ಕನ್ನಡ ಸುದ್ದಿ  /  ಜೀವನಶೈಲಿ  /  Coconut Water: ತೂಕ ಇಳಿಕೆಯಿಂದ ಮಧುಮೇಹ ನಿಯಂತ್ರಣದವರೆಗೆ ಪ್ರತಿದಿನ ಎಳನೀರು ಕುಡಿಯುವುದರಿಂದಾಗುವ 10 ಆರೋಗ್ಯ ಪ್ರಯೋಜನಗಳಿವು

Coconut Water: ತೂಕ ಇಳಿಕೆಯಿಂದ ಮಧುಮೇಹ ನಿಯಂತ್ರಣದವರೆಗೆ ಪ್ರತಿದಿನ ಎಳನೀರು ಕುಡಿಯುವುದರಿಂದಾಗುವ 10 ಆರೋಗ್ಯ ಪ್ರಯೋಜನಗಳಿವು

ನೈಸರ್ಗಿಕ ಪಾನೀಯ ಎಳನೀರು ಸೇವನೆಯಿಂದ ದೇಹಕ್ಕೆ ಹಲವು ಪ್ರಯೋಜನಗಳಿವೆ. ಆದರೆ ನಾವು ಪ್ರತಿನಿತ್ಯ ಎಳನೀರು ಕುಡಿಯಲು ಹಿಂಜರಿಯುತ್ತೇವೆ. ಎಲ್ಲೋ ಸಮಯ ಸಿಕ್ಕಾಗಿ, ಬೇಕೆನಿಸಿದಾಗ ಮಾತ್ರ ಎಳನೀರು ಕುಡಿಯುತ್ತೇವೆ. ಆದರೆ ಪ್ರತಿನಿತ್ಯ ಎಳನೀರು ಕುಡಿಯುವುದರಿಂದ ದೇಹಕ್ಕೆ ಹಲವು ಅದ್ಭುತ ಪ್ರಯೋಜನಗಳಿವೆ. ಆ ಪ್ರಯೋಜನಗಳೇನು ತಿಳಿಯಿರಿ.

ತೂಕ ಇಳಿಕೆಯಿಂದ ಮಧುಮೇಹ ನಿಯಂತ್ರಣದವರೆಗೆ ಪ್ರತಿದಿನ ಎಳನೀರು ಕುಡಿಯುವುದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ನೋಡಿ
ತೂಕ ಇಳಿಕೆಯಿಂದ ಮಧುಮೇಹ ನಿಯಂತ್ರಣದವರೆಗೆ ಪ್ರತಿದಿನ ಎಳನೀರು ಕುಡಿಯುವುದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ನೋಡಿ

ದೇಹಕ್ಕೆ ದಣಿವಾದಾಗ ಒಂದು ಎಳನೀರು ಕುಡಿದರೆ ಅಬ್ಬಾ ಎನ್ನಿಸುತ್ತದೆ. ಯಾವುದೇ ಕಾಲವಿರಲಿ ದೇಹವನ್ನು ರಿಫ್ರೆಶ್‌ ಮಾಡಲು ಎಳನೀರು ಸಹಕಾರಿ. ಬಾಯಾರಿಕೆ ನೀಗಿಸಲು ಕೂಡ ಇದು ಬೆಸ್ಟ್‌. ಮಾರುಕಟ್ಟೆಯಲ್ಲಿ ಸಿಗುವ ಬಗೆ ಬಗೆ ಪಾನೀಯಗಳು ಆರೋಗ್ಯ ಕೆಡಿಸುತ್ತವೆ. ಇವು ನಾಲಿಗೆಗೆ ಸಿಹಿ ಎನ್ನಿಸಿದರೂ ಆರೋಗ್ಯಕ್ಕೆ ಉತ್ತಮವಲ್ಲ. ಆ ಕಾರಣಕ್ಕೆ ಇಂದಿಗೂ ಎಳನೀರು ಮಾರುಕಟ್ಟೆಯಲ್ಲಿ ತನ್ನದೇ ಸ್ಥಾನವನ್ನು ಕಾಪಾಡಿಕೊಂಡು ಬಂದಿದೆ. ಪ್ರತಿನಿತ್ಯ ಎಳನೀರು ಕುಡಿಯುವುದರಿಂದ ನಮ್ಮ ದೇಹಕ್ಕೆ ಹಲವು ಪ್ರಯೋಜನಗಳಿವೆ. ಇದು ಬಾಯಾರಿಕೆ ತಣಿಸುವ ಜೊತೆಗೆ ಕಿಣ್ವಗಳು, ವಿಟಮಿನ್‌, ಮಿನರಲ್ಸ್, ಅಮಿನೊ ಆಸಿಡ್‌ ಹಾಗೂ ಆಂಟಿಆಕ್ಸಿಡೆಂಟ್‌ ಅಂಶಗಳನ್ನು ಹೊಂದಿದೆ. ಆಯುರ್ವೇದ ಪ್ರಕಾರ ಎಳನೀರು ತೂಕ ಇಳಿಕೆಗೂ ಸಹಕಾರಿ. ಇದು ನಮ್ಮ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ, ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ. ಇದು ತಕ್ಷಣಕ್ಕೆ ದೇಹಕ್ಕೆ ಚೈತನ್ಯ ನೀಡುತ್ತದೆ.

