ಕನ್ನಡ ಸುದ್ದಿ  /  ಜೀವನಶೈಲಿ  /  Monsoon Health: ಮಳೆಗಾಲದಲ್ಲಿ ಈ ಆಹಾರಗಳಿಂದ ದೂರವಿದ್ದಷ್ಟು ಉತ್ತಮ, ಅಪ್ಪಿತಪ್ಪಿ ತಿಂದ್ರೆ ಆರೋಗ್ಯ ಕೆಡೋದು ಖಂಡಿತ

Monsoon Health: ಮಳೆಗಾಲದಲ್ಲಿ ಈ ಆಹಾರಗಳಿಂದ ದೂರವಿದ್ದಷ್ಟು ಉತ್ತಮ, ಅಪ್ಪಿತಪ್ಪಿ ತಿಂದ್ರೆ ಆರೋಗ್ಯ ಕೆಡೋದು ಖಂಡಿತ

ಮಳೆಗಾಲ ಮನಸ್ಸಿಗೆ ಮುದ ನೀಡಿದ್ರೂ ಆರೋಗ್ಯಕ್ಕೆ ಖಂಡಿತ ಹಿತವಲ್ಲ. ಅದರಲ್ಲೂ ಮಳೆಗಾಲದಲ್ಲಿ ನಾವು ಬಾಯಿ ಚಪ್ಪರಿಸಿಕೊಂಡು ತಿನ್ನುವ ಕೆಲವು ಆಹಾರಗಳು ನಮ್ಮ ಆರೋಗ್ಯಕ್ಕೆ ತೊಂದರೆ ಮಾಡೋದು ಖಂಡಿತ. ಹಾಗಾಗಿ ಮಳೆಗಾಲದಲ್ಲಿ ಈ ಆಹಾರಗಳಿಂದ ದೂರವಿದ್ದಷ್ಟು ಉತ್ತಮ. ಮಾನ್ಸೂನ್‌ನಲ್ಲಿ ಯಾವೆಲ್ಲಾ ಆಹಾರಗಳನ್ನು ಸೇವಿಸಬಾರದು ನೋಡಿ.

ಮಳೆಗಾಲದಲ್ಲಿ ಈ ಆಹಾರಗಳಿಂದ ದೂರವಿದ್ದಷ್ಟು ಉತ್ತಮ, ಅಪ್ಪಿತಪ್ಪಿ ತಿಂದ್ರೆ ಆರೋಗ್ಯ ಕೆಡುತ್ತೆ
ಮಳೆಗಾಲದಲ್ಲಿ ಈ ಆಹಾರಗಳಿಂದ ದೂರವಿದ್ದಷ್ಟು ಉತ್ತಮ, ಅಪ್ಪಿತಪ್ಪಿ ತಿಂದ್ರೆ ಆರೋಗ್ಯ ಕೆಡುತ್ತೆ

ದೇಶದ ಬಹುತೇಕ ರಾಜ್ಯಗಳಲ್ಲಿ ಮುಂಗಾರು ಆರಂಭವಾಗಿದೆ. ಉತ್ತರದ ಕೆಲವು ರಾಜ್ಯಗಳಲ್ಲಿ ಇನ್ನೂ ಬಿಸಿಗಾಳಿ ಮುಂದುವರಿದಿದೆ. ಕರ್ನಾಟಕದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಮಳೆಗಾಲದಲ್ಲಿ ನಾಲಿಗೆಗೆ ಹಿತ ಎನ್ನಿಸುವ ಆಹಾರ ಖಾದ್ಯಗಳನ್ನು ತಿನ್ನಬೇಕು ಎಂದು ಮನಸ್ಸು ಬಯಸುವುದು ಸಹಜ. ಖಾರದ ತಿನಿಸುಗಳು, ಚಾಟ್ಸ್‌, ಕರಿದ ತಿನಿಸುಗಳು ಮಳೆಗಾಲದಲ್ಲಿ ಹೆಚ್ಚು ಇಷ್ಟವಾಗುತ್ತವೆ, ಆದರೆ ಇವುಗಳಿಂದ ಆರೋಗ್ಯಕ್ಕೆ ತೊಂದರೆ ಆಗುತ್ತದೆ ಎನ್ನುವುದು ಸುಳ್ಳಲ್ಲ. ಮಳೆಗಾಲದಲ್ಲಿ ಆಹಾರಗಳಿಂದಲೂ ರೋಗ ಹರಡುವ ಸಾಧ್ಯತೆ ಹೆಚ್ಚಿದ್ದು ಕಲುಷಿತ ಆಹಾರ ಸೇವಿಸುವುದು ಖಂಡಿತ ಒಳ್ಳೆಯದಲ್ಲ. ಈ ಸಮಯದಲ್ಲಿ ಆರ್ದ್ರತೆಯ ಮಟ್ಟ ಮತ್ತು ತೇವಾಂಶ ಹೆಚ್ಚಿರುವ ಕಾರಣ ಬ್ಯಾಕ್ಟೀರಿಯಾ, ಶಿಲೀಂಧ್ರಗಳು ಮತ್ತು ಇತರ ರೋಗಕಾರಕಗಳ ಬೆಳವಣಿಗೆಗೆ ಅನುಕೂಲಕರ ಪರಿಸ್ಥಿತಿಗಳನ್ನು ಸೃಷ್ಟಿಸುತ್ತದೆʼ ಎಂದು ಎನ್ನುತ್ತಾರೆ ತಜ್ಞರು. ಹಾಗಾದ್ರೆ ಮಳೆಗಾಲದಲ್ಲಿ ಯಾವೆಲ್ಲಾ ಆಹಾರಗಳಿಂದ ದೂರವಿರಬೇಕು, ಇದರಿಂದ ಏನೆಲ್ಲಾ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎಂಬಿತ್ಯಾದಿ ವಿವರ ಇಲ್ಲಿದೆ.

