ಕನ್ನಡ ಸುದ್ದಿ  /  ಜೀವನಶೈಲಿ  /  Skin Health: ಬೆವರುವುದರಿಂದ ತ್ವಚೆಗೆ ಒಳಿತಿನಷ್ಟೇ ಕೆಡುಕೂ ಇದೆ; ಚರ್ಮದ ಆರೈಕೆಗೆ ತಪ್ಪದೇ ಪಾಲಿಸಬೇಕಾದ ನಿಯಮಗಳಿವು

Skin Health: ಬೆವರುವುದರಿಂದ ತ್ವಚೆಗೆ ಒಳಿತಿನಷ್ಟೇ ಕೆಡುಕೂ ಇದೆ; ಚರ್ಮದ ಆರೈಕೆಗೆ ತಪ್ಪದೇ ಪಾಲಿಸಬೇಕಾದ ನಿಯಮಗಳಿವು

ಬಿಸಿಲಿನ ತಾಪ ಹೆಚ್ಚಿರುವ ಸಂದರ್ಭ ಮಾತ್ರವಲ್ಲ, ಅತಿಯಾಗಿ ದೇಹ ದಂಡಿಸುವುದರಿಂದ ಎಲ್ಲಾ ಕಾಲದಲ್ಲೂ ದೇಹವು ಬೆವರುವುದು ಸಹಜ. ಬೆವರುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಆದರೆ ಬೆವರಿನಿಂದ ಚರ್ಮದ ಆರೋಗ್ಯಕ್ಕೆ ಒಳಿತೋ ಕೆಡುಕೋ ಎಂಬ ಅನುಮಾನ ನಿಮಗಿದ್ದರೆ ಇಲ್ಲಿದೆ ಉತ್ತರ.

ಬೆವರುವುದರಿಂದ ತ್ವಚೆಗೆ ಒಳಿತಿನಷ್ಟೇ ಕೆಡುಕೂ ಇದೆ; ಚರ್ಮದ ಆರೈಕೆಗೆ ತಪ್ಪದೇ ಪಾಲಿಸಬೇಕಾದ ನಿಯಮಗಳಿವು
ಬೆವರುವುದರಿಂದ ತ್ವಚೆಗೆ ಒಳಿತಿನಷ್ಟೇ ಕೆಡುಕೂ ಇದೆ; ಚರ್ಮದ ಆರೈಕೆಗೆ ತಪ್ಪದೇ ಪಾಲಿಸಬೇಕಾದ ನಿಯಮಗಳಿವು

ದೇಹ ಬೆವರಿದಾಗ ನಮಗೆ ಕಿರಿಕಿರಿ ಎನ್ನಿಸುವುದು ಸಹಜ. ಬಿಸಿಲಿನ ತಾಪ ಜೋರಾಗಿದ್ದಾಗಂತೂ ವಿಪರೀತ ಬೆವರುತ್ತೇವೆ. ಬೆವರಿದಾಗ ಯಾಕಾದ್ರೂ ಬೆವರು ಬರುತ್ತೋ ಅನ್ನಿಸುವುದು ಸಹಜ. ಆದರೆ ಬೆವರುವುದರಿಂದ ದೇಹಕ್ಕೆ ಸಾಕಷ್ಟು ಪ್ರಯೋಜನಗಳಿರುವುದು ಸುಳ್ಳಲ್ಲ. ಬೆವರುವುದರಿಂದ ದೇಹ ತಂಪಾಗುತ್ತದೆ. ಇದು ಶಾಖದ ಹೊಡೆತ (ಹೀಟ್‌ ಸ್ಟ್ರೋಕ್‌) ಸೇರಿದಂತೆ ಶಾಖದ ಅಲೆಗಳಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ತಡೆಯುತ್ತದೆ. ಬೆವರುವ ಪ್ರಕ್ರಿಯೆಯು ದೇಹದಿಂದ ವಿಷ, ಕೊಳಕು, ನಿರ್ಜೀವ ಚರ್ಮ ಮತ್ತು ಬ್ಯಾಕ್ಟೀರಿಯಾವನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ. ಇದು ಚರ್ಮವನ್ನು ತಂಪಾಗಿಸುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ನಾವು ಏಸಿ ಕೋಣೆಯಲ್ಲಿ ಕುಳಿತುಕೊಳ್ಳುವುದರಿಂದ ಬೆವರುವುದು ಕಡಿಮೆಯಾಗುತ್ತದೆ. ಇದು ದೇಹದ ತೇವಾಂಶವನ್ನು ಕಡಿಮೆ ಮಾಡುತ್ತದೆ. ಇದರಿಂದ ಚರ್ಮ ಒಣಗುವುದು, ಕಿರಿಕಿರಿ, ಶಿಲೀಂಧ್ರಗಳ ಸೋಂಕುಗಳು ಮತ್ತು ಡರ್ಮಟೈಟಿಸ್ ಅಪಾಯವನ್ನು ಹೆಚ್ಚಿಸುತ್ತದೆ. ಚರ್ಮದ ಸಮಸ್ಯೆಗಳನ್ನು ತಡೆಗಟ್ಟಲು, ಸಡಿಲವಾದ ಬಟ್ಟೆಗಳನ್ನು ಧರಿಸುವುದು, ನಿಯಮಿತವಾಗಿ ಸ್ನಾನ ಮಾಡುವುದು ಮತ್ತು ಹೈಡ್ರೀಕರಿಸಿದ ಸ್ಥಿತಿಯಲ್ಲಿರುವುದು ಮುಖ್ಯ. ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು, ಚೆನ್ನಾಗಿ ನೀರು ಕುಡಿಯವುದು, ಸಮತೋಲಿತ ಆಹಾರ ಸೇವನೆಯಿಂದ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿಭಾಯಿಸಬಹುದು.

