ಕಳೆ ಅಂತ ಕಡೆಗಣಿಸಬೇಡಿ, ಹೊನಗೊನ್ನೆ ಸೊಪ್ಪಿನಲ್ಲಿದೆ ನೂರೆಂಟು ಆರೋಗ್ಯ ಪ್ರಯೋಜನ; ಇದ್ರಿಂದ ಈ ರೀತಿ ಚಟ್ನಿ ಮಾಡಿ ಸೂಪರ್‌ ಆಗಿರುತ್ತೆ-health news monsoon health home remedies alternanthera sessilis honagone soppu health benefits infertility problem ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಕಳೆ ಅಂತ ಕಡೆಗಣಿಸಬೇಡಿ, ಹೊನಗೊನ್ನೆ ಸೊಪ್ಪಿನಲ್ಲಿದೆ ನೂರೆಂಟು ಆರೋಗ್ಯ ಪ್ರಯೋಜನ; ಇದ್ರಿಂದ ಈ ರೀತಿ ಚಟ್ನಿ ಮಾಡಿ ಸೂಪರ್‌ ಆಗಿರುತ್ತೆ

ಕಳೆ ಅಂತ ಕಡೆಗಣಿಸಬೇಡಿ, ಹೊನಗೊನ್ನೆ ಸೊಪ್ಪಿನಲ್ಲಿದೆ ನೂರೆಂಟು ಆರೋಗ್ಯ ಪ್ರಯೋಜನ; ಇದ್ರಿಂದ ಈ ರೀತಿ ಚಟ್ನಿ ಮಾಡಿ ಸೂಪರ್‌ ಆಗಿರುತ್ತೆ

ದಕ್ಷಿಣ ಭಾರತದ ಹಲವು ಕಡೆ ಮಳೆಗಾಲದಲ್ಲಿ ಬೆಳೆಯುವ ಹೊನ್ನೆಗೊನೆ ಸೊಪ್ಪು ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ಹಲವು ರೋಗಗಳಿಗೆ ರಾಮಬಾಣ ಎಂಬುದು ಸುಳ್ಳಲ್ಲ. ಕಳೆಗಿಡದಂತೆ ಇರುವ ಇದನ್ನು ಕಡೆಗಣಿಸಬೇಡಿ. ಇದರಿಂದ ವಿವಿಧ ಖಾದ್ಯಗಳನ್ನು ಕೂಡ ತಯಾರಿಸಬಹುದು. ಹಾಗಾದ್ರೆ ಹೊನಗೊನೆ ಸೊಪ್ಪಿನ ಆರೋಗ್ಯ ಪ್ರಯೋಜನಗಳೇನು, ಇದರಿಂದ ಚಟ್ನಿ ಮಾಡುವುದು ಹೇಗೆ ನೋಡಿ.

ಕಳೆ ಅಂತ ಕಡೆಗಣಿಸಬೇಡಿ, ಹೊನಗೊನ್ನೆ ಸೊಪ್ಪಿನಲ್ಲಿದೆ ನೂರೆಂಟು ಆರೋಗ್ಯ ಪ್ರಯೋಜನ; ಇದ್ರಿಂದ ಈ ರೀತಿ ಚಟ್ನಿ ಮಾಡಿ ಸೂಪರ್‌ ಆಗಿರುತ್ತೆ
ಕಳೆ ಅಂತ ಕಡೆಗಣಿಸಬೇಡಿ, ಹೊನಗೊನ್ನೆ ಸೊಪ್ಪಿನಲ್ಲಿದೆ ನೂರೆಂಟು ಆರೋಗ್ಯ ಪ್ರಯೋಜನ; ಇದ್ರಿಂದ ಈ ರೀತಿ ಚಟ್ನಿ ಮಾಡಿ ಸೂಪರ್‌ ಆಗಿರುತ್ತೆ

