ಕನ್ನಡ ಸುದ್ದಿ  /  ಜೀವನಶೈಲಿ  /  Idiot Syndrome: ಏನಿದು ಈಡಿಯಟ್‌ ಸಿಂಡ್ರೋಮ್‌? ಆರೋಗ್ಯ ಸಮಸ್ಯೆಗಳ ಬಗ್ಗೆ ಇಂಟರ್ನೆಟ್‌ನಲ್ಲಿ ಸರ್ಚ್‌ ಮಾಡುವ ಮುನ್ನ ಓದಿ

IDIOT Syndrome: ಏನಿದು ಈಡಿಯಟ್‌ ಸಿಂಡ್ರೋಮ್‌? ಆರೋಗ್ಯ ಸಮಸ್ಯೆಗಳ ಬಗ್ಗೆ ಇಂಟರ್ನೆಟ್‌ನಲ್ಲಿ ಸರ್ಚ್‌ ಮಾಡುವ ಮುನ್ನ ಓದಿ

ನೀವು ಆರೋಗ್ಯ ಸಮಸ್ಯೆಗಳ ಬಗ್ಗೆ ಹೆಚ್ಚಾಗಿ ಇಂಟರ್ನೆಟ್‌ನಲ್ಲಿ ಸರ್ಚ್‌ ಮಾಡ್ತೀರಾ, ನಿಮ್ಮ ಆರೋಗ್ಯ ಸಮಸ್ಯೆಗಳಿಗೆ ಅಂತರ್ಜಾಲವೇ ಪರಿಹಾರ ಆಗ್ತಾ ಇದ್ಯಾ? ಹಾಗಾದ್ರೆ ನಿಮ್ಮನ್ನು ಈಡಿಯಟ್‌ ಸಿಂಡ್ರೋಮ್‌ ಕಾಡಬಹುದು ಎಚ್ಚರ. ಏನಿದು ಈಡಿಯಟ್‌ ಸಿಂಡ್ರೋಮ್‌, ಇದು ಯಾವ ಕಾರಣದಿಂದ ಬರುತ್ತೆ, ಇದನ್ನು ನಿರ್ವಹಿಸುವ ರೀತಿ ಹೇಗೆ ಎಂಬಿತ್ಯಾದಿ ವಿವರ ಇಲ್ಲಿದೆ.

ಆರೋಗ್ಯ ಸಮಸ್ಯೆಗಳ ಬಗ್ಗೆ ಇಂಟರ್ನೆಟ್‌ನಲ್ಲಿ ಸರ್ಚ್‌ ಮಾಡುವ ಮುನ್ನ ಓದಿ
ಆರೋಗ್ಯ ಸಮಸ್ಯೆಗಳ ಬಗ್ಗೆ ಇಂಟರ್ನೆಟ್‌ನಲ್ಲಿ ಸರ್ಚ್‌ ಮಾಡುವ ಮುನ್ನ ಓದಿ

ಇಂಟರ್ನೆಟ್‌ ಇಲ್ಲ ಅಂದ್ರೆ ನಾವು ಬದುಕೋಕೆ ಸಾಧ್ಯ ಇಲ್ಲ ಅನ್ನುವಷ್ಟರ ಮಟ್ಟಿಗೆ ಈ ಅಂತರ್ಜಾಲ ಎನ್ನುವುದು ನಮ್ಮ ಬದುಕನ್ನು ಆವರಿಸಿದೆ. ಮಾಹಿತಿ ತಂತ್ರಜ್ಞಾನ ವಿಚಾರದಲ್ಲಿ ಕ್ರಾಂತಿ ಮೂಡಿಸಿದ ಕೀರ್ತಿ ಇಂಟರ್ನೆಟ್‌ನದ್ದು. ಇದು ಪ್ರಪಂಚದ ಯಾವುದೇ ಮೂಲೆಯ ಯಾವುದೇ ವಿಚಾರವನ್ನಾದ್ರೂ ಸರಿ ಒಂದೇ ಕ್ಲಿಕ್‌ ಮೂಲಕ ತಿಳಿದುಕೊಳ್ಳುವ ಅವಕಾಶ ಮಾಡಿಕೊಡುತ್ತದೆ. ಆದರೆ ಈ ಇಂಟರ್ನೆಟ್‌ನಲ್ಲಿ ಸರ್ಚ್‌ ಅತಿಯಾಗಿ ಸರ್ಚ್‌ ಮಾಡುವುದು ಆರೋಗ್ಯಕ್ಕೆ ಅಪಾಯ ತಂದೊಡ್ಡಬಹುದು ಎನ್ನುತ್ತದೆ ಇತ್ತೀಚಿನ ಅಧ್ಯಯನ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಆರೋಗ್ಯ ಸಮಸ್ಯೆಗಳು ಹುಟ್ಟಿಕೊಳ್ಳುತ್ತಿದ್ದು, ಜನರು ತಮಗಿರುವ ಕಾಯಿಲೆಯ ಬಗ್ಗೆ ತಿಳಿದಿಕೊಳ್ಳಲು ಅಂತರ್ಜಾಲದ ಮೊರೆ ಹೋಗುತ್ತಿದ್ದಾರೆ. ಇಂಟರ್ನೆಟ್‌ನಲ್ಲಿ ಇರುವುದೇ ಸತ್ಯ ಎಂದು ನಂಬಿ ಜೀವ ಕಳೆದುಕೊಂಡವರು ಇದ್ದಾರೆ. ತಮಗಿರುವ ಕಾಯಿಲೆಯ ಬಗ್ಗೆ ಇಂಟರ್ನೆಟ್‌ನಲ್ಲಿ ಹುಡುಕುವ ಈ ಅಭ್ಯಾಸವು ಈಡಿಯರ್‌ ಸಿಂಡ್ರೋಮ್‌ ಎನ್ನುವ ವಿದ್ಯಮಾನಕ್ಕೆ ಕಾರಣವಾಗುತ್ತದೆ. ಏನಿದು ಈಡಿಯಟ್‌ ಸಿಂಡ್ರೋಮ್‌, ಇದರಿಂದ ಎದುರಾಗುವ ಅಪಾಯಗಳೇನು ಎಂಬೆಲ್ಲಾ ವಿವರ ಇಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ಏನಿದು ಈಡಿಯಟ್‌ ಸಿಂಡ್ರೋಮ್‌?