ಟ್ರೆಂಡಿಂಗ್​ ಸುದ್ದಿ

ಬೆವರಿನ ವಿಚಾರಕ್ಕೆ ಬಂದಾಗ ಬೆವರುವುದು ಚರ್ಮಕ್ಕೆ ಅನುಕೂಲವೋ ಅನಾನುಕೂಲವೋ ಎಂಬ ಪ್ರಶ್ನೆ ಮೂಡುವುದು ಸಹಜ. ಹಾಗಾದರೆ ಬೆವರುವುದರಿಂದ ಚರ್ಮಕ್ಕಾಗುವ ಅನುಕೂಲ ಬಗ್ಗೆ ತಿಳಿಯಿರಿ.

ಬೆವರಿನಿಂದ ಚರ್ಮಕ್ಕಾಗುವ ಪ್ರಯೋಜನಗಳು 

ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಗಳ ಚರ್ಮರೋಗ ವಿಭಾಗದ ಹಿರಿಯ ಸಲಹೆಗಾರರಾದ ಡಾ ಡಿ ಎಂ ಮಹಾಜನ್ ಅವರ ಪ್ರಕಾರ ಬೆವರುವುದು ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಇದು ಚರ್ಮವನ್ನು ಕಾಂತಿಯುತವಾಗಿ ಕಾಣುವಂತೆ ಮಾಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

* ಬೆವರುವುದರಿಂದ ಚರ್ಮದ ರಂಧ್ರಗಳಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕೊಳಕು, ಎಣ್ಣೆಯಂಶ ಹಾಗೂ ಇತರ ಕಲ್ಮಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದು ಚರ್ಮದಲ್ಲಿನ ಒಟ್ಟಾರೆ ಮಾಲಿನ್ಯವನ್ನು ಹೊರ ಹಾಕುತ್ತದೆ.

* ಬೆವರಿಕ ಆಂಟಿಮೈಕ್ರೊಬಿಯಲ್‌ ಗುಣಲಕ್ಷಣಗಳು ಹೆಚ್ಚಾಗಿ ಉಪ್ಪಿನ ಅಂಶದಿಂದಾಗಿ, ಚರ್ಮದ ಮೇಲ್ಮೈಯಲ್ಲಿ ಬ್ಯಾಕ್ಟೀರಿಯಾದ ಬೆಳವಣಿಗೆ ಮತ್ತು ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

* ಬೆವರುವುದು ಚರ್ಮಕ್ಕೆ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದು ಚರ್ಮಕ್ಕೆ ಆರೋಗ್ಯಕರ ಮತ್ತು ಕಾಂತಿಯುತ ನೋಟವನ್ನು ನೀಡಲು ಸಹಾಯ ಮಾಡುತ್ತದೆ. ಬೆವರಿನ ತೇವಾಂಶವು ಮೇಲ್ಮೆಯಿಂದ ನಿರ್ಜೀದ ಚರ್ಮದ ಕೋಶಗಳನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ.

