ಮಳೆಗಾಲದಲ್ಲಿ ಎದುರಾಗುವ 5 ಸಾಮಾನ್ಯ ಕಣ್ಣಿನ ದೋಷಗಳಿವು; ಮಾನ್ಸೂನ್‌ ಋತುವಿನಲ್ಲಿ ಹೀಗಿರಲಿ ನಯನಗಳ ಕಾಳಜಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮಳೆಗಾಲದಲ್ಲಿ ಎದುರಾಗುವ 5 ಸಾಮಾನ್ಯ ಕಣ್ಣಿನ ದೋಷಗಳಿವು; ಮಾನ್ಸೂನ್‌ ಋತುವಿನಲ್ಲಿ ಹೀಗಿರಲಿ ನಯನಗಳ ಕಾಳಜಿ

ಮಳೆಗಾಲದಲ್ಲಿ ಎದುರಾಗುವ 5 ಸಾಮಾನ್ಯ ಕಣ್ಣಿನ ದೋಷಗಳಿವು; ಮಾನ್ಸೂನ್‌ ಋತುವಿನಲ್ಲಿ ಹೀಗಿರಲಿ ನಯನಗಳ ಕಾಳಜಿ

ಬೇಸಿಗೆಯಲ್ಲಿ ಮಾತ್ರವಲ್ಲ, ಮಳೆಗಾಲದಲ್ಲೂ ಕಣ್ಣಿಗೆ ಸಮಸ್ಯೆ ಕಾಡುವುದು ಸಹಜ. ಹವಾಮಾನ ಬದಲಾಗುತ್ತಿದ್ದಂತೆ ನಯನಗಳಲ್ಲಿ ತೊಂದರೆ ಕಾಣಿಸಲು ಆರಂಭಿಸುತ್ತದೆ. ಮಳೆಗಾಲದಲ್ಲಿ ಕಾಡುವ ಸಮಸ್ಯೆಗಳಲ್ಲಿ ಕಣ್ಣಿನ ಅಲರ್ಜಿ ಕೂಡ ಪ್ರಮುಖವಾದದ್ದು. ಮಳೆಗಾಲದಲ್ಲಿ ಸಾಮಾನ್ಯವಾಗಿರುವ ಈ 5 ಕಣ್ಣಿನ ಸೋಂಕಿನ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು.

ಮಳೆಗಾಲದಲ್ಲಿ ಎದುರಾಗುವ 5 ಸಾಮಾನ್ಯ ಕಣ್ಣಿನ ದೋಷಗಳಿವು; ಹೀಗಿರಲಿ ನಯನಗಳ ಕಾಳಜಿ
ಮಳೆಗಾಲದಲ್ಲಿ ಎದುರಾಗುವ 5 ಸಾಮಾನ್ಯ ಕಣ್ಣಿನ ದೋಷಗಳಿವು; ಹೀಗಿರಲಿ ನಯನಗಳ ಕಾಳಜಿ

ಮಳೆಗಾಲದಲ್ಲಿ ಮಣ್ಣಿನ ಘಮವೇ ಒಂಥರಾ ಅಂದ. ಪ್ರಕೃತಿಯು ಹಸಿರುಟ್ಟು ನಲಿಯುವ ಈ ಸಮಯದಲ್ಲಿ ಮನಸ್ಸಿಗೆ ಮುದ ಸಿಗುವುದು ನಿಜ. ಆ ಕಾರಣಕ್ಕೆ ಹಲವರಿಗೆ ಮಳೆಗಾಲ ಎಂದರೆ ಏನೋ ಸಂತಸ. ಆದರೆ ಈ ಮಳೆಯ ವಾತಾವರಣವು ಮಲೇರಿಯಾ, ಜಾಂಡೀಸ್, ಡೆಂಗ್ಯೂ, ಜ್ವರ ಮತ್ತು ಅತಿಸಾರ ಸೇರಿದಂತೆ ನೀರು ಮತ್ತು ಆಹಾರದಿಂದ ಹರಡುವ ರೋಗಗಳನ್ನೂ ಹರಡುತ್ತದೆ. ಇಷ್ಟು ಮಾತ್ರವಲ್ಲದೆ, ಮಳೆಗಾಲವು ಕಣ್ಣಿನ ಸೋಂಕುಗಳನ್ನು ಸಹ ಒಳಗೊಂಡಿದೆ. ಮಾನ್ಸೂನ್‌ನ ಆರ್ದ್ರ ವಾತಾವರಣದಲ್ಲಿ ಕಣ್ಣಿನ ಸೋಂಕುಗಳು ಹೆಚ್ಚಾಗುತ್ತವೆ ಎಂದು ವೈದ್ಯರು ವರದಿ ಮಾಡುತ್ತಾರೆ. ಕಣ್ಣು ಕೆಂಪಾಗುವುದು, ಸುಡುವ ಭಾವನೆ, ಊದಿಕೊಳ್ಳುವುದು, ಕಣ್ಣಲ್ಲಿ ನೀರು ಸೋರುವುದು ಮುಂತಾದ ಸಮಸ್ಯೆಗಳು ಎದುರಾದರೆ ನೀವು ತಕ್ಷಣವೇ ತಜ್ಞರನ್ನು ಸಂಪರ್ಕಿಸಿ ಅವರಿಂದ ಸಲಹೆ ಪಡೆಯಬೇಕು.

