ಕನ್ನಡ ಸುದ್ದಿ  /  ಜೀವನಶೈಲಿ  /  Summer Tips: ಬೇಸಿಗೆಯಲ್ಲಿ ಪ್ರತಿದಿನ ಮಾವಿನಕಾಯಿ ತಿಂದ್ರೆ ದೇಹದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ ನೋಡಿ

Summer Tips: ಬೇಸಿಗೆಯಲ್ಲಿ ಪ್ರತಿದಿನ ಮಾವಿನಕಾಯಿ ತಿಂದ್ರೆ ದೇಹದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ ನೋಡಿ

ಬೇಸಿಗೆಯಲ್ಲಿ ಹೇರಳವಾಗಿ ಸಿಗುವ ಮಾವು ಹಲವು ಪೋಷಕಾಂಶಗಳ ಆಗರ. ಹಲವರಿಗೆ ಮಾವಿನಹಣ್ಣಿಗಿಂತ ಮಾವಿನಕಾಯಿ ತಿನ್ನುವುದು ಇಷ್ಟವಾಗುತ್ತದೆ. ಮಾವಿನಕಾಯಿಯಲ್ಲಿ ವಿಟಮಿನ್‌ ಸಿ ಮತ್ತು ಪೆಕ್ಟಿನ್‌ ಅಂಶವಿರುತ್ತದೆ. ಇದು ರೋಗನಿರೋಧಕ ಶಕ್ತಿ, ಜೀರ್ಣಕ್ರಿಯೆಗೆ ಉತ್ತಮ. ಆದರೆ ಇದರಿಂದ ಆರೋಗ್ಯಕ್ಕೆ ಅಪಾಯವೂ ಇದೆ. ಬೇಸಿಗೆಯಲ್ಲಿ ಪ್ರತಿದಿನ ಮಾವಿನಕಾಯಿ ತಿಂದ್ರೆ ಏನಾಗುತ್ತೆ ನೋಡಿ.

ಬೇಸಿಗೆಯಲ್ಲಿ ಪ್ರತಿದಿನ ಮಾವಿನಕಾಯಿ ತಿಂದ್ರೆ ದೇಹದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ ನೋಡಿ
ಬೇಸಿಗೆಯಲ್ಲಿ ಪ್ರತಿದಿನ ಮಾವಿನಕಾಯಿ ತಿಂದ್ರೆ ದೇಹದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ ನೋಡಿ

ಬೇಸಿಗೆಕಾಲ ಬಂತೆಂದರೆ ಉರಿ ಬಿಸಿಲಿನ ಜೊತೆಗೆ ಈ ಕಾಲಕ್ಕೆ ಸೀಮಿತವಾಗಿರುವ ಒಂದಿಷ್ಟು ಹಣ್ಣು, ತರಕಾರಿಗಳು ಬೆಳೆಯುತ್ತವೆ. ಬೇಸಿಗೆಯಲ್ಲಿ ಹೇರಳವಾಗಿ ಸಿಗುವ ಹಣ್ಣುಗಳಲ್ಲಿ ಹಣ್ಣುಗಳ ರಾಜ ಎಂದೇ ಕರೆಸಿಕೊಳ್ಳುವ ಮಾವು ಕೂಡ ಒಂದು. ಮಾವಿನಹಣ್ಣು ತಿನ್ನುವುದು ಹಲವರಿಗೆ ಇಷ್ಟವಾದ್ರೂ ಮಾವಿನಕಾಯಿಯಿಂದ ತಯಾರಿಸುವ ಖಾದ್ಯಗಳು ಬಾಯಿ ರುಚಿಯನ್ನು ಹೆಚ್ಚಿಸುವುದು ಸುಳ್ಳಲ್ಲ. ಇದರಿಂದ ಉಪ್ಪಿನಕಾಯಿ, ಚಟ್ನಿ, ರಸಂ ಸೇರಿದಂತೆ ಹಲವು ಬಗೆಯ ಖಾದ್ಯಗಳನ್ನು ತಯಾರಿಸುತ್ತಾರೆ. ಆದರೆ ಕೆಲವರು ಮಾವಿನಕಾಯಿ ಅಥವಾ ಮಾವಿನಕಾಯಿ ತಯಾರಿಸಿದ ಆಹಾರಪದಾರ್ಥಗಳನ್ನು ಸೇವಿಸಲು ಹಿಂದೇಟು ಹಾಕುತ್ತಾರೆ. ಯಾಕೆಂದರೆ ಇದು ಜೀರ್ಣಕಾರಿ ಸಮಸ್ಯೆಗಳನ್ನು ಉಂಟು ಮಾಡಬಹುದು ಎನ್ನುವ ಕಾರಣಕ್ಕೆ. ಅದೇನೆ ಇರಲಿ, ಬೇಸಿಗೆಯಲ್ಲಿ ಪ್ರತಿದಿನ ಮಾವಿನಕಾಯಿ ತಿನ್ನುವುದರಿಂದ ದೇಹದಲ್ಲಿ ಏನೇನು ಬದಲಾವಣೆಗಳಾಗುತ್ತವೆ ನೋಡಿ.

