Sleep Pattern: ಬೆಳಿಗ್ಗೆ ಬೇಗ ಏಳುವುದು, ರಾತ್ರಿ ತಡವಾಗಿ ಮಲಗುವುದು, ಯಾವ ಅಭ್ಯಾಸ ಉತ್ತಮ; ತಜ್ಞರು ಏನಂತಾರೆ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Sleep Pattern: ಬೆಳಿಗ್ಗೆ ಬೇಗ ಏಳುವುದು, ರಾತ್ರಿ ತಡವಾಗಿ ಮಲಗುವುದು, ಯಾವ ಅಭ್ಯಾಸ ಉತ್ತಮ; ತಜ್ಞರು ಏನಂತಾರೆ ನೋಡಿ

Sleep Pattern: ಬೆಳಿಗ್ಗೆ ಬೇಗ ಏಳುವುದು, ರಾತ್ರಿ ತಡವಾಗಿ ಮಲಗುವುದು, ಯಾವ ಅಭ್ಯಾಸ ಉತ್ತಮ; ತಜ್ಞರು ಏನಂತಾರೆ ನೋಡಿ

ಕೆಲವರಿಗೆ ಬೆಳಿಗ್ಗೆ ಬೇಗ ಏಳುವುದು ಇಷ್ಟವಾದರೆ, ಇನ್ನೂ ಕೆಲವರಿಗೆ ರಾತ್ರಿ ತಡವಾಗಿ ಮಲಗುವುದು ಇಷ್ಟವಾಗುತ್ತದೆ. ಹೀಗೆ ಮಲಗುವವರಲ್ಲಿ ವರ್ತನೆಗಳೂ ಭಿನ್ನವಾಗಿರುತ್ತದೆ ಎನ್ನುತ್ತದೆ ಅಧ್ಯಯನ. ಹಾಗಾದರೆ ಮಲಗುವ ಈ ವಿಧಾನದಲ್ಲಿ ಯಾವುದು ಉತ್ತಮ? ನೀವು ಅನುಸರಿಸುತ್ತಿರುವ ಕ್ರಮ ಸರಿ ಇದೆಯೇ? ಗಮನಿಸಿ.

ಬೆಳಿಗ್ಗೆ ಬೇಗ ಏಳುವುದು, ರಾತ್ರಿ ತಡವಾಗಿ ಮಲಗುವುದು ಯಾವುದು ಉತ್ತಮ?
ಬೆಳಿಗ್ಗೆ ಬೇಗ ಏಳುವುದು, ರಾತ್ರಿ ತಡವಾಗಿ ಮಲಗುವುದು ಯಾವುದು ಉತ್ತಮ?

ಈ ಜಗತ್ತಿನಲ್ಲಿ ಎರಡು ವಿಧದ ಜನರಿದ್ದಾರೆ. ಬೆಳಿಗ್ಗೆ ಎದ್ದಾಕ್ಷಣ ಹಕ್ಕಿಗಳ ಕಲರವ ಕೇಳಿ ಸಂತಸ ಪಡುವ ಒಂದು ವರ್ಗವಾದರೆ, ಇನ್ನೊಂದು ವರ್ಗ ಹಕ್ಕಿಗಳ ಕೂಗಿಗೆ ಕಿವಿ ಮುಚ್ಚಿಕೊಳ್ಳುತ್ತದೆ.

ಅರ್ಲಿ ಬರ್ಡ್‌(ಬೆಳಿಗ್ಗೆ ಬೇಗ ಏಳುವವರು) ಗಳನ್ನು ಮಾರ್ನಿಂಗ್‌ ಲಾರ್ಕ್ಸ್‌ ಎಂದೂ ಕರೆಯುತ್ತಾರೆ. ಇವರು ಬೆಳಿಗ್ಗೆ ಬೇಗ ಏಳುವುದನ್ನು ಆನಂದಿಸುತ್ತಾರೆ ಮತ್ತು ಇವರು ಸಂಜೆಯ ವೇಳೆ ಮಂಕಾಗುತ್ತಾರೆ.

ಇನ್ನೊಂದು ವರ್ಗದ ಜನರಿಗೆ ʼರಾತ್ರಿ ಗೂಬೆʼ ಎಂದು ಕರೆಯಲಾಗುತ್ತದೆ. ಅವರು ಬೆಳಿಗ್ಗೆ ತಡವಾಗಿ ಏಳುತ್ತಾರೆ. ಅಲ್ಲದೆ ಅವರು ಸಂಜೆಯ ಮೇಲೆ ಹೆಚ್ಚು ಉತ್ಪಾದಕತೆಯಿಂದ ಕೆಲಸ ಮಾಡುತ್ತಾರೆ.

