಗಿ, ಜೆನೆಟಿಕ್ಸ್ ಒಂದು ಪಾತ್ರವನ್ನು ವಹಿಸುತ್ತದೆ, ಇದರಿಂದಾಗಿ ನಿಮ್ಮ ದೇಹವು ಹೆಚ್ಚು ಕೊಲೆಸ್ಟ್ರಾಲ್ ಅನ್ನು ಉತ್ಪಾದಿಸುತ್ತದೆ.

ಕೊಲೆಸ್ಟ್ರಾಲ್ ಹೆಚ್ಚಾದ್ರೆ ಏನಾಗುತ್ತೆ?

ರಕ್ತದಲ್ಲಿ ಕೊಲೆಸ್ಟ್ರಾಲ್‌ ಪ್ರಮಾಣ ಹೆಚ್ಚಾದಾಗ ಅಪಧಮನಿಗಳ ಗೋಡೆ ಹಾಗೂ ರಕ್ತನಾಳಗಳಲ್ಲಿ ಸರಾಗ ರಕ್ತದ ಹರಿವು ಸಾಧ್ಯವಾಗುವುದಿಲ್ಲ. ಪ್ಲೇಕ್ ಎಂದು ಕರೆಯಲ್ಪಡುವ ಈ ಶೇಖರಣೆಯು ಅಪಧಮನಿಗಳನ್ನು ಕಿರಿದಾಗಿಸುತ್ತದೆ, ಇದು ರಕ್ತದ ಹರಿವಿಗೆ ಅಡ್ಡಿಪಡಿಸುತ್ತದೆ. ಕಾಲಾನಂತರದಲ್ಲಿ, ಇದು ಹೃದ್ರೋಗ, ಹೃದಯಾಘಾತ ಮತ್ತು ಪಾರ್ಶ್ವವಾಯುವಿಗೆ ಕಾರಣವಾಗಬಹುದು. ಕೆಲವೊಮ್ಮೆ ಕೊಲೆಸ್ಟ್ರಾಲ್ ಏರಿಕೆಯು ಸದ್ದೇ ಇಲ್ಲದೇ ಸಾವಿಗೂ ಕಾರಣವಾಗಬಹುದು. ಹಾಗಾಗಿ ಕೊಲೆಸ್ಟ್ರಾಲ್ ಕಡಿಮೆ ಮಾಡಿಕೊಳ್ಳುವುದು ಅತಿ ಅಗತ್ಯವಾಗಿದೆ. ಆರಂಭದಿಂದಲೇ ಕೊಲೆಸ್ಟ್ರಾಲ್ ನಿಯಂತ್ರಿಸುವ ಕ್ರಮಗಳನ್ನು ಅನುಸರಿಸಬೇಕು, ಅದಕ್ಕಾಗಿ ನೀವು ವೈದ್ಯರ ಬಳಿಗೆ ಹೋಗಬೇಕು, ಜಿಮ್‌ನಲ್ಲಿ ಕಸರತ್ತು ಮಾಡಬೇಕು ಎಂದೇನಿಲ್ಲ, ಈ ಕೆಲವು ಸೂಪರ್‌ಫುಡ್‌ಗಳನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಬೇಕು, ಆ ಮೂಲಕ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ನಿಯಂತ್ರಿಸಬಹುದು.

ನೈಸರ್ಗಿಕವಾಗಿ ಕೊಲೆಸ್ಟ್ರಾಲ್ ನಿಯಂತ್ರಿಸುವ 7 ಸೂಪರ್‌ ಫುಡ್‌ಗಳು

ಓಟ್ಸ್‌: ಇದು ಕರಗುವ ನಾರಿನಾಂಶವನ್ನು ಹೊಂದಿರುತ್ತದೆ. ನಿರ್ದಿಷ್ಟವಾಗಿ ಇದರಲ್ಲಿ ಬೀಟಾ ಗ್ಲುಕನ್ ಎಂಬ ಅಂಶವಿದ್ದು ಇದು ರಕ್ತಪ್ರವಾಹಕ್ಕೆ ಕೊಲೆಸ್ಟ್ರಾಲ್ ಹೀರಿಕೊಳ್ಳುವುದನ್ನು ಕಡಿಮೆ ಮಾಡುತ್ತದೆ. ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಪ್ರಕಾರ ನಿಮ್ಮ ದಿನವನ್ನು ಮೀಟ್‌ ಮೀಲ್‌ನೊಂದಿಗೆ ಪ್ರಾರಂಭ ಮಾಡುವುದರಿಂದ ಶೇ 10 ರಷ್ಟು ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಬಹುದು.

