ಕನ್ನಡ ಸುದ್ದಿ  /  ಜೀವನಶೈಲಿ  /  ಪ್ರತಿದಿನ ಎಳನೀರು ಕುಡಿದು ಬೇಸರವಾಗಿದ್ಯಾ? ಆರೋಗ್ಯ ವೃದ್ಧಿಸಿಕೊಳ್ಳಲು ಎಳನೀರನ್ನು ಹೀಗೂ ಬಳಸಬಹುದು

ಪ್ರತಿದಿನ ಎಳನೀರು ಕುಡಿದು ಬೇಸರವಾಗಿದ್ಯಾ? ಆರೋಗ್ಯ ವೃದ್ಧಿಸಿಕೊಳ್ಳಲು ಎಳನೀರನ್ನು ಹೀಗೂ ಬಳಸಬಹುದು

ಎಳನೀರನ್ನು ನಿತ್ಯವೂ ಕುಡಿಯುವುದರಿಂದ ಹಲವು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಆದರೆ ನಿತ್ಯವೂ ಅದೇ ಎಳನೀರನ್ನು ಕುಡಿದು ಬೇಸರವಾಗಿದೆಯಾ? ಹಾಗಾದರೆ ಎಳನೀರಿನ ರುಚಿ ಹಾಗೂ ಪೌಷ್ಟಿಕಾಂಶದ ವಿಚಾರದಲ್ಲಿ ಯಾವುದೇ ರೀತಿಯ ರಾಜಿಯಾಗದೆಯೇ, ನಿತ್ಯದ ನಿಮ್ಮ ಆಹಾರದಲ್ಲಿ ಎಳನೀರನ್ನು ಹೀಗೂ ಬಳಕೆ ಮಾಡಿಕೊಳ್ಳಬಹುದು. (ಬರಹ: ಭಾಗ್ಯ ದಿವಾಣ)

ಪ್ರತಿದಿನ ಎಳನೀರು ಕುಡಿದು ಬೇಸರವಾಗಿದ್ಯಾ? ಆರೋಗ್ಯ ವೃದ್ಧಿಸಿಕೊಳ್ಳಲು ಎಳನೀರನ್ನು ಹೀಗೂ ಬಳಸಬಹುದು
ಪ್ರತಿದಿನ ಎಳನೀರು ಕುಡಿದು ಬೇಸರವಾಗಿದ್ಯಾ? ಆರೋಗ್ಯ ವೃದ್ಧಿಸಿಕೊಳ್ಳಲು ಎಳನೀರನ್ನು ಹೀಗೂ ಬಳಸಬಹುದು

ಬಿಸಿಲ ತಾಪ ನೀಗಿಸಿಕೊಳ್ಳಲು ಎಲ್ಲರೂ ಮೊರೆ ಹೋಗುವ ಪಾನೀಯಗಳ ಪೈಕಿ ಎಳನೀರು ಪ್ರಮುಖವಾದದ್ದು. ಯಾಕೆಂದರೆ ಎಳನೀರನ್ನು ಕುಡಿಯುವುದರಿಂದ ದೇಹ ತಂಪಾಗುವುದಲ್ಲದೆ ಹಲವು ಆರೋಗ್ಯಕರ ಪ್ರಯೋಜನಗಳು ಇರುವುದರಿಂದ ಇದಕ್ಕಿಂತ ಉತ್ತಮ ಆಯ್ಕೆ ಬೇರೊಂದಿಲ್ಲ ಎಂಬುದು ಎಲ್ಲರ ನಂಬಿಕೆ. ಎಳನೀರಿನಲ್ಲಿ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು, ಖನಿಜಗಳು ಮತ್ತು ಎಲೆಕ್ಟ್ರೋಲೈಟ್‌ನಂತಹ ಅಂಶಗಳಲ್ಲಿದ್ದು, ಇತರ ಪಾನೀಯಗಳಿಗೆ ಉತ್ತಮ ಪರ್ಯಾಯವಾಗಿದೆ. ಯಾವುದೇ ಇತರ ಪಾನೀಯಗಳಿಗೆ ಹೋಲಿಸಿದರೆ, ಎಳನೀರಿನಲ್ಲಿ ಕ್ಯಾಲೊರಿಗಳು ಮತ್ತು ಕಾರ್ಬೋಹೈಡ್ರೇಟ್‌ಗಳು ತುಲನಾತ್ಮಕವಾಗಿ ಕಡಿಮೆಯಾಗಿದ್ದು, ಇದು ವ್ಯಾಯಾಮದ ನಂತರ ಸೇವನೆಗೆ ಸೂಕ್ತ ಪಾನೀಯವಾಗಿದೆ. ಆದರೆ ಎಳನೀರನ್ನು ನಿತ್ಯವೂ ಕುಡಿಯಲು ನಿಮಗೆ ಬೇಸರವಾಗುವುದಿಲ್ಲವೇ? ನಿಮ್ಮ ದೈನಂದಿನ ಆಹಾರದಲ್ಲಿ ಎಳನೀರನ್ನು ಸೇರಿಸಿಕೊಳ್ಳುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ಎಳನೀರನ್ನು ಸೇವಿಸುವ ವಿಧಾನಗಳು

