ಕನ್ನಡ ಸುದ್ದಿ  /  ಜೀವನಶೈಲಿ  /  ಮಾವಿನಹಣ್ಣು ನೈಸರ್ಗಿಕವಾಗಿ ಹಣ್ಣಾಗಿದ್ದಾ, ರಾಸಾಯನಿಕ ಸಿಂಪಡಿಸಿ ಹಣ್ಣು ಮಾಡಲಾಗಿದ್ಯಾ? ತಿಳಿಯೋದು ಹೇಗೆ ನೋಡಿ

ಮಾವಿನಹಣ್ಣು ನೈಸರ್ಗಿಕವಾಗಿ ಹಣ್ಣಾಗಿದ್ದಾ, ರಾಸಾಯನಿಕ ಸಿಂಪಡಿಸಿ ಹಣ್ಣು ಮಾಡಲಾಗಿದ್ಯಾ? ತಿಳಿಯೋದು ಹೇಗೆ ನೋಡಿ

ಏಪ್ರಿಲ್‌, ಮೇ ತಿಂಗಳು ಬಂತೆಂದರೆ ಮಾರುಕಟ್ಟೆಯಲ್ಲಿ ಮಾವಿನಹಣ್ಣಿನದ್ದೇ ಘಮ. ಎಲ್ಲೆಲ್ಲಿ ನೋಡಿದರೂ ಮಾವಿನಹಣ್ಣಿನ ರಾಶಿ ಕಾಣುತ್ತದೆ. ಆದರೆ ಅವುಗಳಲ್ಲಿ ಎಲ್ಲವೂ ಕೃತಕವಾಗಿ ಹಣ್ಣಾಗಿರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಮಾವಿನಹಣ್ಣನ್ನು ರಾಸಾಯನಿಕ ಸಿಂಪಡಿಸಿ ಹಣ್ಣು ಮಾಡುವುದೇ ಹೆಚ್ಚಾಗಿದೆ. ಹಾಗಾದರೆ ರಾಸಾಯನಿಕ ಸಿಂಪಡಿಸಿದ ಹಣ್ಣನ್ನು ಗುರುತಿಸುವುದು ಹೇಗೆ ನೋಡಿ.

ಮಾವಿನಹಣ್ಣು ನೈಸರ್ಗಿಕವಾಗಿ ಹಣ್ಣಾಗಿದ್ದಾ, ರಾಸಾಯನಿಕ ಸಿಂಪಡಿಸಿ ಹಣ್ಣು ಮಾಡಲಾಗಿದ್ಯಾ? ತಿಳಿಯೋಕೆ ಇಲ್ಲಿದೆ ಬೆಸ್ಟ್‌ ಐಡಿಯಾ
ಮಾವಿನಹಣ್ಣು ನೈಸರ್ಗಿಕವಾಗಿ ಹಣ್ಣಾಗಿದ್ದಾ, ರಾಸಾಯನಿಕ ಸಿಂಪಡಿಸಿ ಹಣ್ಣು ಮಾಡಲಾಗಿದ್ಯಾ? ತಿಳಿಯೋಕೆ ಇಲ್ಲಿದೆ ಬೆಸ್ಟ್‌ ಐಡಿಯಾ

ಮಾವಿನಹಣ್ಣನ್ನು ಹಣ್ಣುಗಳ ರಾಜ ಎಂದು ಕರೆಯುತ್ತೇವೆ. ಎಷ್ಟೋ ಜನರು ಮಾವಿನಹಣ್ಣಿಗಾಗಿ ಬೇಸಿಗೆ ಕಾಲವನ್ನು ಎದುರು ನೋಡುತ್ತಾರೆ. ರಸಭರಿತ ಸ್ವಾದದ ಮಾವು ಎಲ್ಲರಿಗೂ ಇಷ್ಟವಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ರಾಸಾಯನಿಕಗಳನ್ನು ಸಿಂಪಡಿಸಿ ಮಾವನ್ನು ಹಣ್ಣಾಗಿಸಲಾಗುತ್ತಿದೆ. ಆ ಮೂಲಕ ಜನರನ್ನು ಮೋಸಗೊಳಿಸಲಾಗುತ್ತಿದೆ. ನೈಸರ್ಗಿಕವಾದ ಹಣ್ಣಾದ ಮಾವು ಆರೋಗ್ಯಕ್ಕೆ ಎಷ್ಟು ಉತ್ತಮವೋ ಕೃತಕವಾಗಿ ಹಣ್ಣಾದ ಮಾವು ಆರೋಗ್ಯಕ್ಕೆ ಅಷ್ಟೇ ಹಾನಿಕರ. ಈ ಮಾವಿನಹಣ್ಣು ತಿನ್ನುವುದರಿಂದ ಕ್ಯಾನ್ಸರ್‌ನಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಹೆಚ್ಚು. ಹಾಗಾದರೆ ರಾಸಾಯನಿಕ ಸಿಂಪಡಿಸಿ ಹಣ್ಣು ಮಾಡಲಾದ ಮಾವಿನಹಣ್ಣನ್ನು ಗುರುತಿಸುವುದು ಹೇಗೆ?

