Screaming: ಕಿರುಚಾಡೋಕೆ ಇಷ್ಟ ಅನ್ನೋರಿಗೆ ಗುಡ್‌ನ್ಯೂಸ್‌; ಕಿರುಚೋದು ಆರೋಗ್ಯಕ್ಕೆ ಒಳ್ಳೆದಂತೆ, ಯಾಕಂತ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Screaming: ಕಿರುಚಾಡೋಕೆ ಇಷ್ಟ ಅನ್ನೋರಿಗೆ ಗುಡ್‌ನ್ಯೂಸ್‌; ಕಿರುಚೋದು ಆರೋಗ್ಯಕ್ಕೆ ಒಳ್ಳೆದಂತೆ, ಯಾಕಂತ ನೋಡಿ

Screaming: ಕಿರುಚಾಡೋಕೆ ಇಷ್ಟ ಅನ್ನೋರಿಗೆ ಗುಡ್‌ನ್ಯೂಸ್‌; ಕಿರುಚೋದು ಆರೋಗ್ಯಕ್ಕೆ ಒಳ್ಳೆದಂತೆ, ಯಾಕಂತ ನೋಡಿ

ಮನಸ್ಸಿಗೆ ಬೇಸರ ಆದಾಗ, ನೋವಾದಾಗ, ಒತ್ತಡ ಎನ್ನಿಸಿದಾಗ ಜೋರಾಗಿ ಕಿರುಚಾಡಬೇಕು ಅನ್ನಿಸೋದು ಸಹಜ. ಆದರೆ ಕಿರುಚಿದ್ರೆ ಜನ ಏನ್‌ ಅಂದ್ಕೋತಾರೋ ಅಂತ ಮೌನವಾಗಿ ಬಿಡ್ತೀವಿ. ಆದರೆ ಇತ್ತೀಚಿನ ಅಧ್ಯಯನವೊಂದರ ಪ್ರಕಾರ ಕಿರುಚಾಡೋದು ಆರೋಗ್ಯಕ್ಕೆ ಅದರಲ್ಲೂ ಮಾನಸಿಕ ಆರೋಗ್ಯಕ್ಕೆ ತುಂಬಾ ಒಳ್ಳೆದಂತೆ. ಕಿರುಚೋದ್ರಿಂದ ಏನು ಪ್ರಯೋಜನವಿದೆ ನೋಡಿ.

ಕಿರುಚೋದು ಆರೋಗ್ಯಕ್ಕೆ ಒಳ್ಳೆದಂತೆ, ಹೇಗೆ ಅಂತ ನೋಡಿ
ಕಿರುಚೋದು ಆರೋಗ್ಯಕ್ಕೆ ಒಳ್ಳೆದಂತೆ, ಹೇಗೆ ಅಂತ ನೋಡಿ

ಇತ್ತೀಚಿನ ದಿನಗಳಲ್ಲಿ ಮಕ್ಕಳಾದಿಯಾಗಿ ದೊಡ್ಡವರೆಗೆ ಯಾರ ಬಾಯಲ್ಲಿ ಕೇಳಿದ್ರೂ ಒತ್ತಡ ಅಥವಾ ಸ್ಟ್ರೆಸ್‌ ಎನ್ನುವ ಪದ ಸಾಮಾನ್ಯವಾಗಿದೆ. ಇಂದಿನ ಜೀವನಶೈಲಿಯಲ್ಲಿ ಒತ್ತಡವು ನಮ್ಮ ಬದುಕಿನ ಭಾಗವಾಗಿದೆ. ಒತ್ತಡ ನಿರ್ವಹಣೆಗಾಗಿ ಬಬಲ್‌ ಬಾತ್‌, ಧಾನ್ಯ, ಯೋಗ ಹೀಗೆ ಹಲವು ಮಾರ್ಗಗಳನ್ನು ಸೂಚಿಸಲಾಗುತ್ತದೆ. ಆದರೆ ಇತ್ತೀಚಿನ ಅಧ್ಯಯನವೊಂದರ ಪ್ರಕಾರ ಒತ್ತಡ ನಿರ್ವಹಣೆಗೆ ಇರುವ ಬೆಸ್ಟ್‌ ಮಾರ್ಗ ಎಂದರೆ ಕಿರುಚಾಡೋದಂತೆ. ಇದನ್ನು ಕೇಳಿದ್ರೆ ನಿಮಗೆ ಅಚ್ಚರಿಯ ಜೊತೆಗೆ ನಗು ಕೂಡ ಬರಬಹುದು. ಕಿರುಚಾಡೋದ್ರಿಂದ ಒತ್ತಡ ಪರಿಹಾರವಾಗುವುದರ ಜೊತೆಗೆ ಭಾವನಾತ್ಮಕ ಯೋಗಕ್ಷೇಮವೂ ಸುಧಾರಿಸುತ್ತದೆ ಎಂಬುದು ಈಗ ವೈಜ್ಞಾನಿಕವಾಗಿ ಸಾಬೀತಾಗಿದೆಯಂತೆ.

