ಕನ್ನಡ ಸುದ್ದಿ  /  Lifestyle  /  Health News Male And Female Health Sex Hormones How To Eat Right And Live Right To Support Your Sex Hormones Rst

Sex Hormones: ಲೈಂಗಿಕ ಹಾರ್ಮೋನುಗಳ ಅಸಮತೋಲನ ನಿವಾರಣೆಗೆ ಹೀಗಿರಲಿ ಆಹಾರಕ್ರಮ, ಜೀವನಶೈಲಿ

ಸಸ್ಯ ಸಮೃದ್ಧ ಆಹಾರ ಸೇವನೆಯಿಂದ ಹಿಡಿದು ಸಾಕಷ್ಟು ನಿದ್ದೆ ಪಡೆಯುವವರೆಗೆ ಲೈಂಗಿಕ ಹಾರ್ಮೋನುಗಳ ಸಮತೋಲನಕ್ಕೆ ನೆರವಾಗುವ ಆಹಾರಕ್ರಮ ಹಾಗೂ ಜೀವನಶೈಲಿಯಿದು.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಹಾರ್ಮೋನು ಮನುಷ್ಯ ದೇಹಕ್ಕೆ ಬಹಳ ಅವಶ್ಯ. ಇವು ನಮ್ಮ ದೇಹವು ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳುತ್ತವೆ. ಲೈಂಗಿಕ ಹಾರ್ಮೋನುಗಳು ಆಂಡ್ರೋಜೆನ್‌ಗಳು, ಈಸ್ಟ್ರೋಜೆನ್‌ಗಳು, ಪ್ರೊಜೆಸ್ಟೋಜೆನ್‌ಗಳನ್ನು ಒಳಗೊಂಡಿರುವ ಸ್ಟೀರಾಯ್ಡ್‌ ಹಾರ್ಮೋನ್‌ಗಳಾಗಿವೆ. ಲೈಂಗಿಕ ಹಾರ್ಮೋನುಗಳು ಬೆಂಬಲಿಸಲು ಅಥವಾ ಅವುಗಳನ್ನ ಸಮತೋಲನದಲ್ಲಿರಿಸಲು ನಮ್ಮ ಆಹಾರ ಮತ್ತು ಜೀವನಕ್ರಮದ ಮೇಲೆ ಗಮನ ಹರಿಸುವುದು ಮುಖ್ಯವಾಗುತ್ತದೆ.

ʼಹಾರ್ಮೋನುಗಳು ಸ್ವರಮೇಳದಂತೆ. ಪ್ರತಿಯೊಂದು ಹಾರ್ಮೋನುಗಳು ನಮ್ಮ ದೇಹವನ್ನು ಟ್ಯೂನ್‌ ಮಾಡಲು ವಿಶೇಷ ಸಾಧನವಾಗಿ ಕಾರ್ಯನಿರ್ವಹಿಸುತ್ತವೆ. ಆದರೆ ವಯಸ್ಸಾದಂತೆ ಈ ತಾಳ, ತಂತಿಗಳಿಗೆ ತುಕ್ಕು ಹಿಡಿಯಲು ಆರಂಭವಾಗುತ್ತದೆ. ಕಾಲಾನಂತರದಲ್ಲಿ ಉಂಟಾಗುವ ಸಣ್ಣ ಸಣ್ಣ ಬದಲಾವಣೆಗಳೂ ಹಲವು ರೀತಿ ಅಸಮತೋಲನಕ್ಕೆ ಕಾರಣವಾಗುತ್ತದೆ. ಇದು ಮಹಿಳೆಯರಲ್ಲಿ ಋತುಬಂಧದ ಲಕ್ಷಣಗಳು, ಪುರುಷರಲ್ಲಿ ಕೂದಲು ಉದುರುವಿಕೆ ಮತ್ತು ಹೊಟ್ಟೆಯ ಭಾಗದಲ್ಲಿ ಕೊಬ್ಬು ಸಂಗ್ರಹವಾಗುವುದು, ಥೈರಾಯ್ಡ್‌ ಅಪಸಾಮಾನ್ಯ ಕ್ರಿಯೆ, ಮೂಳೆಗಳ ತೊಂದರೆ ಹೀಗೆ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆ ಕಾರಣಕ್ಕೆ ಹಾರ್ಮೋನುಗಳ ಸಮತೋಲನವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗುತ್ತದೆʼ ಎಂದು ತಜ್ಞರಾದ ಮಾರ್ಕ್‌ ಹೈಮನ್‌ ಬರೆದುಕೊಂಡಿದ್ದಾರೆ.