ಟ್ರೆಂಡಿಂಗ್​ ಸುದ್ದಿ

ಮಾವಿನಕಾಯಿ ಸೇವನೆಯಿಂದಾಗುವ ಪ್ರಯೋಜನಗಳು 

ಹೈದರಾಬಾದಿನ ಯಶೋದಾ ಹಾಸ್ಪಿಟಲ್ಸ್‌ನ ಸಲಹೆಗಾರ ವೈದ್ಯ ಡಾ. ರಂಗ ಸಂತೋಷ್‌ ಕುಮಾರ್‌ ಅವರು ಉತ್ಕರ್ಷಣ ನಿರೋಧಕವಾಗಿರುವ ಹಸಿ ಮಾವು ಹೆಚ್ಚಾಗಿ ಗ್ಯಾಸ್ಟ್ರೋಪ್ರೊಟೆಕ್ಟಿವ್‌ ಆಗಿದೆ. ಮಾವಿನಕಾಯಿ ಸೇವಿಸುವುದರಿಂದ ಆರೋಗ್ಯದ ವಿವಿಧ ಅಂಶಗಳ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಇದರಲ್ಲಿ ಪೌಷ್ಟಿಕಾಂಶವು ಸಮೃದ್ಧವಾಗಿರುತ್ತದೆ. ಮಾವಿನಕಾಯಿಯಲ್ಲಿ ಕಂಡುಬರುವ ಪ್ರಬಲವಾದ ಉತ್ಕರ್ಷಣ ನಿರೋಧಕವಾದ ಮ್ಯಾಂಗಿಫೆರಿನ್‌ ಹೆಪಟೊಪ್ರೊಟೆಕ್ಟಿವ್‌ ಗುಣಗಳನ್ನು ಪ್ರದರ್ಶಿಸುತ್ತದೆ. ಇದು ಯಕೃತ್ತಿನ ಆರೋಗ್ಯಕ್ಕೆ ಸಂಭಾವ್ಯ ಪ್ರಯೋಜನಗಳನ್ನು ನೀಡುತ್ತದೆ ಎಂದು ಡಾ. ಕುಮಾರ್‌ ಹೇಳುತ್ತಾರೆ.

ಮಾವಿನಕಾಯಿಯಲ್ಲಿ ಹೇರಳವಾಗಿರುವ ವಿಟಮಿನ್‌ ಸಿ ಹಿಮೋಫಿಲಿಯಾ ಮತ್ತು ರಕ್ತಹೀನತೆಯಂತಹ ರಕ್ತದ ಸಂಬಂಧಿಸಿದ ಅಪಾಯವನ್ನು ಕಡಿಮೆ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಇದು ರಕ್ತ ಹೆಪ್ಪುಗಟ್ಟುವಿಕೆ ರಚನೆಯನ್ನು ತಡೆಗಟ್ಟಲು, ರಕ್ತನಾಳಗಳ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಲು ಮತ್ತು ಹೆಮಟೊಪೊಯಿಸಿಸ್ ಪ್ರಕ್ರಿಯೆಯನ್ನು ಬೆಂಬಲಿಸಲು ಕೊಡುಗೆ ನೀಡುತ್ತದೆ ಎಂದು ಡಾ ಕುಮಾರ್  ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. 

ಡಾ. ಕುಮಾರ್‌ ಅವರ ಪ್ರಕಾರ ಮಾವಿನಕಾಯಿ ಕ್ಯಾರೊಟಿನಾಯ್ಡ್‌ಗಳ ಹೆಚ್ಚಿನ ಸಾಂದ್ರತೆಯು ದೃಷ್ಟಿ ಸುಧಾರಿಸಲು ಸಹಾಯ ಮಾಡುತ್ತದೆ. ಇದು ಕಣ್ಣಿನ ಆರೋಗ್ಯ ಹಾಗೂ ದೃಷ್ಟಿಯನ್ನು ಉತ್ತೇಜಿಸುತ್ತದೆ.