ಈ ಬಗ್ಗೆ ವಿವರಿಸುವ ಅಮೆರಿಕ ಮೂಲದ ವಿಜ್ಞಾನಿ ಮಿಶೆಲ್‌ ವರ್ಲಿ ʼನೈಟ್‌ ಔಲ್‌ ಅಥವಾ ರಾತ್ರಿ ಗೂಬೆʼ ಪದವು ನಿಜವಾಗಲೂ ಪ್ರಾಣಿ ಪ್ರೇರಿತವಾಗಿದೆ ಎಂದು ವಿವರಿಸುತ್ತಾರೆ. ರಾತ್ರಿಯಲ್ಲಿ ಹೆಚ್ಚು ಚಟುವಟಿಕೆಯಿಂದಿರುವ ಗೂಬೆಗಳಂತೆ ಅವರು ಹಗಲಿನಲ್ಲಿ ಮಲಗಲು ಇಷ್ಟ ಪಡುತ್ತಾರೆ ಎಂದು ಅವರು ವಿವರಿಸುತ್ತಾರೆ.

ಅರ್ಲಿ ಬರ್ಡ್‌ ಎನ್ನುವುದು 17ನೇ ಶತಮಾನದ ಗಾದೆಯ ಮೂಲವನ್ನು ಹೊಂದಿದೆ ಎಂದು ವರ್ಲಿ ಹೇಳುತ್ತಾರೆ.

ಅದೇನೆ ಇರಲಿ ಅರ್ಲಿ ಬರ್ಡ್‌ (ಬೆಳಿಗ್ಗೆ ಬೇಗ ಏಳುವವರು) ಅಥವಾ ನೈಟ್‌ ಔಲ್‌ (ರಾತ್ರಿ ತಡವಾಗಿ ಮಲಗುವ) ನಂತೆ ಮಲಗುವ ಮಾದರಿಗಳು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದೇ? ಈ ಬಗ್ಗೆ ತಜ್ಞರು ಏನಂತಾರೆ ನೋಡಿ.

ಏನಿದು ಅರ್ಲಿ ಬರ್ಡ್‌?

ಇವರು ರಾತ್ರಿ ಬೇಗ ಮಲಗುತ್ತಾರೆ

* ಬೆಳಿಗ್ಗೆ ಬೇಗ ಎದ್ದೇಳುತ್ತಾರೆ

* ಬೆಳಗಿನ ವೇಳೆ ಹೆಚ್ಚು ಕ್ರಿಯಾಶೀಲರಾಗಿರುತ್ತಾರೆ

* ಮಧಾಹ್ನ ಕಳೆದ ಮೇಲೆ ಹಾಗೂ ಸಂಜೆಯ ವೇಳೆ ಇವರಲ್ಲಿ ಶಕ್ತಿ ಕುಂಠಿತವಾಗುತ್ತದೆ

* ರಾತ್ರಿ ಬಹಳಷ್ಟು ಸಮಯದವರೆಗೆ ಎದ್ದಿರಲು ಇವರಿಂದ ಸಾಧ್ಯವಾಗುವುದಿಲ್ಲ.

