ಡೆಂಗ್ಯೂ, ಚಿಕುನ್‌ಗುನ್ಯಾ ನಡುವೆ ಬೆಂಗಳೂರಲ್ಲಿ ಇಲಿ ಜ್ವರ ಹರಡುವ ಭೀತಿ; ರೋಗಲಕ್ಷಣಗಳು, ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ-health news rat fever fear in bengaluru symptoms and precautionary measures must take for rat fever rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಡೆಂಗ್ಯೂ, ಚಿಕುನ್‌ಗುನ್ಯಾ ನಡುವೆ ಬೆಂಗಳೂರಲ್ಲಿ ಇಲಿ ಜ್ವರ ಹರಡುವ ಭೀತಿ; ರೋಗಲಕ್ಷಣಗಳು, ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ

ಡೆಂಗ್ಯೂ, ಚಿಕುನ್‌ಗುನ್ಯಾ ನಡುವೆ ಬೆಂಗಳೂರಲ್ಲಿ ಇಲಿ ಜ್ವರ ಹರಡುವ ಭೀತಿ; ರೋಗಲಕ್ಷಣಗಳು, ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ

ರಾಜ್ಯದೆಲ್ಲೆಡೆ ಮಳೆಯ ಅಬ್ಬರದ ನಡುವೆ ಡೆಂಗ್ಯೂ, ಚಿಕುನ್‌ಗುನ್ಯಾ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳ ಪ್ರಮಾಣವು ಏರಿಕೆಯಾಗುತ್ತಿದೆ. ಈ ನಡುವೆ ರಾಜಧಾನಿ ಬೆಂಗಳೂರಿನಲ್ಲಿ ಇಲಿ ಜ್ವರ ಹರಡುವ ಆತಂಕ ಎದುರಾಗಿದೆ. ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕಾಗಿ ತಜ್ಞರು ಸಲಹೆ ನೀಡಿದ್ದಾರೆ. ಇಲಿ ಜ್ವರದ ರೋಗಲಕ್ಷಣಗಳು, ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ.

ಡೆಂಗ್ಯೂ, ಚಿಕುನ್‌ಗುನ್ಯಾ ನಡುವೆ ಬೆಂಗಳೂರಲ್ಲಿ ಇಲಿ ಜ್ವರ ಹರಡುವ ಭೀತಿ; ರೋಗಲಕ್ಷಣಗಳು, ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ
ಡೆಂಗ್ಯೂ, ಚಿಕುನ್‌ಗುನ್ಯಾ ನಡುವೆ ಬೆಂಗಳೂರಲ್ಲಿ ಇಲಿ ಜ್ವರ ಹರಡುವ ಭೀತಿ; ರೋಗಲಕ್ಷಣಗಳು, ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ

ಮಳೆರಾಯ ಭೂಮಿಗೆ ತಂಪೆರೆಯುವ ಜೊತೆಗೆ ಸಾಂಕ್ರಾಮಿಕ ಕಾಯಿಲೆಗಳನ್ನು ಹೊತ್ತು ತಂದಿದ್ದಾನೆ. ರಾಜ್ಯದಾದ್ಯಂತ ಡೆಂಗ್ಯೂ ಪ್ರಕರಣಗಳು ದಿನೇ ದಿನೇ ಏರಿಕೆಯಾಗುತ್ತಿದೆ. ಅದರಲ್ಲೂ ರಾಜಧಾನಿ ಬೆಂಗಳೂರು ಡೆಂಗ್ಯೂ ಪ್ರಕರಣದಲ್ಲಿ ಟಾಪ್‌ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ ಪ್ರತಿದಿನ ಹಲವು ಡೆಂಗ್ಯೂ ಪ್ರಕರಣಗಳು ಪತ್ತೆಯಾಗುತ್ತಿದ್ದು, ಆತಂಕ ಎದುರಾಗಿದೆ. ಈ ನಡುವೆ ಇನ್ನೊಂದು ಹೊಸ ಸಾಂಕ್ರಾಮಿಕ ರೋಗ ಹರಡುವ ಭೀತಿಯೂ ಎದುರಾಗಿದೆ, ಅದುವೇ ಇಲಿ ಜ್ವರ. ಕೆಲ ವರ್ಷಗಳಿಂದ ಆತಂಕಕ್ಕೆ ಕಾರಣವಾಗಿದ್ದ ಇಲಿ ಜ್ವರ ಮತ್ತೆ ಹರಡುವ ಆತಂಕ ವ್ಯಕ್ತಪಡಿಸಿದ್ದಾರೆ ವೈದ್ಯರು.

ಅಧಿಕ ಮಳೆಯ ನಡುವೆ ಇಲಿ ಜ್ವರ ಹರಡುವ ಸಾಧ್ಯತೆ ಬಗ್ಗೆ ಹೇಳಿರುವ ವೈದ್ಯರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಇಲಿ ಜ್ವರದ ರೋಗಲಕ್ಷಣಗಳೇನು, ಈ ಜ್ವರದಿಂದ ಪಾರಾಗಲು ಮುನ್ನೆಚ್ಚರಿಕಾ ಕ್ರಮಗಳೇನು ಎಂಬ ಮಾಹಿತಿ ಇಲ್ಲಿದೆ.

ಏನಿದು ಇಲಿ ಜ್ವರ?

ಇಲಿ ಜ್ವರವನ್ನು ಇಂಗ್ಲಿಷ್‌ನಲ್ಲಿ ರ್ಯಾಟ್‌ ಬೈಟ್‌ ಫಿವರ್‌ ಎಂದು ಕರೆಯುತ್ತಾರೆ. ಇದು ಬ್ಯಾಕ್ಟೀರಿಯಾದಿಂದ ಹರಡುವ ಕಾಯಿಲೆಯಾಗಿದೆ. ಸೋಂಕಿತ ಇಲಿಗಳು ಅಥವಾ ದಂಶಕಗಳಿಂದ ಈ ಜ್ವರ ಹರಡುತ್ತದೆ. ಇದು ಇಲಿಗಳ ಬಾಯಿಯೊಳಗೆ ವಾಸಿಸುವ ಬ್ಯಾಕ್ಟೀರಿಯಾದಿಂದ ಹರಡುವ ರೋಗವಾಗಿದೆ. ಲಿ ಕಚ್ಚುವುದು ಅಥವಾ ಇಲಿಯ ಹಲ್ಲಿನ ಸ್ಕ್ಯಾಚ್‌ನಿಂದ ಕೂಡ ಹರಡಬಹುದು. ದಂಶಕಗಳ ಹಿಕ್ಕೆಯು ಕೂಡ ರೋಗ ಹರಡಲು ಕಾರಣವಾಗುತ್ತದೆ. ಇದೊಂದು ಮಾರಕ ಸಾಂಕ್ರಾಮಿಕ ಕಾಯಿಲೆಯಾಗಿದ್ದು, ತಕ್ಷಣಕ್ಕೆ ಚಿಕಿತ್ಸೆ ಪಡೆಯುವುದು ಮುಖ್ಯವಾಗಿದೆ.

ಇಲಿ ಜ್ವರದ ಸಾಮಾನ್ಯ ರೋಗಲಕ್ಷಣಗಳು

ಸ್ಟ್ರೆಪ್ಟೋಬಾಸಿಲರಿ ಇಲಿ ಜ್ವರ ಮತ್ತು ಸ್ಪಿರಿಲರಿ ಇಲಿ ಜ್ವರ ಎಂಬ ಎರಡು ವಿಧದ ಇಲಿ ಜ್ವರಗಳಿವೆ. ಈ ಎರಡೂ ರೀತಿಯ ಜ್ವರದಲ್ಲಿ ರೋಗಲಕ್ಷಣಗಳು ಸಾಮಾನ್ಯವಾಗಿದ್ದರು, ಕೆಲವೊಂದು ಚಿಕ್ಕ ವ್ಯತ್ಯಾಸಗಳಿರುತ್ತವೆ.

ಸ್ಟ್ರೆಪ್ಟೋಬಾಸಿಲರಿ ಇಲಿ ಜ್ವರದ ಲಕ್ಷಣಗಳು: ತಲೆನೋವು, ಜ್ವರ, ವಾಕರಿಕೆ ಮತ್ತು ವಾಂತಿ, ಚರ್ಮದಲ್ಲಿ ದದ್ದು ಉಂಟಾಗುವುದು (ವಿಶೇಷವಾಗಿ ಕಾಲು ಮತ್ತು ಕೈಗಳಲ್ಲಿ), ಕೀಲು ನೋವು ಹಾಗೂ ಸ್ನಾಯು ಸೆಳೆತ. ಈ ಸೋಂಕಿಗೆ ಒಳಗಾದ 3ರಿಂದ 10 ದಿನಗಳ ಒಳಗೆ ರೋಗಲಕ್ಷಣಗಳು ಕಾಣಿಸುತ್ತವೆ.

ಸ್ಪಿರಿಲರಿ ಇಲಿ ಜ್ವರ: ಇದರಲ್ಲಿ ನಿಮಗೆ ಬಿಟ್ಟು ಬಿಟ್ಟು ಜ್ವರ ಬರುವುದು ಕಾಣಿಸಬಹುದು, ಚರ್ಮದಲ್ಲಿ ಊತ ಉಂಟಾಗಬಹುದು, ದುಗ್ಧರಸ ಗ್ರಂಥಿಗಳು ಊದಿಕೊಳ್ಳಬಹುದು, ಚರ್ಮದಲ್ಲಿ ದದ್ದು ಕಾಣಿಸಬಹುದು. ಸಾಮಾನ್ಯವಾಗಿ ಸೋಂಕಿಗೆ ಒಳಗಾಗಿ 7 ರಿಂದ 21 ದಿನಗಳ ಒಳಗೆ ಈ ರೋಗಲಕ್ಷಣಗಳು ಕಾಣಿಸುತ್ತವೆ.

