ಕನ್ನಡ ಸುದ್ದಿ  /  ಜೀವನಶೈಲಿ  /  ಪದೇ ಪದೇ ಕೆಟ್ಟ ಕನಸು ಬೀಳ್ತಾ ಇದ್ರೆ ಹಗುರವಾಗಿ ಪರಿಗಣಿಸಬೇಡಿ, ಇದು ಭವಿಷ್ಯದಲ್ಲಿ ಎದುರಾಗುವ ರೋಗಗಳ ಲಕ್ಷಣವಾಗಿರಬಹುದು ಎಚ್ಚರ

ಪದೇ ಪದೇ ಕೆಟ್ಟ ಕನಸು ಬೀಳ್ತಾ ಇದ್ರೆ ಹಗುರವಾಗಿ ಪರಿಗಣಿಸಬೇಡಿ, ಇದು ಭವಿಷ್ಯದಲ್ಲಿ ಎದುರಾಗುವ ರೋಗಗಳ ಲಕ್ಷಣವಾಗಿರಬಹುದು ಎಚ್ಚರ

ಕನಸು ಬೀಳುವುದು ಮನುಷ್ಯ ಸಹಜ ಗುಣ. ಒಮ್ಮೊಮ್ಮೆ ಒಳ್ಳೆ ಕನಸು ಬಿದ್ದರೆ, ಕೆಲವೊಮ್ಮೆ ಕೆಟ್ಟ ಕನಸು ಬೀಳುತ್ತದೆ. ಆದರೆ ಪದೇ ಪದೇ ಕೆಟ್ಟ ಕನಸು ಬೀಳುತ್ತಿದೆ ಎಂದರೆ ಖಂಡಿತ ಅದನ್ನು ನಿರ್ಲಕ್ಷ್ಯ ಮಾಡಬೇಡಿ. ಇದು ಭವಿಷ್ಯದಲ್ಲಿ ಆಟೋಇಮ್ಯೂನ್‌ ಕಾಯಿಲೆಗಳು ಬರಬಹುದು ಎಂಬುದರ ಮುನ್ಸೂಚಕವಾಗಿರಬಹುದು ಎಂದು ಇತ್ತೀಚಿನ ಅಧ್ಯಯನವೊಂದು ದೃಢಪಡಿಸಿದೆ.

ಪದೇ ಪದೇ ಕೆಟ್ಟ ಕನಸು ಬೀಳ್ತಾ ಇದ್ರೆ ಹಗುರವಾಗಿ ಪರಿಗಣಿಸಬೇಡಿ, ಇದು ಭವಿಷ್ಯದಲ್ಲಿ ಎದುರಾಗುವ ರೋಗಗಳ ಲಕ್ಷಣವಾಗಿರಬಹುದು ಎಚ್ಚರ
ಪದೇ ಪದೇ ಕೆಟ್ಟ ಕನಸು ಬೀಳ್ತಾ ಇದ್ರೆ ಹಗುರವಾಗಿ ಪರಿಗಣಿಸಬೇಡಿ, ಇದು ಭವಿಷ್ಯದಲ್ಲಿ ಎದುರಾಗುವ ರೋಗಗಳ ಲಕ್ಷಣವಾಗಿರಬಹುದು ಎಚ್ಚರ

