ಕನ್ನಡ ಸುದ್ದಿ  /  ಜೀವನಶೈಲಿ  /  Pregnancy: ಮುಟ್ಟಿನ ಬಳಿಕ ಇಷ್ಟು ದಿನ ಸೇರಿದ್ರೆ ಗರ್ಭಿಣಿಯಾಗೋಲ್ವಂತೆ; ಫ್ಯಾಮಿಲಿ ಪ್ಲ್ಯಾನಿಂಗ್‌ ಮಾಡೋರಿಗೆ ಉಪಯುಕ್ತ ಮಾಹಿತಿ

Pregnancy: ಮುಟ್ಟಿನ ಬಳಿಕ ಇಷ್ಟು ದಿನ ಸೇರಿದ್ರೆ ಗರ್ಭಿಣಿಯಾಗೋಲ್ವಂತೆ; ಫ್ಯಾಮಿಲಿ ಪ್ಲ್ಯಾನಿಂಗ್‌ ಮಾಡೋರಿಗೆ ಉಪಯುಕ್ತ ಮಾಹಿತಿ

ಗರ್ಭಧಾರಣೆಯ ವಿಚಾರದಲ್ಲಿ ಹಲವು ಸಂಶಯಗಳಿರುವುದು ಸಹಜ. ಮುಟ್ಟಾದ ಎಷ್ಟನೇ ದಿನಗಳ ಒಳಗೆ ಸಂಧಿಸಿದರೆ ಮಕ್ಕಳಾಗುವುದಿಲ್ಲ, ಗರ್ಭ ಧರಿಸುವುದನ್ನು ತಪ್ಪಿಸಲು ಮುಟ್ಟಾಗಿ ಎಷ್ಟು ದಿನಗಳ ಒಳಗೆ ಲೈಂಗಿಕ ಕ್ರಿಯೆ ನಡೆಸಬೇಕು ಎಂಬಿತ್ಯಾದಿ ಗೊಂದಲಗಳಿರುತ್ತದೆ. ಈ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಗರ್ಭ ಧರಿಸುವ ವಿಚಾರಕ್ಕೆ ಸಂಬಂಧಿಸಿ ಹಲವರ ಮನದಲ್ಲಿ ಹಲವು ಪ್ರಶ್ನೆಗಳು ಮೂಡುವುದು ಸಹಜ. ಮುಟ್ಟಾದ ಎಷ್ಟನೇ ದಿನದ ನಂತರ ಸಂಧಿಸಬೇಕು, ಮುಟ್ಟಾಗುವ ದಿನಗಳ ಮೊದಲು ಹಾಗೂ ಮುಟ್ಟಿನ ದಿನಗಳ ನಂತರ ಯಾವ ದಿನಗಳಲ್ಲಿ ಸಂಧಿಸಿದರೆ ಗರ್ಭ ಧರಿಸುವುದನ್ನು ತಪ್ಪಿಸಬಹುದು ಎಂಬ ಬಗ್ಗೆ ಹಲವರಲ್ಲಿ ಪ್ರಶ್ನೆಗಳು ಇರುವುದು ಸಹಜ. ಕೆಲವರು ಮದುವೆಯಾದ ಆರಂಭದಲ್ಲೇ ಮಕ್ಕಳಾಗುವುದನ್ನು ಇಷ್ಟಪಡುವುದಿಲ್ಲ. ಅಂತಹವರು ಒಂದಿಷ್ಟು ದಿನಗಳ ಗ್ಯಾಪ್‌ ತೆಗೆದುಕೊಳ್ಳಲು ಬಯಸುತ್ತಾರೆ. ಆದರೆ ಮುಟ್ಟಾಗಿ ಎಷ್ಟನೇ ದಿನಗಳ ಒಳಗೆ ಸಂಧಿಸಿದರೆ ಮಕ್ಕಳಾಗಬಹುದು ಎಂಬ ಬಗ್ಗೆ ತಿಳಿದಿರುವುದಿಲ್ಲ. ಆ ಕಾರಣಕ್ಕೆ ಹಲವರಿಗೆ ತಿಳಿಯದೇ ಗರ್ಭ ಕಟ್ಟುವ ಸಾಧ್ಯತೆಯೂ ಇದೆ.