ಸೊಪ್ಪು

ಪಾಲಕ್‌, ಎಲೆಕೋಸು, ಕೊತ್ತಂಬರಿ ಸೊಪ್ಪಿನಂತಹ ತರಕಾರಿಗಳು ಮಳೆಗಾಲದಲ್ಲಿ ಹೆಚ್ಚು ಮಾಲಿನ್ಯಕ್ಕೆ ಒಳಗಾಗುತ್ತವೆ. ಇವು ಬ್ಯಾಕ್ಟೀರಿಯಾ ಹಾಗೂ ಇತರ ಪರಾವಲಂಬಿಗಳನ್ನು ಆಶ್ರಯಿಸಬಹುದು. ಇದರಿಂದ ಜೀರ್ಣಕ್ರಿಯೆ ಸಮಸ್ಯೆ ಉಂಟಾಗಬಹುದು. ಹಾಗಾಗಿ ಮಳೆಗಾಲದಲ್ಲಿ ವಿವಿಧ ರೀತಿಯ ಸೊಪ್ಪಿನಿಂದ ತಯಾರಿಸಿದ ಆಹಾರಗಳಿಂದ ದೂರವಿರುವುದು ಉತ್ತಮ.

ಸ್ಟ್ರೀಟ್‌ ಫುಡ್‌

ಸ್ಟ್ರೀಟ್‌ಫುಡ್‌ಗೆ ಸವರೇಟ್‌ ಫ್ಯಾನ್‌ಬೇಸ್‌ ಇದೆ. ಅದರಲ್ಲೂ ಮಳೆಗಾಲದಲ್ಲಿ ಸ್ಟ್ರೀಟ್‌ಫುಡ್‌ ಯಾರಿಗೆ ಇಷ್ಟವಾಗೊಲ್ಲ ಹೇಳಿ. ಆದರೆ ಮಳೆಗಾಲದಲ್ಲಿ ತಪ್ಪಿಯೂ ಬೀದಿ ಬದಿ ಆಹಾರಗಳನ್ನು ಸೇವಿಸಬಾರದು. ಆಹಾರದಿಂದ ಹರಡುವ ಕಾಯಿಲೆಗಳ ಪ್ರಮಾಣ ಇದರಿಂದ ಹೆಚ್ಚುತ್ತದೆ. ಆ ಕಾರಣಕ್ಕೆ ಮಳೆಗಾಲದಲ್ಲಿ ಚಾಟ್ಸ್‌, ಪಕೋಡ ಹಾಗೂ ಸಮೋಸಗಳಂತಹ ಆಹಾರಗಳ ಸೇವನೆಗೆ ಕಡಿವಾಣ ಹಾಕುವುದು ಉತ್ತಮ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನ ಹೇಳಿದ್ದಾರೆ ಪೌಷ್ಟಿಕ ತಜ್ಞ ಗರಿಮಾ ದೇವ್‌ ವರ್ಮನ್‌.

ಟ್ರೆಂಡಿಂಗ್​ ಸುದ್ದಿ

ಕತ್ತರಿಸಿದ ಹಣ್ಣು

ಇತ್ತೀಚಿನ ದಿನಗಳಲ್ಲಿ ಹಲವರು ಹೆಲ್ತ್‌ ಕಾಂಷಿಯಸ್‌ ಆಗಿರುತ್ತಾರೆ. ಆ ಕಾರಣಕ್ಕೆ ಹೆಚ್ಚು ಹಣ್ಣು ತರಕಾರಿ ತಿನ್ನುತ್ತಾರೆ. ಆ ಕಾರಣದಿಂದಾಗಿ ಬೀದಿಗಳಲ್ಲಿ ಫ್ರೂಟ್‌ ಬೌಲ್‌ ಮಾರುವವರ ಸಂಖ್ಯೆ ಹೆಚ್ಚಾಗಿದೆ. ಬೀದಿಯಲ್ಲಿ ಕತ್ತರಿಸಿ ಇಟ್ಟ ಹಣ್ಣುಗಳನ್ನು ತಪ್ಪಿಯೂ ಸೇವಿಸಬೇಡಿ. ಕತ್ತರಿಸಿ ಮಾರಾಟ ಮಾಡುವ ಹಣ್ಣುಗಳನ್ನು ಸರಿಯಾಗಿ ತೊಳೆಯುವುದಿಲ್ಲ. ಇದು ಮಾಲಿನ್ಯ ಒಳಗಾಗಿರುತ್ತದೆ. ಮಳೆಗಾಲದಲ್ಲಿ ಮನೆಯಲ್ಲೇ ಹಣ್ಣುಗಳನ್ನು ಕತ್ತರಿಸಿ ತಿನ್ನುವುದು ಉತ್ತಮ.

