Immunity Problem: ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಆದ್ರೆ ಎದುರಾಗುವ ಅಪಾಯಗಳಿವು, ನಿರ್ಲಕ್ಷ್ಯ ಮಾಡದಿರಿ-health news symptoms of immune system problems signs you have a weakened immune system rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Immunity Problem: ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಆದ್ರೆ ಎದುರಾಗುವ ಅಪಾಯಗಳಿವು, ನಿರ್ಲಕ್ಷ್ಯ ಮಾಡದಿರಿ

Immunity Problem: ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಆದ್ರೆ ಎದುರಾಗುವ ಅಪಾಯಗಳಿವು, ನಿರ್ಲಕ್ಷ್ಯ ಮಾಡದಿರಿ

ರೋಗನಿರೋಧಕ ಶಕ್ತಿ ದೇಹಕ್ಕೆ ಬಹಳ ಅವಶ್ಯ. ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವವರನ್ನು ಒಂದಿಲ್ಲೊಂದು ಆರೋಗ್ಯ ಸಮಸ್ಯೆಗಳು ಕಾಡುತ್ತಲೇ ಇರುತ್ತವೆ. ಹಾಗಾಗಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಅಗತ್ಯದ ಬಗ್ಗೆ ವೈದ್ಯರು ಸದಾ ಸಲಹೆ ನೀಡುತ್ತಾರೆ. ಹಾಗಾದರೆ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾದರೆ ಏನೆಲ್ಲಾ ಸಮಸ್ಯೆಗಳು ಎದುರಾಗುತ್ತವೆ ನೋಡಿ.

ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಆದ್ರೆ ಎದುರಾಗುವ ಅಪಾಯಗಳಿವು, ನಿರ್ಲಕ್ಷ್ಯ ಮಾಡದಿರಿ
ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಆದ್ರೆ ಎದುರಾಗುವ ಅಪಾಯಗಳಿವು, ನಿರ್ಲಕ್ಷ್ಯ ಮಾಡದಿರಿ

ದೇಹಕ್ಕೆ ರಕ್ತ, ಉಸಿರು ಎಷ್ಟು ಮುಖ್ಯವೋ ರೋಗನಿರೋಧಕ ಶಕ್ತಿ ಕೂಡ ಇಷ್ಟೇ ಮುಖ್ಯ ಅನ್ನೋದು ಅತಿಶಯೋಕ್ತಿಯಲ್ಲ. ರೋಗನಿರೋಧಕ ಶಕ್ತಿ ಎನ್ನುವುದು ನಮ್ಮಿಡಿ ದೇಹವನ್ನು ರಕ್ಷಿಸುತ್ತದೆ. ದೇಹವನ್ನು ಕಾಯಿಲೆಗಳಿಂದ ರಕ್ಷಿಸಲು ಸಮರ್ಪಕ ರೋಗನಿರೋಧಕ ಶಕ್ತಿ ಹೊಂದಿರುವುದು ಬಹಳ ಮುಖ್ಯ. ಆದರೆ ಕೆಲವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಆ ಕಾರಣಕ್ಕೆ ಅವರಿಗೆ ಪದೇ ಪದೇ ಆರೋಗ್ಯ ಸಮಸ್ಯೆ ಕಾಡುತ್ತಿರುತ್ತದೆ. ರೋಗನಿರೋಧಕ ಶಕ್ತಿ ಕಡಿಮೆ ಆದ್ರೆ ದೇಹದಲ್ಲಿ ಹಲವು ಸಮಸ್ಯೆಗಳು ಕಾಡುತ್ತವೆ. ಇದರಿಂದ ಏನೆಲ್ಲಾ ಅಪಾಯಗಳು ಎದುರಾಗಬಹುದು ನೋಡಿ.

