Monsoon Health: ಗರ್ಭಿಣಿಯರೇ, ಮಳೆಗಾಲವಿದು ಎಚ್ಚರಿಕೆ; ಆರೋಗ್ಯ ರಕ್ಷಣೆಗೆ ಈ ಸಲಹೆಗಳನ್ನು ತಪ್ಪದೇ ಪಾಲಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  Monsoon Health: ಗರ್ಭಿಣಿಯರೇ, ಮಳೆಗಾಲವಿದು ಎಚ್ಚರಿಕೆ; ಆರೋಗ್ಯ ರಕ್ಷಣೆಗೆ ಈ ಸಲಹೆಗಳನ್ನು ತಪ್ಪದೇ ಪಾಲಿಸಿ

Monsoon Health: ಗರ್ಭಿಣಿಯರೇ, ಮಳೆಗಾಲವಿದು ಎಚ್ಚರಿಕೆ; ಆರೋಗ್ಯ ರಕ್ಷಣೆಗೆ ಈ ಸಲಹೆಗಳನ್ನು ತಪ್ಪದೇ ಪಾಲಿಸಿ

ಮಳೆಗಾಲದಲ್ಲಿ ರೋಗ, ರುಜಿನಗಳು ಹರಡುವ ಸಾಧ್ಯತೆ ಹೆಚ್ಚು. ಕಲುಷಿತ ನೀರು, ವಾತಾವರಣ, ಸೋಂಕಿನ ಕಾರಣದಿಂದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಅದರಲ್ಲೂ ಗರ್ಭಿಣಿಯರು ಹಾಗೂ ಎಳೆ ಕಂದಮ್ಮಗಳು ಹೆಚ್ಚು ಜಾಗೃತೆ ವಹಿಸಬೇಕು ಎನ್ನುತ್ತಾರೆ ಡಾ. ರುಬಿನಾ ಶಾನವಾಜ್ ಝಡ್‌. ಮಳೆಗಾಲದಲ್ಲಿ ಗರ್ಭಿಣಿಯರ ಆರೋಗ್ಯದ ಕುರಿತು ಅವರು ಬರೆದ ಲೇಖನ ಇಲ್ಲಿದೆ.

ಡಾ. ರುಬಿನಾ ಶಾನವಾಜ್ ಝಡ್‌ (ಬಲಚಿತ್ರ)
ಡಾ. ರುಬಿನಾ ಶಾನವಾಜ್ ಝಡ್‌ (ಬಲಚಿತ್ರ)

ಮೋಡ ಮುಸುಕಿದ ಆಗಸ, ಕಾದಿರುವ ಮಣ್ಣಿಗೆ ಬಿದ್ದ ಮಳೆಯ ಘಮವು ಸುಡುವ ಬೇಸಿಗೆಯ ದಣಿವನ್ನು ನಿವಾರಿಸುವುದು ನಿಜ. ಜೊತೆಗೆ ಮಳೆಯೊಂದಿಗೆ ಬಿಸಿಬಿಸಿಯಾದ ಆಹಾರವು ನಮ್ಮನ್ನು ಸೆಳೆಯುತ್ತವೆ. ಆದರೆ ಈ ಎಲ್ಲದರ ಜೊತೆಗೆ ಆರೋಗ್ಯದ ದೃಷ್ಟಿಯಿಂದ ಮಳೆಗಾಲದಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಅಗತ್ಯ. ಅದರಲ್ಲೂ ಚಿಕ್ಕ ಮಕ್ಕಳಿಗೆ, ಗರ್ಭಿಣಿಯರು ಈ ಸಮಯದಲ್ಲಿ ಸಾಕಷ್ಟು ಎಚ್ಚರ ವಹಿಸಬೇಕು. ಅವರ ಆರೋಗ್ಯ ರಕ್ಷಣೆಗೆ ಅಗತ್ಯವಿರುವ ಕೆಲವು ಸಲಹೆಗಳು ಇಲ್ಲಿದೆ.