ಪ್ರಕೋಪವು ವಿರೋಧಭಾಸ ಎಂದು ತೋರಿದರೂ, ಉತ್ತಮ ಕಿರುಚಾಟವು ನಿಮ್ಮ ಮಾನಸಿಕ ಆರೋಗ್ಯಕ್ಕೆ ಆಶ್ಚರ್ಯಕರ ಪ್ರಯೋಜನ ನೀಡುವುದು ಸುಳ್ಳಲ್ಲ.

ಲೈಫ್‌ಲೈನ್‌ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯ ಡಾ. ದೀಪಕ್‌ ಪಟಡೆ ಅವರು ಕಿರುಚಾಡುವುದರಿಂದಾಗುವ ಸಂಭಾವ್ಯ ಪ್ರಯೋಜನಗಳ ಬಗ್ಗೆ ಇಲ್ಲಿದೆ ತಿಳಿಸಿದ್ದಾರೆ.

ಕ್ಯಾಥರ್ಹಾಲ್ ಬಿಡುಗಡೆ

ಕಿರುಚಾಟವು ಕ್ಯಾಥರ್ಸಿಸ್‌ನ ರೂಪವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಡಾ. ಪಟಡೆ ಹೇಳುತ್ತಾರೆ. ಮನದಲ್ಲಿ ಅಡಕವಾಗಿರುವ ಭಾವನೆಗಳು ಹಾಗೂ ಒತ್ತಡವು ಆರೋಗ್ಯಕರ ರೂಪದಲ್ಲಿ ಹೊರ ಬರಲು ಕಿರುಚಾಡುವುದು ಬೆಸ್ಟ್‌ ಅಂತೆ. ಮನದಲ್ಲಿ ಹುದುಗಿರುವ ಭಾವನೆಗಳನ್ನು ಬಾಯಿಯ ಮೂಲಕ ಅಂದರೆ ಕಿರುಚಾಡುವ ಮೂಲಕ ಹೊರ ಹಾಕುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಇದರಿಂದ ಭಾವನೆಗಳ ಮೇಲೆ ನಿಯಂತ್ರಣವೂ ಸಿಗುತ್ತದೆ. ಇದರಿಂದ ನಮ್ಮ ಭಾವನಾತ್ಮಕ ಸ್ಥಿತಿ ಸ್ಥಿರವಾಗಿರುತ್ತದೆ.

ಸರಿಯಾದ ಕಿರುಚಾಟವನ್ನು ಕಂಡುಹಿಡಿಯುವುದು

ಕಿರುಚಾಡುವುದು ಒಳ್ಳೆಯದೇನೋ ನಿಜ, ಆದರೆ ಎಲ್ಲಾ ಕಿರುಚಾಟಗಳು ಒಂದೇ ಥರ ಅಲ್ಲ ಎಂಬುದನ್ನು ನೆನಪಿಡಿ. ಕೆಲವು ಕಿರುಚಾಟದ ವಿಧವು ಸಮಸ್ಯೆಯನ್ನೂ ಸೂಚಿಸಬಹುದು ಎಂದು ಡಾ. ಪಟಡೆ ಹೇಳುತ್ತಾರೆ. ಪ್ರೈಮಲ್‌ ಸ್ಕ್ರೀಮಿಂಗ್‌ ಅಥವಾ ಯುಟಿಲೈಸಿಂಗ್‌ ಡಿಸಿಗ್ನೆನೇಟೆಡ್‌ ಸ್ಟ್ರೀಮ್‌ ರೂಮ್‌ಗಳು ಮನುಷ್ಯನ ಒಳಗಿನ ಒತ್ತಡವನ್ನು ಹೊರ ಹಾಕಲು ಉತ್ತಮ ಹಾದಿಯಾಗಿವೆ.

ಇತರರ ಕಡೆಗೆ ಕೋಪ ಅಥವಾ ಅಕ್ರಮಣಕಾರಿಯಂತೆ ನಿಮ್ಮ ಕಿರುಚಾಟ ಇದ್ದರೆ ಇದು ಅಪಾಯವನ್ನು ಸೂಚಿಸುತ್ತದೆ, ಇದನ್ನು ಸರಿಯಾದ ಕಿರುಚಾಟ ಅಲ್ಲ ಎಂದು ಪರಿಗಣಿಸಬಹುದು.

