Asthma Problem: ಮಳೆಗಾಲದಲ್ಲಿ ಹೆಚ್ಚುವ ಅಸ್ತಮಾ ಸಮಸ್ಯೆಗೆ ಮುನ್ನೆಚ್ಚರಿಕೆಯೇ ಮದ್ದು; ಅಸ್ತಮಾ ನಿವಾರಣೆಗೆ ಹೀಗಿರಲಿ ನಿಮ್ಮ ಜೀವನಕ್ರಮ
ಕನ್ನಡ ಸುದ್ದಿ  /  ಜೀವನಶೈಲಿ  /  Asthma Problem: ಮಳೆಗಾಲದಲ್ಲಿ ಹೆಚ್ಚುವ ಅಸ್ತಮಾ ಸಮಸ್ಯೆಗೆ ಮುನ್ನೆಚ್ಚರಿಕೆಯೇ ಮದ್ದು; ಅಸ್ತಮಾ ನಿವಾರಣೆಗೆ ಹೀಗಿರಲಿ ನಿಮ್ಮ ಜೀವನಕ್ರಮ

Asthma Problem: ಮಳೆಗಾಲದಲ್ಲಿ ಹೆಚ್ಚುವ ಅಸ್ತಮಾ ಸಮಸ್ಯೆಗೆ ಮುನ್ನೆಚ್ಚರಿಕೆಯೇ ಮದ್ದು; ಅಸ್ತಮಾ ನಿವಾರಣೆಗೆ ಹೀಗಿರಲಿ ನಿಮ್ಮ ಜೀವನಕ್ರಮ

ಮಳೆಗಾಲದಲ್ಲಿ ಅಸ್ತಮಾ ಸಮಸ್ಯೆ ಉಲ್ಬಣವಾಗುವುದು ಸಾಮಾನ್ಯ. ಶೀತ ವಾತಾವರಣ, ಆರ್ದ್ರತೆ, ಬಿಡದೇ ಸುರಿಯುವ ಮಳೆ ಅಸ್ತಮಾ ಹೆಚ್ಚಲು ಕಾರಣವಾಗಬಹುದು. ಆದರೆ ಇದನ್ನು ಸಮರ್ಪಕವಾಗಿ ನಿಯಂತ್ರಿಸುವುದು ಅವಶ್ಯ. ಈ ಸಮಸ್ಯೆ ಅತಿಯಾದರೆ ಜೀವಹಾನಿಗೂ ಕಾರಣವಾಗಬಹುದು.

ಮಳೆಗಾಲದಲ್ಲಿ ಹೆಚ್ಚುವ ಅಸ್ತಮಾ ಸಮಸ್ಯೆ
ಮಳೆಗಾಲದಲ್ಲಿ ಹೆಚ್ಚುವ ಅಸ್ತಮಾ ಸಮಸ್ಯೆ (Freepik)

ಮಳೆಗಾಲದಲ್ಲಿ ಅಸ್ತಮಾ ಸಮಸ್ಯೆ ಕಾಡುವುದು ಹೆಚ್ಚು. ತಂಪಾದ ವಾತಾವರಣವು ಅಸ್ತಮಾ ಹೆಚ್ಚಲು ಕಾರಣವಾಗಬಹುದು. ಮಳೆಗಾಲದಲ್ಲಿ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುವುದು ಹಾಗೂ ಸೋಂಕು ಹರಡುವಿಕೆಯ ಪ್ರಮಾಣ ಹೆಚ್ಚಲೂ ಅಸ್ತಮಾ ಸಮಸ್ಯೆಯ ಉಲ್ಬಣಕ್ಕೆ ಕಾರಣವಾಗಬಹುದು.