ರಾತ್ರಿ ಮಲಗಿದಾಗ ನಾವೆಲ್ಲರೂ ಕನಸು ಕಾಣುತ್ತೇವೆ. ಕೆಲವೊಮ್ಮೆ ಕನಸುಗಳನ್ನು ನಮ್ಮನ್ನು ಸ್ವರ್ಗದಲ್ಲಿ ತೇಲುವಂತೆ ಮಾಡಿದರೆ ಇನ್ನೂ ಕೆಲವೊಮ್ಮೆ ನಾವು ಕಾಣುವ ಕನಸುಗಳು ನಮ್ಮನ್ನು ಬೆಚ್ಚಿ ಬೀಳಿಸುತ್ತವೆ. ಕೆಟ್ಟ ಕನಸು ಅಥವಾ ದುಃಸ್ವಪ್ನಗಳು ಯಾರಿಗೂ ಇಷ್ಟವಾಗುವುದಿಲ್ಲ. ಇದರಿಂದ ಗಾಬರಿಯಾಗುತ್ತದೆ. ಕೆಲವೊಮ್ಮೆ ಏನಿದು, ಯಾಕ್ಹೀಗೆ ಎಂಬ ಗೊಂದಲವೂ ಕಾಡುತ್ತದೆ. ಆದರೆ ಪದೇ ಪದೇ ದುಃಸ್ವಪ್ನಗಳು ಬೀಳುವುದು ಖಂಡಿತ ಮಾರಕ ಇದು ಭವಿಷ್ಯದ ಅಪಾಯವನ್ನು ಸೂಚಿಸುತ್ತದೆ ಎನ್ನುತ್ತವೆ ಅಧ್ಯಯನಗಳು. ದುಃಸ್ವಪ್ನಗಳು ಭವಿಷ್ಯದ ಸ್ವಯಂ ನಿರೋಧಕ ಕಾಯಿಲೆಗಳ ಮುಸ್ಸೂಚಕ ಚಿಹ್ನೆಗಳು ಎಂದು ಅಧ್ಯಯನವೊಂದು ಹೇಳುತ್ತದೆ.

ಟ್ರೆಂಡಿಂಗ್​ ಸುದ್ದಿ

ಏನಿದು ಅಧ್ಯಯನ ವರದಿ? 

ದಿ ಲ್ಯಾನ್ಸೆಟ್‌ನ ಕ್ಲಿನಿಕಲ್ ಮೆಡಿಸಿನ್ ಜರ್ನಲ್‌ನಲ್ಲಿ ಪ್ರಕಟವಾದ ಈ ಅಧ್ಯಯನದ ಪ್ರಕಾರ, ಈ ದುಃಸ್ವಪ್ನಗಳನ್ನು ಸ್ವಯಂ ನಿರೋಧಕ ಅಥವಾ ಆಟೊಇಮ್ಯೂನು ಕಾಯಿಲೆಗಳ ಎಚ್ಚರಿಕೆಯ ಸಂಕೇತವೆಂದು ಪರಿಗಣಿಸಬೇಕು. ಲೂಪಸ್‌ನಂತಹ ಸ್ವಯಂ ನಿರೋಧಕ ಕಾಯಿಲೆಗಳನ್ನು ಹೊಂದಿರುವ ಹಲವು ಜನರು ಈ ಸಮಸ್ಯೆ ಕಾಣಿಸುವ ಮೊದಲು ದುಃಸ್ವಪ್ನಗಳನ್ನು ಎದುರಿಸಿದ್ದಾರೆ. ಈ ಅಧ್ಯಯನದಲ್ಲಿ 676 ಲೂಪಸ್ ರೋಗಿಗಳನ್ನು ಸಮೀಕ್ಷೆ ಮಾಡಲಾಗಿದೆ. ಅವರಲ್ಲಿ 100 ಮಂದಿಯನ್ನು ಆಳವಾಗಿ ವಿಚಾರಣೆ ನಡೆಸಲಾಗಿತ್ತು.

ರೋಗಿಗಳು ಅನುಭವಿಸುವ ನರವೈಜ್ಞಾನಿಕ ಮತ್ತು ಮಾನಸಿಕ ಆರೋಗ್ಯದ ಲಕ್ಷಣಗಳ ಬಗ್ಗೆ ತಿಳಿದುಕೊಂಡು, ಅವರಿಗೆ ರೋಗ ಯಾವಾಗ ಪ್ರಾರಂಭವಾಯಿತು ಎಂಬುದರ ಕುರಿತು ವಿವರಗಳನ್ನು ಸಂಗ್ರಹಿಸಲಾಗಿತ್ತು. ಮೂಡ್ ಸ್ವಿಂಗ್ಸ್, ಭ್ರಮೆಗಳು, ನಡುಕ ಮತ್ತು ಆಯಾಸದಂತಹ ರೋಗಲಕ್ಷಣಗಳನ್ನು ಅನುಭವಿಸುತ್ತಿರುವುದನ್ನು ಹಲವರು ವರದಿ ಮಾಡಿದ್ದಾರೆ.