* ಮೊಡವೆ ಸಮಸ್ಯೆ ಇರುವವರು ಬೆವರುವುದರಿಂದ ಎಣ್ಣೆಚರ್ಮ, ನಿರ್ಜೀವ ಚರ್ಮ ಮತ್ತು ಮುಚ್ಚಿ ಹೋಗಿರುವ ಚರ್ಮದ ರಂಧ್ರಗಳು ಮತ್ತು ಕೂದಲು ಕೀರುಚೀಲಗಳಿಂದ ಬ್ಯಾಕ್ಟೀರಿಯಾಗಳನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ.

ಬೆವರುವುದರಿಂದ ಇಷ್ಟೆಲ್ಲಾ ಪ್ರಯೋಜನಗಳಿದ್ದರೂ ಅತಿಯಾಗಿ ಬೆವರುವುದು ಖಂಡಿತ ಒಳ್ಳೆಯದಲ್ಲ. ಬೆವರುವುದರಿಂದ ಅನುಕೂಲದಷ್ಟೇ ಅನಾನುಕೂಲವೇ ಇದೆ.

ಬೆವರುವುದರಿಂದಾಗುವ ಅಡ್ಡ ಪರಿಣಾಮಗಳು

* ಬೆವರಿನಲ್ಲಿರುವ ಖನಿಜ ಲವಣಗಳು ಮತ್ತು ಲ್ಯಾಕ್ಟಿಕ್‌ ಆಮ್ಲವು ಕಾಲಾನಂತರದಲ್ಲಿ ಸೆರಾಮಿಡ್‌ಗಳು, ಕೊಬ್ಬಿನಾಮ್ಲಗಳು ಮತ್ತು ಹೈಲುರಾನಿಕ ಆಮ್ಲದಂತಹ ನೈಸರ್ಗಿಕ ಆರ್ಧ್ರಕ ಅಂಶಗಳ ಮಟ್ಟವನ್ನು ಕಡಿಮೆ ಮಾಡುತ್ತದೆ.

* ಅತಿಯಾದ ಬೆವರುವಿಕೆಯು ಡರ್ಮಟೈಟಿಸ್‌, ಕಿರಿಕಿರಿ, ಶುಷ್ಕತೆ ಮತ್ತು ಪ್ರುರಿಟಸ್‌ ಅಪಾಯವನ್ನು ಹೆಚ್ಚಿಸುತ್ತದೆ.

* ಬೆವರಿನೊಳಗಿನ ಉಪ್ಪು ಕೇಂದ್ರೀಕೃತವಾದಾಗ ತೆರೆದ ಗಾಯಗಳ ಪ್ರದೇಶಗಳಲ್ಲಿ ಕುಟುಕುವ ಸಂವೇದನೆಗಳನ್ನು ಉಂಟುಮಾಡಬಹುದು.

ಅತಿಯಾಗಿ ಬೆವರುವುದು ಅಥವಾ ಬೆವರದೇ ಇರುವುದು ಎರಡೂ ಅಪಾಯಕಾರಿ. ಹೆಚ್ಚು ಬೆವರು (ಹೈಪರ್ಹೈಡ್ರೋಸಿಸ್ ಎಂದೂ ಕರೆಯುತ್ತಾರೆ) ಅಥ್ಲೇಟ್ಸ್‌ ಫೂಟ್‌, ದೇಹದ ದುರ್ವಾಸನೆ, ಕೆಮ್ಮು, ಅಂಗೈ ಬೆವರುವುದು ಮುಂತಾದ ಶಿಲೀಂಧ್ರ ಸೋಂಕನ್ನು ಉಂಟು ಮಾಡಬಹುದು ಎಂದು ತಜ್ಞರು ಹೇಳುತ್ತಾರೆ.

ಬೆವರುವುದನ್ನು ನಿರ್ವಹಿಸುವುದು ಹೇಗೆ?

