ಕನ್ನಡ ಸುದ್ದಿ  /  ಜೀವನಶೈಲಿ  /  Sleeping Disorder: ಬಾಯಿ ತೆರೆದು ಮಲಗುವ ಅಭ್ಯಾಸ ನಿಮಗಿದ್ಯಾ? ಇದು ಅನಾರೋಗ್ಯದ ಲಕ್ಷಣ, ತಪ್ಪಿಯೂ ನಿರ್ಲಕ್ಷ್ಯ ಮಾಡ್ಬೇಡಿ

Sleeping Disorder: ಬಾಯಿ ತೆರೆದು ಮಲಗುವ ಅಭ್ಯಾಸ ನಿಮಗಿದ್ಯಾ? ಇದು ಅನಾರೋಗ್ಯದ ಲಕ್ಷಣ, ತಪ್ಪಿಯೂ ನಿರ್ಲಕ್ಷ್ಯ ಮಾಡ್ಬೇಡಿ

ಮಲಗುವಾಗ ಹಲವರು ಹಲವು ಭಂಗಿಯನ್ನು ಅನುಸರಿಸುತ್ತಾರೆ. ಕೆಲವರಿಗೆ ಬಾಯಿ ತೆರದು ಮಲುಗುವ ಅಭ್ಯಾಸ ಇರುತ್ತದೆ. ಆದರೆ ಈ ರೀತಿ ಮಲಗುವುದರಿಂದ ಆರೋಗ್ಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎನ್ನುತ್ತಾರೆ ತಜ್ಞರು. ಇದಕ್ಕೆ ಕಾರಣವೇನು, ಬಾಯಿ ತೆರೆದು ಮಲಗುವುದರಿಂದ ಏನೆಲ್ಲಾ ಸಮಸ್ಯೆಗಳು ಎದುರಾಗುತ್ತವೆ ನೋಡಿ.

ಬಾಯಿ ತೆರೆದು ಮಲಗುವ ಅಭ್ಯಾಸ ನಿಮಗಿದ್ಯಾ? ಇದು ಅನಾರೋಗ್ಯದ ಲಕ್ಷಣ
ಬಾಯಿ ತೆರೆದು ಮಲಗುವ ಅಭ್ಯಾಸ ನಿಮಗಿದ್ಯಾ? ಇದು ಅನಾರೋಗ್ಯದ ಲಕ್ಷಣ

ಮಲಗುವಾಗ ನೇರವಾಗಿ ಮಲಗುವುದು, ಅಡ್ಡಕ್ಕೆ ಮಲಗುವುದು, ಕಾಲು ಚಾಚಿ ಮಲಗುವುದು, ಕಣ್ಣು ಬಿಟ್ಟುಕೊಂಡು ಮಲುಗುವುದು, ಬಾಯಿ ತೆರೆದುಕೊಂಡು ಮಲಗುವುದು ಹೀಗೆ ಹಲವು ಭಂಗಿಗಳನ್ನು ಅನುಸರಿಸುತ್ತೇವೆ. ಆದರೆ ಬಾಯಿ ತೆರೆದುಕೊಂಡು ಮಲಗುವ ಅಭ್ಯಾಸ ಹಲವರಿಗಿರುತ್ತದೆ. ಆದರೆ ತಜ್ಞರ ಪ್ರಕಾರ ಈ ರೀತಿ ಬಾಯಿ ತೆರೆದುಕೊಂಡು ಮಲಗುವುದು ಆರೋಗ್ಯಕರವಲ್ಲ. ಏಕೆಂದರೆ ಇದು ರಾತ್ರಿ ವೇಳೆ ಅಸಮರ್ಪಕ ಉಸಿರಾಟವನ್ನು ಸೂಚಿಸುತ್ತದೆ ಹಾಗೂ ಇದು ವಿವಿಧ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು. ರಾತ್ರಿ ಮಲಗಿದ್ದಾಗ ಬಾಯಿಯಿಂದ ಉಸಿರಾಡುವವರು ಸ್ಲೀಪ್‌ ಅಮ್ನಿಯಾದೊಂದಿಗೆ ನಿಕಟ ಸಂಬಂಧ ಹೊಂದಿರುತ್ತಾರೆ ಎಂದು ಹೇಳಲಾಗುತಯ್ತದೆ. ಈ ಸಮಸ್ಯೆಗೆ ಚಿಕಿತ್ಸೆ ನೀಡದೇ ಬಿಟ್ಟರೆ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯರಕ್ತನಾಳದ ಕಾಯಿಲೆಗಳು ಸೇರಿದಂತೆ ಹಲವು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಟ್ರೆಂಡಿಂಗ್​ ಸುದ್ದಿ