ಮುಟ್ಟಿನ ಚಕ್ರ ಮತ್ತು ಫಲವಂತಿಕೆ

ಋತುಚಕ್ರ ಎಂಬುದು 28 ದಿನಗಳಿಗೊಮ್ಮೆ ಬರುತ್ತದೆ. ಮುಟ್ಟಿನ ಮೊದಲ ದಿನದಿಂದ ಲೆಕ್ಕಹಾಕಿ 9ನೇ ದಿನದಿಂದ 19 ದಿನಗಳವರೆಗೆ ಮಹಿಳೆಯು ಸಂಧಿಸಿದರೆ ಮಕ್ಕಳಾಗುವ ಸಾಧ್ಯತೆ ಹೆಚ್ಚು. ಯಾಕೆಂದರೆ ಇದು ಮಹಿಳೆಗೆ ಅತ್ಯಂತ ಫಲವತ್ತಾದ ದಿನಗಳು ಎಂದು ತಜ್ಞರು ಹೇಳುತ್ತಾರೆ. ಇದನ್ನು ಫರ್ಟಿಲಿಟಿ ವಿಂಡೊ ಎಂದು ಕರೆಯುತ್ತಾರೆ.

ಈ ಸಮಯದಲ್ಲಿ ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಗರ್ಭಧರಿಸುವ ಸಾಧ್ಯತೆ ಹೆಚ್ಚಿದೆ. 28 ದಿನಗಳಿಗೊಮ್ಮೆ ಮುಟ್ಟಾಗುವುದಾದರೆ ಈ ಚಕ್ರದ ಮಧ್ಯದಲ್ಲಿ ಅಂಡೋತ್ಪತ್ತಿ ಸಂಭವಿಸುತ್ತದೆ. ಅಂದರೆ ಚಕ್ರದ ಮಧ್ಯದಲ್ಲಿ 14ನೇ ದಿನದಂದು ಅಂಡಾಶಯಗಳು ಮೊಟ್ಟೆಯನ್ನು ಬಿಡುಗಡೆ ಮಾಡುತ್ತವೆ. ಅಂಡೋತ್ಪತ್ತಿಯ ಮೊದಲ ಹಾಗೂ ಕೊನೆಯ ನಾಲ್ಕು ದಿನಗಳನ್ನು ಹೊರತು ಪಡಿಸಿ ಉಳಿದ ದಿನಗಳನ್ನು ಫಲವಂತಿಕೆಗೆ ಸೂಕ್ತ ದಿನಗಳು ಎಂದು ಪರಿಗಣಿಸಲಾಗುತ್ತದೆ. ʼಆ ಕಾರಣಕ್ಕೆ ಈ ಸಮಯದಲ್ಲಿ ಯಾವುದೇ ಸುರಕ್ಷತೆಯನ್ನು ಬಳಸದೇ ಲೈಂಗಿಕಕ್ರಿಯೆಯಲ್ಲಿ ತೊಡಗಿದರೆ ಗರ್ಭ ಧರಿಸುವ ಸಾಧ್ಯತೆ ಹೆಚ್ಚುʼ ಎಂದು ತಜ್ಞರು ಹೇಳುತ್ತಾರೆ.