ಲೈಂಗಿಕ ಹಾರ್ಮೋನುಗಳ ಉತ್ಪತ್ತಿಯ ಪ್ರಮಾಣ ಹೆಚ್ಚಲು ಹಾಗೂ ಬೆಂಬಲಿಸಲು ಹೀಗಿರಲಿ ನಿಮ್ಮ ಆಹಾರ, ಜೀವನಕ್ರಮ.

ಸಸ್ಯ ಆಧಾರಿತ ಡಯೆಟ್‌: ದೇಹದಲ್ಲಿ ಲೈಂಗಿಕ ಹಾರ್ಮೋನುಗಳ ಸಮತೋಲನಕ್ಕೆ ಸಹಾಯ ಮಾಡುವ ಪ್ರಾಥಮಿಕ ವಿಷಯವೆಂದರೆ ನಾವು ಅನುಸರಿಸುವ ಆಹಾರಕ್ರಮ. ಪ್ರೊಟೀನ್‌ ಮತ್ತು ಆರೋಗ್ಯಕರ ಕೊಬ್ಬುಗಳಿಂದ ತುಂಬಿದ ಸಸ್ಯ-ಸಮೃದ್ಧ ಆಹಾರವು ಹಾರ್ಮೋನುಗಳ ಸಮತೋಲನಕ್ಕೆ ಸಹಾಯ ಮಾಡುತ್ತವೆ. ಆದರೆ ಗ್ಲುಟೆನ್‌ ಹಾಗೂ ಡೇರಿ ಉತ್ಪನ್ನಗಳಿಂದ ದೂರವಿರುವುದು ಮುಖ್ಯವಾಗುತ್ತದೆ.

ಪೂರಕಗಳ ಸೇವನೆ: ವಿಟಮಿನ್‌ ಡಿ ಹಾಗೂ ವಿಟಮಿನ್‌ ಬಿ ಅಂಶವಿರುವ ಮೀನಿನ ಎಣ್ಣೆಯು ಈಸ್ಟ್ರೋಜೆನ್‌ ಅನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಪ್ರೊಬಯೋಟಿಕ್‌ಗಳು, ಉತ್ಕರ್ಷಣ ನಿರೋಧಕಗಳು, ಗ್ರೀನ್‌ ಟೀ, ಒಮೆಗಾ 6 ಕೊಬ್ಬಿನ ಜಿಎಲ್‌ಎ ಇವುಗಳು ಲೈಂಗಿಕ ಹಾರ್ಮೋನುಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತವೆ.

ನಿರಂತರ ವ್ಯಾಯಾಮ: ಹಲವು ಮಹಿಳೆಯರು ಪ್ರಿ ಮೆನ್ಸ್ಟ್ರುವಲ್‌ ಸಿಂಡ್ರೋಮ್‌ಗಳನ್ನು ಎದುರಿಸುತ್ತಿರುತ್ತಾರೆ. ನಾವು ನಿರಂತರ ವ್ಯಾಯಾಮ ಮಾಡುವುದು, ನಮ್ಮ ದೈನಂದಿನ ದಿನಚರಿಯನ್ನು ಉತ್ತಮವಾಗಿ ರೂಢಿಸಿಕೊಳ್ಳುವುದರಿಂದ ಪಿಎಂಎಸ್‌ ಸಮಸ್ಯೆಯಿಂದ ದೂರ ಉಳಿಯಬಹುದು. ರನ್ನಿಂಗ್‌, ಈಜು, ವಾಕಿಂಗ್‌ ಇಂತಹ ವರ್ಕೌಟ್‌ಗಳು ದೇಹದಲ್ಲಿ ಹಾರ್ಮೋನ್‌ ಸಮತೋಲನಕ್ಕೆ ನೆರವಾಗುತ್ತವೆ.

