ಆ.. ನಾಯಿಯಿಂದ ಏನಾಗುತ್ತೆ ಅಂತ ಕೇವಲವಾಗಿ ನೋಡ್ಬೇಡಿ, ನಿಮ್ಮ ಕರುಳಿನ ಆರೋಗ್ಯ ಚೆನ್ನಾಗಿರೋದಕ್ಕೆ ಕಾರಣ ಅದುವೇ ಅಂತಿದೆ ಹೊಸ ಅಧ್ಯಯನ-health news puppy love healthy gut how dog companionship in childhood reduces risk of crohn s disease study finds uks ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಆ.. ನಾಯಿಯಿಂದ ಏನಾಗುತ್ತೆ ಅಂತ ಕೇವಲವಾಗಿ ನೋಡ್ಬೇಡಿ, ನಿಮ್ಮ ಕರುಳಿನ ಆರೋಗ್ಯ ಚೆನ್ನಾಗಿರೋದಕ್ಕೆ ಕಾರಣ ಅದುವೇ ಅಂತಿದೆ ಹೊಸ ಅಧ್ಯಯನ

ಆ.. ನಾಯಿಯಿಂದ ಏನಾಗುತ್ತೆ ಅಂತ ಕೇವಲವಾಗಿ ನೋಡ್ಬೇಡಿ, ನಿಮ್ಮ ಕರುಳಿನ ಆರೋಗ್ಯ ಚೆನ್ನಾಗಿರೋದಕ್ಕೆ ಕಾರಣ ಅದುವೇ ಅಂತಿದೆ ಹೊಸ ಅಧ್ಯಯನ

ಬಾಲ್ಯದಲ್ಲಿ ನಾಯಿಯ ಒಡನಾಟ ಸಿಕ್ಕಿದರೆ ಅಂಥವರ ಕರುಳಿನ ಆರೋಗ್ಯ ಚೆನ್ನಾಗಿರುತ್ತದೆ. ಮನೆಯಲ್ಲಿ ಪಕ್ಷಿಗಳಿದ್ದರೆ ಅಂಥವರಿಗೆ ಕರುಳಿನ ಅನಾರೋಗ್ಯ ಕಾಡಬಹುದು ಎಂದು ಹೊಸ ಅಧ್ಯಯನ ವಿವರಿಸಿದೆ. ಹಾಗಾಗಿ, ಆ.. ನಾಯಿಯಿಂದ ಏನಾಗುತ್ತೆ ಅಂತ ಕೇವಲವಾಗಿ ನೋಡ್ಬೇಡಿ, ನಿಮ್ಮ ಕರುಳಿನ ಆರೋಗ್ಯ ಚೆನ್ನಾಗಿರೋದಕ್ಕೆ ಕಾರಣ ಅದುವೇ ಅಂತಿದೆ ಹೊಸ ಅಧ್ಯಯನ. ಆ ವಿವರ ಇಲ್ಲಿದೆ.

ನಾಯಿ ಪ್ರೀತಿ ಮತ್ತು ಕರುಳಿನ ಆರೋಗ್ಯ; ಹೊಸ ಅಧ್ಯಯನ  (ಸಾಂಕೇತಿಕ ಚಿತ್ರ)
ನಾಯಿ ಪ್ರೀತಿ ಮತ್ತು ಕರುಳಿನ ಆರೋಗ್ಯ; ಹೊಸ ಅಧ್ಯಯನ (ಸಾಂಕೇತಿಕ ಚಿತ್ರ) (Pexel)