ದೇಹ ಮತ್ತು ಕಿರುಚಾಟ

ಕಿರುಚಾಟದ ಪ್ರಭಾವವ ಮನಸ್ಸಿನ ಆಚೆಗೂ ವ್ಯಾಪಿಸುತ್ತದೆ. ಕಿರುಚಾಟವು ದೈಹಿಕ ಆರೋಗ್ಯ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಹೇಗೆ ಉಂಟುಮಾಡುತ್ತದೆ ಎಂಬುದನ್ನು ತಜ್ಞರು ವಿವರಿಸುತ್ತಾರೆ.

ಅಡ್ರಿನಾಲಿನ್‌ ಉಲ್ಬಣವು ಹೆಚ್ಚು ಒತ್ತಡವನ್ನು ಬಿಡುಗಡೆ ಮಾಡುವ ಕಾರಣ ಇದರ ಪ್ರಚೋದನೆಯಿಂದ ಕಿರುಚಾಡಿದಾಗ ಅಲ್ಪಾವಧಿಗೆ ಅಂದರೆ ಆ ಕ್ಷಣಕ್ಕೆ ನಿಮ್ಮ ಮನದ ನೋವು ಹಾಗೂ ಒತ್ತಡ ತಾತ್ಕಾಲಿಕವಾಗಿ ಕಡಮೆಯಾಗಬಹುದು. ಅತಿಯಾದ ಒತ್ತಡ ಅಥವಾ ದೀರ್ಘಕಾಲದ ಕಿರುಚಾಟವು ಋಣಾತ್ಮಕ ಪರಿಣಾಮಗಳನ್ನು ಉಂಟು ಮಾಡಬಹುದು.

ಅತಿಯಾಗಿ ಕಿರುಚಾಡುವುದರಿಂದ ಧ್ವನಿಪೆಟ್ಟಿಗೆಯ ಸಮಸ್ಯೆ, ರಕ್ತದೊತ್ತಡ ಏರುವುದು ಹಾಗೂ ಪ್ರತಿರಕ್ಷಣಾ ವ್ಯವಸ್ಥೆ ದುರ್ಬಲಗೊಳ್ಳುವುದು ಇಂತಹ ಸಂಭಾವ್ಯ ಅಪಾಯಗಳಿಗೆ ಕಾರಣವಾಗಬಹುದು. ಶಿಕ್ಷಕರು ಹಾಗೂ ಗಾಯಕರಂತಹ ಧ್ವನಿಯನ್ನು ಅತಿಯಾಗಿ ಬಳಸುವವರು ಇತರ ದೈಹಿಕ ಸಮಸ್ಯೆಗಳನ್ನೂ ಎದುರಿಸಬಹುದು ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ ಡಾ. ಪಟಡೆ.

ಕಿರುಚಾಡುವುದರಿಂದಾಗುವ ಪ್ರಯೋಜನಗಳ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ ಕಿರುಚಾಡುವುದರಿಂದ ಒತ್ತಡ ನಿರ್ವಹಣೆ ಹಾಗೂ ಭಾವನಾತ್ಮಕ ಬೇಸರ ನೋವನ್ನು ಹೊರ ಹಾಕಲು ಇದು ಬೆಸ್ಟ್‌ ಮಾರ್ಗ ಎಂದು ತಜ್ಞರು ಹೇಳುತ್ತಾರೆ. ಆದರೆ ಎಲ್ಲೆಂದರಲ್ಲಿ ಕಿರುಚಾಡಲು ಹೋಗಬೇಡಿ. ಮುಂದಿನ ಬಾರಿ ನಿಮಗೆ ಅತಿಯಾಗಿ ಒತ್ತಡ ಎನ್ನಿಸದಾಗ ಸೂಕ್ತ ಜಾಗ ನೋಡಿಕೊಂಡು ಅಲ್ಲಿ ಗಟ್ಟಿಯಾಗಿ ಕಿರುಚಾಡಿ. ಹಾಗಂತ ನೀವು ದೀರ್ಘಕಾಲದ ಒತ್ತಡ, ಭಾವನಾತ್ಮಕ ತೊಳಲಾಟಗಳನ್ನು ಹೊಂದಿದ್ದರೆ ಕಿರುಚಾಡುವುದರಿಂದ ಪರಿಹಾರ ಪಡೆಯಲು ಸಾಧ್ಯವಿಲ್ಲ. ಅದಕ್ಕಾಗಿ ನೀವು ತಜ್ಞರನ್ನು ಭೇಟಿ ಮಾಡಲೇಬೇಕು ಎಂಬುದನ್ನು ಮರೆಯಬೇಡಿ.

Whats_app_banner