ಭಾರತದ ಹಳ್ಳಿಗಾಡು ಪ್ರದೇಶಗಳಲ್ಲಿ ಬೆಳೆಯುವ ಅದೆಷ್ಟೋ ಕುರುಚಲು ಗಿಡಗಳು ಔಷದೀಯ ಗುಣಗಳನ್ನು ಹೊಂದಿವೆ. ಇವುಗಳಲ್ಲಿ ಕೆಲವು ಕಳೆ ಗಿಡಗಳು ಎಂದು ಕಡೆಗಣಿಸಲ್ಪಟ್ಟಿದೆ. ಇನ್ನೂ ಕೆಲವನ್ನು ಕೆಲವು ಭಾಗದಲ್ಲಿ ಮಾತ್ರ ಆಹಾರ ಪದಾರ್ಥವಾಗಿ ಬಳಸಲಾಗುತ್ತದೆ. ಅಂತಹ ಸೊಪ್ಪುಗಳ ಸಾಲಿಗೆ ಸೇರುವುದು ಹೊನಗೊನ್ನೆ ಸೊಪ್ಪು. ಇದು ಮಳೆಗಾಲದಲ್ಲಿ ದಕ್ಷಿಣ ಭಾರತದ ಹಲವು ಕಡೆ ಬೆಳೆಯುತ್ತಾರೆ. ಬೆಂಗಳೂರು, ಕೋಲಾರ, ದೊಡ್ಡಬಳ್ಳಾಪುರ ಸುತ್ತ ಈ ಹೊನಗೊನ್ನೆ ಸೊಪ್ಪಿನ ಬಳಕೆ ಹೆಚ್ಚಿದೆ. ಇದು ಹಲವು ರೋಗಗಳಿಗೂ ರಾಮಬಾಣ.

ಹೊನಗೊನ್ನೆ ಸೊಪ್ಪಿನಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ, ಇದರ ಚಟ್ನಿ ಮಾಡುವುದು ಹೇಗೆ ಎಂಬ ವಿವರ ಇಲ್ಲಿದೆ.

ಹೊನಗೊನ್ನೆ ಸೊಪ್ಪಿನ ಆರೋಗ್ಯ ಪ್ರಯೋಜನಗಳು 

ಹೊನಗೊನ್ನೆ ಸೊಪ್ಪಿನಲ್ಲಿ ಶೇ 5ರಷ್ಟು ಪ್ರೊಟೀನ್‌ ಅಂಶವಿದೆ. ಇದು ಕ್ಯಾಲ್ಸಿಯಂ ಅಂಶವನ್ನೂ ಹೊಂದಿರುವ ಸಸ್ಯವಾಗಿದೆ. ಬಹುತೇಕ ಚರ್ಮದ ಬಗ್ಗೆ ಇದು ಉತ್ತಮ ಔಷಧಿ. ಇದರಿಂದ ಕೆಮ್ಮು, ನೆಗಡಿಯಂಥ ಸಮಸ್ಯೆಗಳನ್ನೂ ಕೂಡ ನಿವಾರಿಸಬಹುದು. ಮಧುಮೇಹ ನಿಯಂತ್ರಣಕ್ಕೂ ಈ ಸೊಪ್ಪು ಉತ್ತಮ ಎನ್ನುತ್ತಾರೆ ತಜ್ಞರು.