ಸಾಮಾನ್ಯ ನಿಯಮದಂತೆ ಅರ್ಲಿ ಬರ್ಡ್‌ಗಳು ನೈಟ್‌ ಔಲ್‌ಗಿಂತ ಸಮಾಜದೊಂದಿಗೆ ಹೆಚ್ಚು ಹೊಂದಿಕೊಳ್ಳುತ್ತವೆ. ಬೆಳಿಗ್ಗೆ ಬೇಗ ಏಳುವ ಅಭ್ಯಾಸ ಹೊಂದಿರುವವರು ಹಗಲಿನ ವೇಳೆ ನಿಗದಿತ ವೇಳಾಪಟ್ಟಿಯಲ್ಲಿ ಕಾರ್ಯ ಸಾಧಿಸಲು ಸುಲಭವಾದ ಸಮಯವನ್ನು ಹೊಂದಿರುತ್ತಾರೆ. ಇದು ಕೆಲಸದ ಸ್ಥಳದಲ್ಲಿ ಕ್ರಿಯಾಶೀಲತೆ ಹೆಚ್ಚಿಸಲು ಸಹಾಯ ಮಾಡುತ್ತದೆ. 2012 ಕೈಗೊಂಡ ಸಂಶೋಧನೆಯ ಪ್ರಕಾರ ಬೆಳಿಗ್ಗೆ ಬೇಗ ಎದ್ದೇಳುವ ಅಭ್ಯಾಸ ಇದ್ದವರಲ್ಲಿ ಧನಾತ್ಮಕ ಭಾವನೆಗಳು ಇರುತ್ತವೆ. ನಮ್ಮ ನಿದ್ದೆಯ ಮಾದರಿಯು ನಮ್ಮ ಮನಸ್ಸಿನಲ್ಲಿ ಸಕಾರಾತ್ಮಕ ಭಾವನೆಗಳು ಮೂಡಲು ಸಹಾಯ ಮಾಡುವುದು ಸುಳ್ಳಲ್ಲ. ಅಲ್ಲದೆ ಇವು ಧನಾತ್ಮಕ ಭಾವನೆಗಳು ಹುಟ್ಟಲು ಸಹಾಯ ಮಾಡುತ್ತದೆ.

ಏನಿದು ನೈಲ್‌ ಔಲ್‌?

* ರಾತ್ರಿ ತಡವಾಗಿ ಮಲಗುವುದು

* ಮಲಗೇ ಇರಲು ಇಷ್ಟ ಪಡುವುದು

* ಬೆಳಗಿನ ಆರಂಭದಲ್ಲಿ ಆಲಸಿಯಾಗಿರುವುದು

* ರಾತ್ರಿ ಸಮಯದಲ್ಲಿ ಚಟುವಟಿಕೆಯಿಂದಿರುವುದು

* ಬೆಳಿಗ್ಗೆ ಬೇಗ ಎದ್ದಾಗ ಸುಸ್ತಾದಂತೆ ಅನ್ನಿಸುವುದು

* ಬೆಳಗಿನ ವೇಳೆ ಅಲರ್ಟ್‌ ಆಗಿರಲು ಕಷ್ಟ ಪಡುವುದು

ರಾತ್ರಿ ತಡವಾಗಿ ಮಲಗುವುದು ಅಥವಾ ಈ ನೈಟ್‌ ಔಲ್‌ಗಳು ಅಥವಾ ರಾತ್ರಿ ತಡವಾಗಿ ಮಲಗುವುದರಿಂದ ಕೆಲವು ಅನಾನುಕೂಲಗಳಿವೆ. ಶಾಲೆ, ಕೆಲಸ ಎಲ್ಲವೂ 9 ರಿಂದ 5 ಗಂಟೆಗಳ ಅವಧಿಯಲ್ಲಿ ನಡೆಯುವ ಕಾರಣ ಸಮಾಜವ ವೇಳಾಪಟ್ಟಿಯು ಹಾಗೆಯೇ ಇದೆ. ಇದು ತಡವಾಗಿ ಏಳುವವರಿಗೆ ತೊಂದರೆ ಉಂಟು ಮಾಡಬಹುದು. ಇವರು ಕೆಲಸ ಅಥವಾ ಶಾಲೆಯ ವೇಳಾಪಟ್ಟಿಗೆ ಹೊಂದಿಕೊಳ್ಳಲು ಹೆಣಗಾಡಬಹುದು.

2019ರ ಅಧ್ಯಯನದ ಪ್ರಕಾರ ರಾತ್ರಿ ತಡವಾಗಿ ಮಲಗುವವರಲ್ಲಿ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಚಯಾಪಚಯ ಸಮಸ್ಯೆ ಸೇರಿದಂತೆ ಇನ್ನೂ ಹಲವು ಸಮಸ್ಯೆಗಳು ಎದುರಾಗಬಹುದು.

ಅದೆಲ್ಲದರೊಂದಿಗೆ ಸರಿಯಾದ ಪ್ರಮಾಣದಲ್ಲಿ ನಿದ್ದೆ ಮಾಡುವುದು ಬಹಳ ಅವಶ್ಯ. ನಿದ್ದೆಯಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ. ಒಂದು ದಿನದಲ್ಲಿ ಕನಿಷ್ಠ 8 ಗಂಟೆಗಳ ಕಾಲ ನಿದ್ದೆ ಮಾಡಬೇಕು.

Whats_app_banner