ಆಟೋಇಮ್ಯೂನ್ ರೋಗವನ್ನು ಗುರುತಿಸುವ ಮೊದಲು ಅನೇಕ ಜನರು ಕೆಲವು ದಿನಗಳವರೆಗೆ ದುಃಸ್ವಪ್ನಗಳಿಂದ ಬಳಲುತ್ತಿದ್ದರು ಎಂಬ ಅಂಶ ಈ ಸಮೀಕ್ಷೆಯ ವೇಳೆ ತಿಳಿದುಬಂದಿದೆ. ನರಸಂಬಂಧಿ ಕಾಯಿಲೆ ಇರುವವರಿಗೂ ಆರಂಭಿಕ ಹಂತದಲ್ಲಿ ದುಃಸ್ವಪ್ನ ಕಂಡುಬರುತ್ತದೆ. ಅಧ್ಯಯನದ ಸಮಯದಲ್ಲಿ ಸಂಶೋಧನೆಯಲ್ಲಿ ಭಾಗವಹಿಸಿದ ಜನರು ತಾವು ʼಬೆಂಕಿಯಲ್ಲಿ ಯಾರೋ ಸುಟ್ಟು ಹೋದಂತೆ, ಯಾರೋ ದಾಳಿ ಮಾಡಿದಂತೆ, ಎಲ್ಲೋ ಸಿಕ್ಕಿ ಹಾಕಿಕೊಂಡು ನಜ್ಜುಗುಜ್ಜಾದಂತೆ ಅಥವಾ ಕಣಿವೆಯಲ್ಲಿ ಬೀಳುವಂತಹ ದುಃಸ್ವಪ್ನಗಳನ್ನು ಕಂಡಿದ್ದರು ಎಂದು ಹೇಳಿಕೊಂಡಿದ್ದಾರೆ.

ಲೂಪಸ್‌ನಂತಹ ರೋಗ ಬರಬಹುದು ಎಚ್ಚರ 

ಮತ್ತೊಂದು ಪ್ರಮುಖ ಆವಿಷ್ಕಾರವೆಂದರೆ ಈ ದುಃಸ್ವಪ್ನಗಳು ಹೆಚ್ಚಾಗಿ ರೋಗದ ಬರುವುದಕ್ಕೂ ಮುಂಚಿತವಾಗಿ ಕಾಣಿಸಿಕೊಂಡಿರುತ್ತವೆ. ದುಃಸ್ವಪ್ನ ಹೊಂದಿರುವವರಲ್ಲಿ ಹೆಚ್ಚಿನವರು ಸಂಧಿವಾತ ಮತ್ತು ಲೂಪಸ್‌ನಂತಹ ಸ್ವಯಂ ನಿರೋಧಕ ಕಾಯಿಲೆಗಳನ್ನು ಹೊಂದಿರುತ್ತಾರೆ ಎಂದು ಕಂಡುಬಂದಿದೆ. ಅಧ್ಯಯನದಲ್ಲಿ ಭಾಗವಹಿಸಿದವರಲ್ಲಿ, ಲೂಪಸ್ ರೋಗಿಗಳಲ್ಲಿ ಶೇ 61 ರಷ್ಟು ಲೂಪಸ್ ರೋಗಿಗಳು ಮತ್ತು ಶೇ 34ರಷ್ಟು ಸಂಧಿವಾತ ಸಮಸ್ಯೆ ಹೊಂದಿರುವ ಜನರು ದುಃಸ್ವಪ್ನಗಳಿಂದ ಪ್ರಭಾವಿತರಾಗಿದ್ದಾರೆಂದು ಕಂಡುಬಂದಿದೆ.

