ಕನ್ನಡ ಸುದ್ದಿ  /  Lifestyle  /  Health News Water Cooking For Health What Is Water Cooking How If Helpful To Health And Weight Loss Oil Free Cooking Rst

Water Cooking: ಏನಿದು ವಾಟರ್‌ ಕುಕ್ಕಿಂಗ್‌, ಎಣ್ಣೆ ಬಳಸದೆ ಅಡುಗೆ ಮಾಡುವ ಕ್ರಮದಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ

ಎಣ್ಣೆ ಬಳಸದೇ ಅಡುಗೆ ಮಾಡಲು ಸಾಧ್ಯವೇ ಎಂದಾಗ ಖಂಡಿತ ಸಾಧ್ಯ ಎನ್ನುತ್ತದೆ ವಾಟರ್‌ ಕುಕ್ಕಿಂಗ್‌ ಟ್ರೆಂಡ್‌. ಸದ್ಯ ಜನಪ್ರಿಯತೆ ಗಳಿಸುತ್ತಿರುವ ಈ ಕುಕ್ಕಿಂಗ್‌ ಟ್ರೆಂಡ್‌ನಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ ಎಂಬುದನ್ನು ತಜ್ಞರು ಒಪ್ಪುತ್ತಾರೆ. ಹಾಗಾದರೆ ಏನಿದು ವಾಟರ್‌ ಕುಕ್ಕಿಂಗ್‌ ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡಿ.

ಏನಿದು ವಾಟರ್‌ ಕುಕ್ಕಿಂಗ್‌?
ಏನಿದು ವಾಟರ್‌ ಕುಕ್ಕಿಂಗ್‌?

ಭಾರತೀಯರ ಅಡುಗೆಮನೆಯಲ್ಲಿ ಅಡುಗೆ ಎಣ್ಣೆಯಿಲ್ಲ ಎಂದರೆ ಯಾವುದೇ ಖಾದ್ಯಗಳೂ ತಯಾರಾಗುವುದಿಲ್ಲ ಎನ್ನಬಹುದು. ಎಣ್ಣೆ ಇಲ್ಲದೇ ಅಡುಗೆ ಮಾಡುವುದು ಊಹಿಸಿಕೊಳ್ಳಿ, ಅದು ಸಾಧ್ಯ ಎಂದು ನಿಮಗೆ ಅನ್ನಿಸುವುದೇ, ಖಂಡಿತ ಇಲ್ಲ ಅಲ್ವಾ? ಪೂರಿ ಕಾಯಿಸುವುದು, ಫಿಶ್‌ ಫ್ರೈ ಮಾಡುವುದು, ಸಾರಿಗೆ ಒಗ್ಗರಣೆ ಹಾಕುವುದು ಇದಕ್ಕೆಲ್ಲಾ ಎಣ್ಣೆ ಬೇಕೇ ಬೇಕು. ಆದರೆ ಇತ್ತೀಚೆಗೆ ಹೊಸ ಕುಕ್ಕಿಂಗ್‌ ಸ್ಟೈಲ್‌ವೊಂದು ಟ್ರೆಂಡ್‌ ಆಗುತ್ತಿದೆ. ಅದೇನೆಂದರೆ ನೀರಿನಲ್ಲಿ ಅಡುಗೆ ಮಾಡುವುದು ಅಥವಾ ವಾಟರ್‌ ಕುಕ್ಕಿಂಗ್‌. ಆರೋಗ್ಯದ ಕಾಳಜಿ ಇರುವವರಿಗಾಗಿ ಹೊಸ ಅಡುಗೆ ವಿಧಾನವನ್ನು ಕಂಡುಹಿಡಿಯಲಾಗಿದೆ.

ಆದರೆ ಎಣ್ಣೆ ಬದಲು ನೀರು ಬಳಸುವುದರಿಂದ ಅಡುಗೆ ರುಚಿಯಾಗುವುದು ಹೇಗೆ, ಇದರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳು ಆಗಲಿವೆ ಎಂಬುದನ್ನು ತಿಳಿಯಲು ಮುಂದೆ ಓದಿ.