ಮಳೆಗಾಲದಲ್ಲಿ ಎದುರಾಗುವ 5 ಸಾಮಾನ್ಯ ಕಣ್ಣಿನ ಸಮಸ್ಯೆಗಳಿವು

ವೈರಲ್ ಕಾಂಜಂಕ್ಟಿವಿಟಿಸ್ (ಐ ಫ್ಲೂ): ಇದು ಕಣ್ಣುರೆಪ್ಪೆಗಳ ಒಳ ಮೇಲ್ಮೈ ಮತ್ತು ಕಣ್ಣುಗುಡ್ಡೆಯ ಬಿಳಿ ಭಾಗವನ್ನು ರೇಖಿಸುವ ತೆಳುವಾದ ಪೊರೆಯ ಉರಿಯೂತಕ್ಕೆ ಕಾರಣವಾಗುವ ಸೋಂಕು. ಕೆಲವು ರೋಗಲಕ್ಷಣಗಳೆಂದರೆ ತುರಿಕೆ, ಬೆಳಕಿನ ಸೂಕ್ಷ್ಮತೆ, ಕಣ್ಣಿನಲ್ಲಿ ನೀರು ಸೋರುವುದು ಮತ್ತು ಕಣ್ಣುರೆಪ್ಪೆಗಳು ಕೆಂಪಾಗುವುದು. ವೈರಲ್ ಕಾಂಜಂಕ್ಟಿವಿಟಿಸ್ ಹೆಚ್ಚು ಸಾಂಕ್ರಾಮಿಕವಾಗಿದೆ ಮತ್ತು ಮುನ್ನೆಚ್ಚರಿಕೆಗಳನ್ನು ಅನುಸರಿಸದಿದ್ದರೆ ಸೋಂಕಿತ ವ್ಯಕ್ತಿಯಿಂದ ಇತರರಿಗೆ ಸುಲಭವಾಗಿ ಹರಡಬಹುದು.

ಕಣ್ಣು ಒಣಗುವುದು: ಸಾಕಷ್ಟು ಕಣ್ಣೀರು ಉತ್ಪಾದನೆಯಾಗದೇ ಇದ್ದಾಗ ಕಣ್ಣುಗಳು ಒಣಗಬಹುದು. ಇದನ್ನು ಜಲೀಯ ದ್ರವ ಎಂದೂ ಕರೆಯುತ್ತಾರೆ. ಈ ಸ್ಥಿತಿಯ ವೈದ್ಯಕೀಯ ಪದವೆಂದರೆ ಕೆರಾಟೊ-ಕಾಂಜಂಕ್ಟಿವಿಟಿಸ್. ಕಂಪ್ಯೂಟರ್ ಪರದೆಯನ್ನು ದೀರ್ಘ ಸಮಯದವರೆಗೆ ನೋಡುವಾಗ ಕಣ್ಣು ಮಿಟುಕಿಸದೇ ಇರುವುದು ಈ ಸಮಸ್ಯೆಯನ್ನು ಉಂಟು ಮಾಡಬಹುದು.