ಬಾಯಿಯಿಂದ ಉಸಿರಾಡುವವರಿಗಿರುವ ರೋಗಲಕ್ಷಣಗಳು

ಮಲಗುವಾಗ ಸೇರಿದಂತೆ ಉಳಿದ ಸಮಯದಲ್ಲೂ ಬಾಯಿಯಿಂದ ಉಸಿರಾಡುವುದು ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ವಯಸ್ಕರಲ್ಲಿ ಈ ರೀತಿ ಬಾಯಿಯಿಂದ ಉಸಿರಾಡುವ ಸಮಸ್ಯೆ ಇದ್ದರೆ ಬಾಯಿ ಒಣಗುವುದು, ಉಸಿರಿನ ದುರ್ನಾತ, ಬೆಳಗಿನ ಹೊತ್ತು ತಲೆನೋವು ಕಾಣಿಸುವುದು ಮತ್ತು ಮೆದುಳಿನಲ್ಲಿ ಅಸ್ಪಷ್ಟತೆ ಇಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ರೋಗಲಕ್ಷಣಗಳು ರಾತ್ರಿ ಕಡಿಮೆ ನಿದ್ದೆ ಹಾಗೂ ಕಳಪೆ ನಿದ್ದೆಯನ್ನು ಸೂಚಿಸುತ್ತವೆ. ಇದರಿಂದ ಆ ವ್ಯಕ್ತಿಗಳಲ್ಲಿ ದಣಿದ ಭಾವನೆ ಉಂಟಾಗುತ್ತದೆ. ಮಕ್ಕಳು ಬಾಯಿಯಿಂದ ಉಸಿರಾಡುತ್ತಿದ್ದರೆ ಹಲ್ಲುಗಳು ಬೆಂಡಾಗುವುದು, ಮುಖ ವಿರೂಪವಾಗುವುದು, ಬೆಳವಣಿಗೆ ಕುಂಠಿತವಾಗುವುದು ಇಂತಹ ಸಮಸ್ಯೆಗಳು ಎದುರಾಗಬಹುದು. ಇದು ಇತರ ಕಾಯಿಲೆಗಳ ರೋಗಲಕ್ಷಣಗಳನ್ನು ಸಹ ಉಲ್ಬಣಗೊಳಿಸಬಹುದು.

ಬಾಯಿಯಿಂದ ಉಸಿರಾಡಲು ಕಾರಣಗಳೇನು?

ಹೆಚ್ಚಿನ ಸಂದರ್ಭಗಳಲ್ಲಿ ಬಾಯಿಯಿಂದ ಉಸಿರಾಟ ನಡೆಸಲು ಪ್ರಮುಖ ಕಾರಣ ಮೂಗಿನ ಶ್ವಾಸನಾಳ. ವಾಯುಮಾರ್ಗವು ಕಿರಿದಾಗಿದ್ದು ಅಥವಾ ನಿರ್ಬಂಧಿಸಿರಬಹುದು. ಮೂಗಿನಲ್ಲಿ ಉಸಿರಾಟಡಲು ಅಡಚಣೆ ಉಂಟಾದಾಗ ಬಾಯಿಯಿಂದ ಉಸಿರಾಡಬೇಕಾಗುತ್ತದೆ . ಆಮ್ಲಜನಕದ ಕೊರತೆಯು ಬಾಯಿಯಿಂದ ಉಸಿರಾಡುವುದನ್ನು ಕಷ್ಟವಾಗಿಸಬಹುದು. ಅದೇನೆ ಇದ್ದರೂ ಮೂಗಿನಲ್ಲಿ ಉಸಿರಾಡಲು ತೊಂದರೆ ಇರುವವರು ಬಾಯಿಯಿಂದ ಉಸಿರಾಟ ನಡೆಸುತ್ತಾರೆ.