ಲೂಪಸ್ ಮತ್ತು ಇತರ ಸ್ವಯಂ ನಿರೋಧಕ ಕಾಯಿಲೆ ಹೊಂದಿರುವ ಜನರು ರೋಗನಿರ್ಣಯ ಮಾಡಲು ಬಹಳ ಸಮಯ ತೆಗೆದುಕೊಳ್ಳುತ್ತಾರೆ. ಹೀಗಾಗಿ, ಆಟೋಇಮ್ಯೂನ್ ರೋಗಗಳ ಮೊದಲ ರೋಗಲಕ್ಷಣಗಳು ಮಾನಸಿಕವಾಗಿರುತ್ತವೆ. ಆದಾಗ್ಯೂ, ಅಧ್ಯಯನದಲ್ಲಿರುವ ಅನೇಕ ವೈದ್ಯರು ಇನ್ನು ಮುಂದೆ ತಮ್ಮ ಬಳಿಗೆ ಬರುವ ರೋಗಿಗಳಿಗೆ ದುಃಸ್ವಪ್ನದ ಲಕ್ಷಣಗಳ ಬಗ್ಗೆ ಕೇಳಬೇಕಾಗಿಲ್ಲ. ದುಃಸ್ವಪ್ನಗಳನ್ನು ನಿಯಮಿತವಾಗಿ ವರದಿ ಮಾಡುವ ರೋಗಿಗಳು ಅವರು ಯಾವ ರೀತಿಯ ಸ್ವಯಂ ನಿರೋಧಕ ಕಾಯಿಲೆಯನ್ನು ಹೊಂದಿದ್ದಾರೆಂದು ತಿಳಿದಿರಬೇಕು.

ದುಃಸ್ವಪ್ನಗಳಂತಹ ರೋಗಲಕ್ಷಣಗಳು ರೋಗನಿರ್ಣಯಕ್ಕೆ ಮುಖ್ಯವಲ್ಲ. ಹಾಗಾಗಿ ರೋಗಿಗಳು ಮತ್ತು ವೈದ್ಯರು ಸಹ ಅವರನ್ನು ನಿರ್ಲಕ್ಷಿಸುತ್ತಾರೆ. ರೋಗಗಳನ್ನು ಪತ್ತೆಹಚ್ಚಲು ರಕ್ತ ಪರೀಕ್ಷೆ ಮತ್ತು ಮೆದುಳಿನ ಸ್ಕ್ಯಾನ್ ಅಗತ್ಯವಿದೆ.

ಒಮ್ಮೊಮ್ಮೆ ದುಃಸ್ವಪ್ನಗಳು ಕಂಡರೆ ನಿಮಗೆ ಕಾಯಿಲೆ ಇದೆ ಎಂದು ಭಾವಿಸುವ ಅವಶ್ಯವಿಲ್ಲ. ಹಾಗಂತ ಪದೇ ಪದೇ ದುಃಸ್ವಪ್ನ ಕಂಡರೆ ಇದನ್ನು ನಿರ್ಲಕ್ಷ್ಯ ಮಾಡುವ ಹಾಗೂ ಇಲ್ಲ. ಸಾಮಾನ್ಯವಾಗಿ ದುಃಸ್ವಪ್ನ ಮಾನಸಿಕ ಅಸ್ವಸ್ಥತೆಯ ಲಕ್ಷಣಗಳನ್ನೂ ಸೂಚಿಸುತ್ತವೆ. ಈ ಬಗ್ಗೆ ನಿರ್ಲಕ್ಷ್ಯ ಬೇಡ. ನಿಮಗೂ ಪದೇ ಪದೇ ದುಃಸ್ವಪ್ನ ಬೀಳುತ್ತಿದ್ದರೆ ತಜ್ಞರು ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ.