Heart health: ಕೊಲೆಸ್ಟ್ರಾಲ್ ನಿಯಂತ್ರಿಸಿ ಹೃದಯದ ಆರೋಗ್ಯ ಉತ್ತಮಪಡಿಸಿಕೊಳ್ಳಬೇಕೆ, ಈ 5 ಹಣ್ಣುಗಳನ್ನು ತಿನ್ನಿ
5 fruits to reduce your cholesterol: ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುವ 5 ಹಣ್ಣುಗಳ ವಿವರ ಇಲ್ಲಿದೆ. ಹೃದಯದ ಆರೋಗ್ಯ ಹೆಚ್ಚಿಸಲು ಇವು ಸಹಕಾರಿ.
ಈಗ ಬಹುತೇಕ ಜನರು ಹೃದಯದ ಆರೋಗ್ಯದ ಕುರಿತು ಚಿಂತಿಸುತ್ತಿದ್ದಾರೆ. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗುತ್ತಿರುವುದು, ಹೃದಯಾಘಾತವಾಗುವುದು ಇತ್ಯಾದಿ ತೊಂದರೆಗಳು ಹೆಚ್ಚುತ್ತಿವೆ. ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗುವುದರಿಂದ ಅಪಾಯ ಜಾಸ್ತಿ. ವಿಶೇಷವಾಗಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗದಂತೆ ಗಮನಹರಿಸಬೇಕು. ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದರೆ ಹೃದಯಾಘಾತ, ಪಾರ್ಶ್ವವಾಯು ಇತ್ಯಾದಿ ಅಪಾಯಗಳು ಉಂಟಾಗಬಹುದು. ಎಲ್‌ಡಿಎಲ್ ಅಥವಾ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಒಂದಿಷ್ಟು ಆಹಾರಗಳಿವೆ. ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಲು ಎರಡು ಕಾರಣಗಳಿವೆ. ಮೊದಲನೆಯದ್ದು ನಮ್ಮ ಲಿವರ್ ಮೂಲಕ ಕೊಲೆಸ್ಟ್ರಾಲ್ ಉತ್ಪಾದನೆಯಾಗುತ್ತದೆ. ಎರಡನೆಯದ್ದು, ನಾವು ಸೇವಿಸುವ ಆಹಾರವು ಕೊಲೆಸ್ಟ್ರಾಲ್ ಉಂಟು ಮಾಡುತ್ತದೆ. ನಾವು ಸರಿಯಾದ ಆಹಾರ ಸೇವನೆ ಮಾಡುವ ಮೂಲಕ ಕೊಲೆಸ್ಟ್ರಾಲ್ ಕಡಿಮೆ ಮಾಡಿಕೊಳ್ಳಬಹುದು.
ಕೊಲೆಸ್ಟ್ರಾಲ್ ನಿಯಂತ್ರಿಸುವ ಐದು ಹಣ್ಣುಗಳು
1. ಫೈಬರ್ ಅತ್ಯಧಿಕ ಇರುವ ಹಣ್ಣುಗಳು
ಸೋಡಿಯಂ ಮತ್ತು ಸ್ಯಾಚುರೇಟೆಡ್ ಕೊಬ್ಬು ಇರುವ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ದೇಹದ ಕೊಲೆಸ್ಟ್ರಾಲ್ ಮಟ್ಟ ಅಸಮತೋಲನವಾಗುತ್ತದೆ. ಹೃದಯದ ಆರೋಗ್ಯಕ್ಕೆ ಪೂರಕವಾದ ಫೈಬರ್ ಯಥೇಚ್ಚವಾಗಿರುವ ಆಹಾರಗಳು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸೇಬು, ಪೇರಳೆ ಇತ್ಯಾದಿ ಹಣ್ಣುಗಳು ದೇಹದಲ್ಲಿ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಪೂರಕವಾಗಿವೆ.
2. ಬೆರ್ರಿ
ದೇಹದಲ್ಲಿ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಅಥವಾ ನಿಯಂತ್ರಣದಲ್ಲಿಡಲು ಬೆರ್ರಿ ಹಣ್ಣುಗಳನ್ನು ತಿನ್ನಬಹುದು. ಇದು ಪೌಷ್ಟಿಕಾಂಶ ಯಥೇಚ್ಚವಾಗಿರುವ ಹಣ್ಣು. ಇದು ಹೃದ್ರೋಗ ಮತ್ತು ಇತರ ದೀರ್ಘಕಾಲದ ಅಸ್ವಸ್ಥತೆಗಳನ್ನು ತಡೆಯುತ್ತದೆ. ಹಾಗಂತ, ಈ ಹಣ್ಣನ್ನು ಅತ್ಯಧಿಕ ಪ್ರಮಾಣದಲ್ಲಿ ತಿನ್ನಬೇಡಿ. ಮಿತವಾಗಿ ಸೇವಿಸಿ.