ಒತ್ತಡ ನಿವಾರಣೆ: ದೀರ್ಘಕಾಲದ ಒತ್ತಡವು ಹಾರ್ಮೋನುಗಳು ಅಸಮತೋಲನಕ್ಕೆ ಕಾರಣವಾಗುತ್ತದೆ. ಆ ಕಾರಣಕ್ಕೆ ಒತ್ತಡ ನಿರ್ವಹಣೆಯ ಮಾರ್ಗಗಳನ್ನು ಅನುಸರಿಸುವುದು ಮುಖ್ಯವಾಗುತ್ತದೆ. ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಗೆ ಒತ್ತಡ ಮುಕ್ತ ಜೀವನ ಬಹಳ ಮುಖ್ಯ. ಧ್ಯಾನ, ಯೋಗ ಇಂತಹ ಒತ್ತಡ ನಿರ್ವಹಣೆಯ ಮಾರ್ಗವನ್ನು ರೂಢಿಸಿಕೊಳ್ಳಿ.

ಉತ್ತಮ ನಿದ್ದೆ: 8 ಗಂಟೆಗಳ ಕಾಲ ಆರೋಗ್ಯಕರ ಹಾಗೂ ಯಾವುದೇ ತೊಂದರೆ ಇಲ್ಲದಂತೆ ನಿದ್ದೆ ಮಾಡುವುದು ಹಾರ್ಮೋನುಗಳ ಸಮತೋಲನಕ್ಕೆ ಬಹಳ ಅವಶ್ಯ. ನಿದ್ದೆಯಲ್ಲಿನ ವ್ಯತ್ಯಾಸದಿಂದ ಪಿಎಂಎಸ್‌ ಸಮಸ್ಯೆ ಕಾಣಿಸಬಹುದು. ಅಲ್ಲದೆ ಇದರಿಂದ ಹಲವು ಇನ್ನಿತರ ಸಮಸ್ಯೆಗಳು ಎದುರಾಗಬಹುದು.

ಇದನ್ನೂ ಓದಿ

sexual problem and food: ಲೈಂಗಿಕ ಸಮಸ್ಯೆಯೇ? ಈ ಆಹಾರಗಳು ನಿಮ್ಮಲ್ಲಿ ಲೈಂಗಿಕಶಕ್ತಿ ಹೆಚ್ಚಿಸಬಹುದು ನೋಡಿ

ಇಂದಿನ ಒತ್ತಡದ ಜೀವನಶೈಲಿ, ಆಹಾರಪದ್ಧತಿ, ಕಲುಷಿತ ವಾತಾವರಣ ಇದರೊಂದಿಗೆ ಮಧ್ಯಪಾನ, ಧೂಮಪಾನ, ಡ್ರಗ್ಸ್‌ ಸೇವನೆ ಈ ಹಲವು ಕಾರಣಗಳಿಂದ ಹಲವು ಜನರು ಲೈಂಗಿಕ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಇದರೊಂದಿಗೆ ಹೃದಯ ಸಂಬಂಧಿ ಕಾಯಿಲೆಗಳು, ನಿಮಿರುವಿಕೆಯ ತೊಂದರೆ, ಮಧುಮೇಹ, ರಕ್ತದೊತ್ತಡ ಈ ಕಾರಣಗಳೂ ಲೈಂಗಿಕ ಸುಖಕ್ಕೆ ಅಡ್ಡಿ ಪಡಿಸಬಹುದು.