ಹೈದರಾಬಾದ್‌ನ ಕೇರ್‌ ಆಸ್ಪತ್ರೆಯ ತಜ್ಞರಾದ ಜಿ. ಸುಷ್ಮಾ ಅವರ ಪ್ರಕಾರ ʼರೋಸ್ಟ್‌ ಮಾಡುವುದು ಅಥವಾ ಫ್ರೈ ಮಾಡುವುದಕ್ಕೆ ಹೋಲಿಸಿದರೆ ಈ ವಿಧಾನವು ಕಡಿಮೆ ತಾಪಮಾನವನ್ನು ಹೊಂದಿರುತ್ತದೆ. ಇದು ಆಹಾರದಲ್ಲಿ ಪೋಷಕಾಂಶವನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ. ಅಲ್ಲದೇ ಈ ಅಡುಗೆ ಪ್ರಕ್ರಿಯೆಯಲ್ಲಿ ನೀರಿನಲ್ಲಿ ಕರಗುವ ಜೀವಸತ್ವಗಳು ಹಾಗೂ ಖನಿಜಗಳು ಹೆಚ್ಚು ಪರಿಣಾಮಕಾರಿಯಾಗಿ ಉಳಿಯುತ್ತವೆʼ ಎಂದು ಹೇಳುತ್ತಾರೆ. ಆದರೆ ಈ ಕ್ರಮದಲ್ಲಿ ಅಡುಗೆಗೆ ಬಳಸುವ ಪದಾರ್ಥಗಳು ಹಾಗೂ ತಂತ್ರಗಳು ಬಹಳ ಪ್ರಮುಖವಾಗುತ್ತದೆ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ ಸುಷ್ಮಾ.

ನೀರಿನಿಂದ ಮಾಡಿದ ಅಡುಗೆಯ ರುಚಿ ಹೇಗೆ?

ತಜ್ಞರ ಪ್ರಕಾರ ಈ ವಾಟರ್‌ ಕುಕ್ಕಿಂಗ್‌ ವಿಧಾನ ಅನುಸರಿಸಿ ಮಾಡಿದ ಅಡುಗೆಯು ರುಚಿಕರವಾಗಿರುತ್ತವೆ. ಆದರೆ ಸರಿಯಾದ ಪದಾರ್ಥ ಹಾಗೂ ಮಸಾಲೆ ಸೇರಿಸುವುದು ಅಗತ್ಯವಾಗುತ್ತದೆ. ಅಂದರೆ ತರಕಾರಿಗಳನ್ನು ನೀರಿನಲ್ಲಿ ಕುದಿಸುವುದು ಅಥವಾ ಆವಿಯಲ್ಲಿ ಬೇಯಿಸುವುದರಿಂದ ಅವುಗಳ ನೈಸರ್ಗಿಕ ಸುವಾಸನೆ ಹಾಗೂ ಪೋಷಕಾಂಶ ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.

ಅಡುಗೆಯ ಮಾಡುವಾಗ ನೀರಿಗೆ ಗಿಡಮೂಲಿಕೆ, ಮಸಾಲೆಗಳನ್ನು ಸೇರಿಸುವುದರಿಂದ ಅಡುಗೆ ರುಚಿ ಹೆಚ್ಚುತ್ತದೆ. ವಾಟರ್‌ ಕುಕ್ಕಿಂಗ್‌ ವಿಧಾನ ಅನುಸರಿಸುವಾಗ ವಿಭಿನ್ನ ರುಚಿ ಹಾಗೂ ತಂತ್ರವನ್ನು ಅನುಸರಿಸುವುದು ಮುಖ್ಯವಾಗುತ್ತದೆ.

ಎಣ್ಣೆ ಬಳಸಿ ತಯಾರಿಸುವ ಅಡುಗೆಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕೇ?

