Healthy Diet: ಆಫೀಸ್‌ ಕೆಲಸದ ಅವಧಿಯಲ್ಲಿ ಆರೋಗ್ಯಕರ ಡಯೆಟ್‌ ಹೇಗೆ, ಈ 5 ಸಲಹೆ ಗಮನಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  Healthy Diet: ಆಫೀಸ್‌ ಕೆಲಸದ ಅವಧಿಯಲ್ಲಿ ಆರೋಗ್ಯಕರ ಡಯೆಟ್‌ ಹೇಗೆ, ಈ 5 ಸಲಹೆ ಗಮನಿಸಿ

Healthy Diet: ಆಫೀಸ್‌ ಕೆಲಸದ ಅವಧಿಯಲ್ಲಿ ಆರೋಗ್ಯಕರ ಡಯೆಟ್‌ ಹೇಗೆ, ಈ 5 ಸಲಹೆ ಗಮನಿಸಿ

ದಿನದಲ್ಲಿ ಬಹುತೇಕರು ಏಳೆಂಟು ಗಂಟೆ ಆಫೀಸ್‌ ಡೆಸ್ಕ್‌ನಲ್ಲಿ ಕುಳಿತು ಕೆಲಸ ಮಾಡುತ್ತಾರೆ. ಈ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಅತ್ಯುತ್ತಮ ಆಹಾರ ಕ್ರಮ ಅನುಸರಿಸಬೇಕು. ಅನಾರೋಗ್ಯಕರ ಆಹಾರ ಸೇವಿಸಬಾರದು. ಈ ಮುಂದಿನ ಸಲಹೆ ಗಮನದಲ್ಲಿಟ್ಟುಕೊಳ್ಳಿ.

ಆಫೀಸ್‌ನಲ್ಲಿ ಆರೋಗ್ಯಕರ ಡಯೆಟ್‌ ಸಲಹೆ
ಆಫೀಸ್‌ನಲ್ಲಿ ಆರೋಗ್ಯಕರ ಡಯೆಟ್‌ ಸಲಹೆ (Photo by Karolina Grabowska on Pexels)

ಸಾಮಾನ್ಯವಾಗಿ ಬಹುತೇಕರು ಬೆಳಗ್ಗೆ 9 ಗಂಟೆಯಿಂದ 5 ಗಂಟೆಯವರೆಗೆ ಆಫೀಸ್‌ನಲ್ಲಿ ಕೆಲಸ ಮಾಡುತ್ತಾರೆ. ಕೆಲಸದ ಒತ್ತಡದ ನಡುವೆ ಹೊಟ್ಟೆ ಚುರುಕುಗಟ್ಟಿದರೂ ಗಮನ ನೀಡದೆ ಕೆಲಸ ಮಾಡುವವರು ಸಾಕಷ್ಟು ಜನರು ಇರಬಹುದು. ನ್ಯಾಷನಲ್‌ ಫ್ಯಾಮಿಲಿ ಹೆಲ್ತ್‌ ಸರ್ವೇ ಪ್ರಕಾರ ಅಂದಾಜು ಶೇಕಡ 10ರಷ್ಟು ಭಾರತೀಯರು ವಿಶೇಷವಾಗಿ ಮಹಿಳೆಯರು ಡೀಪ್‌ ಆಗಿ ಫ್ರೈ ಮಾಡಿರುವ ಆಹಾರ ಸೇವಿಸುತ್ತಾರೆ. ವಾರದ ಲೆಕ್ಕದಲ್ಲಿ ಶೇಕಡ 36ರಷ್ಟು ಜನರು ಕರಿದ ಆಹಾರ ಪದಾರ್ಥ ಸೇವಿಸುತ್ತಾರೆ. "ಅತ್ಯಧಿಕ ಕ್ಯಾಲೋರಿ ಇರುವ ಜಂಕ್‌ ಫುಡ್‌ ಸೇವನೆ ಅತಿಯಾಗುತ್ತಿದೆ. ಇದರಿಂದ ತೂಕ ಹೆಚ್ಚಳ ಮಾತ್ರವಲ್ಲದೆ ಹಲವು ಆರೋಗ್ಯ ತೊಂದರೆಗಳು ಉಂಟಾಗುತ್ತವೆ. ಆಫೀಸ್‌ನಲ್ಲಿರುವಾಗಲೂ ಹೆಲ್ದಿ ಫುಡ್‌ ಸೇವಿಸಲು ಆದ್ಯತೆ ನೀಡಬೇಕು" ಎಂದು ಡಾ. ಭಾತ್ರಾ ಹೆಲ್ತ್‌ಕೇರ್‌ನ ಚೇರ್ಮೆನ್‌ ಡಾ. ಮುಕೇಶ್‌ ಭಾತ್ರಾ ಹೇಳಿದ್ದಾರೆ.