ಟ್ರೆಂಡಿಂಗ್​ ಸುದ್ದಿ

ಮಾವಿನಹಣ್ಣನ್ನು ಕೃತಕವಾಗಿ ಹಣ್ಣಾಗಿಸುವುದು ಹೀಗೆ

ಮಾವಿನಹಣ್ಣನ್ನು ಕೃತಕವಾಗಿ ಹಣ್ಣು ಮಾಡಲು ಕ್ಯಾಲ್ಸಿಯಂ ಕಾರ್ಬೈಡ್‌ನಂತಹ ಹಾನಿಕಾರಕ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಈ ರಾಸಾಯನಿಕಗಳನ್ನು ಸಿಂಪಡಿಸುವುದರಿಂದ ಮಾವು ಬೇಗನೆ ಹಳದಿ ಬಣ್ಣಕ್ಕೆ ತಿರುಗುತ್ತದೆ. ಅಂತಹ ಹಣ್ಣುಗಳನ್ನು ತಪ್ಪಿಯೂ ತಿನ್ನಬಾರದು. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಪ್ರಕಾರ, ಮಾವುಗಳನ್ನು ಕೃತಕವಾಗಿ ಬೆಳೆಯಲು ಬಳಸುವ ಕ್ಯಾಲ್ಸಿಯಂ ಕಾರ್ಬೈಡ್ ಎಂಬ ರಾಸಾಯನಿಕವು ಕ್ಯಾನ್ಸರ್ ಕಾರಕ ಗುಣಗಳನ್ನು ಹೊಂದಿದೆ. ಇದನ್ನು ವೆಲ್ಡಿಂಗ್ ಕೆಲಸದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಇದು ಮಾರುಕಟ್ಟೆಯಲ್ಲಿ ಅತ್ಯಂತ ಅಗ್ಗವಾಗಿ ದೊರೆಯುತ್ತದೆ. ಹಾಗಾಗಿ ವ್ಯಾಪಾರಿಗಳು ಈ ರಾಸಾಯನಿಕವನ್ನು ಖರೀದಿಸಿ ಮಾವು ಬೆಳೆಯಲು ಬಳಸುತ್ತಾರೆ.

ಈ ಕ್ಯಾಲ್ಸಿಯಂ ಕಾರ್ಬೈಡ್‌ನಲ್ಲಿ ಫಾಸ್ಫರಸ್ ಹೈಡ್ರೈಡ್ ಮತ್ತು ಆರ್ಸೆನಿಕ್‌ನಂತಹ ರಾಸಾಯನಿಕಗಳನ್ನು ಸಹ ಬೆರೆಸಲಾಗುತ್ತದೆ. ಈ ರಾಸಾಯನಿಕಗಳು ಆಕಸ್ಮಿಕವಾಗಿ ದೇಹಕ್ಕೆ ಸೇರಿದರೆ ವಾಂತಿ, ಭೇದಿ, ಚರ್ಮದ ಹುಣ್ಣು, ಕಣ್ಣು ಹಾನಿ, ಉಸಿರಾಟದ ತೊಂದರೆ, ನರಮಂಡಲದ ಹಾನಿ ಮತ್ತು ದೌರ್ಬಲ್ಯದಂತಹ ಲಕ್ಷಣಗಳು ಕಂಡುಬರುತ್ತವೆ.