ಇದಲ್ಲದೇ ಮಾವಿನಕಾಯಿ ಹೈಡ್ರೇಟಿಂಗ್‌ ಗುಣಲಕ್ಷಣಗಳು ಬೇಸಿಗೆಯಲ್ಲಿ ನಿರ್ಜಲೀಕರಣವನ್ನು ತಡೆಗಟ್ಟುವಟ್ಟುವಲ್ಲಿ ಸಹಕಾರಿ. ಇಷ್ಟೇ ಅಲ್ಲದೇ ಮಾವಿನಕಾಯಿ ಸೇವನೆಯಿಂದ ವಸಡಿನಲ್ಲಿ ರಕ್ತಸ್ರಾವ ಅಥವಾ ಸ್ಕರ್ವಿಯಂತಹ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ ಎನ್ನುತ್ತಾರೆ ತಜ್ಞರು.

ಈ ರಸಭರಿತ ಹಣ್ಣು ನಾರಿನಾಂಶ ಹಾಗೂ ಜೀರ್ಣಕಾರಿ ಗುಣಲಕ್ಷಣಗಳಿಂದಾಗಿ ಮಲಬದ್ಧತೆ ಮತ್ತು ಅಜೀರ್ಣ ಸೇರಿದಂತೆ ಜಠರಗರುಳಿನ ಕಾಯಿಲೆಗಳಿಗೆ ನೈಸರ್ಗಿಕ ಪರಿಹಾರ ನೀಡುತ್ತದೆ.

ವಿಟಮಿನ್‌ ಇ, ವಿಟಮಿನ್‌ ಸಿ ಮತ್ತು ಉತ್ಕರ್ಷಣ ನಿರೋಧಕ ಸಂಯೋಜನೆಯೊಂದಿಗೆ ಮಾವಿನಕಾಯಿ ಅತ್ಯುತ್ತಮ ರೋಗನಿರೋಧಕ ಬೂಸ್ಟರ್‌ ಆಗಿ ಕಾರ್ಯನಿರ್ವಹಿಸುತ್ತದೆ. ದೇಹದ ರಕ್ಷಣಾ ಕಾರ್ಯವಿಧಾನಗಳನ್ನು ಬೆಂಬಲಿಸಲು ಈ ಘಟಕಗಳು ಸಿನರ್ಜಿಸ್ಟಿಕ್ ಆಗಿ ಕಾರ್ಯನಿರ್ವಹಿಸುತ್ತವೆ. "ಕಚ್ಚಾ ಮಾವಿನಹಣ್ಣನ್ನು ನಿಮ್ಮ ಆಹಾರದಲ್ಲಿ ಸೇರಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡಬಹುದು, ಒಟ್ಟಾರೆ ಯೋಗಕ್ಷೇಮವನ್ನು ಉತ್ತೇಜಿಸುತ್ತದೆ ಮತ್ತು ವಿವಿಧ ದೈಹಿಕ ಕಾರ್ಯಗಳನ್ನು ಬೆಂಬಲಿಸುತ್ತದೆ" ಎಂದು ಡಾ ಕುಮಾರ್ ಹೇಳಿದರು.

ಈ ವಿಚಾರಗಳು ಗಮನದಲ್ಲಿರಲಿ

ಮಾವಿನಕಾಯಿಯಲ್ಲಿ ವಿಟಮಿನ್‌ ಸಿ ಹಾಗೂ ಪೆಕ್ಟಿನ್‌ ಅಂಶ ಅಧಿಕವಾಗಿರುತ್ತದೆ. ಇದು ರೋಗನಿರೋಧಕ ವ್ಯವಸ್ಥೆ ಮತ್ತು ಜೀರ್ಣಕ್ರಿಯೆಗೆ ಪ್ರಯೋಜನಕಾರಿ. ಆದರೆ ಮಾವಿನಕಾಯಿಯಲ್ಲಿ ಉರುಶಿಯೋಲ್‌ ಎಂಬ ವಸ್ತುವಿದೆ. ಇದು ಬಾಯಿ, ಗಂಟಲು ಹಾಗೂ ಜೀರ್ಣಾಂಗ ವ್ಯವಸ್ಥೆಯ ಕಿರಿಕಿರಿಗೆ ಕಾರಣವಾಗುತ್ತದೆ. ಇದನ್ನು ಅತಿಯಾಗಿ ಸೇವಿಸುದರಿಂದ ತೊಂದರೆ ತಪ್ಪಿದ್ದಲ್ಲ. ಮಾವಿನಹಣ್ಣಿನಲ್ಲಿರುವ ಸಿಟ್ರಿಕ್‌ ಆಮ್ಲವನ್ನು ಹೆಚ್ಚು ಸೇವಿಸಿದಾಗ ಹೊಟ್ಟೆಯ ಕಿರಿಕಿರಿ ಹಾಗೂ ಗ್ಯಾಸ್ಟ್ರಿಕ್‌ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಡಾ. ಕುಮಾರ್‌ ಹೇಳುತ್ತಾರೆ.