ಮನೆಗಳಲ್ಲಿ ನಾಯಿಗಳನ್ನು ಸಾಕುವವರು ಬಹಳಷ್ಟು ಮಂದಿ. ಕೆಲವರು ಊರ ನಾಯಿಗಳನ್ನು ಸಾಕಿದ್ರೆ ಇನ್ನು ಅನೇಕರು ವಿದೇಶಿ ತಳಿಗಳು, ಸಣ್ಣ ಸಣ್ಣ ನಾಯಿಗಳನ್ನು ಮನೆಯೊಳಗೇ ಇಟ್ಟುಕೊಂಡು ಸಾಕ್ತಾರೆ. ಇನ್ನು ಹಲವರಿಗೆ ನಾಯಿ ಅಂದ್ರೇನೇ ಆಗಿಬರಲ್ಲ. ವಿಷಯ ಏನೇ ಇರಲಿ. ಆ… ನಾಯಿಯಿಂದ ಏನಾಗುತ್ತೆ ಅಂತ ಕೇವಲವಾಗಿ ಮಾತ್ರ ಮಾತನಾಡಬೇಡಿ. ಹೊಸ ಅಧ್ಯಯನ ನಾಯಿ ನಿಮ್ಮ ಕರುಳಿನ ಆರೋಗ್ಯವನ್ನೂ ಕಾಪಾಡುತ್ತೆ ಅಂತ ಘೋಷಿಸಿದೆ. ಈ ಅಚ್ಚರಿಯ ಅಂಶ ಈಗ ವೈದ್ಯಕೀಯ ಜಗತ್ತಿನಲ್ಲಷ್ಟೇ ಅಲ್ಲ ಜನಸಾಮಾನ್ಯರ ನಡುವೆಯೂ ಮನೆಮಾತು. ಬೇಕಾದ್ರೆ ಗಮನಿಸಿ ನೋಡಿ. ನಾಯಿಗಳನ್ನು ಮನುಷ್ಯನ ಅತ್ಯುತ್ತಮ ಒಡನಾಡಿ ಎಂದು ಗುರುತಿಸಲಾಗಿದೆ. ಅದರಿಂದ ಆಗುವ ಪ್ರಯೋಜನಗಳನ್ನು ಅನೇಕ ಅಧ್ಯಯನಗಳು ಬಹಿರಂಗ ಪಡಿಸಿವೆ. ಆದರೆ ಕರುಳಿನ ಆರೋಗ್ಯದ ವಿಚಾರ ಸ್ವಲ್ಪ ಹೊಸದು. ನಾಯಿ ಜತೆಗಿದ್ದರೆ ಮನೆಯ ಮಕ್ಕಳೊಂದಿಗೆ ಅದರ ಆಟ ಓಟ ಎಲ್ಲವೂ ಖುಷಿ ಕೊಡುವಂಥದ್ದು. ಬಾಲ ಅಲ್ಲಾಡಿಸುತ್ತಾ, ಕೈ ಮೇಲೆತ್ತಿ ತೋರುವ ಪ್ರೀತಿ ಎಲ್ಲವೂ ಮುದ ನೀಡುವಂಥದ್ದು. ಪೀಠಿಕೆ ಹಾಗಿರಲಿ.. ಈಗ ವಿಷಯಕ್ಕೆ ಬರೋಣ..

ನಾಯಿ ಪ್ರೀತಿ ಮತ್ತು ಕರುಳಿನ ಆರೋಗ್ಯ; ಹೊಸ ಅಧ್ಯಯನ

ಅಂದ ಹಾಗೆ ಈ ಹೊಸ ಅಧ್ಯಯನ ಮಾಡಿದ್ದು ಟೊರೊಂಟೊ ವಿಶ್ವವಿದ್ಯಾನಿಲಯ ಮತ್ತು ಸಿನೈ ಹೆಲ್ತ್‌. ಬಾಲ್ಯದಲ್ಲಿ ಮಕ್ಕಳಿಗೆ ನಾಯಿ ಜೊತೆಗೆ ಒಡನಾಟ ಸಿಕ್ಕಿದರೆ ಅಂತಹ ಮಕ್ಕಳ ಕರುಳಿನ ಆರೋಗ್ಯ ಚೆನ್ನಾಗಿರುತ್ತದೆ. ಅದೇ ರೀತಿ ಕ್ರೋನ್ಸ್ ಕಾಯಿಲೆಯ ಅಪಾಯ ಅವರಿಗೆ ಕಡಿಮೆ ಇರುತ್ತದೆ ಎಂಬುದು ಹೊಸ ಅಧ್ಯಯನದಲ್ಲಿ ಕಂಡುಕೊಂಡ ವಿಚಾರ. ನಾಯಿ ಒಡನಾಟದಿಂದ ಸಿಕ್ಕಿರುವ ಅಚ್ಚರಿಯ ಪ್ರಯೋಜನ ಇದು ಎಂದು ಆ ಅಧ್ಯಯನ ವಿವರಿಸಿದೆ.

ಕುತೂಹಲಕಾರಿ ಅಂಶ ಎಂದರೆ, ಬಾಲ್ಯದಲ್ಲಿ ನಾಯಿಗಳ ಒಡನಾಟದಲ್ಲಿ ಬೆಳೆದರೆ ಈ ರೋಗದ ಸಾಧ್ಯತೆಯನ್ನು ಆ ಒಡನಾಟ ಕಡಿಮೆ ಮಾಡುತ್ತದೆ ಎಂಬ ಅಂಶವನ್ನು ಅಧ್ಯಯನ ಕಂಡುಕೊಂಡಿದೆ. ನಾಯಿಗಳ ಒಡನಾಟದಲ್ಲಿರುವಾಗ ಕರುಳಿಗೆ ಸಂಬಂಧಿಸಿದ ಈ ಆರೋಗ್ಯ ಸಮಸ್ಯೆಯ ಬ್ಯಾಕ್ಟೀರಿಯಾ ಕರುಳಿಗೆ ಪ್ರವೇಶಿಸುವುದು ಕಡಿಮೆ. ರಕ್ತದ ಬಯೋಮಾರ್ಕರ್‌ಗಳಲ್ಲಿ ಇದಕ್ಕೆ ಬೇಕಾದ ಧನಾತ್ಮಕ ಬದಲಾವಣೆಗಳು ಆಗಿರುತ್ತವೆ. ಆದಾಗ್ಯೂ, ನಾಯಿಯೊಂದಿಗೆ ವಾಸಿಸುವಾಗ ಈ ಪ್ರಯೋಜನಕಾರಿ ಬದಲಾವಣೆಗಳು ಏಕೆ ಸಂಭವಿಸುತ್ತವೆ ಎಂಬುದನ್ನು ಸಂಶೋಧಕರು ನಿಖರವಾಗಿ ಗುರುತಿಸಲು ಸಾಧ್ಯವಾಗಲ್ಲ. ಆದರೂ ಅವರ ಡೇಟಾವು ಈ ಒಡನಾಟವನ್ನು ಬಲವಾಗಿ ಪ್ರತಿಪಾದಿಸುತ್ತಿವೆ.