ಬೆವರಿನಿಂದ ಉಂಟಾಗುವ ತೊಂದರೆಗಳನ್ನು ತಪ್ಪಿಸಲು ಬೆವರುವಿಕೆಯ ಧನಾತ್ಮಕ ಪರಿಣಾಮಗಳನ್ನು ಸಮತೋಲನಗೊಳಿಸಲು ಸರಿಯಾದ ನೈರ್ಮಲ್ಯ ಅಭ್ಯಾಸಗಳನ್ನು ಅನುಸರಿಸುವುದು ಬಹಳ ಮುಖ್ಯ. ಚರ್ಮದ ಮೇಲ್ಮೈಯಿಂದ ಸಂಗ್ರಹವಾದ ಬೆವರು, ಕೊಳಕು ಮತ್ತು ಬ್ಯಾಕ್ಟೀರಿಯಾವನ್ನು ತೊಡೆದುಹಾಕಲು ಸಹಾಯ ಮಾಡುವ ಸೌಮ್ಯವಾದ, ಸುಗಂಧ ಮುಕ್ತ ಕ್ಲೆನ್ಸರ್‌ ಬಳಿಸಿ ಸ್ನಾನ ಮಾಡುವುದು ಉತ್ತಮ. ಸೂಕ್ತ ಮಾಯಿಶ್ಚರೈಸರ್‌ನೊಂದಿಗೆ ಚರ್ಮದ ತಡೆಗೋಡೆಗಳನ್ನು ತುಂಬಲು ಸಹಾಯ ಮಾಡುತ್ತದೆ. ಇದರೊಂದಿಗೆ ಸಾಕಷ್ಟು ನೀರು ಕುಡಿಯುವುದು, ಚರ್ಮಕ್ಕೆ ಹೊಂದುವ ಪೋಷಕಾಂಶಗಳಿರುವ ಆಹಾರ ಸೇವನೆ ಬಹಳ ಮುಖ್ಯ. ಇದು ಚರ್ಮದ ಆರೋಗ್ಯ ಹಾಗೂ ಸ್ಥಿತಿಸ್ಥಾಪಕತ್ವವನ್ನು ಉತ್ತೇಜಿಸುತ್ತದೆʼ ಎಂದು ವೈದ್ಯರು ಅಭಿಪ್ರಾಯ ಪಡುತ್ತಾರೆ.

ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ಹೀಗೆ ಮಾಡಿ 

ಬೇಸಿಗೆ, ಮಳೆಗಾಲ ಯಾವುದೇ ಇರಲಿ ಅತಿಯಾಗಿ ಬೆವರುವ ಸಂದರ್ಭ ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ಅನುಸರಿಸಬೇಕಾದ ಕ್ರಮಗಳು

* ಸಾಕಷ್ಟು ನೀರು ಕುಡಿಯಿರಿ: ಚರ್ಮವನ್ನು ಒಳಗಿನಿಂದಲೇ ತೇವಾಂಶದಿಂದ ಇರುವಂತೆ ನೋಡಿಕೊಳ್ಳಲು ದಿನವಿಡೀ ಕನಿಷ್ಠ 1 ಲೀಟರ್‌ ನೀರು ಕುಡಿಯಬೇಕು. ಇದು ಚರ್ಮಕ್ಕೆ ಮಾತ್ರ ಎನ್ನುವುದು ನೆನಪಿರಲಿ.

* ಸಡಿಲವಾದ ಬಟ್ಟೆ: ಸಡಿಲವಾದ ಮತ್ತು ಆರಾಮದಾಯ ಬಟ್ಟೆಗಳನ್ನು ಧರಿಸುವುದು, ವಿಶೇಷವಾಗಿ ವಿಪರೀತ ಶಾಖ ಇರುವಾಗ ಹತ್ತಿ ಬಟ್ಟೆ ಧರಿಸುವುದರಿಂದ ಬೆವರುವುದರಿಂದ ಉಂಟಾಗುವ ಚರ್ಮದ ಕಿರಿಕಿರಿಯನ್ನು ಕಡಿಮೆ ಮಾಡಬಹುದು.

* ಪ್ರತಿನಿತ್ಯ ಸ್ನಾನ ಮಾಡುವುದು: ಬೆವರಿನಿಂದ ಉಂಟಾಗುವ ಚರ್ಮದ ಸಮಸ್ಯೆಗಳು ಅಥವಾ ಅಲರ್ಜಿಗಳನ್ನು ತಪ್ಪಿಸಲು ನೈರ್ಮಲ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ನಿಯಮಿತವಾಗಿ ಸ್ನಾನ ಮಾಡುವುದರಿಂದ ಬೆವರಿನ ದುರ್ನಾತ ಇರುವುದು, ದಿನವಿಡೀ ತಾಜಾತನದಿಂದ ಕೂಡಿರಬಹುದು.

* ಮಾಯಿಶ್ಚರೈಸರ್‌ ಬಳಕೆ: ಬೆವರುವುದರಿಂದ ಚರ್ಮವು ನೈರ್ಸಗಿಕ ತೇವಾಂಶವನ್ನು ಕಳೆದುಕೊಳ್ಳುತ್ತದೆ. ಇದರಿಂದ ಚರ್ಮ ಒಣಗಿದಂತಾಗುತ್ತದೆ. ಅದಕ್ಕಾಗಿ ಮಾಯಿಶ್ಚರೈಸರ್‌ ಬಳಕೆ ಕಡ್ಡಾಯ.

ವಿಭಾಗ