ಕೃತಕವಾಗಿ ಹಣ್ಣಾಗಿಸಿದ ಮಾವಿನಹಣ್ಣನ್ನು ಗುರುತಿಸುವುದು

ಕೃತಕವಾಗಿ ಮಾಗಿದ ಮಾವಿನಹಣ್ಣುಗಳನ್ನು ಗುರುತಿಸಲು ಇಲ್ಲಿ ಕೆಲವು ಸಲಹೆಗಳಿವೆ. ಕೃತಕವಾಗಿ ಮಾಗಿದ ಮಾವು ನೈಸರ್ಗಿಕವಾಗಿ ಮಾಗಿದ ಮಾವಿನಹಣ್ಣುಗಳಿಗಿಂತ ಹೆಚ್ಚು ಹಳದಿ ಮತ್ತು ಕಿತ್ತಳೆ ಬಣ್ಣವನ್ನು ಹೊಂದಿರುತ್ತದೆ. ಅಂತಹ ಮಾವಿನಹಣ್ಣುಗಳು ಸ್ವಲ್ಪ ಹೊಳೆಯುವಂತೆ ಕಾಣುತ್ತದೆ. ನೈಸರ್ಗಿಕವಾಗಿ ಮಾಗಿದ ಮಾವಿನಹಣ್ಣುಗಳು ಸಿಹಿ ಮತ್ತು ಪರಿಮಳಯುಕ್ತವಾಗಿರುತ್ತವೆ. ಅದೇ ಕೃತಕವಾಗಿ ಮಾಗಿದ ಮಾವಿನಹಣ್ಣುಗಳು ಮಾವಿನಹಣ್ಣಿನ ಸುವಾಸನೆಯನ್ನು ಹೊಂದಿರುವುದಿಲ್ಲ. ಅದು ವಿಭಿನ್ನ ವಾಸನೆಯನ್ನು ಹೊಂದಿರುತ್ತದೆ. ಕೃತಕವಾಗಿ ಮಾಗಿದ ಮಾವು ನೈಸರ್ಗಿಕ ಮಾವಿನಹಣ್ಣುಗಳಿಗಿಂತ ಮೃದುವಾಗಿರುತ್ತದೆ. ಏಕೆಂದರೆ ಈ ರಾಸಾಯನಿಕಗಳು ಹಣ್ಣಿನ ಸಿಪ್ಪೆ ಒಡೆಯುವಂತೆ ಮಾಡುತ್ತದೆ. ಅದಕ್ಕಾಗಿಯೇ ಅಂತಹ ಮಾವಿನಹಣ್ಣು ಮೃದುವಾಗುತ್ತದೆ. ಹಾಗಾಗಿ ಮೃದುವಾದ ಮಾವಿನ ಹಣ್ಣುಗಳನ್ನು ಖರೀದಿಸಬೇಡಿ. ಮಾವಿನ ಹಣ್ಣಿನ ಮೇಲೆ ಸಣ್ಣಪುಟ್ಟ ಗಾಯಗಳು ಅಥವಾ ಮಚ್ಚೆಗಳು ಕಂಡರೆ ಖರೀದಿಸದಿರುವುದು ಉತ್ತಮ. ಮಾವಿಗೆ ಕೆಲವು ರಾಸಾಯನಿಕಗಳನ್ನು ಚುಚ್ಚಲಾಗುತ್ತದೆ. ಇವುಗಳಿಂದ ಗಾಯದ ಗುರುತು ಕೂಡ ಉಂಟಾಗುತ್ತದೆ.

ಬಕೆಟ್ ಪರೀಕ್ಷೆ: ಕೃತಕವಾಗಿ ಮಾಗಿದ ಮಾವಿನಹಣ್ಣುಗಳು ಮೃದುವಾಗಿರಬಹುದು ಅಥವಾ ಸ್ವಲ್ಪ ವಿಭಿನ್ನವಾದ ರುಚಿಯನ್ನು ಹೊಂದಿರಬಹುದು. ಹಾಗಿದ್ದರೆ ಅವು ಕೃತಕವಾಗಿ ಬೆಳೆದ ಮಾವಿನ ಹಣ್ಣುಗಳು ಎಂದರ್ಥ. ಒಂದು ಬಕೆಟ್‌ಗೆ ನೀರು ಹಾಕಿ ಮತ್ತು ಆ ನೀರಿನಲ್ಲಿ ಮಾವಿನಕಾಯಿಗಳನ್ನು ಇರಿಸಿ. ಮಾವಿನಹಣ್ಣುಗಳು ಮುಳುಗಿದರೆ, ಅವು ನೈಸರ್ಗಿಕವಾಗಿ ಹಣ್ಣಾಗಿವೆ ಎಂದರ್ಥ. ಅವು ಮುಳುಗದೆ ತೇಲುತ್ತಿದ್ದರೆ ಕೃತಕವಾಗಿ ಬೆಳೆಸಲಾಗಿದೆ ಎಂದು ತಿಳಿಯಬೇಕು.

ಅಡಿಗೆ ಸೋಡಾ ಪರೀಕ್ಷೆ: ಸ್ವಲ್ಪ ಅಡಿಗೆ ಸೋಡಾವನ್ನು ನೀರಿಗೆ ಸೇರಿಸಿ ಮತ್ತು ಮಾವಿನಕಾಯಿಯನ್ನು ಅರ್ಧ ಗಂಟೆಯವರೆಗೆ ಮಿಶ್ರಣದಲ್ಲಿ ನೆನೆಸಿ. ನೆನೆಸಿದ ನಂತರ ಮಾವಿನಕಾಯಿಯನ್ನು ಸ್ವಚ್ಛವಾಗಿ ತೊಳೆದು ಹೊರತೆಗೆಯಿರಿ. ಮಾವಿನಹಣ್ಣಿನ ಬಣ್ಣ ಬದಲಾದರೆ, ಅವು ರಾಸಾಯನಿಕವಾಗಿ ಮಾಗಿದವು ಎಂದು ಅರ್ಥಮಾಡಿಕೊಳ್ಳಬೇಕು.

ಸದ್ಯ ಮಾರುಕಟ್ಟೆಯಲ್ಲಿ ಮಾವಿನಹಣ್ಣಿನ ಅಬ್ಬರ ಜೋರಾಗಿದ್ದು ನೀವು ಮಾವಿನಹಣ್ಣು ಖರೀದಿಸುವು ಮುನ್ನ ಅಥವಾ ಖರೀದಿಸಿ ತಂದ ಮೇಲೆ ನೈಸರ್ಗಿಕವಾಗಿ ಹಣ್ಣಾಗಿದ್ಯಾ ಅಥವಾ ಕೃತಕವಾಗಿ ಹಣ್ಣು ಮಾಡಲಾಗಿದ್ಯ ಎಂಬುದನ್ನು ಪರಿಶೀಲನೆ ಮಾಡುವುದು ತುಂಬಾ ಅವಶ್ಯ.