ಕ್ರೋನ್ಸ್ ಕಾಯಿಲೆ ಎಂದರೇನು

ಕ್ರೋನ್ಸ್ ಕಾಯಿಲೆಯು ಜಠರ ಕರುಳಿನ ಪ್ರದೇಶದಲ್ಲಿ ಉಂಟಾಗುವ ಗಂಭೀರ ಉರಿಯೂತ. ಇದರ ನೇರ ಪರಿಣಾಮ ಕರುಳಿನ ಮೇಲಾಗುವ ಕಾರಣ ಇದು ಕರುಳಿನ ಕಾಯಿಲೆ. ಆರಂಭದಲ್ಲಿ ಇದನ್ನು ಗುರುತಿಸದೇ ಇದ್ದರೆ ಕಾಲಾನಂತರದಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಆರಂಭದಲ್ಲೇ ರೋಗ ಪತ್ತೆ ಮಾಡಬೇಕಾದ್ದು ಅಗತ್ಯ ಎಂಬುದು ಸಂಶೋಧಕರ ಅಭಿಪ್ರಾಯ. ಈ ರೋಗವು ಒಟ್ಟಾರೆ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಹಸ್ತಕ್ಷೇಪದ ತಂತ್ರವನ್ನು ಅಭಿವೃದ್ಧಿಪಡಿಸುವುದು ರೋಗದ ಬೆಳವಣಿಗೆಗೆ ಕಾರಣವಾಗುವ ಪರಿಸರ ಅಂಶಗಳ ಮೇಲೆ ಕೇಂದ್ರೀಕರಿಸುವ ಅಗತ್ಯವಿದೆ ಎಂದು ಅಧ್ಯಯನದಲ್ಲಿ ವಿವರಿಸಲಾಗಿದೆ.

ಇತರೆ ಅಪಾಯದ ಅಂಶಗಳು: ಸಂಶೋಧನೆಯು ಕ್ರೋನ್ಸ್ ಕಾಯಿಲೆಯ ಬೆಳವಣಿಗೆಯ ಮೇಲೆ ಪ್ರಭಾವ ಬೀರುವ ಹಲವಾರು ಇತರ ಪರಿಸರ ಅಂಶಗಳನ್ನು ಪರಿಶೋಧಿಸಿದೆ. ಉದಾಹರಣೆಗೆ, ಜೀವನದ ಮೊದಲ ವರ್ಷದಲ್ಲಿ ದೊಡ್ಡ ಕುಟುಂಬದೊಂದಿಗೆ ವಾಸಿಸುವುದರಿಂದ ಇಂತಹ ಅಪಾಯವು ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಆದಾಗ್ಯೂ, ಅಧ್ಯಯನದ ಸಮಯದಲ್ಲಿ, ತಮ್ಮ ಮನೆಯಲ್ಲಿ ಪಕ್ಷಿಗಳನ್ನು ಹೊಂದಿರುವ ವ್ಯಕ್ತಿಗಳು ಕ್ರೋನ್ಸ್ ಕಾಯಿಲೆಗೊಳಗಾಗುವ ಸಾಧ್ಯತೆ ಕಂಡುಬಂದಿದೆ. ವ್ಯಕ್ತಿಯ ಅಪಾಯವನ್ನು ನಿರ್ಧರಿಸುವಲ್ಲಿ ಜೆನೆಟಿಕ್ಸ್ ಪ್ರಮುಖ ಪಾತ್ರವನ್ನು ವಹಿಸುತ್ತದೆ, ಅಧ್ಯಯನವು ರೋಗಕ್ಕೆ ಒಳಗಾಗುವ ಸಾಧ್ಯತೆಯನ್ನು ಅರ್ಥಮಾಡಿಕೊಳ್ಳಲು ಪರಿಸರ ಅಂಶಗಳು ಹೇಗೆ ಮೂಲಭೂತವಾಗಿವೆ ಎಂಬುದನ್ನು ತೋರಿಸುತ್ತದೆ. ಈ ಅಂಶಗಳು ಅಪಾಯವನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು ಎಂದು ಅದು ವಿವರಿಸಿದೆ.

ಮಾಹಿತಿ ಮೂಲ

https://www.utoronto.ca/news/growing-dog-may-be-good-your-gut-health-study

mysore-dasara_Entry_Point