ಕಾರ್ನಿಯಲ್ ಅಲ್ಸರ್: ಕಾರ್ನಿಯಲ್ ಅಲ್ಸರ್ ಎಂದರೆ ಕಾರ್ನಿಯಾದ ಮೇಲೆ ತೆರೆದ ಹುಣ್ಣು. ಸೋಂಕು ಇದಕ್ಕೆ ಪ್ರಮುಖ ಕಾರಣವಾಗಿದೆ. ಕಣ್ಣು ಕೆಂಪಾಗುವುದು, ನೀರು ಸೋರುವುದು ಮತ್ತು ರಕ್ತಸಿಕ್ತವಾದಂತೆ ಕಾಣಿಸುವ ಕಣ್ಣುಗುಡ್ಡೆಗಳು ಇದರ ಪ್ರಮುಖ ರೋಗ ಲಕ್ಷಣಗಳಾಗಿವೆ. ತೀವ್ರ ಕಣ್ಣಿನ ನೋವು ಮತ್ತು ಕೀವು ಅಥವಾ ಕಣ್ಣಿನಿಂದ ದ್ರವರೂಪದಲ್ಲಿ ನೀರು ಬರುವುದು. ಕಾರ್ನಿಯಲ್ ಅಲ್ಸರ್ ದೃಷ್ಟಿ ನಷ್ಟ ಮತ್ತು ಕುರುಡುತನಕ್ಕೆ ಕಾರಣವಾಗಬಹುದು ಎಚ್ಚರ.

ಸ್ಟೈ: ಇದು ನಿಮ್ಮ ರೆಪ್ಪೆಗೂದಲುಗಳ ಬುಡದ ಬಳಿ ಇರುವ ಒಂದು ಅಥವಾ ಹೆಚ್ಚಿನ ಸಣ್ಣ ಗ್ರಂಥಿಗಳನ್ನು ಒಳಗೊಂಡಿರುವ ಬ್ಯಾಕ್ಟೀರಿಯಾದ ಸೋಂಕು. ಇದು ಕಣ್ಣುರೆಪ್ಪೆಯ ಮೇಲೆ ಉಂಡೆಯಂತೆ ಸಂಭವಿಸುತ್ತದೆ. ವೈದ್ಯರ ಪ್ರಕಾರ, ಮಳೆಗಾಲದಲ್ಲಿ ಇದು ತುಂಬಾ ಸಾಮಾನ್ಯವಾಗಿದೆ.

ಟ್ರಾಕೋಮಾ: ಟ್ರಾಕೋಮಾ ಬ್ಯಾಕ್ಟೀರಿಯಂ ಕ್ಲಮೈಡಿಯಾ ಟ್ರಾಕೊಮಾಟಿಸ್‌ನಿಂದ ಉಂಟಾಗುತ್ತದೆ. ಈ ಸೋಂಕು ಜಗತ್ತಿನಾದ್ಯಂತ ಸುಮಾರು 1.9 ಮಿಲಿಯನ್ ಜನರಲ್ಲಿ ಕುರುಡುತನಕ್ಕೆ ಕಾರಣವಾಗಿದೆ. ಇದು ಸೋಂಕಿತ ವ್ಯಕ್ತಿಯ ಕಣ್ಣು ಅಥವಾ ಮೂಗಿನೊಂದಿಗೆ ಸಂಪರ್ಕಕ್ಕೆ ಬಂದ ನೇರ ಸ್ಪರ್ಶ ಅಥವಾ ಟವೆಲ್ ಮತ್ತು ನೊಣಗಳ ಮೂಲಕ ಉಂಟಾಗಬಹುದು.

ಮಳೆಗಾಲದಲ್ಲಿ ಕಣ್ಣುಗಳನ್ನು ರಕ್ಷಿಸಿಕೊಳ್ಳುವುದು ಹೇಗೆ?

* ಕಣ್ಣುಗಳನ್ನು ಮುಟ್ಟುವ ಮೊದಲು ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಿ.

* ಕೊಳಕು ಕೈಗಳಿಂದ ನಿಮ್ಮ ಕಣ್ಣುಗಳನ್ನು ಮುಟ್ಟಬೇಡಿ

* ನಿಮ್ಮ ಕಣ್ಣುಗಳನ್ನು ಆಗಾಗ್ಗೆ ಉಜ್ಜಬೇಡಿ

* ನಿಮ್ಮ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಹಂಚಿಕೊಳ್ಳಬೇಡಿ

* ಈಜುವಾಗ ಅಥವಾ ಗಾಳಿಗೆ ತೆರೆದಾಗ ಕಣ್ಣಿನ ರಕ್ಷಣಾತ್ಮಕ ಕನ್ನಡಕಗಳನ್ನು ಬಳಸಿ

* ಮಳೆಗಾಲದಲ್ಲಿ ಈಜುಕೊಳ ಬಳಸುವುದನ್ನು ತಪ್ಪಿಸಿ

Whats_app_banner