ಅತಿಯಾದ ಸುಸ್ತು, ಆಯಾಸ

ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಬೇಗನೆ ಸುಸ್ತಾಗುತ್ತದೆ. ಇವರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಬಳಲುತ್ತಾರೆ. ಅಮೆರಿಕನ್ ಸೈಕಲಾಜಿಕಲ್ ಅಸೋಸಿಯೇಷನ್‌ ವರದಿಯ ಪ್ರಕಾರ, ದೀರ್ಘಾವಧಿಯ ಒತ್ತಡವು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯ ಪ್ರತಿಕ್ರಿಯೆಗಳನ್ನು ದುರ್ಬಲಗೊಳಿಸುತ್ತದೆ. ಒತ್ತಡವು ದೇಹದ ಲಿಂಫೋಸೈಟ್‌ಗಳನ್ನು ಕಡಿಮೆ ಮಾಡುತ್ತದೆ, ಬಿಳಿ ರಕ್ತ ಕಣವು ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ನಿಮ್ಮ ಲಿಂಫೋಸೈಟ್ ಮಟ್ಟವನ್ನು ಕಡಿಮೆ ಮಾಡಿ, ಸಾಮಾನ್ಯ ಶೀತದಂತಹ ಸಮಸ್ಯೆಗಳು ಕೂಡ ಬೇಗನೆ ನಿಮಗೆ ಹರಡುವಂತೆ ಮಾಡಬಹುದು.

ಯಾವಾಗಲೂ ಶೀತದ ಸಮಸ್ಯೆ

ಶೀತ ಸಮಸ್ಯೆ ವರ್ಷದಲ್ಲಿ ಒಮ್ಮೊಮ್ಮೆ ಬರುವುದು ಸಹಜ. ನಿರಂತರವಾಗಿ ಶೀತದ ಸಮಸ್ಯೆ ಕಾಡುತ್ತಿದೆ, ಪದೇ ಪದೇ ಶೀನು ಬರುತ್ತಿದ್ದರೆ ನೀವು ರೋಗನಿರೋಧಕ ಶಕ್ತಿಯ ಕೊರತೆ ಎದುರಿಸುತ್ತಿರಬಹುದು. ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇದ್ದರೆ ಆ ಸಮಯದಲ್ಲಿ, ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸಲು ಮತ್ತು ತೊಂದರೆಗೊಳಗಾದ ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡಲು ಪ್ರತಿರಕ್ಷಣಾ ವ್ಯವಸ್ಥೆಯು ಮೂರರಿಂದ ನಾಲ್ಕು ದಿನಗಳನ್ನು ತೆಗೆದುಕೊಳ್ಳುತ್ತದೆ. ಹಾಗಾಗಿ ಪದೇ ಪದೇ ಶೀತ, ಜ್ವರ, ಕೆಮ್ಮು ಕಾಡುತ್ತಿದ್ದರೆ ನೀವು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಗಮನ ನೀಡಬೇಕು. 

ಹೊಟ್ಟೆಗೆ ಸಂಬಂಧಿಸಿ ಸಮಸ್ಯೆಗಳು

ನೀವು ಆಗಾಗ ಅತಿಸಾರ, ಗ್ಯಾಸ್ಟ್ರಿಕ್‌, ಮಲಬದ್ಧತೆ ಸಮಸ್ಯೆಯನ್ನು ಎದುರಿಸುತ್ತಿದ್ದರೆ ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆ ದುರ್ಬಲವಾಗಿದೆ ಎಂದು ಅರ್ಥ. ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯ ಸುಮಾರು 70 ಪ್ರತಿಶತವು ನಮ್ಮ ಜೀರ್ಣಾಂಗದಲ್ಲಿ ನೆಲೆಗೊಂಡಿದೆ. ಅಲ್ಲಿ ವಾಸಿಸುವ ಪ್ರಯೋಜನಕಾರಿ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳು ನಿಮ್ಮ ಕರುಳನ್ನು ಸೋಂಕಿನಿಂದ ರಕ್ಷಿಸುತ್ತದೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬೆಂಬಲಿಸುತ್ತದೆ. ಕರುಳಿನ ಬ್ಯಾಕ್ಟೀರಿಯಾದ ಪ್ರಮಾಣ ಕಡಿಮೆಯಾದ್ರೆ ವೈರಸ್‌ಗಳು, ದೀರ್ಘಕಾಲದ ಉರಿಯೂತ ಮತ್ತು ಸ್ವಯಂ ನಿರೋಧಕ ಅಸ್ವಸ್ಥತೆಗಳಿಗೆ ಕಾರಣವಾಗಬಹುದು.