3. ಆವಕಾಡೊ
ಅವಕ ಅಥವಾ ಅವಕಾಡೊ ದೇಹಕ್ಕೆ ಉತ್ತಮ. ಇದು ಮೊನೊಸಾಚುರೇಟೆಡ್ ಮತ್ತು ಪಾಲಿಅನ್‌ಸಾಚುರೇಟೆಡ್ ಕೊಬ್ಬುಗಳನ್ನು ಹೊಂದಿರುತ್ತದೆ. ಇದು ಹೃದಯಕ್ಕೆ ಪ್ರಯೋಜನಕಾರಿ. ಆವಕಾಡೊಗಳು ಹೆಚ್ಚಿನ ಸಾಂದ್ರತೆಯ ಲಿಪೊಪ್ರೋಟೀನ್ (HDL) ಮತ್ತು ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ (LDL) ಕೊಲೆಸ್ಟ್ರಾಲ್ ಮಟ್ಟವನ್ನು ಗಣನೀಯವಾಗಿ ನಿರ್ವಹಿಸುತ್ತದೆ. ಇದು ನಿಮ್ಮ ಸೌಂದರ್ಯವನ್ನೂ ಉತ್ತಮಪಡಿಸುತ್ತದೆ. ಹೃದಯದ ಆರೋಗ್ಯವನ್ನೂ ಉತ್ತಮಪಡಿಸುತ್ತದೆ.
4. ಬಾಳೆಹಣ್ಣು
ಬಹುತೇಕ ಎಲ್ಲರಿಗೂ ಪ್ರಿಯವಾದ ಹಣ್ಣು ಬಾಳೆಹಣ್ಣು. ಇದು ತಿನ್ನಲು ಸುಲಭವಾದ ಹಣ್ಣು. ಇವು ಅದ್ಭುತವಾದ ಸೂಪರ್‌ಫುಡ್. ಇದರಲ್ಲಿ ಅತ್ಯುತ್ತಮ ಫೈಬರ್, ಅಗತ್ಯ ಜೀವಸತ್ವಗಳು, ಖನಿಜಗಳು, ಸುಕ್ರೋಸ್, ಫ್ರಕ್ಟೋಸ್ ಮತ್ತು ಗ್ಲೂಕೋಸ್‌ನಂತಹ ನೈಸರ್ಗಿಕ ಸಕ್ಕರೆ ಯಥೇಚ್ಛವಾಗಿರುತ್ತವೆ. ಬಾಳೆಹಣ್ಣುಗಳು ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುವ ಪೊಟ್ಯಾಸಿಯಮ್ ಮತ್ತು ಫೈಬರ್‌ನ ಉತ್ತಮ ಮೂಲವಾಗಿದೆ ಎಂದು ತಜ್ಞರು ಹೇಳಿದ್ದಾರೆ. ಇದರಲ್ಲಿ ವಿಟಮಿನ್ ಸಿ ಮತ್ತು ಮೆಗ್ನೀಸಿಯಮ್ ಕೂಡ ಇರುವುದರಿಂದ ಆರೋಗ್ಯಕ್ಕೆ ಪ್ರಯೋಜನಕಾರಿ.
5. ಸಿಟ್ರಸ್ ಹಣ್ಣುಗಳು
ಪೇರಳೆ ಮತ್ತು ಸೇಬಿನಲ್ಲಿ ಕಂಡುಬರುವ ಪೆಕ್ಟಿನ್ ಎಂಬ ವಸ್ತುವು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ನೆರವಾಗುತ್ತದೆ. ಇದೇ ಕಾರಣಕ್ಕೆ ಸಿಟ್ರಸ್ ಹಣ್ಣುಗಳನ್ನು ಹೆಚ್ಚು ಸೇವಿಸಿ ಎಂದು ತಜ್ಞರು ಹೇಳಿದ್ದಾರೆ. ಇವು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿವೆ. ಇದು ಹಾನಿಕಾರಕ ಎಲ್‌ಡಿಎಲ್ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳನ್ನು ಕಡಿಮೆ ಮಾಡಲು ಮತ್ತು ಆರೋಗ್ಯಕರ ಎಚ್‌ಡಿಎಲ್ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಲು ನೆರವಾಗುತ್ತದೆ. ಇದರಲ್ಲಿರುವ ವಿಟಮಿನ್ ಸಿ ಹೃದ್ರೋಗ ಮತ್ತು ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡುತ್ತದೆ. ಹಾಗಂತ ಈ ಹಣ್ಣುಗಳ ಜ್ಯೂಸ್ ಮಾಡಿ ಕುಡಿಯಬೇಡಿ, ಸಕ್ಕರೆ ಹಾಕಿ ಜ್ಯೂಸ್ ಮಾಡಿದರೆ ಪ್ರಯೋಜನವಿಲ್ಲ.
ವಿಭಾಗ