ಟ್ರೆಂಡಿಂಗ್​ ಸುದ್ದಿ

ಪ್ರತಿನಿತ್ಯ ಎಳನೀರು ಕುಡಿಯುವುದರಿಂದಾಗುವ 10 ಅದ್ಭುತ ಪ್ರಯೋಜನಗಳಿವು

ತೂಕ ಇಳಿಕೆಗೆ ಸಹಕಾರಿ: ಕ್ಯಾಲೊರಿ ಪ್ರಮಾಣ ಕಡಿಮೆ ಇರುವ ಕಾರಣ, ಇದು ತೂಕ ಇಳಿಕೆ ಮಾಡಲು ಬಯಸುವವರಿಗೆ ಬೆಸ್ಟ್‌ ಎನ್ನಬಹುದು. ಇದು ಹೊಟ್ಟೆ ತುಂಬಿದಂತಿರುತ್ತದೆ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ದೇಹದಲ್ಲಿನ ವಿಷಕಾರಿ ಅಂಶವನ್ನು ಹೊರ ಹಾಕಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಹೆಚ್ಚಿಸಿ ಹಸಿವನ್ನು ನಿಯಂತ್ರಿಸುತ್ತದೆ. ವಾರದಲ್ಲಿ ನಾಲ್ಕು ದಿನ ಎಳನೀರು ಕುಡಿಯುವ ಅಭ್ಯಾಸ ರೂಢಿಸಿಕೊಂಡರೆ ತೂಕ ಇಳಿಕೆ ಸಾಧ್ಯ.

ಹ್ಯಾಂಗ್‌ ಓವರ್‌ ಗುಣಪಡಿಸುತ್ತದೆ: ರಾತ್ರಿ ಪಾರ್ಟಿ ಮಾಡಿದ ನಂತರ, ಮಧ್ಯಪಾನ ಮಾಡಿದ ನಂತರ ಹ್ಯಾಂಗೋವರ್‌ನಿಂದ ಹೊರ ಬರಬೇಕು ಎಂದರೆ ಎಳನೀರು ಕುಡಿಯಬೇಕು. ಇದು ಡಿಹೈಡ್ರೇಷನ್‌ ಅನ್ನು ತಪ್ಪಿಸುತ್ತದೆ. ದೇಹಕ್ಕೆ ಅಗತ್ಯವಿರುವ ಎಲೆಕ್ಟ್ರೋಲೈಟ್‌ ಅನ್ನು ಪುನಃ ತುಂಬಿಸುತ್ತದೆ. ದೇಹವನ್ನು ರಿಫ್ರೆಶ್‌ ಮಾಡುತ್ತದೆ.

ಹೊಟ್ಟೆ ಕೆಟ್ಟರೆ ಎಳನೀರು ಕುಡಿಯಿರಿ: ಅಜೀರ್ಣದಿಂದ ಹೊಟ್ಟೆ ಕೆಡಬಹುದು. ಇದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು. ಇದರಲ್ಲಿ ಮೆಗ್ನಿಶಿಯಂ, ಪೊಟ್ಯಾಶಿಯಂ ಹಾಗೂ ಸೋಡಿಯಂನಂತಹ ಖನಿಜಗಳು ಹೊಟ್ಟೆಯನ್ನು ರಿಪೇರಿ ಮಾಡುತ್ತದೆ. ಎಳನೀರಿನಲ್ಲಿನ ಟ್ಯಾನಿನ್‌ ಅಂಶ ಉರಿಯೂತವನ್ನು ಕಡಿಮೆ ಮಾಡುತ್ತದೆ.

ಹೃದಯದ ಆರೋಗ್ಯವನ್ನು ಕಾಪಾಡುತ್ತದೆ: ಕೊಬ್ಬಿನಾಂಶ ಹಾಗೂ ಕೊಲೆಸ್ಟ್ರಾಲ್‌ ರಹಿತವಾಗಿರುವ ಎಳನೀರು ಎಸ್‌ಡಿಎಲ್‌ (ಉತ್ತಮ ಕೊಬ್ಬಿನಾಂಶ) ಹೆಚ್ಚಳಕ್ಕೆ ಸಹಾಯ ಮಾಡುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್‌ ಪ್ರಮಾಣವನ್ನು ತಗ್ಗಿಸಿ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಇದು ಹೃದಯಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ನಿವಾರಿಸುತ್ತದೆ. ಎಳನೀರಿನಲ್ಲಿ ಆಂಟಿಪ್ಲೇಟ್ಲೆಟ್‌ ಮತ್ತು ಉರಿಯೂತದ ಗುಣಲಕ್ಷಣಗಳಿವೆ. ಇದು ಪ್ಲೇಕ್‌ ರಚನೆಯನ್ನು ತಡೆದು, ಸರಾಗ ರಕ್ತ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ.