ಗಾಯಗಳು ಬೇಗನೆ ಗುಣವಾಗುವುದಿಲ್ಲ

ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಗಾಯಗಳು ಬೇಗನೆ ಗುಣವಾಗುವುದಿಲ್ಲ. ಪ್ರತಿರಕ್ಷಣಾ ವ್ಯವಸ್ಥೆ ದುರ್ಬಲವಾಗಿದ್ದರೆ ಹೊಸ ಚರ್ಮ ಬೆಳೆಯಲು ಕೂಡ ನಿಧಾನವಾಗುತ್ತದೆ. ಹಲವು ದಿನಗಳು ಗಾಯಗಳು ಹಸಿಯಾಗಿ ಇರಬಹುದು.

ಆಗಾಗ ಸೋಂಕು ಬಾಧಿಸುತ್ತದೆ

ಸೋಂಕಿನ ವಿರುದ್ಧ ಹೋರಾಡಲು ನಿಮ್ಮ ದೇಹ ಸಜ್ಜಾಗಿಲ್ಲ ಎಂದರೆ ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯ ಕೊರತೆ ಇದೆ ಎಂದರ್ಥ. ಅಲರ್ಜಿ, ಆಸ್ತಮಾ ಮತ್ತು ಇಮ್ಯುನೊಲಾಜಿಯಂತಹ ಸಮಸ್ಯೆಗಳು ದೇಹದಲ್ಲಿ ರೋಗನಿರೋಧಕ ಕೊರತೆಯ ಚಿಹ್ನೆಗಳಾಗಿವೆ. ಮೂಗು, ಉಸಿರಾಟ, ಕಿವಿ ಮುಂತಾದ ಕಡೆಗಳಲ್ಲಿ ಪದೇ ಪದೇ ಸೋಂಕು ಕಾಣಿಸುವುದು ರೋಗ ನಿರೋಧಕ ಶಕ್ತಿ ಕಡಿಮೆಯಾಗಲು ಕಾರಣವಾಗುತ್ತದೆ.

ಸುಸ್ತಾದಂತಿರುವುದು

ಚೆನ್ನಾಗಿ ಊಟ-ತಿಂಡಿ ತಿಂದು, ನಿದ್ದೆ ಮಾಡಿದ ಮೇಲೂ ಸುಸ್ತು, ಮಂಪರು, ಆಲಸ್ಯ ಕಾಡಿದರೆ ನೀವು ರೋಗನಿರೋಧಕ ಶಕ್ತಿಯ ಕೊರತೆಯಿಂದ ಬಳಲುತ್ತಿರಬಹುದು ಎಂದರ್ಥ. ರೋಗನಿರೋಧಕ ಶಕ್ತಿಯು ದೇಹಕ್ಕೆ ಬಲ ತುಂಬುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಲು ಹೀಗೆ ಮಾಡಿ

ಈ ಮೇಲಿನ ಯಾವುದೇ ಲಕ್ಷಣಗಳು ನಿಮ್ಮ ದೇಹದಲ್ಲಿ ಕಾಣಿಸಿದರೆ ನೀವು ಕೂಡಲೇ ಜಾಗೃತರಾಗಬೇಕು. ಕೆಲವು ಜೀವನಶೈಲಿ ಬದಲಾವಣೆಗಳು ಮತ್ತು ಹೊಸ ಅಭ್ಯಾಸಗಳು ಸ್ವಾಭಾವಿಕವಾಗಿ ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲವಾಗಿಸಿ, ಆರೋಗ್ಯಕರವಾಗಿರಿಸಬಹುದು.

* ಸಮತೋಲಿತ ಆಹಾರವನ್ನು ಸೇವಿಸಿ

* ಸಾಕಷ್ಟು ನಿದ್ರೆ ಪಡೆಯಿರಿ

* ನಿಯಮಿತವಾಗಿ ವ್ಯಾಯಾಮ ಮಾಡಿ

* ನಿಮ್ಮ ಕೈಗಳನ್ನು ತೊಳೆದುಕೊಳ್ಳಿ

* ನಿಮ್ಮ ಲಸಿಕೆಗಳನ್ನು ಮುಂದುವರಿಸಿ

* ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ

* ಧೂಮಪಾನ ಮಾಡಬೇಡಿ

* ಒತ್ತಡವನ್ನು ಕಡಿಮೆ ಮಾಡಲು ಪ್ರಯತ್ನಿಸಿ