ಎಳನೀರನ್ನು ಕುಡಿಯುವುದು ಉತ್ತಮ ಆಯ್ಕೆ: ಎಳನೀರನ್ನು ನೇರವಾಗಿ ಕುಡಿಯುವುದು ಉತ್ತಮ ಆಯ್ಕೆ. ಎಳನೀರನ್ನು ಯಾವುದೇ ಮಿಶ್ರಣಗಳಿಲ್ಲದೆಯೇ ನೇರವಾಗಿ ಕುಡಿಯಬಹುದು. ತಾಜಾ ಎಳನೀರನ್ನು ಆಯ್ಕೆ ಮಾಡಿಕೊಂಡರೆ ಮಾತ್ರವೇ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಅಂಶ ದೇಹವನ್ನು ಸೇರಲು ಸಾಧ್ಯವಾಗುತ್ತದೆ. ಆದರೆ ಎಳನೀರು ದಿನ ಕುಡಿದು ಬೇಸರ ಆಗಿದ್ದರೆ ಬೇಸಿಗೆಯಲ್ಲಿ ಈ ರೂಪದಲ್ಲೂ ಎಳನೀರನ್ನು ನಿಮ್ಮ ದೇಹಕ್ಕೆ ಸೇರಿಸಬಹುದು.

ಸ್ಮೂತಿಯೊಂದಿಗೆ ಮಿಶ್ರಣ ಮಾಡಿಕೊಳ್ಳಿ: ಎಳನೀರನ್ನು ಕುಡಿಯುವ ಮತ್ತೊಂದು ಉತ್ತಮ ವಿಧಾನವೆಂದರೆ, ನೀವು ಕುಡಿಯುವ ಸ್ಮೂತಿಯೊಂದಿಗೆ ಎಳನೀರನ್ನು ಮಿಶ್ರಣ ಮಾಡಿಕೊಳ್ಳುವುದು. ಈ ಮೂಲಕ ನೀವು ಅವರ ಪೌಷ್ಟಿಕಾಂಶದ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬಹುದು. ನೀವು ನಿತ್ಯವೂ ಬಳಸುವ ನೀರಿಗೆ ಬದಲಾಗಿಯೂ ಎಳನೀರನ್ನು ಬಳಕೆ ಮಾಡಿಕೊಳ್ಳಬಹುದು.

ಫ್ರೆಶ್‌ ಜ್ಯೂಸ್‌ನೊಂದಿಗೂ ಎಳನೀರನ್ನು ಬೆರೆಸಿಕೊಳ್ಳಿ: ನೀವು ಜ್ಯೂಸ್‌ ಪ್ರಿಯರೇ? ನಿತ್ಯವೂ ಬಗೆ ಬಗೆಯ ಜ್ಯೂಸ್‌ ಮಾಡಿಕೊಂಡು ಬೇಸಿಗೆಯಲ್ಲಿ ದೇಹವನ್ನು ತಂಪು ಮಾಡಿಕೊಳ್ಳುತ್ತಿದ್ದೀರಾ? ಹಾಗಾದರೆ ಈ ಬಾರಿ ಜ್ಯೂಸ್‌ ಮಾಡುವ ವೇಳೆ ನೀರಿಗೆ ಬದಲಾಗಿ ಎಳನೀರನ್ನು ಮಿಶ್ರ ಮಾಡಿಕೊಳ್ಳಿ. ಇದು ಜ್ಯೂಸ್‌ನ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಅದರಿಂದ ಲಭ್ಯವಾಗುವ ಪೌಷ್ಟಿಕಾಂಶಗಳನ್ನೂ ದುಪ್ಪಟ್ಟುಮಾಡುತ್ತದೆ.