ಲಸಿಕೆ ಹಾಕಿಸಿಕೊಳ್ಳಿ

ಭಾರತ ಸರ್ಕಾರವು ಗರ್ಭಿಣಿಯರಿಗೆ ಕೋವಿಡ್-19 ಲಸಿಕೆಗಳನ್ನು ಅನುಮೋದಿಸಿದೆ. ನಿಮ್ಮ ವ್ಯಾಕ್ಸಿನೇಷನ್ ಕುರಿತು ನಿಮ್ಮ ವೈದ್ಯರೊಂದಿಗೆ ಚರ್ಚಿಸಿ. ನೀವು ಮತ್ತು ನಿಮ್ಮ ಮಗುವನ್ನು ಈಗಿನ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸಲು ಇದು ಖಂಡಿತವಾಗಿಯೂ ಸಹಾಯ ಮಾಡುತ್ತದೆ.

ಸಾಕಷ್ಟು ದ್ರವಾಹಾರ ಸೇವಿಸಿ

ಮಳೆಗಾಲದ ವಾತಾವರಣದಲ್ಲಿ ಸಾಮಾನ್ಯವಾಗಿ ಬಾಯಾರಿಕೆ ಆಗುವುದಿಲ್ಲ. ಅದಕ್ಕಾಗಿಯೇ ನೀವು ಸಾಕಷ್ಟು ದ್ರವಹಾರವನ್ನು ಸೇವಿಸುವುದು ಉತ್ತಮ. ಸಾಮಾನ್ಯವಾಗಿ 24 ಗಂಟೆಗಳಲ್ಲಿ 2.5 ಲೀಟರ್‌ ನೀರು ಸೇವನೆ ಶಿಫಾರಸು ಮಾಡಲಾಗುತ್ತದೆ. ಇದು ನೀರು ಅಥವಾ ಬಿಸಿ ಚಹಾ / ಬಿಸಿ ಚಾಕೊಲೇಟ್ / ಬಿಸಿ ಸೂಪ್ ಆಗಿರಬಹುದು. ಅದು ದ್ರವ ರೂಪದಲ್ಲಿರಬೇಕು. ಇದು ತಲೆನೋವು ಮತ್ತು ಗಂಟಲು ಒಣಗುವುದನ್ನು ನಿವಾರಿಸುವುದು ಮಾತ್ರವಲ್ಲದೆ, ನಿಮ್ಮ ಮಗುವಿನ ಸುತ್ತಲಿನ ನೀರನ್ನು ಸಮರ್ಪಕವಾಗಿ ನಿರ್ವಹಿಸುತ್ತದೆ.

ವಿಟಮಿನ್ ಸಿ ಸಮೃದ್ಧ / ಚೆನ್ನಾಗಿ ಬೇಯಿಸಿದ ಆಹಾರ

ವಿಶೇಷವಾಗಿ ಶ್ವಾಸೇಂದ್ರಿಯ ಪ್ರದೇಶದ ಸೋಂಕುಗಳ ತಡೆಗಟ್ಟುವಿಕೆಗೆ ವಿಟಮಿನ್ ಸಿಯಿಂದ ಸಿಗುವ ರೋಗನಿರೋಧಕ ಶಕ್ತಿ ಹೇಗೆ ಅವಶ್ಯಕವಾಗಿದೆ ಎಂಬುದರ ಕುರಿತು ನೀವು ಸಾಕಷ್ಟು ಕೇಳಿರಬೇಕು. ಹೀಗಾಗಿ ಸಿಟ್ರಿಕ್ ಹಣ್ಣುಗಳು ಮತ್ತು ರಸವನ್ನು ಸೇವಿಸಿ.