ಟ್ರೆಂಡಿಂಗ್​ ಸುದ್ದಿ

ಇದನ್ನೂ ಓದಿ: ಮಹಿಳೆಯರಲ್ಲಿ ಫಲವಂತಿಕೆ ಸಮಸ್ಯೆ; ಗರ್ಭಧಾರಣೆ ಪ್ರಯತ್ನದಲ್ಲಿ ಈ 10 ಪೋಷಕಾಂಶಗಳು ದೇಹ ಸೇರಲಿ

ಇದರರ್ಥ ಮುಟ್ಟಿನ ಆರಂಭದ ದಿನಗಳ 8 ದಿನಗಳವರೆಗೆ ಹಾಗೂ 20 ರಿಂದ 28 ದಿನಗಳವರೆಗೆ ಸಂಧಿಸಿದರೆ ಸಾಮಾನ್ಯವಾಗಿ ಗರ್ಭ ಧರಿಸುವ ಸಾಧ್ಯತೆ ಕಡಿಮೆ ಇರುತ್ತದೆ. ಈ ಎರಡು ಅವಧಿಯಲ್ಲಿ ಅಸುರಕ್ಷಿತ ಲೈಂಗಿನ ಕ್ರಿಯೆಯಲ್ಲಿ ತೊಡಗಿದರೂ ಗರ್ಭ ಧರಿಸುವುದು ಕಡಿಮೆ. ಆದರೂ ಕೂಡ ಅಸುರಕ್ಷಿತ ಲೈಂಗಿಕ ಕ್ರಿಯೆಯಲ್ಲಿ ತೊಡಗವುದು ಶೇ 100 ರಷ್ಟು ಸುರಕ್ಷಿತವಲ್ಲ ಎಂಬುದು ವೈದ್ಯರ ಅಭಿಪ್ರಾಯ.

ಋತುಚಕ್ರವು ಮಹಿಳೆಯಿಂದ ಮಹಿಳೆಗೆ ಭಿನ್ನವಾಗಿರಬಹುದು. ಕೆಲವರಿಗೆ 21 ದಿನಗಳಿಗೊಮ್ಮೆ ಮುಟ್ಟಾಗಬಹುದು. ಕೆಲವರಿಗೆ 28 ಕ್ಕೆ ಸರಿಯಾಗಿ ಆದರೆ ಇನ್ನೂ ಕೆಲವರಿಗೆ 35 ದಿನಗಳಿಗೊಮ್ಮೆ ಮುಟ್ಟಾಗಬಹುದು. ಋತುಚಕ್ರದ ಅವಧಿಗೆ ಅವಲಂಬಿಸಿ ಪ್ರತಿ ಮಹಿಳೆಗೆ ಫರ್ಟಿಲಿಟಿ ವಿಂಡೋ ಕೂಡ ಭಿನ್ನವಾಗಿರುತ್ತದೆ.

ಮುಟ್ಟಾದ ಎಷ್ಟು ದಿನಗಳ ನಂತರ ಅಂಡೋತ್ಪತ್ತಿಯಾಗುತ್ತದೆ

ಅಂಡೋತ್ಪತ್ತಿ ಸಮಯದಲ್ಲಿ ಅಂಡಾಶಯಗಳು ಅಂಡಾಣುವನ್ನು ಬಿಡುಗಡೆ ಮಾಡುತ್ತವೆ. ಒಂದು ಅಂಡಾಣು ಸಾಮಾನ್ಯವಾಗಿ 6 ರಿಂದ 24 ಗಂಟೆ ಕಾಲ ಜೀವಂತವಿರುತ್ತದೆ. ಒಂದು ವೀರ್ಯವು ಮಹಿಳೆಯ ದೇಹದಲ್ಲಿ 48 ಗಂಟೆಗಳ ಕಾಲ ಜೀವಂತವಾಗಿರುತ್ತದೆ.