ಇಲಿ ಜ್ವರವು ಸಾಮಾನ್ಯವಾಗಿ ಏಷ್ಯಾ ಹಾಗೂ ಅಮೆರಿಕದಲ್ಲಿ ಹೆಚ್ಚು ಕಂಡುಬರುತ್ತದೆ. ಸೋಂಕಿತ ಇಲಿಗಳ ಮಲ, ಮೂತ್ರದಿಂದಲೂ ರೋಗ ಹರಡಬಹುದು. ಹಾಗಾಗಿ ಮನೆಯ ಒಳಗೆ, ಮನೆಯ ಸುತ್ತಮುತ್ತ ಇಲಿಗಳು ಸುಳಿದಾಡದಂತೆ ನೋಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ.

ಇಲಿ ಜ್ವರವು ಮೆದುಳು, ಬೆನ್ನುಹುರಿ, ಹೃದಯ, ಮೂತ್ರಪಿಂಡಗಳು, ಯಕೃತ್ತು, ಶ್ವಾಸಕೋಶದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾಗಿ ಆರಂಭದ ಹಂತದಲ್ಲೇ ಚಿಕಿತ್ಸೆ ಪಡೆಯುವುದು ಬಹಳ ಮುಖ್ಯ.

ಇಲಿ ಜ್ವರ ಬಾರದಂತೆ ತಡೆಯುವುದು ಹೇಗೆ?

ಇಲಿಗಳು ಮತ್ತು ದಂಶಕಗಳಿಂದ ದೂರವಿರಿ. ಅ ಅವು ಮೂತ್ರ ವಿಸರ್ಜಿಸುವ ಅಥವಾ ಮಲವಿಸರ್ಜನೆ ಮಾಡುವ ಸ್ಥಳಗಳಿಂದ ದೂರವಿರಿ.

ನೀವು ಇಲಿ ಅಥವಾ ದಂಶಕಗಳ ಹಿಕ್ಕೆಗಳನ್ನು ಸ್ವಚ್ಛಗೊಳಿಸಬೇಕಾದರೆ ರಬ್ಬರ್ ಕೈಗವಸುಗಳು, ಕನ್ನಡಕಗಳು ಮತ್ತು ನಿಮ್ಮ ಮೂಗು ಮತ್ತು ಬಾಯಿಯನ್ನು ಮುಚ್ಚುವ ಮಾಸ್ಕ್‌ ಧರಿಸಿ.

ಇಲಿ ಅಥವಾ ದಂಶಕಗಳ ಮೂತ್ರ ಅಥವಾ ಮಲವನ್ನು ಹೊಂದಿರುವ ಪ್ರದೇಶಗಳನ್ನು ಸ್ವಚ್ಛಗೊಳಿಸಲು ಸೋಂಕುನಿವಾರಕವನ್ನು ಬಳಸಿ.

ಇಲಿಗಳು ಮತ್ತು ಇತರ ದಂಶಕಗಳು ಪ್ರವೇಶಿಸದಂತೆ ನಿಮ್ಮ ಮನೆಯೊಳಗೆ ಮತ್ತು ಸುತ್ತಮುತ್ತಲಿನ ರಂಧ್ರಗಳನ್ನು ಮುಚ್ಚಿ.

ಇಲಿಗಳ ಸಂಖ್ಯೆ ಕಡಿಮೆ ಮಾಡಲು ಸಹಾಯ ಮಾಡಲು ನಿಮ್ಮ ಮನೆಯ ಸುತ್ತಲೂ ಇಲಿ ಬಲೆಗಳನ್ನು ಹೊಂದಿಸಿ.

ನಿಮ್ಮ ಮನೆಯಲ್ಲಿ ಆಹಾರವನ್ನು ಬಿಡುವುದನ್ನು ತಪ್ಪಿಸಿ. ಸುಲಭವಾಗಿ ಪ್ರವೇಶಿಸಬಹುದಾದ ಆಹಾರ ಮೂಲಗಳು ಇಲಿಗಳು ಮತ್ತು ಇತರ ದಂಶಕಗಳನ್ನು ಸೆಳೆಯುತ್ತವೆ.

ಕಳೆದ ವರ್ಷ ಬೆಂಗಳೂರಿನಲ್ಲಿ 100ಕ್ಕೂ ಹೆಚ್ಚು ಇಲಿ ಜ್ವರದ ಪ್ರಕರಣಗಳು ದಾಖಲಾಗಿದ್ದು, ಈಗ ಮತ್ತೆ ಇಲಿ ಜ್ವರದ ಸದ್ದು ಹರಡಿರುವುದು ಆತಂಕಕ್ಕೆ ಕಾರಣವಾಗಿದೆ. ಹಾಗಾಗಿ ಸೂಕ್ತ ಮುನ್ನೆಚ್ಚರಿಕೆ ವಹಿಸುವುದು ಬಹಳ ಮುಖ್ಯವಾಗಿದೆ.

mysore-dasara_Entry_Point