ಒಣಹಣ್ಣುಗಳು: ಬಾದಾಮಿ ಮತ್ತು ವಾಲ್‌ನಟ್‌ನಂತಹ ಒಣಹಣ್ಣುಗಳಲ್ಲಿ ಮೊನೊಸಾಚುರೇಟೆಡ್‌ ಕೊಬ್ಬಿನಲ್ಲಿ ಸಮೃದ್ಧವಾಗಿವೆ, ಇದು ಎಲ್‌ಡಿಎಲ್ ಕೊಲೆಸ್ಟ್ರಾಲ್ (ಕೆಟ್ಟ ಕೊಲೆಸ್ಟ್ರಾಲ್‌) ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅವು ಫೈಬರ್ ಮತ್ತು ವಿಟಮಿನ್ ಇ ಅನ್ನು ಸಹ ಹೊಂದಿರುತ್ತವೆ, ಇದು ನಿಮ್ಮ ಹೃದಯದ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ. ಪ್ರತಿದಿನ ಈ ಒಣಹಣ್ಣುಗಳನ್ನು ಐದಾರು ತಿಂದರು ನಿಮ್ಮ ದೇಹದಲ್ಲಿ ಗಮನಾರ್ಹ ಬದಲಾವಣೆಗಳಾಗುತ್ತವೆ.

ಬೆಣ್ಣೆಹಣ್ಣು: ಆವಕಾಡೊಗಳು ಮೊನೊಸಾಚುರೇಟೆಡ್ ಕೊಬ್ಬಿನಾಮ್ಲ ಮತ್ತು ನಾರಿನಾಂಶದ ಪ್ರಬಲ ಮೂಲವಾಗಿದೆ. ಈ ಎರಡೂ ಅಂಶಗಳು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ಎಚ್‌ಡಿಎ (ಉತ್ತಮ) ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನಿಮ್ಮ ಆಹಾರದಲ್ಲಿ ಆವಕಾಡೊವನ್ನು ಸೇರಿಸುವುದರಿಂದ ಉತ್ತಮ ಕೊಲೆಸ್ಟ್ರಾಲ್ ಮಟ್ಟಗಳು ಮತ್ತು ಹೃದಯದ ಆರೋಗ್ಯ ಸುಧಾರಿಸಲು ಕಾರಣವಾಗುತ್ತದೆ.

ಫ್ಯಾಟಿ ಫಿಶ್‌: ಸಾಲ್ಮನ್, ಮ್ಯಾಕೆರೆಲ್ ಮತ್ತು ಸಾರ್ಡೀನ್‌ಗಳಂತಹ ಕೊಬ್ಬಿನಾಂಶ ಇರುವ ಮೀನುಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಅಧಿಕವಾಗಿವೆ. ಒಮೆಗಾ -3 ಟ್ರೈಗ್ಲಿಸರೈಡ್‌ಗಳನ್ನು ಕಡಿಮೆ ಮಾಡುತ್ತದೆ, ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಹೃದಯದ ಆರೋಗ್ಯಕ್ಕಾಗಿ ವಾರಕ್ಕೆ ಎರಡು ಬಾರಿ ಕೊಬ್ಬಿನಾಂಶ ಇರುವ ಇಂತಹ ಮೀನುಗಳನ್ನು ತಿನ್ನುವುದನ್ನು ಉತ್ತಮ ಎಂದು ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ತಿಳಿಸುತ್ತದೆ.