ಕೆಲವು ಸಂದರ್ಭಗಳಲ್ಲಿ ವೀರ್ಯವು ಮಹಿಳೆಯ ದೇಹದಲ್ಲಿ ಏಳು ದಿನಗಳವರೆಗೆ ಉಳಿದಿರುವುದೂ ಇದೆ ಆದರೆ ಫರ್ಟಿಲಿಟಿ ವಿಂಡೊ ಬಗ್ಗೆ ಖಚಿತವಾಗಿ ಹೇಳಲು ಸಾಧ್ಯವಾಗುವುದಿಲ್ಲ. ಚಕ್ರದ ಮಧ್ಯದಲ್ಲಿ ಅಂಡೋತ್ಪತ್ತಿ ಸಂಭವಿಸುತ್ತದೆಯಾದರೂ, ಸಾಂದರ್ಭಿಕವಾಗಿ, ಮಹಿಳೆಯು ತನ್ನ ಋತುಚಕ್ರದ ಆರಂಭದಲ್ಲಿ ಅಥವಾ ತಡವಾಗಿ ಅಂಡೋತ್ಪತ್ತಿ ಮಾಡಬಹುದು. ಹಾಗಿದ್ದಾಗ ಫರ್ಟಿಲಿಟಿ ವಿಂಡೋವನ್ನು ಊಹಿಸಲು ಸಾಧ್ಯವಿಲ್ಲ. ಫರ್ಟಿಲಿಟಿ ವಿಂಡೋ ಬಗ್ಗೆ ತಿಳಿದುಕೊಳ್ಳಬೇಕು ಎಂದರೆ ಮಹಿಳೆ ಋತುಚಕ್ರದ ದಿನಗಳನ್ನು ಟ್ರ್ಯಾಕ್‌ ಮಾಡಬಹುದು. ಸಾಮಾನ್ಯವಾಗಿ ಕ್ಯಾಲೆಂಡರ್‌ನಲ್ಲಿ ಅಥವಾ ನಿಮ್ಮ ಬಳಿ ಇರುವ ರಿಮೈಂಡರ್‌ ಆಪ್‌ನಲ್ಲಿ ಗುರುತು ಹಾಕಿಕೊಂಡಿರಬಹುದು. ಇದರ ಬಗ್ಗೆ ನಿಖರವಾಗಿ ತಿಳಿಯಲು 9 ರಿಂದ 12 ತಿಂಗಳವರೆಗಿನ ಡೇಟಾವನ್ನು ತಿಳಿದಿರಬೇಕು. ಆದರೆ ನೀವು ಈ ಬಗ್ಗೆ ಶೇ 100 ಖಚಿತವಾಗಿರಲು ಸಾಧ್ಯವಿಲ್ಲ.

ನೀವು ನಿಯಮಿತವಾಗಿ ಮುಟ್ಟಿನ ಅವಧಿಯನ್ನು ಹೊಂದಿರುವವರಾಗಿದ್ದರೆ, ಫಲವತ್ತಾದ ವಿಂಡೋವನ್ನು ಊಹಿಸಲು ನಿಮಗೆ ಸುಲಭವಾಗಬಹುದು. ನೀವು ಅನಿಯಮಿತ ಋತುಚಕ್ರವನ್ನು ಹೊಂದಿದ್ದರೆ, ಅಸುರಕ್ಷಿತ ಮತ್ತು ಗರ್ಭಧಾರಣೆಯನ್ನು ತಪ್ಪಿಸಲು ಸುರಕ್ಷಿತ ಅವಧಿಯನ್ನು ಊಹಿಸಲು ಯಾವುದೇ ಮಾರ್ಗವಿಲ್ಲ.

ಇದನ್ನೂ ಓದಿ: Sex Hormones: ಲೈಂಗಿಕ ಹಾರ್ಮೋನುಗಳ ಅಸಮತೋಲನ ನಿವಾರಣೆಗೆ ಹೀಗಿರಲಿ ಆಹಾರಕ್ರಮ, ಜೀವನಶೈಲಿ

