ಕನ್ನಡ ಸುದ್ದಿ  /  ಜೀವನಶೈಲಿ  /  Monsoon Health: ಮಳೆಗಾಲದಲ್ಲಿ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ಹೀಗಿರಲಿ ಜೀವನಕ್ರಮ; ಆಹಾರದ ಮೇಲೂ ಇರಲಿ ಗಮನ

Monsoon Health: ಮಳೆಗಾಲದಲ್ಲಿ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ಹೀಗಿರಲಿ ಜೀವನಕ್ರಮ; ಆಹಾರದ ಮೇಲೂ ಇರಲಿ ಗಮನ

Monsoon and Child Health: ಮಳೆಗಾಲದಲ್ಲಿ ಮಕ್ಕಳ ಆರೋಗ್ಯ ಕಾಪಾಡಿಕೊಳ್ಳಲು ಆಹಾರಕ್ರಮದೊಂದಿಗೆ ಜೀವನಶೈಲಿಯೂ ಬಹಳ ಮುಖ್ಯವಾಗುತ್ತದೆ. ಹಾಗಾದರೆ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ಆಹಾರಕ್ರಮ ಹಾಗೂ ಜೀವನಶೈಲಿ ಹೇಗಿರಬೇಕು? ಇಲ್ಲಿದೆ ಪೋಷಕರಿಗೆ ಸಲಹೆ.

ಮಳೆಗಾಲದಲ್ಲಿ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಗಮನ ಕೊಡಿ
ಮಳೆಗಾಲದಲ್ಲಿ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಗಮನ ಕೊಡಿ

ಮಳೆಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ನಿಜಕ್ಕೂ ಸವಾಲು. ದಿನವಿಡೀ ಸುರಿಯುವ ಮಳೆ, ಶೀತಗಾಳಿ ಬೇಡವೆಂದರೂ ಇಲ್ಲದ ಸಮಸ್ಯೆಗಳನ್ನು ಹುಟ್ಟು ಹಾಕುತ್ತದೆ. ಅದರಲ್ಲೂ ಮಳೆಗಾಲದಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಸೂಕ್ಷ್ಮವಾಗಿರಬೇಕು, ಇದು ಪೋಷಕರ ಆದ್ಯತೆಯೂ ಆಗಬೇಕು.

ಟ್ರೆಂಡಿಂಗ್​ ಸುದ್ದಿ

ಉಸಿರಾಟದ ಸೋಂಕು, ಜ್ವರ, ಗಂಟಲು ನೋವು ಮಳೆಗಾಲದಲ್ಲಿ ಕಾಣಿಸುವ ಸಾಮಾನ್ಯ ಸಮಸ್ಯೆಗಳಾಗಿವೆ. ಮುಂಗಾರಿನ ಋತುಮಾನದಲ್ಲಿ ಮಕ್ಕಳು ಹೆಚ್ಚಿನ ಕ್ಯಾಲೊರಿ, ಮಸಾಲೆಯುಕ್ತ ಮತ್ತು ಬಾಯಲ್ಲಿ ನೀರೂರಿಸುವ ಭ್ಯಕ್ಷ್ಯಗಳನ್ನು ತಿನ್ನಲು ಒಲವು ತೋರುವುದರಿಂದ ಹೊಟ್ಟೆಯ ಸೋಂಕಿನ ಸಾಧ್ಯತೆತಯೂ ಹೆಚ್ಚು. ಸೋಂಕಿತ ಆಹಾರ ಮತ್ತು ನೀರಿನಿಂದ ಕಾಮಾಲೆ ಮತ್ತು ಟೈಫಾಯಿಡ್‌ ಸಹ ಸಾಮಾನ್ಯವಾಗಿದೆ. ಹಾಗಾದರೆ ಮಕ್ಕಳನ್ನು ಸೋಂಕು ಹಾಗೂ ಅಲರ್ಜಿಯಿಂದ ದೂರವಿಡುವುದು ಹೇಗೆ, ಇಲ್ಲಿದೆ ಸಲಹೆ.

ಆಹಾರ, ಜೀವನಶೈಲಿ ಹಾಗೂ ವ್ಯಾಕ್ಸಿನ್‌ವರೆಗೆ ಋತುಮಾನದ ಅಲರ್ಜಿ ಹಾಗೂ ಆರೋಗ್ಯ ಸಮಸ್ಯೆಗಳಿಂದ ಮಕ್ಕಳನ್ನು ರಕ್ಷಿಸಲು ಹಲವು ಮಾರ್ಗಗಳಿವೆ. ಹಾಗಾದರೆ ಮಳೆಗಾಲದಲ್ಲಿ ಮಗುವಿನ ದಿನಚರಿಯಲ್ಲಿ ಯಾವ ರೀತಿ ಬದಲಾವಣೆ ಮಾಡಿಕೊಳ್ಳಬೇಕು, ನೋಡಿ.