ಫಲವಂತಿಕೆ ಸಮಸ್ಯೆ: ಬಂಜೆತನ ನಿವಾರಿಸುವ ಗುಣ ಈ ಹೊನಗೊನ್ನೆ ಸೊಪ್ಪಿನಲ್ಲಿದೆ ಎಂಬುದನ್ನು ಹಲವು ಅಧ್ಯಯನಗಳು ಸಾಬೀತು ಪಡಿಸಿವೆ. ಇದು ಕ್ಯಾರೊಟಿನಾಯ್ಡ್‌ಗಳು ಮತ್ತು ಫ್ಲೇವನಾಯ್ಡ್‌ಗಳನ್ನು ಒಳಗೊಂಡಂತೆ ಉತ್ಕರ್ಷಣ ನಿರೋಧಕಗಳ ಸಮೃದ್ಧ ಮೂಲವಾಗಿದೆ. ಫ್ರಿ ರಾಡಿಕಲ್‌ಗಳಿಂದ ಉಂಟಾಗುವ ಹಾನಿಯಿಂದ ಸಂತಾನೋತ್ಪತ್ತಿ ವ್ಯವಸ್ಥೆಯನ್ನು ರಕ್ಷಿಸುತ್ತದೆ. 2015 ರಲ್ಲಿ ಇಂಟರ್ನ್ಯಾಷನಲ್ ಜರ್ನಲ್ ಆಫ್ ಫಾರ್ಮಸಿ ಮತ್ತು ಫಾರ್ಮಾಸ್ಯುಟಿಕಲ್ ಸೈನ್ಸಸ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಈ ಸೊಪ್ಪು ಇದು ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಇದು ಕಾಮೋತ್ತೇಜಕ ಗುಣಗಳನ್ನೂ ಹೊಂದಿದೆ. ಪುರುಷರು ಮತ್ತು ಮಹಿಳೆಯರಲ್ಲಿ ಲೈಂಗಿಕ ಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹಾರ್ಮೋನ್‌ ಮಟ್ಟವನ್ನ ಸಮತೋಲನಗೊಳಿಸುವ ಮೂಲಕ ಫಲವಂತಿಕೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಕ್ಯಾನ್ಸರ್‌ ನಿವಾರಣೆಗೂ ಸಹಾಯ ಮಾಡುತ್ತದೆ: ಹೊನೆಗೊನ್ನೆ ಸೊಪ್ಪು ಕ್ಯಾನ್ಸರ್‌ ನಿಯಂತ್ರಕವಾಗಿಯೂ ಕೆಲಸ ಮಾಡುತ್ತದೆ. ಇದು ಉತ್ಕರ್ಷಣ ನಿರೋಧಕಗಳ ಸಮೃದ್ಧ ಮೂಲವಾಗಿದೆ, ಇದು ಫ್ರಿ ರಾಡಿಕಲ್‌ಗಳು ಮತ್ತು ಆಕ್ಸಿಡೇಟಿವ್ ಒತ್ತಡದ ಹಾನಿಕಾರಕ ಪರಿಣಾಮಗಳಿಂದ ದೇಹವನ್ನು ರಕ್ಷಿಸಲು ಸಹಾಯ ಮಾಡುತ್ತದೆ. 2013 ರಲ್ಲಿ ಜರ್ನಲ್ ಆಫ್ ಮೆಡಿಸಿನಲ್ ಫುಡ್‌ನಲ್ಲಿ ಪ್ರಕಟವಾದ ಅಧ್ಯಯನವು ಇದರಲ್ಲಿರುವ ಎಥೋಲಿಕ್ ಸಾರವು ಗಮನಾರ್ಹವಾದ ಉತ್ಕರ್ಷಣ ನಿರೋಧಕ ಚಟುವಟಿಕೆಯನ್ನು ಹೊಂದಿದೆ. ಇದು ಕ್ಯಾನ್ಸರ್‌ ಏಜೆಂಟ್‌ಗಳಿಂದ ದೇಹವನ್ನ ರಕ್ಷಿಸುತ್ತದೆ ಎಂದು ತಿಳಿಸಿದೆ. ಆದರೆ ಈ ಬಗ್ಗೆ ಇನ್ನಷ್ಟು ಅಧ್ಯಯನಗಳು ನೆಡಯಬೇಕಾಗಿದೆ ಎಂದು ತಜ್ಞರು ಹೇಳುತ್ತಾರೆ.

ಕಾಮಾಲೆಗೆ ಉತ್ತಮ: ಹೊನಗೊನ್ನೆ ಸೊಪ್ಪು ಹೆಪಟೊಪ್ರೊಟೆಕ್ಟಿವ್ ಪರಿಣಾಮಗಳನ್ನು ಹೊಂದಿದೆ. ಅಂದರೆ ಇದು ಯಕೃತ್ತನ್ನು ಹಾನಿಯಿಂದ ರಕ್ಷಿಸಲು ಮತ್ತು ಯಕೃತ್ತಿನ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಕಾಮಾಲೆಯು ಪಿತ್ತಜನಕಾಂಗದ ಅಪಸಾಮಾನ್ಯ ಕ್ರಿಯೆಯಿಂದಾಗಿ ದೇಹದಲ್ಲಿ ಬಿಲಿರುಬಿನ್ ಅಧಿಕವಾದಾಗ ಉಂಟಾಗುವ ಸ್ಥಿತಿಯಾಗಿದೆ. ಇಲಿಗಳಲ್ಲಿ ನಡೆಸಿದ ಅಧ್ಯಯನವು ಹೊನಗೊನ್ನೆ ಎಲೆಗಳ ಎಥೋಲಿಕ್ ಸಾರದೊಂದಿಗೆ ಚಿಕಿತ್ಸೆಯು ಹೆಚ್ಚಿನ ಬಿಲಿರುಬಿನ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಯಕೃತ್ತಿನ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ತೋರಿಸಿದೆ. ಸಾರವು ಯಕೃತ್ತಿನಲ್ಲಿ ಉತ್ಕರ್ಷಣ ನಿರೋಧಕ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನವು ಕಂಡುಹಿಡಿದಿದೆ. ಹಾಗಾಗಿ ಕಾಮಾಲೆ ರೋಗ ಇರುವವರಿಗೆ ಹೊನಗೊನ್ನೆ ಸೊಪ್ಪು ಉತ್ತಮ.