ಸೀ ಫುಡ್‌

ಮಳೆ ಸುರಿಯುತ್ತಿರುವ ಖಾರ ಖಾರವಾದ ಮಸಾಲೆಭರಿತ ಸಮುದ್ರ ಆಹಾರಗಳನ್ನು ತಿನ್ನುವುದು ಮನಸ್ಸಿಗೆ ಹೆಚ್ಚು ಖುಷಿ ಕೊಡುತ್ತದೆ. ಆದರೆ ಮಳೆಗಾಲವು ನೀರಿನಿಂದ ಹರಡುವ ರೋಗಗಳಿಗೆ ಹೆಸರುವಾಸಿಯಾಗಿದೆ. ಈ ಸಮಯದಲ್ಲಿ ಸಮುದ್ರಾಹಾರವು ಸುಲಭವಾಗಿ ಕಲುಷಿತಗೊಳುತ್ತದೆ. ಆಹಾರದ ವಿಷಾಂಶವನ್ನು ತಡೆಗಟ್ಟಲು ಮೀನು, ಸೀಗಡಿ ಮತ್ತು ಇತರ ಸಮುದ್ರಾಹಾರವನ್ನು ಸೇವಿಸದೇ ಇರುವುದು ಉತ್ತಮ ಎಂದು ವರ್ಮನ್‌ ಹೇಳುತ್ತಾರೆ.

ಡೇರಿ ಉತ್ಪನ್ನಗಳು

ಹಾಲು, ಮೊಸರು ಮತ್ತು ಪನೀರ್‌ನಂತಹ ಡೈರಿ ಉತ್ಪನ್ನಗಳು ಆರ್ದ್ರ ಮಾನ್ಸೂನ್ ವಾತಾವರಣದಲ್ಲಿ ಬೇಗನೆ ಕೆಡುತ್ತವೆ. ಹಾಗಾಗಿ ವಿಶ್ವಾಸಾರ್ಹ ಮೂಲಗಳಿಂದ ಹೊಸದಾಗಿ ತಯಾರಿಸಿದ ಡೈರಿ ಉತ್ಪನ್ನಗಳನ್ನು ಆರಿಸುವುದು ಹಾಗೂ ಬೇಗನೆ ತಿನ್ನುವುದು ಬಹಳ ಮುಖ್ಯವಾಗುತ್ತದೆ.

ಕರಿದ ಆಹಾರಗಳು

ಮಳೆಗಾಲದಲ್ಲಿ ಎಣ್ಣೆಯಲ್ಲಿ ಕರಿದ ಆಹಾರಗಳು ಹೆಚ್ಚು ಇಷ್ಟವಾಗುತ್ತವೆ. ಪಕೋಡ, ಬೋಂಡಾ-ಬಜ್ಜಿ, ಸಮೋಸ ಇವು ಬಾಯಿ ರುಚಿ ಹೆಚ್ಚಿಸುತ್ತವೆ. ಆದರೆ ಇವು ಸುಲಭವಾಗಿ ಜೀರ್ಣವಾಗುವುದಿಲ್ಲ. ಇದರ ಬದಲು ಹಬೆಯಲ್ಲಿ ಬೇಯಿಸಿದ, ಸುಟ್ಟ ತಿನಿಸುಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಮಾಂಸಾಹಾರಗಳು

ವರ್ಮನ್‌ ಅವರ ಪ್ರಕಾರ ಮಳೆಗಾಲದಲ್ಲಿ ಮಾಂಸಾಹಾರ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಿಂದ ಕೂಡ ಆರೋಗ್ಯ ಕೆಡುತ್ತದೆ. ನೀವು ಮಾಂಸಾಹಾರ ಪ್ರಿಯರಾಗಿದ್ದರೆ ಅಪರೂಪಕ್ಕೆ ಮಾಂಸ ಸೇವಿಸಿ.

ಮಳೆಗಾಲದಲ್ಲಿ ಸೊಳ್ಳೆಗಳಿಂದ ಹರಡುವ ಸಮಸ್ಯೆಗಳ ಜೊತೆಗೆ ಆಹಾರದಿಂದಲೂ ಸಾಕಷ್ಟು ಆರೋಗ್ಯ ಸಮಸ್ಯೆಗಳು ಹರಡುತ್ತವೆ. ಈ ಎಲ್ಲವೂ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುವ ಕಾರಣ ಈ ಆಹಾರಗಳಿಂದ ದೂರವಿರುವುದು ಉತ್ತಮ.