ಬಾಯಿಯ ಉಸಿರಾಡುವುದನ್ನು ನಿಲ್ಲಿಸಲು ಚಿಕಿತ್ಸೆ

ಬಾಯಿಯಿಂದ ಉಸಿರಾಟ ಮಾಡುವುದನ್ನು ತಡೆಯಲು ಚಿಕಿತ್ಸೆಯ ನೀಡಲು ಅದು ಯಾವ ಕಾರಣದಿಂದ ಬಾಯಲ್ಲಿ ಉಸಿರಾಡುತ್ತಿದ್ದಾರೆ ಎಂಬುದ ಮೇಲೆ ಅವಲಂಬಿತವಾಗಿದೆ. ಶೀತ ಮತ್ತು ಅಲರ್ಜಿಗಳಿಂದ ಮೂಗು ಬ್ಲಾಕ್‌ ಆಗಿದ್ದರೆ ಚಿಕಿತ್ಸೆ ನೀಡಬಹುದು.

ಸಿಪಿಎಪಿ ಯಂತ್ರ: ಈ ಯಂತ್ರಗಳು ವಾಯುಮಾರ್ಗದ ಒತ್ತಡವನ್ನು ನಿರ್ವಹಿಸುತ್ತವೆ. ನಾಲಿಗೆ ಮತ್ತು ಗಂಟಲಿನ ಸಮಸ್ಯೆಗಳು ಉಲ್ಬಣವಾಗದಂತೆ ತಡೆಯುತ್ತದೆ.

ಮೌತ್‌ ಟ್ಯಾಪಿಂಗ್‌: ಈ ವಿಧಾನವು ತುಟಿಗಳನ್ನು ಮುಚ್ಚುತ್ತದೆ. ಬಾಯಿಯಿಂದ ಉಸಿರಾಡುವುದನ್ನು ತಡೆಯುತ್ತದೆ.

ಆರ್ಥೊಂಡಾಂಟಿಕ್ಸ್‌: ಬ್ರೇಸ್‌ಗಳು ಮತ್ತು ಅಲೈನರ್‌ಗಳು ದವಡೆ ಮತ್ತು ಹಲ್ಲುಗಳನ್ನು ಮರುಸ್ಥಾಪಿಸಬಹುದು ಹಾಗೂ ಗಾಳಿಯ ಹರಿವನ್ನು ಸುಧಾರಿಸಬಹುದು.

ಮೈಫಂಕ್ಷನಲ್‌ ಥೆರಪಿ: ಗಂಟಲಿನ ಸ್ನಾಯುಗಳಿಗೆ ಶಾರೀರಿಕ ಚಿಕಿತ್ಸೆಯು ಶ್ವಾಸನಾಳ ಅಥವಾ ವಾಯುಮಾರ್ಗವನ್ನು ತೆರೆದಿಡಲು ಸಹಾಯ ಮಾಡುತ್ತದೆ.

ಬಾಯಿಯ ಮೂಲಕ ಉಸಿರಾಡುವುದು ಗಮನಾರ್ಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಬಾಯಿ ತೆರೆದು ಮಲಗುವ ನಿಮ್ಮ ಅಭ್ಯಾಸ ಕೂಡ ಆರೋಗ್ಯಕ್ಕೆ ಖಂಡಿತ ಒಳ್ಳೆಯದಲ್ಲ. ಏಕೆಂದರೆ ಇದು ರಾತ್ರಿ ವೇಳೆ ಉಸಿರಾಟದ ಸಮಸ್ಯೆ ಉಂಟು ಮಾಡುತ್ತದೆ. ಇದರಿಂದ ವಿವಿಧ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ವಸಡಿನ ಸಮಸ್ಯೆ, ಹಲ್ಲಿನ ದಂತಕವಚ ಇಂತಹ ಬಾಯಿಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು. ಅಲರ್ಜಿ ಹಾಗೂ ಬೊಜ್ಜಿನ ಸಮಸ್ಯೆ ಇರುವವರು ಇದರಿಂದ ಹೆಚ್ಚಿನ ಸಮಸ್ಯೆಗಳನ್ನು ಎದುರಿಸುತ್ತಾರೆ.

ಹಾಗಾಗಿ ನಿಮಗೂ ಬಾಯಿ ತೆರೆದು ಮಲಗುವ ಅಭ್ಯಾಸ ಇದ್ದರೆ ನೀವು ತಜ್ಞರ ವೈದ್ಯರನ್ನು ಸಂರ್ಪಕಿಸಿ ಸಲಹೆ ಪಡೆಯುವುದು ಉತ್ತಮ.

ವಿಭಾಗ