ಇರುಳುಗಣ್ಣಿನ ಸಮಸ್ಯೆಗೆ ಪರಿಹಾರ: ನೈಕ್ಟಾಲೋಪಿಯಾ ಎಂದೂ ಕರೆಯಲ್ಪಡುವ ಇರುಗಣ್ಣಿನ ಸ್ಥಿತಿಯು ಬೆಳಕು ಕಡಿಮೆ ಇರುವ ಸಂದರ್ಭ ದೃಷ್ಟಿಯನ್ನು ಕುಗ್ಗಿಸುತ್ತದೆ. ಇದರಲ್ಲಿನ ವಿಟಮಿನ್ ಎ ಅಂಶ ಹೆಚ್ಚಿರುವ ಕಾರಣದಿಂದಾಗಿ ರಾತ್ರಿ ಕುರುಡುತನಕ್ಕೆ ಚಿಕಿತ್ಸೆ ನೀಡಲು ಪರಿಣಾಮಕಾರಿಯಾಗಿದೆ. ವಿಟಮಿನ್ ಎ ದೃಷ್ಟಿಗೆ ಅತ್ಯಗತ್ಯ, ಮತ್ತು ಅದರ ಕೊರತೆಯು ಇರುಳುಗಣ್ಣು ಸಮಸ್ಯೆಗೆ ಕಾರಣವಾಗಬಹುದು. ಇದು ಪ್ರೊವಿಟಮಿನ್ ಎ ಕ್ಯಾರೊಟಿನಾಯ್ಡ್‌ಗಳ ಅತ್ಯುತ್ತಮ ಮೂಲವಾಗಿದೆ.

ನರಮಂಡಲವನ್ನು ಶಮನಗೊಳಿಸುತ್ತದೆ: ಹೊನಗೊನ್ನೆ ಸೊಪ್ಪಿನಲ್ಲಿ ಫ್ಲೇವನಾಯ್ಡ್‌ಗಳು ಮತ್ತು ಇತರ ಫೈಟೊಕೆಮಿಕಲ್‌ ಅಂಶಗಳಿದ್ದು ಇದು ನರಮಂಡಲವನ್ನು ಶಾಂತಗೊಳಿಸುವ ಪರಿಣಾಮವನ್ನು ಹೊಂದಿದೆ ಎಂದು ಕಂಡುಬಂದಿದೆ. ಫ್ಲೇವನಾಯ್ಡ್‌ಗಳು ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿವೆ. ಅದು ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ ಹಾಗೂ ಒಟ್ಟಾರೆ ನರಮಂಡಲದ ಕಾರ್ಯವನ್ನು ಸುಧಾರಿಸುತ್ತದೆ.

ಜ್ವರ ಕಡಿಮೆ ಮಾಡುತ್ತದೆ: ಈ ಸಸ್ಯವು ಫ್ಲೇವನಾಯ್ಡ್‌ಗಳು, ಆಲ್ಕಲಾಯ್ಡ್‌ಗಳು ಮತ್ತು ಟ್ಯಾನಿನ್‌ಗಳನ್ನು ಒಳಗೊಂಡಂತೆ ವಿವಿಧ ಜೈವಿಕ ಸಕ್ರಿಯ ಸಂಯುಕ್ತಗಳನ್ನು ಒಳಗೊಂಡಿದೆ. ಈ ಅಂಶಗಳು ಜ್ವರ ಕಡಿಮೆಯಾಗಲು ಹೆಸರುವಾಸಿ.

ಕೂದಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ: ಕೂದಲ ಬೆಳವಣಿಗೆಗೂ ಹೊನೆಗೊನ್ನೆ ಸೊಪ್ಪು ಉತ್ತಮ. ಸಾಂಪ್ರದಾಯಿಕ ವಿಧಾನದಲ್ಲಿ ಇದನ್ನು ಬಳಸಲಾಗುತ್ತದೆ. ಇದರಲ್ಲಿ ಎಥೋಲಿಕ್ ಸಾರವು ಕೂದಲಿನ ಬೆಳವಣಿಗೆಯ ಚಟುವಟಿಕೆಯನ್ನು ಉತ್ತೇಜಿಸುವಲ್ಲಿ ಪಾತ್ರವನ್ನು ವಹಿಸುತ್ತದೆ. ಇದು ಕೂದಲಿನ ಕಿರುಚೀಲಗಳ ಹಾನಿಯನ್ನು ತಪ್ಪಿಸಿ, ಕೂದಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಆಂಟಿಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿದೆ, ಇದು ನೆತ್ತಿಯ ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ, ಇದರಿಂದಾಗಿ ಆರೋಗ್ಯಕರ ಕೂದಲು ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಇಷ್ಟೇ ಅಲ್ಲದೇ ಹೊನಗೊನ್ನೆ ಸೊಪ್ಪು ಚರ್ಮವನ್ನು ಸೋಂಕಿ ಸಮಸ್ಯೆಗಳಿಂದ ರಕ್ಷಿಸುತ್ತದೆ. ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳ ನಿವಾರಣೆಗೂ ಇದು ಉತ್ತಮ. ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಮಧುಮೇಹ ನಿಯಂತ್ರಣಕ್ಕೂ ಉತ್ತಮ.

ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಹೊನಗೊನ್ನೆ ಸೊಪ್ಪನ್ನು ವಿವಿಧ ರೀತಿಯಲ್ಲಿ ಸೇವಿಸಬಹುದು. ಇದರಿಂದ ಚಟ್ನಿ, ಪಲ್ಯ, ಮಸ್ಸಾರು ಮುಂತಾದವುಗಳನ್ನು ತಯಾರಿಸಲಾಗುತ್ತದೆ.

ಹೊನಗೊನ್ನೆ ಸೊಪ್ಪಿನ ಚಟ್ನಿ ರೆಸಿಪಿ 

ಬೇಕಾಗುವ ಸಾಮಗ್ರಿಗಳು: ಹೊನಗೊನ್ನೆ ಸೊಪ್ಪು - ಮೂರು ಕಪ್‌, ಈರುಳ್ಳಿ - ಒಂದು, ಟೊಮೆಟೊ - ಒಂದು, ಹಸಿಮೆಣಸು - ಐದರಿಂದ ಆರು, ಜೀರಿಗೆ - ಅರ್ಧ ಚಮಚ, ಉಪ್ಪು - ರುಚಿಗೆ, ಅರಿಸಿನ ಪುಡಿ - ಚಿಟಿಕೆ, ಹುಣಸೆಹಣ್ಣು - ನಿಂಬೆ ಗಾತ್ರದ್ದು, ಶೇಂಗಾಬೀಜ - ಒಂದು ಕಪ್‌,

ತಯಾರಿಸುವ ವಿಧಾನ: ಶೇಂಗಾಬೀಜವನ್ನು ಹುರಿದು ಸಿಪ್ಪೆ ತೆಗೆದು ಪುಡಿ ಮಾಡಿ ಇರಿಸಿಕೊಳ್ಳಿ. ಹೊನಗೊನ್ನೆ ಸೊಪ್ಪನ್ನು ಚೆನ್ನಾಗಿ ತೊಳೆದು ನೀರು ಆರಲು ಬಿಡಿ. ಪ್ಯಾನ್‌ವೊಂದರಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಕತ್ತರಿಸಿದ ಈರುಳ್ಳಿ ಹಾಗೂ ಹಸಿಮೆಣಸು ಸೇರಿಸಿ. ಜೀರಿಗೆ ಹಾಕಿ, ನಂತರ ಕರಿಬೇವು ಸೇರಿಸಿ. ಇದಕ್ಕೆ ಹೊನಗೊನ್ನೆ ಸೊಪ್ಪು ಹಾಕಿ. ಚೆನ್ನಾಗಿ ಹುರಿಯಿರಿ, ನಂತರ ಕತ್ತರಿಸಿಟ್ಟುಕೊಂಡ ಟೊಮೆಟೊ, ಕೊತ್ತಂಬರಿ ಸೊಪ್ಪು, ಹುಣಸೆರಸ ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಗೂ ನೀರು ಸೇರಿಸಿ, ಚಿಟಿಕೆ ಅರಿಸಿನ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಈ ಎಲ್ಲವನ್ನೂ ಬೆಂದ ಮೇಲೆ ತಣ್ಣಗಾಗಲು ಬಿಡಿ. ಈಗಾಗಲೇ ಪುಡಿ ಮಾಡಿಟ್ಟುಕೊಂಡು ಶೇಂಗಾ ಬೀಜದ ಜೊತೆ ಈ ಮಿಶ್ರಣವನ್ನೂ ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ಈಗ ನಿಮ್ಮ ಮುಂದೆ ರುಚಿಯಾದ ಹೊನಗೊನ್ನೆ ಸೊಪ್ಪಿನ ಚಟ್ನಿ ರೆಡಿ. ಇದನ್ನು ಅನ್ನ ಹಾಗೂ ಚಪಾತಿ ಜೊತೆ ತಿನ್ನಲು ಸಖತ್‌ ಆಗಿರುತ್ತದೆ.