ಕಿಡ್ನಿಸ್ಟೋನ್‌ ನಿವಾರಿಸುತ್ತದೆ: ಎಳನೀರನ್ನು ಪ್ರತಿನಿತ್ಯ ಸೇವಿಸುವುದರಿಂದ ಕಿಡ್ನಿಸ್ಟೋನ್‌ ಉಂಟಾಗದಂತೆ ತಡೆಯಬಹುದು. ಇಲಿಗಳ ಮೇಲೆ ನಡೆದ ಅಧ್ಯಯನದ ಪ್ರಕಾರ ಎಳನೀರು ಮೂತ್ರದಲ್ಲಿ ಹರಳುಗಳು ಉಂಟಾಗುವುದನ್ನು ತಡೆಯಬಹುದು.

ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ: ಎಳನೀರಿನಲ್ಲಿ ನಾರಿನಾಂಶ ಇರುವ ಕಾರಣದಿಂದ ಇದು ಅಜೀರ್ಣದ ಸಮಸ್ಯೆಯಿಂದ ಪರಿಹಾರ ನೀಡುತ್ತದೆ. ಇದು ಆಮ್ಲದ ಒಳಹರಿವನ್ನು ಕಡಿಮೆ ಮಾಡುತ್ತದೆ ಮತ್ತು ಅಜೀರ್ಣವನ್ನು ತಡೆಯುತ್ತದೆ. ನಿಮಗೆ ಆಗಾಗ ಅಜೀರ್ಣದ ಸಮಸ್ಯೆ ಕಾಡುತ್ತಿದ್ದರೆ ಪ್ರತಿನಿತ್ಯ ಎಳನೀರು ಕುಡಿಯಿರಿ.

ಚರ್ಮದ ಕಲೆಗಳನ್ನು ನಿವಾರಿಸುತ್ತದೆ: ತ್ವಚೆಯ ಮೇಲಿನ ಕಲೆಗಳ ಶಾಶ್ವತ ಪರಿಹಾರ ಹುಡುಕುತ್ತಿರುವವರು ಪ್ರತಿನಿತ್ಯ ಎಳನೀರು ಸೇವಿಸಬೇಕು. ಮೊಡವೆ, ಕಪ್ಪುಕಲೆ ಇದ್ದರೆ ಮುಖಕ್ಕೆ ಎಳನೀರು ಹಚ್ಚಬೇಕು. ಇದರಿಂದ ಚರ್ಮದ ಹೊಳಪು ಹೆಚ್ಚುತ್ತದೆ. ಜೊತೆಗೆ ಇದು ಚರ್ಮಕ್ಕೆ ತೇವಾಂಶ ನೀಡುತ್ತದೆ.

ತಲೆನೋವಿಗೆ ಪರಿಹಾರ ಒದಗಿಸುತ್ತದೆ: ಡೀಹೈಡ್ರೇಷನ್‌ ಕಾರಣದಿಂದ ಉಂಟಾಗುವ ತಲೆನೋವಿಗೆ ಎಳನೀರು ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. ಇದು ದೇಹವನ್ನು ಹೈಡ್ರೇಟ್‌ ಮಾಡುತ್ತದೆ. ಇದು ದೇಹದಲ್ಲಿ ಎಲೆಕ್ಟ್ರೋಲೈಟ್‌ ಕೊರತೆಯನ್ನು ನೀಗಿಸುತ್ತದೆ. ಎಳನೀರಿನಲ್ಲಿ ಮೆಗ್ನೀಶಿಯಂ ಅಂಶ ಸಮೃದ್ಧವಾಗಿದೆ. ಇದು ಮೈಗ್ರೇನ್‌ ಅನ್ನು ತಡೆಯುತ್ತದೆ.

ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ: ಎಳನೀರಿನಲ್ಲಿರುವ ಪೊಟ್ಯಾಶಿಯಂ ಅಂಶ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪೊಟ್ಯಾಶಿಯಂ ಅಲ್ಲದೆ ಇದರಲ್ಲಿ ಅರ್ಜಿನೈನ್‌ ಎಂಬ ಅಂಶವಿದೆ. ಇದು ರಕ್ತದ ಹರಿವನ್ನು ಸುಧಾರಿಸುತ್ತದೆ ಹಾಗೂ ರಕ್ತನಾಳಗಳನ್ನು ಸಡಿಲಗೊಳಿಸುತ್ತದೆ. ಮಲಗುವ ಮೊದಲು ಒಂದು ಲೋಟ ಎಳನೀರು ಕುಡಿಯುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ.

ಮಧುಮೇಹವನ್ನು ನಿಯಂತ್ರಿಸುತ್ತದೆ: ಸಂಶೋಧನೆಗಳ ಪ್ರಕಾರ ಎಳನೀರು ಮಧುಮೇಹದ ಲಕ್ಷಣಗಳನ್ನು ನಿಯಂತ್ರಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಉತ್ತಮ ಪ್ರಮಾಣದಲ್ಲಿ ಇರುವ ಮ್ಯಾಂಗನೀಸ್ ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.

ವಿಭಾಗ