ಪದೇ ಪದೇ ಬೆನ್ನುನೋವು ಕಾಡುತ್ತಾ? ಬೆನ್ನುಮೂಳೆಯ ಆರೋಗ್ಯ ಕಾಪಾಡಿಕೊಳ್ಳಲು ಈ ಟಿಪ್ಸ್‌ಗಳನ್ನು ತಪ್ಪದೇ ಪಾಲಿಸಿ
- Ways to Keep Spine Healthy: ಬೆನ್ನುಮೂಳೆ ದೇಹಕ್ಕೆ ಆಧಾರ. ಬೆನ್ನುಮೂಳೆಯ ಸಮಸ್ಯೆ ಕಾಣಿಸಿದರೆ ತೊಂದರೆ ಖಚಿತ. ಆ ಕಾರಣಕ್ಕಾಗಿ ಪ್ರತಿವರ್ಷ ಮೇ 17 ರಂದು ಬೆನ್ನುಹುರಿಯ ಗಾಯದ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ. ನಮ್ಮ ಬೆನ್ನುಮೂಳೆ ಸದೃಢವಾಗಿರಲು ನಾವು ತಪ್ಪದೇ ಪಾಲಿಸಬೇಕಾದ 5 ಕ್ರಮಗಳಿವು.
- Ways to Keep Spine Healthy: ಬೆನ್ನುಮೂಳೆ ದೇಹಕ್ಕೆ ಆಧಾರ. ಬೆನ್ನುಮೂಳೆಯ ಸಮಸ್ಯೆ ಕಾಣಿಸಿದರೆ ತೊಂದರೆ ಖಚಿತ. ಆ ಕಾರಣಕ್ಕಾಗಿ ಪ್ರತಿವರ್ಷ ಮೇ 17 ರಂದು ಬೆನ್ನುಹುರಿಯ ಗಾಯದ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ. ನಮ್ಮ ಬೆನ್ನುಮೂಳೆ ಸದೃಢವಾಗಿರಲು ನಾವು ತಪ್ಪದೇ ಪಾಲಿಸಬೇಕಾದ 5 ಕ್ರಮಗಳಿವು.
(1 / 7)
ಬೆನ್ನುಹುರಿ ಗಾಯದ ಜಾಗೃತಿ ದಿನವನ್ನು ಪ್ರತಿ ವರ್ಷ ಮೇ 17ರಂದು ಆಚರಿಸಲಾಗುತ್ತದೆ. ಈ ದಿನವು ಬೆನ್ನುಹುರಿಯ ಗಾಯದ ಸಮಸ್ಯೆಯೊಂದಿಗೆ ಬದುಕುವ ಜನರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಈ ವಿಶೇಷ ದಿನವನ್ನು ಆಚರಿಸುತ್ತಿರುವ ಸಂದರ್ಭ, ನಮ್ಮ ಬೆನ್ನುಮೂಳೆಯನ್ನು ಆರೋಗ್ಯಕರವಾಗಿ ಇರಿಸಿಕೊಳ್ಳಲು ಮತ್ತು ಬೆನ್ನು ಹುರಿಯ ಗಾಯಗಳನ್ನು ತಪ್ಪಿಸಲು ಇಲ್ಲಿವೆ ಒಂದಿಷ್ಟು ಟಿಪ್ಸ್. (Unsplash)
(2 / 7)
ಕೆಲವು ಸ್ಟ್ರೆಚಿಂಗ್ ವ್ಯಾಯಾಮಗಳನ್ನು ನಿರಂತರವಾಗಿ ಅಭ್ಯಾಸ ಮಾಡುವುದರಿಂದ ಬೆನ್ನು ನೋವು ಕಡಿಮೆ ಮಾಡಲು ಮತ್ತು ಬೆನ್ನುಮೂಳೆಯನ್ನು ಆರೋಗ್ಯಕರವಾಗಿ, ಫಿಟ್ ಆಗಿ ಇರಿಸಿಕೊಳ್ಳಲು ಸಾಧ್ಯವಾಗುತ್ತದೆ. (HT PHOTO)
(3 / 7)
ಸಿಗರೆಟ್‌ನಲ್ಲಿರುವ ನಿಕೋಟಿನ್ ಅಂಶವು ವಾಸೊಕಾನ್ಸ್ಟ್ರಿಕ್ಟರ್ ಆಗಿದೆ. ಇದು ಬೆನ್ನುಮೂಳೆಗೆ ರಕ್ತ ಮತ್ತು ಆಮ್ಲಜನಕದ ಹರಿವನ್ನು ಕಡಿಮೆ ಮಾಡುತ್ತದೆ. ರಕ್ತನಾಳಗಳನ್ನು ಬಿಗಿಗೊಳಿಸುತ್ತದೆ. ಹಾಗಾಗಿ ಬೆನ್ನುನೋವಿನ ಸಮಸ್ಯೆ ಕಾಣಿಸಿಕೊಂಡಾಕ್ಷಣ ಧೂಮಪಾನವನ್ನು ನಿಲ್ಲಿಸಬೇಕು.(Unsplash)
(4 / 7)
ಭಾರ ಎತ್ತುವಾಗ ಬೆನ್ನುಮೂಳೆಯ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟುಮಾಡುವುದನ್ನು ತಪ್ಪಿಸಲು ಕೆಲವು ತಂತ್ರಗಳನ್ನು ಅನುಸರಿಸಬೇಕು. ಅತಿಯಾದ ಭಾರ ಎತ್ತುವುದು ಖಂಡಿತ ಒಳ್ಳೆಯದಲ್ಲ. (Unsplash)
(5 / 7)
ಒಂದು ಭಂಗಿಯಲ್ಲಿ ದೀರ್ಘಕಾಲ ಕುಳಿತುಕೊಳ್ಳುವುದು, ಮಲಗುವುದು ಬೆನ್ನುಮೂಳೆಯ ಮೇಲೆ ಒತ್ತಡವನ್ನು ಉಂಟು ಮಾಡಬಹುದು. ನೀವು ಚಲಿಸುತ್ತಲೇ ಇರಬೇಕು ಮತ್ತು ನಿಮ್ಮ ದೇಹವು ಸಾಂದರ್ಭಿಕವಾಗಿ ಚಲಿಸಬೇಕು. ಇದು ಬೆನ್ನುಮೂಳೆಗೆ ಬಹಳ ಅವಶ್ಯ. (Unsplash)
(6 / 7)
ಅಧಿಕ ದೇಹ ತೂಕವು ಬೆನ್ನುಮೂಳೆಯ ಮೇಲೆ ಒತ್ತಡವನ್ನು ಉಂಟುಮಾಡಬಹುದು. ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುವ ಆರೋಗ್ಯಕರ ಆಹಾರವನ್ನು ಸೇವಿಸಿ. ಇದರಿಂದ ಬೆನ್ನುನೋವಿಗೆ ಪರಿಹಾರ ಸಿಗುತ್ತದೆ.
ಇತರ ಗ್ಯಾಲರಿಗಳು