ಫೇತ್‌ ಕ್ಲಿನಿಕ್‌ ಶಿಶು ವೈದ್ಯೆ ಡಾ. ಪೌಲಾ ಗೋಯೆಲ್‌ ಮಾನ್ಸೂನ್‌ ರೋಗಗಳು ಹಾಗೂ ಸೋಂಕಿನ ವಿರುದ್ಧ ಮಗುವಿನಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅಳವಡಿಸಿಕೊಳ್ಳಬಹುದಾದ ಕೆಲವು ಸಲಹೆಗಳನ್ನು ತಿಳಿಸಿದ್ದಾರೆ. ಇವರು ಹೆಲ್ತ್‌ಶಾಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ಹೀಗೆ ವಿವರಿಸಿದ್ದಾರೆ.

ಪೋಷಣೆಯ ಮೇಲೆ ಗಮನವಿರಲಿ

ಆರೋಗ್ಯಕರ ಆಹಾರವು ರುಚಿಕರವಾಗಿಲ್ಲ ಮತ್ತು ಅವು ಸಪ್ಪೆಯಾಗಿವೆ ಎನ್ನುವ ಕಾರಣಕ್ಕೆ ಮಕ್ಕಳನ್ನು ಅದನ್ನು ಸೇವಿಸದೇ ಇರಬಹುದು. ಆದರೆ ಪೋಷಕರು ಆರೋಗ್ಯಕರ ಆಹಾರಗಳ ಪಾಕವಿಧಾನವನ್ನು ಬದಲಿಸುವ ಮೂಲಕ ಮಕ್ಕಳು ತಿನ್ನುವಂತೆ ಮಾಡಬಹುದು. ಮಳೆಗಾಲದಲ್ಲಿ ಸಾಧ್ಯವಾದಷ್ಟು ಜಂಕ್‌ಫುಡ್‌ ಸೇವನೆಯಿಂದ ಮಕ್ಕಳನ್ನು ದೂರವಿಡಿ. ಅವರ ಆಹಾರದಲ್ಲಿ ಸಾಕಷ್ಟು ಹಣ್ಣು, ತರಕಾರಿಗಳನ್ನೂ ಸೇರಿಸಿ.

ವ್ಯಾಯಾಮ ಮಾಡಿಸಿ

ಕುಳಿತುಕೊಂಡೇ ಇರುವುದು ನಮ್ಮ ಪಾಲಿನ ವೈರಿಗಳಲ್ಲಿ ಒಂದು. ಮಳೆಗಾಲದಲ್ಲಿ ಮಕ್ಕಳೂ ಕೂಡ ಜಡಜೀವನ ಶೈಲಿಯನ್ನು ಪಾಲಿಸುವುದು ಸರಿಯಲ್ಲ. ಆ ಕಾರಣಕ್ಕೆ ನಿರಂತರವಾಗಿ ವ್ಯಾಯಾಮ ಮಾಡಲು ಮಕ್ಕಳನ್ನು ಪ್ರೋತ್ಸಾಹಿಸಿ. ಮಳೆ ಇಲ್ಲದ ಸಮಯದಲ್ಲಿ ಮನೆಯಿಂದ ಹೊರ ಹೋಗಿ ಆಟವಾಡಲು ತಿಳಿಸಿ. ಸ್ಕಿಪ್ಪಿಂಗ್‌, ಹೂಪಿಂಗ್‌, ಡಕ್‌ ವಾಕ್‌ನಂತಹ ಒಳಾಂಗಣ ಕ್ರೀಡೆಯಲ್ಲಿ ಮಕ್ಕಳ ಭಾಗವಹಿಸುವಂತೆ ನೋಡಿಕೊಳ್ಳಿ. ಇದರಿಂದ ಮಕ್ಕಳ ಶಕ್ತಿ ಸಾಮರ್ಥ್ಯ ಹೆಚ್ಚುವ ಜೊತೆಗೆ ಸ್ಕ್ರೀನ್‌ ಟೈಮ್‌ ಅನ್ನು ಮಿತಿಗೊಳಿಸಲು ಸಹಾಯ ಮಾಡುತ್ತದೆ.