ಆಲಿವ್ ಎಣ್ಣೆ: ಇದು ಹೆಚ್ಚುವರಿ ವರ್ಜಿನ್, ಉತ್ಕರ್ಷಣ ನಿರೋಧಕಗಳು ಮತ್ತು ಮೊನೊಸಾಚುರೇಟೆಡ್ ಕೊಬ್ಬುಗಳಿಂದ ತುಂಬಿರುತ್ತದೆ. ಇದು ಎಚ್‌ಡಿಎಲ್ ಕೊಲೆಸ್ಟ್ರಾಲ್ ಅನ್ನು ನಿರ್ವಹಿಸುವಾಗ ಎಲ್‌ಡಿಎಲ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ಅಡುಗೆಯಲ್ಲಿ ಸ್ಯಾಚುರೇಟೆಡ್ ಕೊಬ್ಬನ್ನು ಆಲಿವ್ ಎಣ್ಣೆಯಿಂದ ಬದಲಾಯಿಸುವುದರಿಂದ ನಿಮ್ಮ ಕೊಲೆಸ್ಟ್ರಾಲ್ ಪ್ರೊಫೈಲ್ ಅನ್ನು ಸುಧಾರಿಸಬಹುದು.

ದ್ವಿದಳ ಧಾನ್ಯಗಳು: ಬೀನ್ಸ್, ಮಸೂರ ಮತ್ತು ಇತರ ದ್ವಿದಳ ಧಾನ್ಯಗಳು ಕರಗಬಲ್ಲ ಫೈಬರ್ ಮತ್ತು ಸಸ್ಯ ಆಧಾರಿತ ಪ್ರೋಟೀನ್‌ನ ಅತ್ಯುತ್ತಮ ಮೂಲಗಳಾಗಿವೆ. ಇವುಗಳು ಎಲ್ಡಿಎಲ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಬಹುದು ಮತ್ತು ಯಾವುದೇ ಊಟಕ್ಕೆ ಪೌಷ್ಟಿಕಾಂಶದ ಸೇರ್ಪಡೆಯಾಗಿದೆ. ವಾರದಲ್ಲಿ ಹಲವಾರು ಬಾರಿ ನಿಮ್ಮ ಆಹಾರದಲ್ಲಿ ದ್ವಿದಳ ಧಾನ್ಯಗಳನ್ನು ಸೇರಿಸುವುದು ಉತ್ತಮ ಹೃದಯದ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ.

ಬಿಳಿಬದನೆ: ಬಿಳಿಬದನೆ ಕರಗುವ ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ, ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ಆಹಾರದಲ್ಲಿ ಬಿಳಿಬದನೆ ಸೇರಿಸುವುದರಿಂದ ನಿಮ್ಮ ಅಪಧಮನಿಗಳಲ್ಲಿ ಪ್ಲೇಕ್ ಸಂಗ್ರಹವನ್ನು ಕಡಿಮೆ ಮಾಡಲು ಮತ್ತು ಒಟ್ಟಾರೆ ಹೃದಯದ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ಕೊಲೆಸ್ಟ್ರಾಲ್ ಎಂದರೇನು, ಕೊಲೆಸ್ಟ್ರಾಲ್ ಹೆಚ್ಚಾದ್ರೆ ಏನಾಗುತ್ತೆ, ಕೆಟ್ಟ ಕೊಲೆಸ್ಟ್ರಾಲ್ ಅನ್ನು ನೈಸರ್ಗಿಕವಾಗಿ ನಿಯಂತ್ರಿಸುವ ಮಾರ್ಗಗಳು ಯಾವುವು ಎಂಬುದನ್ನು ತಿಳಿದುಕೊಂಡ್ರಿ ಅಲ್ವಾ, ಯಾವುದೇ ಕಾರಣಕ್ಕೂ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಏರಿಕೆಯಾಗದಂತೆ ನೋಡಿ. ಇದರಿಂದ ಪ್ರಾಣಕ್ಕೆ ಅಪಾಯ ನೆನಪಿರಲಿ.

mysore-dasara_Entry_Point