ಅಸ್ತಮಾ ಎಂದರೆ ಶ್ವಾಸನಾಳಕ್ಕೆ ಸಂಬಂಧಿಸಿದ ಉಸಿರಾಟದ ತೊಂದರೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಅತಿಯಾದ ತೂಕ ಮತ್ತು ಕಡಿಮೆ ತೂಕವಿರುವವರಲ್ಲಿ ಕಾಣಿಸಿಕೊಳ್ಳುವ ಅಸ್ತಮಾ ಇನ್ನಷ್ಟು ಅಪಾಯಕಾರಿ. ಹೆಚ್ಚು ತೂಕವುಳ್ಳ ದೇಹಕ್ಕೆ ಆಮ್ಲಜನಕದ ಅಗತ್ಯ ಹೆಚ್ಚಾಗಿ ಶ್ವಾಸಕೋಶದ ಮೇಲೆ ಹೆಚ್ಚಿನ ಹೊರೆ ಬೀಳುತ್ತದೆ. ಆಗ ಉಸಿರಾಡಲು ಕಷ್ಟವಾಗುತ್ತದೆ. ಇನ್ನು ಕಡಿಮೆ ತೂಕವಿರುವ ದೇಹವು ಮೊದಲೇ ದುರ್ಬಲವಾಗಿರುತ್ತದೆ ಮತ್ತು ಅಸ್ತಮಾವೂ ಸೇರಿಕೊಂಡರೆ ಹಲವು ಸೋಂಕುಗಳಿಗೆ ಒಳಗಾಗುತ್ತದೆ.

ಮಳೆಗಾಲದಲ್ಲಿ ಹೆಚ್ಚುವ ಅಸ್ತಮಾ ಸಮಸ್ಯೆಯನ್ನು ಆರೋಗ್ಯಕರ ಜೀವನಶೈಲಿಯಿಂದ ಸುಲಭವಾಗಿ ನಿಯಂತ್ರಿಸಬಹುದು. ಇದಕ್ಕಾಗಿ ಆರೋಗ್ಯಕರ ಆಹಾರ ಸೇವನೆಯೂ ಬಹಳ ಮುಖ್ಯವಾಗುತ್ತದೆ. ಇದರೊಂದಿಗೆ ತೂಕ ನಿಯಂತ್ರಣ ಮಾಡುವುದು ಅವಶ್ಯ.

ಮಳೆಗಾಲದಲ್ಲಿ ಅಸ್ತಮಾ ನಿವಾರಣೆಗೆ ಹೀಗೆ ಮಾಡಿ

* ಅಲರ್ಜಿಯನ್ನು ಉತ್ತೇಜಿಸುವ ಆಹಾರಗಳ ಸೇವನೆಗೆ ಕಡಿವಾಣ ಹಾಕಿ.

* ಅಧಿಕ ಉಪ್ಪಿನಾಂಶ ಇರುವ ಆಹಾರಗಳ ಸೇವನೆಯು ಶ್ವಾಸಕೋಶದಲ್ಲಿ ದ್ರವದ ಧಾರಣಕ್ಕೆ ಕಾರಣವಾಗಬಹುದು. ಇದು ಉಸಿರಾಟದ ತೊಂದರೆಯನ್ನು ಸೃಷ್ಟಿಸುತ್ತದೆ.

* ಮಲಗುವ ಕೋಣೆಯನ್ನು ಶುಚಿಯಾಗಿಡಿ.

* ಅಸ್ತಮಾ ಸಮಸ್ಯೆ ಇರುವವರು ಸಾಕುಪ್ರಾಣಿಗಳೊಂದಿಗೆ ಮಲಗಬೇಡಿ.

* ಹಣ್ಣು-ತರಕಾರಿಗಳು, ಪ್ರೊಟೀನ್‌, ಸಮಗ್ರ ಧಾನ್ಯ ಹೀಗೆ ಕಡಿಮೆ ಕೊಬ್ಬನ್ನು ಒಳಗೊಂಡಿರುವ ಸಮತೋಲಿತ ಆಹಾರವನ್ನು ಸೇವಿಸಬೇಕು.

* ಮೊಟ್ಟೆ, ಮಾಂಸ, ಮೀನು, ಹಾಲು, ದ್ವಿದಳ ಧಾನ್ಯ, ಶ್ವಾಸಕೋಶಗಳಲ್ಲಿ ಕೊಲಾಜನ್‌ ಸಂಶ್ಲೇಷಣೆ ಹೆಚ್ಚಿಸುವ ಬೀನ್ಸ್‌ ಮುಂತಾದ ಹೆಚ್ಚು ಪ್ರೊಟೀನ್‌ಯುಕ್ತ ಆಹಾರವನ್ನು ಸೇವಿಸಿ.

* ವಿಟಮಿನ್‌ ಸಿ, ಡಿ, ಇ ಅಂಶ ಇರುವ ಹಾಲು, ಮೊಟ್ಟೆ ಮತ್ತು ಸಿಟ್ರಸ್‌ ಹಣ್ಣುಗಳನ್ನು ಸೇವಿಸಬೇಕು. ವಿಟಮಿನ್‌ ಡಿ ಮಟ್ಟ ಕಡಿಮೆಯಾದರೆ ಅಸ್ತಮಾ ಉಲ್ಬಣಕ್ಕೆ ಕಾರಣವಾಗುತ್ತದೆ.