ಮಳೆಗಾಲದಲ್ಲಿ ನೀರು ಹಾಗೂ ಆಹಾರ ಮಾಲಿನ್ಯದ ಸಾಧ್ಯತೆಯು ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ. ಆದ್ದರಿಂದ ನಿಮ್ಮ ಆಹಾರದ ಮೂಲವು ಆರೋಗ್ಯಕರವಾಗಿದೆ ಎಂದು ಖಚಿತಪಡಿಸಿಕೊಳ್ಳಿ ಮತ್ತು ಎಲ್ಲಾ ಕಚ್ಚಾ ಉತ್ಪನ್ನಗಳನ್ನು ಅಡುಗ ಮಾಡುವ ಮೊದಲು ಚೆನ್ನಾಗಿ ತೊಳೆಯಿರಿ.

ದೈಹಿಕ ಚಟುವಟಿಕೆ

ಈ ಸಮಯದಲ್ಲಿ ನಿಮ್ಮ ದೈನಂದಿನ ನಡಿಗೆ ಮತ್ತು ಪ್ರಸವಪೂರ್ವ ವ್ಯಾಯಾಮಗಳನ್ನು ತಪ್ಪಿಸಿಕೊಳ್ಳಬೇಡಿ.ನೀವು ಸೂಕ್ತವಾದ ಆಂಟಿ ಸ್ಕಿಡ್ ಪಾದರಕ್ಷೆಗಳನ್ನು ಧರಿಸಿರುವುದನ್ನು ಖಚಿತಪಡಿಸಿಕೊಳ್ಳಿ ಮತ್ತು ಒಣ ಪ್ರದೇಶಗಳಲ್ಲಿ ಅಥವಾ ನಿಮ್ಮ ಮನೆಗಳ ಸುರಕ್ಷತೆ ಜಾಗಗಳಲ್ಲಿ ನಡೆಯಲು ಸಾಧ್ಯವಾದಷ್ಟು ಪ್ರಯತ್ನಿಸಿ.

ಕೋವಿಡ್‌ ಮುನ್ನೆಚ್ಚರಿಕೆ

ಕೋವಿಡ್ ಇನ್ನೂ ಮೂಲೆಯಲ್ಲಿ ಸುಪ್ತವಾಗಿದೆ ಎಂಬುದನ್ನು ಮರೆಯಬಾರದು. ಆದ್ದರಿಂದ ಆಹಾರ ಸೇವನೆಗೆ ಮೊದಲು ನಿಮ್ಮ ಕೈಗಳನ್ನು ಸಾಬೂನು ಮತ್ತು ಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಿ

ಮಾಸ್ಕ್.. ನಿಮ್ಮೊಂದಿಗೆ ಇರುವ ಕುಟುಂಬದ ಸದಸ್ಯರನ್ನು ಹೊರತುಪಡಿಸಿ ಬೇರೆಯವರ ಸಮ್ಮುಖದಲ್ಲಿ ಇರುವಾಗ ಯಾವಾಗಲೂ ನಿಮ್ಮ ಮೂಗು ಮತ್ತು ಬಾಯಿ ಎರಡನ್ನೂ ಮುಚ್ಚುವ ಮಾಸ್ಕ್‌ ಧರಿಸಿ.

ಸಾಮಾಜಿಕ ಅಂತರ… ನಿಮ್ಮ ಪುಟ್ಟ ಮಗುವಿನೊಂದಿಗೆ ಹತ್ತಿರದ ಅಂತರವನ್ನು ಕಾಯ್ದುಕೊಳ್ಳಲು6 ಅಡಿ ಅಂತರವನ್ನು ಕಾಪಾಡಿಕೊಳ್ಳಿ!

(ಲೇಖಕರು: ಹಿರಿಯ ಸಲಹೆಗಾರರು, ಪ್ರಸೂತಿ ಮತ್ತು ಯುರೋ ಸ್ತ್ರೀರೋಗ ಶಾಸ್ತ್ರ, ಫೋರ್ಟಿಸ್ ಆಸ್ಪತ್ರೆ, ರಿಚ್ಮಂಡ್ ರಸ್ತೆ, ಬೆಂಗಳೂರು)

Whats_app_banner