"ಇದರ ಬದಲು ಸಮೃದ್ಧ ಪೋಷಕಾಂಶ ಇರುವ ಪರ್ಯಾಯ ಆಹಾರಗಳನ್ನು ಸೇವಿಸಬೇಕು. ಬೀಜಗಳು, ಕಾಳುಗಳು, ಗ್ರೀಕ್‌ ಮೊಸರು, ತರಕಾರಿ, ಹಣ್ಣು, ಧಾನ್ಯಗಳ ಆಹಾರವನ್ನು ಸೇವಿಸಬೇಕು. ಕೆಲಸದ ಗದಗದಲದ ನಡುವೆ ಪ್ರತಿದಿನ ಮೂರರಿಂದ ನಾಲ್ಕು ಲೀಟರ್‌ ನೀರು ಕುಡಿಯಬೇಕು. ಸಕ್ಕರೆ ಅಂಶವಿರುವ ಪಾನೀಯಗಳನ್ನು ಕುಡಿಯಬೇಡಿ. ಗಿಡಮೂಲಿಕೆಗಳ ಚಹಾ ಕುಡಿಯಬಹುದು" ಎಂದು ಅವರು ಸಲಹೆ ನೀಡಿದ್ದಾರೆ.

ಆರೋಗ್ಯ ತಜ್ಞರ ಪ್ರಕಾರ ಈ ಮುಂದಿನ ಐದು ಅಂಶಗಳನ್ನು ಗಮನಿಸಬೇಕು

  1. ಸಾಕಷ್ಟು ನೀರು ಕುಡಿಯಿರಿ: ಪ್ರತಿದಿನ ಕೆಲಸ ಆರಂಭಿಸುವ ಮುನ್ನ ಒಂದು ಗ್ಲಾಸ್‌ ನೀರು ಕುಡಿಯಿರಿ. ಸಂಜೆಯ ವೇಳೆಗೆ ನೀವು ಕುಡಿಯುವ ನೀರಿನ ಪ್ರಮಾಣ ಕನಿಷ್ಠ ಮೂರು ಲೀಟರ್‌ ಆಗಿರಬೇಕು. ಇದರಿಂದ ದೇಹ ಹೈಡ್ರೇಟ್‌ ಆಗಿರುತ್ತದೆ. ದೇಹ ನಿರ್ಜಲೀಕರಣ ಆಗುವುದನ್ನು ತಪ್ಪಿಸಿ.
  2.  ಆರೋಗ್ಯಕರ ಸ್ನ್ಯಾಕ್ಸ್‌: ಅನಾರೋಗ್ಯಕಾರಿ ಸ್ನ್ಯಾಕ್ಸ್‌ ಸೇವನೆ ಬದಲು ಸಣ್ಣ ಬಾಕ್ಸ್‌ನಲ್ಲಿ ನ್ಯೂಟ್ರಿಷಿಯನ್‌ ಅಧಿಕವಿರುವಂತಹ ಆಹಾರವನ್ನು ಆಫೀಸ್‌ಗೆ ಕೊಂಡೊಯ್ಯಿರಿ. ಬಿಡುವಿನ ವೇಳೆಯಲ್ಲಿ ಸೇವಿಸುತ್ತ ಇರಿ. ಬಾದಾಮಿ, ಖರ್ಜುರ ಇತ್ಯಾದಿಗಳನ್ನು ಸೇವಿಸಿ. ಇದರಿಂದ ನಿಮ್ಮ ದೇಹಕ್ಕೆ ಪ್ರೊಟೀನ್‌, ಫೈಬರ್‌ ಮತ್ತು ಅಗತ್ಯ ಪೋಷಕಾಂಶಗಳು ದೊರಕುತ್ತವೆ.