* ಬೀಟಾ ಕ್ಯಾರೋಟಿನ್‌ ಮತ್ತು ಮೆಗ್ನೀಷಿಯಂನಿಂದ ಸಮೃದ್ಧವಾದ ಹಸಿರು ತರಕಾರಿಗಳು, ಪಾಲಕ್‌ ಸೊಪ್ಪು, ಕ್ಯಾರೆಟ್‌, ಕುಂಬಳಕಾಯಿ ಬೀಜ ಇತ್ಯಾದಿಗಳನ್ನು ಸೇವಿಸಬೇಕು.

* ಬೆಳ್ಳುಳ್ಳಿ, ಶುಂಠಿ, ಅರಿಶಿನವನ್ನು ದಿನನಿತ್ಯದ ಆಹಾರದಲ್ಲಿ ಬಳಸಿದರೆ ಉತ್ತಮ.

* ಒಮೆಗಾ 3 ಕೊಬ್ಬಿನಾಮ್ಲದಿಂದ ಸಮೃದ್ಧವಾಗಿರುವ ಮೀನು, ಅಗಸೆಬೀಜ, ಬೆಣ್ಣೆಹಣ್ಣು, ಬಾದಾಮಿ, ವಾಲ್‌ನಟ್‌ ಅಸ್ತಮಾ ಅಪಾಯವನ್ನು ತಡೆಗಟ್ಟಲು ಸಹಾಯ ಮಾಡುತ್ತವೆ.

* ಬಿಯರ್‌, ವೈನ್‌, ಹಾರ್ಡ್‌ ಸೈಡರ್‌ ವಿನೆಗರ್‌, ಹೆಪ್ಪುಗಟ್ಟಿದ ಸಿಗಡಿ, ಹೆಪ್ಪುಗಟ್ಟಿದ ಆಲೂಗಡ್ಡೆ, ಉಪ್ಪಿನಕಾಯಿ, ಕೃತಕ ನಿಂಬೆ ರಸ ಇತ್ಯಾದಿಗಳ ಸೇವನೆಯನ್ನು ಆದಷ್ಟು ನಿಯಂತ್ರಿಸಿ.

* ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲವಾದರೂ ವಾಕಿಂಗ್‌ ಮಾಡಿ. ಇದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ. ಜೊತೆಗೆ ಕಪಾಲಬಾತಿ ಪ್ರಾಣಾಯಾಮ, ಭುಜಂಗಾಸನ ಹಾಗೂ ಆಳವಾದ ಉಸಿರಾಟದ ವ್ಯಾಯಾಮಗಳು ಅಸ್ತಮಾ ನಿಯಂತ್ರಣಕ್ಕೆ ಸಹಾಯಕವಾಗಿವೆ.

ಇದನ್ನೂ ಓದಿ 

Monsoon Health: ಮಳೆಗಾಲದಲ್ಲಿ ಹೆಚ್ಚಲಿದೆ ಅಸ್ತಮಾ ಸಮಸ್ಯೆ; ಕಾರಣಗಳು, ಪರಿಹಾರ ಮಾರ್ಗ ಹೀಗಿದೆ; ಇರಲಿ ಮುನ್ನೆಚ್ಚರಿಕೆ

ಮಳೆಗಾಲದಲ್ಲಿ ವಾತಾವರಣ ತಂಪಾಗಿರುತ್ತದೆ. ಈ ವಾತಾವರಣ ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಶೀತ ವಾತಾವರಣವು ಅಸ್ತಮಾ ಸಮಸ್ಯೆಯನ್ನು ಇನ್ನಷ್ಟು ಬಿಡಾಗುಸುತ್ತದೆ. ಮಳೆಗಾಲದಲ್ಲಿ ಅಸ್ತಮಾ ಸಮಸ್ಯೆ ಹೆಚ್ಚಲು ಕಾರಣ, ಅದಕ್ಕೆ ಪರಿಹಾರ ಮಾರ್ಗಗಳೇನು ಎಂಬ ಕುರಿತ ಮಾಹಿತಿ ಇಲ್ಲಿದೆ.