ಸುಷ್ಮಾ ಅವರ ಪ್ರಕಾರ ʼವಾಟರ್‌ ಕುಕ್ಕಿಂಗ್‌ ವಿಧಾನ ಅನುಸರಿಸುವಾಗ ಸಂಪೂರ್ಣವಾಗಿ ಎಣ್ಣೆಯನ್ನು ತ್ಯಜಿಸಬೇಕು ಎಂದೇನಿಲ್ಲ. ಏಕೆಂದರೆ ಸಮತೋಲಿತ ಆಹಾರಕ್ಕಾಗಿ ಆರೋಗ್ಯಕರ ಕೊಬ್ಬಿನಾಂಶ ಕೂಡ ಮುಖ್ಯವಾಗುತ್ತದೆ. ಹಾಗಾಗಿ ಆಗಾಗ ಎಣ್ಣೆ ಬಳಸಿ ಅಡುಗೆ ಮಾಡಬಹುದು. ಆದರೆ ಇದು ಮಿತಿಯಾಗಿರಬೇಕು. ಎಣ್ಣೆ ಬಳಕೆ ಅತಿಯಾದರೆ ಹೃದ್ರೋಗ ತೂಕ ಹೆಚ್ಚಳದಂತಹ ಹಲವು ಸಮಸ್ಯೆಗಳು ಎದುರಾಗುತ್ತವೆ. ಆಲಿವ್‌ ಎಣ್ಣೆ, ಅವಕಾಡೊ ಎಣ್ಣೆ, ಕ್ಯಾನೊಲಾ ಆಯಿಲ್‌ನಂತಹ ಆರೋಗ್ಯಕರ ಅಡುಗೆ ಎಣ್ಣೆಯನ್ನು ಮಿತವಾಗಿ ಬಳಸಬಹುದು. ಆದರೆ ವಾಟರ್‌ ಕುಕ್ಕಿಂಗ್‌ ಅಡುಗೆ ರುಚಿ ಬದಲಾಗುವುದಿಲ್ಲ. ಇದಕ್ಕಾಗಿ ಭಿನ್ನ ರುಚಿ ಹಾಗೂ ಕೊಬ್ಬಿನಾಂಶ ಮಿಶ್ರಿತ ಆರೋಗ್ಯಕರ ಆಹಾರವನ್ನು ತಯಾರಿಸುವುದು ಮುಖ್ಯವಾಗುತ್ತದೆʼ ಎಂದು ಅವರು ಹೇಳುತ್ತಾರೆ.

ನೀರಿನಿಂದ ಅಡುಗೆ ಮಾಡುವುದನ್ನು ಭಾರತೀಯರು ಮೆಚ್ಚಲು ಸಾಧ್ಯವೇ?

ಎಣ್ಣೆ ಬದಲು ನೀರು ಬಳಸಿ ಅಡುಗೆ ಮಾಡುವುದು ಒಂದು ಪ್ರವೃತ್ತಿ. ಇದು ನಮ್ಮ ಅಡುಗೆಯಲ್ಲಿ ಬದಲಾವಣೆಯನ್ನು ಸೂಚಿಸುತ್ತದೆ. ಪೋಷಕಾಂಶ ಸಮೃದ್ಧ, ಕಡಿಮೆ ಕ್ಯಾಲೊರಿ ಸೇವನೆ, ಹಾನಿಕಾರಕ ಸಂಯಕ್ತಗಳ ಅಪಾಯದಿಂದ ದೇಹವನ್ನು ರಕ್ಷಿಸಲು ಇದು ಸಹಾಯ ಮಾಡುತ್ತದೆ. ಇದು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವುದು ಮಾತ್ರವಲ್ಲ, ತೂಕ ಇಳಿಕೆಗೂ ಸಹಕಾರಿ.

ಹಲವರು ನೀರಿನಲ್ಲಿ ಮಾಡುವ ಅಡಿಗೆ ಸಪ್ಪೆ ಇರುತ್ತದೆ ಎಂಬ ಕಾರಣಕ್ಕೆ ಈ ಪದ್ಧತಿಯನ್ನು ಅನುಸರಿಸಲ ಹಿಂಜರಿಯಬಹುದು, ಆದರೆ ಮೊದಲೇ ಹೇಳಿದಂತೆ ಮಸಾಲೆಗಳನ್ನು ಸೇರಿಸಿ ರುಚಿಯಾಗಿಸಲೂ ಸಾಧ್ಯ.

ನೋಡಿದ್ರಲ್ಲ ವಾಟರ್‌ ಕುಕ್ಕಿಂಗ್‌ ಹೆಸರು ವಿಚಿತ್ರ ಅನ್ನಿಸಿದ್ರೂ ಇದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನವಿದೆ. ಈ ರೀತಿ ಅಡುಗೆ ಕ್ರಮ ಆರಂಭದಲ್ಲಿ ನಿಮಗೆ ಹಿಡಿಸದೇ ಇದ್ದರೂ ನಂತರದ ದಿನಗಳಲ್ಲಿ ನಿಮ್ಮ ಬಾಯಿ ರುಚಿ ಹೆಚ್ಚಿಸುವುದರಲ್ಲಿ ಎರಡು ಮಾತಿಲ್ಲ.

(This copy first appeared in Hindustan Times Kannada website. To read more like this please logon to kannada.hindustantimes.com)