  3. ಕೆಫಿನ್‌ ಕಡಿಮೆ ಮಾಡಿ: ಆಫೀಸ್‌ನಲ್ಲಿ ಉಚಿತ ಚಹಾ ಕಾಫಿ ದೊರಕುತ್ತದೆ ಎಂದು ಕುಡಿಯಬೇಡಿ. ಇದು ಕೆಲಸ ಮಾಡುವಾಗ ಶಕ್ತಿ ನೀಡಿದಂತೆ ಅನಿಸುತ್ತದೆ. ಆದರೆ, ಕೆಫಿನ್‌ ಅತ್ಯಧಿಕವಾದರೆ ಹೈಪರ್‌ ಆಸಿಡಿಟಿ, ಮಂಕು ಭಾವ ಮೂಡುತ್ತದೆ. ಇದರ ಬದಲು ಹರ್ಬಲ್‌ ಟೀ ಅಥವಾ ಹಣ್ಣಿನ ಜ್ಯೂಸ್‌ ಕುಡಿಯಿರಿ.
  4. ಸಮತೋಲಿತ ಲಂಚ್‌: ಮನೆಯಲ್ಲಿ ಸಾಧ್ಯವಿರುವಾಗ ಆರೋಗ್ಯಕರ ಲಂಚ್‌ ಸಿದ್ಧ ಮಾಡಿ. ಅತ್ಯಧಿಕ ಪ್ರೊಟಿನ್‌ ಇರುವ ತರಕಾರಿ, ಹಣ್ಣುಗಳು ಇತ್ಯಾದಿಗಳು ಇರುವ ಸಮತೋಲಿತ ಆಹಾರ ಲಂಚ್‌ ಬಾಕ್ಸ್‌ನಲ್ಲಿ ಇರಲಿ.
  5. ಜಗಿದು ತಿನ್ನಿ: ತಿಂಡಿ ತಿನಿಸುಗಳನ್ನು ಸರಿಯಾಗಿ ಜಗಿದು ಸೇವಿಸುವುದು ಅತ್ಯಗತ್ಯ. ಆಹಾರ ಸೇವನೆ ಕ್ರಮ ಉತ್ತಮಪಡಿಸಿಕೊಳ್ಳಿ. ಹೊಟ್ಟೆ ಖಾಲಿಯಾಗಿರುವಾಗ ಹಸಿವಾದಗ ಏನಾದರೂ ಚೂರುಪಾರು ಸೇವಿಸಲು ಮರೆಯಬೇಡಿ.

ನೆನಪಿಡಿ, ಆಫೀಸ್‌ನಲ್ಲಿ ಆರೋಗ್ಯಕರ ಆಹಾರ ಸೇವನೆಯ ಕ್ರಮ ಅನುಸರಿಸುವುದರಿಂದ ನಿಮ್ಮ ಭವಿಷ್ಯದ ಆರೋಗ್ಯ ಅತ್ಯುತ್ತಮವಾಗಿರುತ್ತದೆ. ಕರಿಯರ್‌ ಪ್ರಗತಿಗೂ ಈ ಆಹಾರ ಹೆಚ್ಚಿನ ಶಕ್ತಿ ನೀಡುತ್ತದೆ.

Whats_app_banner