ಆರೋಗ್ಯಕರ ಜೀವನಶೈಲಿ ಪಾಲಿಸಿ

ಆರೋಗ್ಯ ಜೀವನಶೈಲಿ ಎಂದರೆ ಸಮರ್ಪಕ ಆಹಾರ ಸೇವನೆ, ವ್ಯಾಯಾಮ, ಉತ್ತಮ ನಿದ್ದೆಯ ಕ್ರಮಗಳನ್ನು ಪಾಲಿಸುವುದು ಇದೇ ಆಗಿದೆ. ಮಕ್ಕಳ ಸ್ಕ್ರೀನ್‌ ಟೈಮ್‌ ಅನ್ನು ಮಿತಿಗೊಳಿಸಿ. ರಾತ್ರಿ ಮಲಗುವ ಒಂದು ಗಂಟೆಗೂ ಮೊದಲು ಗ್ಯಾಜೆಟ್‌ಗಳನ್ನು ನೀಡಬೇಡಿ. ಇದು ಮಕ್ಕಳಿಗೆ ಉತ್ತಮ ನಿದ್ದೆ ಮಾಡಲು ಸಹಾಯ ಮಾಡುತ್ತದೆ ಮತ್ತು ಮುಂಜಾನೆ ತಾಜಾ ಮನಸ್ಸಿನಿಂದ ಎದ್ದೇಳಲು ಸಹಾಯ ಮಾಡುತ್ತದೆ.

ನೈರ್ಮಲ್ಯ ಕಾಪಾಡಿಕೊಳ್ಳಿ

ಮಳೆಗಾಲದಲ್ಲಿ ಕೈಗಳ ನೈರ್ಮಲ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಬೇರೆಯವರ ಜೊತೆ ಸಂಪರ್ಕ ಸಾಧಿಸುವುದು ಹಾಗೂ ಸೋಂಕು ಹರಡುವುದನ್ನು ತಡೆಯವಂತೆ ನೋಡಿಕೊಳ್ಳಿ. ಮಕ್ಕಳು ಆಗಾಗ ಕೈ ತೊಳೆಯುವಂತೆ ನೋಡಿಕೊಳ್ಳಿ. ಮಳೆಗಾಲಕ್ಕೆ ಸಂಬಂಧಿಸಿದ ರೋಗಗಳಿಂದ ದೂರವಿರಲು ಪ್ರತಿದಿನ ಸ್ನಾನ ಮಾಡುವುದು ಅವಶ್ಯ.

ವ್ಯಾಕ್ಸಿನೇಷನ್‌

ಚಿಕಿತ್ಸೆಗಿಂತ ತಡೆಗಟ್ಟುವುದು ಮುಖ್ಯ ಎನ್ನುತ್ತಾರೆ. ಮಕ್ಕಳ ವಯಸ್ಸಿಗೆ ತಕ್ಕ ಹಾಗೆ ನೀಡಬೇಕಾದ ಎಲ್ಲಾ ವ್ಯಾಕ್ಸಿನ್‌ಗಳನ್ನು ಕೊಡಿಸಿ. ಥೈರಾಯಿಡ್‌, ಹೆಪಟೈಟಿಸ್‌ ವ್ಯಾಕ್ಸಿನ್‌ ನೀಡಿ. ಇದರಿಂದ ನೀರು ಹಾಗೂ ಆಹಾರದ ಕಲುಷಿತಗಳಿಂದ ದೂರ ಇರಬಹುದು.

ರೋಗನಿರೋಧಕ ಶಕ್ತಿ ಹೆಚ್ಚಲು ಈ ಆಹಾರ ಕ್ರಮ ಪಾಲಿಸಿ

ಮೇಲೆ ತಿಳಿಸಿದ ಜೀವನಕ್ರಮಗಳ ಜೊತೆಗೆ ಆಹಾರ ಕ್ರಮದ ಪಾಲನೆಯೂ ಬಹಳ ಮುಖ್ಯವಾಗುತ್ತದೆ. ಶೇ 20 ರಿಂದ 25 ಕೊಬ್ಬಿನಾಂಶ, 10 ರಿಂದ 12 ರಷ್ಟು ಪ್ರೊಟೀನ್‌, ಶೇ 60 ರಿಂದ 70 ರಷ್ಟು ಕಾರ್ಬೋಹೈಡ್ರೇಟ್‌ ಅಂಶ ಇರುವ ಸಮತೋಲಿತ ಆಹಾರ ಸೇವನೆ ಅವಶ್ಯ.