ಐಸ್‌ಕ್ಯೂಬ್‌ಗಳನ್ನು ತಯಾರಿಸಿಕೊಂಡು ನೋಡಿ: ನೀವು ಎಳನೀರನ್ನು ಐಸ್‌ಕ್ಯೂಬ್‌ಗಳಾಗಿ ಘನೀಕರಿಸುವ ಮೂಲಕ ಅವುಗಳನ್ನು ನಿಮ್ಮ ನೆಚ್ಚಿನ ಪಾನೀಯಗಳಿಗೆ ಸೇರಿಸಿಕೊಳ್ಳಬಹುದು. ಇದರಿಂದ ಅತಿಯಾದ ಬಿಸಿಲಿನ ತಾಪದಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು. ಕೋಲ್ಡ್ ಕಾಫಿ ಅಥವಾ ಹಣ್ಣಿನ ಜ್ಯೂಸ್‌ಗಳಲ್ಲೂ ನೀವು ಈ ಎಳನೀರಿನ ಐಸ್‌ಕ್ಯೂಬ್‌ಗಳನ್ನು ಸೇರಿಸಬಹುದು. ಸುಡು ಬೇಸಿಗೆಯಲ್ಲಿ ತಣ್ಣನೆಯ ಪಾನೀಯಗಳನ್ನು ಕುಡಿಯುವ ಮೂಲಕ ದೇಹವನ್ನು ತಂಪಾಗಿಸಿಕೊಳ್ಳಬಹುದು.

ಎಳನೀರಿನ ಐಸ್ ಕ್ಯಾಂಡಿಗಳು: ಎಳನೀರಿನಿಂದ ತಯಾರಿಸಿದ ಐಸ್‌ ಕ್ಯಾಂಡಿಗಳು ವೇಗವಾಗಿ ಬಾಯಾರಿಕೆಯನ್ನು ನೀಗಿಸುತ್ತದೆ. ಅದಷ್ಟೇ ಅಲ್ಲದೆ ದೇಹವನ್ನು ಹೈಡ್ರೀಕರಿಸುತ್ತದೆ, ಎಲೆಕ್ಟ್ರೊಲೈಟ್ಸ್‌ ಅನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಇದು ಸಾಕಷ್ಟು ಪ್ರಮಾಣದ ವಿಟಮಿನ್‌ಗಳು, ಖನಿಜಗಳು ಮತ್ತು ಪೊಟ್ಯಾಸಿಯಮ್‌ನೊಂದಿಗೆ ದೇಹವನ್ನು ಪೋಷಿಸುತ್ತದೆ. ಐಸ್‌ ಕ್ಯಾಂಡಿಗಳನ್ನು ತಯಾರಿಸುವಾಗ, ಅವುಗಳನ್ನು ಫ್ರೀಜ್ ಮಾಡುವ ಮೊದಲು ನಿಮ್ಮ ನೆಚ್ಚಿನ ಹಣ್ಣುಗಳ ತುಂಡುಗಳನ್ನು ಅದರ ಜೊತೆಗೆ ಸೇರಿಸಿಕೊಳ್ಳುವುದನ್ನು ಮರೆಯದಿರಿ.

ದೇಹಕ್ಕೆ ಉತ್ತಮವೆಂಬ ಕಾರಣಕ್ಕೆ ನಿತ್ಯವೂ ಎಳನೀರನ್ನು ಹಾಗೆಯೇ ಕುಡಿದು ಬೇಸರವಾಗಿದ್ದರೆ, ಇಂತಹ ಸುಲಭ ವಿಧಾನಗಳನ್ನು ಅನುಸರಿಸುವ ಮೂಲಕವೂ ಎಳನೀರು ನಿಮ್ಮ ದೇಹವನ್ನು ಸೇರುವಂತೆ ಮಾಡಬಹುದು. ಇನ್ಯಾಕೆ ತಡ, ಎಳನೀರನ್ನು ಹೀಗೂ ಒಮ್ಮೆ ಬಳಸಿಕೊಂಡು ನೋಡಿ.