ಸುರಕ್ಷಿತ ಲೈಂಗಿಕ ಅವಧಿ, ಗರ್ಭನಿರೋಧಕ ಮತ್ತು ಋತುಚಕ್ರ

ಮಗು ಬೇಕು ಎಂದಿರುವವರು ಫರ್ಟಿಲಿಟಿ ವಿಂಡೊ ಅವಧಿಯಲ್ಲಿ ಲೈಂಗಿಕ ಕ್ರಿಯೆಯನ್ನು ನಡೆಸಬಹುದು. ಆದರೆ ಅನಗತ್ಯ ಗರ್ಭಧಾರಣೆಯನ್ನು ತಪ್ಪಿಸಲು ಗರ್ಭನಿರೋಧಕಗಳನ್ನು ಬಳಸುವುದು ಮುಖ್ಯವಾಗುತ್ತದೆ. ಅಂಡೋತ್ಪತ್ತಿಯನ್ನು ಊಹಿಸಲು ಮತ್ತು ದಿನಾಂಕ ಬಗ್ಗೆ ಶೇ 100 ಖಚಿತವಾಗಿರಲು ಯಾವುದೇ ನಿಖರವಾದ ವಿಧಾನಗಳಿಲ್ಲದ ಕಾರಣ, ಮಗು ಬೇಡ ಎಂದಾದರೆ ಗರ್ಭ ನಿರೋಧಕಗಳನ್ನು ಬಳಸುವುದನ್ನು ತಪ್ಪಿಸಬಾರದು.

ಕೆಲವರು ಗರ್ಭಧರಿಸುವುದನ್ನು ತಪ್ಪಿಸಲು ಫರ್ಟಿಲಿಟಿ ವಿಂಡೊ ಅವಧಿಯಲ್ಲಿ ಲೈಂಗಿಕ ಕ್ರಿಯೆ ನಡೆಸಿದಾಗ ಹಿಂತೆಗೆದುಕೊಳ್ಳುವ ವಿಧಾನವನ್ನು ಸಹ ಪ್ರಯತ್ನಿಸುತ್ತಾರೆ. ಪೂರ್ವ ಸ್ಖಲನದ ಸಮಯದಲ್ಲಿ ವೀರ್ಯವು ಮಹಿಳೆಯ ದೇಹವನ್ನು ಪ್ರವೇಶಿಸುವುದರಿಂದ ಅದು ಅಪಾಯಕಾರಿ. ಇದರಿಂದಲೂ ಮಕ್ಕಳಾಗುವ ಸಾಧ್ಯತೆ ಇದೆ.

ಅನೇಕ ಮಹಿಳೆಯರು ಲ್ಯುಟೈನೈಜಿಂಗ್ ಹಾರ್ಮೋನ್ (LH) ಕಿಟ್ ಅನ್ನು ಬಳಸಿಕೊಂಡು ತಮ್ಮ ಅಂಡೋತ್ಪತ್ತಿಯನ್ನು ಟ್ರ್ಯಾಕ್ ಮಾಡುತ್ತಾರೆ. ಅಂಡೋತ್ಪತ್ತಿಯ ಕೆಲವು ಇತರ ಲಕ್ಷಣಗಳು ಗರ್ಭಕಂಠದ ಲೋಳೆಯ ಪರೀಕ್ಷೆ ಅಥವಾ ನಿಮ್ಮ ದೇಹದ ಉಷ್ಣತೆಯ ಏರಿಕೆಗೆ ಸಾಕ್ಷಿಯಾಗಿದೆ. ಆದರೆ ಇವು ನಿಖರವಾದ ವಿಧಾನಗಳಲ್ಲ.

ಗರ್ಭ ಧರಿಸಲು ಬಯಸದೇ ಇರುವವರು ಲೈಂಗಿಕ ಕ್ರಿಯೆಯ ಸಮಯದಲ್ಲಿ ಕಾಂಡೋಮ್‌ಗಳನ್ನು ಬಳಸುವುದು, ಜನನ ನಿಯಂತ್ರಣ ಮಾತ್ರೆ ಸೇವಿಸುವುದು ಹಾಗೂ ಇತರ ಗರ್ಭನಿರೋಧಕ ವಿಧಾನಗಳನ್ನು ಅನುಸರಿಸಬಹುದು.