* ಮೊಸರಿನಲ್ಲಿರುವ ಪ್ರೊಬಯೋಟಿಕ್ಸ್‌ ಅಂಶ ಬ್ಯಾಕ್ಟೀರಿಯಾ, ವೈರಸ್‌ ಹಾಗೂ ಶೀಲಿಂಧ್ರ ಸೋಂಕುಗಳನ್ನು ತಡೆಯುತ್ತದೆ. ಯಾವುದೇ ಸುವಾಸನೆ, ಸಿಹಿಕಾರಕಗಳು ಮತ್ತು ಬಣ್ಣಗಳಿಲ್ಲದೆ ಮೊಸರನ್ನು ಸೇವಿಸಲು ಯಾವಾಗಲೂ ಸಲಹೆ ನೀಡಲಾಗುತ್ತದೆ.

* ಕ್ಯಾರೆಟ್‌, ಬಿಟ್ರೂಟ್‌, ಟೊಮೆಟೊ, ಪಾಲಕ್‌, ಕುಂಬಳಕಾಯಿ, ಸೋರೆಕಾಯಿ, ಕೋಸುಗಡ್ಡೆಯಂತಹ ಮಿಶ್ರ ತರಕಾರಿಯಿಂದ ಮನೆಯಲ್ಲಿ ತಯಾರಿಸಿದ ಸೂಪ್‌ ಮಗುವಿನ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಉತ್ತಮ ಮಾರ್ಗವಾಗಿದೆ. ಇದು ಕೆಮ್ಮು, ಶೀತ, ಜ್ವರದ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸೂಪ್ ತಯಾರಿಸಲು ಬಳಸುವ ಮಸಾಲೆಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ, ಅರಿಶಿನ ಮತ್ತು ಶುಂಠಿ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ಬೆಳ್ಳುಳ್ಳಿ ಆಂಟಿಬ್ಯಾಕ್ಟೀರಿಯಲ್, ಆಂಟಿಫಂಗಲ್ ಮತ್ತು ಆಂಟಿವೈರಲ್ ಗುಣಗಳನ್ನು ಹೊಂದಿದೆ.

*ಮೊಟ್ಟೆಯಲ್ಲಿ ಪ್ರೋಟೀನ್, ಸತು, ವಿಟಮಿನ್ ಎ, ಬಿ, ಡಿ, ಇ, ಕೆ, ಕಬ್ಬಿಣ, ಮೆಗ್ನೀಸಿಯಮ್ ಮತ್ತು ಸೆಲೆನಿಯಮ್ ಮುಂತಾದ ಪೋಷಕಾಂಶಗಳಿವೆ.

* ಕೋಸುಗಡ್ಡೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ತರಕಾರಿಯಾಗಿದೆ. ಇದು ಸಂಪೂರ್ಣ ಪೌಷ್ಠಿಕಾಂಶದ ಪ್ಯಾಕೇಜ್ ಆಗಿದ್ದು ಅದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಏಕೆಂದರೆ ಇದರಲ್ಲಿ ವಿಟಮಿನ್ ಬಿ, ಬಿ 2, ಬಿ 3 ಮತ್ತು ಬಿ 6, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಸತು, ಕಬ್ಬಿಣ, ವಿಟಮಿನ್ ಸಿ ಮತ್ತು ಬೀಟಾ-ಕ್ಯಾರೋಟಿನ್ ಅಂಶವಿದೆ.

* ನಿಂಬೆಯಲ್ಲಿರುವ ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ನಿಂಬೆಯಿಂದ ರಸಂ ಮಾಡಿ ತಿನ್ನಿಸಬಹುದು.

*ಕಲ್ಲಂಗಡಿ, ಬಾಳೆಹಣ್ಣು, ಚಿಕ್ಕು, ಸೇಬು, ಪೇರಳೆ, ಪಪ್ಪಾಯಿ ಮತ್ತು ಕಿತ್ತಳೆ ಮುಂತಾದ ಹಣ್ಣುಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

* ಬೀಟ್ರೂಟ್‌ಗಳು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ರಕ್ತಹೀನತೆಯನ್ನು ತಡೆಯುತ್ತದೆ, ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಹಲವಾರು ಸೋಂಕುಗಳ ವಿರುದ್ಧ ಹೋರಾಡುತ್ತದೆ. ಆದ್ದರಿಂದ, ಈ ಮಾನ್ಸೂನ್ ಸಮಯದಲ್ಲಿ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಬೀಟ್ರೂಟ್ ಅನ್ನು ನಿಮ್ಮ ಆಹಾರದಲ್ಲಿ ಸೇರಿಸಿ.