ಇಂಟರ್ನೆಟ್‌ ಡಿರೈವಡ್ಡ್‌ ಇರ್ನ್ಫಾಮೇಷನ್‌ ಅಬ್ಸ್‌ಸ್ಟ್ಕ್ರಷನ್‌ ಟ್ರೀಟ್‌ಮೆಂಟ್‌ʼ ಎನ್ನುವುದು ಈಡಿಯಟ್‌ನ ವಿಸ್ಕೃತ ರೂಪವಾಗಿದೆ. ಇದು ಸುಲಭವಾಗಿ ಲಭ್ಯವಿರುವ ಆನ್‌ಲೈನ್ ಮಾಹಿತಿಯು ಸರಿಯಾದ ವೈದ್ಯಕೀಯ ಆರೈಕೆಗೆ ಅಡ್ಡಿಯಾಗುವ ಪರಿಸ್ಥಿತಿಯನ್ನು ವಿವರಿಸುತ್ತದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ನ ಜರ್ನಲ್ ಕ್ಯೂರಿಯಸ್‌ನಲ್ಲಿ ಪ್ರಕಟವಾದ ಅಧ್ಯಯನವು ಈ ಸಮಸ್ಯೆಯನ್ನು ಎತ್ತಿ ತೋರಿಸುತ್ತದೆ.

ಈಡಿಯಟ್‌ ಸಮಸ್ಯೆ ಹೊಂದಿರುವ ರೋಗಿಗಳು ಸಾಮಾನ್ಯವಾಗಿ ಅಂತರ್ಜಾಲದ ಹುಡುಕಾಟಗಳ ಆಧಾರದ ಮೇಲೆ ಸ್ವಯಂ-ರೋಗನಿರ್ಣಯವನ್ನು ಮಾಡುತ್ತಾರೆ, ಇವರು ವೈದ್ಯರ ಬಳಿ ತೋರಿಸಿದೆ, ತಮಗಿರುವ ಕಾಯಿಲೆಗೆ ಸೂಕ್ತ ಚಿಕಿತ್ಸೆ ಪಡೆಯದೇ ಆರೋಗ್ಯ ನಿರ್ಲಕ್ಷ್ಯ ಮಾಡುತ್ತಾರೆ. ಮಾತ್ರವಲ್ಲ ಸ್ವಯಂ ಔಷಧಿಯ ಮೊರೆ ಹೋಗುತ್ತಾರೆ.

ಹೆಲ್ತ್‌ಕೇರ್‌ ಪರಿಕರಗಳಿಗೆ ಇಂಟರ್ನೆಟ್‌ ಸಹಾಯಕ ಆರೋಗ್ಯ ಸಾಧನವಲ್ಲ ಎಂದು ಹೇಳಲು ಸಾಧ್ಯವಿಲ್ಲ. ಕೆಲವು ನಂಬಲರ್ಹ ಅಂದರೆ ಪ್ರಮಾಣೀಕೃತ ವೈದ್ಯಕೀಯ ವೆಬ್‌ಸೈಟ್‌ಗಳು ಮತ್ತು ಆನ್‌ಲೈನ್ ಸರ್ಪೋರ್ಟ್‌ ಗ್ರೂಪ್‌ಗಳು ಮೌಲ್ಯಯುತ ಮಾಹಿತಿಯನ್ನು ಒದಗಿಸಬಹುದು. ಇದೇ ರೀತಿಯ ಪರಿಸ್ಥಿತಿಗಳನ್ನು ಎದುರಿಸುತ್ತಿರುವ ಇತರರೊಂದಿಗೆ ರೋಗಿಗಳನ್ನು ಸಂಪರ್ಕಿಸಬಹುದು. ಆದರೆ ತಮಗಿರುವ ರೋಗದ ಬಗ್ಗೆ ಇಂಟರ್ನೆಟ್‌ನಲ್ಲಿ ಹುಡುಕಿ ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳುವವರೂ ಇದ್ದಾರೆ.

ವಿಶ್ವ ಆರೋಗ್ಯ ಸಮಸ್ಯೆ ಈ ಸಮಸ್ಯೆಯನ್ನು ಇನ್ಫೋಡೆಮಿಕ್‌ ಎಂದು ಕರೆಯುತ್ತದೆ. ಇದು ಆರೋಗ್ಯ ರಕ್ಷಣೆಯಲ್ಲಿ ಸಂಕೀರ್ಣ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಏಕೆಂದರೆ ಅಂತರ್ಜಾಲದಲ್ಲಿ ಸಿಗುವ ಅಪಾರ ಮಾಹಿತಿಯು ಆರೋಗ್ಯ ಅಧಿಕಾರಗಳ ಮೇಲೆ ಅಪನಂಬಿಕೆ ಮೂಡುವಂತೆ ಮಾಡಿದೆ. ರೋಗಿಗಳು ಪ್ರಮುಖ ಆರೋಗ್ಯ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಪಡೆಯುತ್ತಾರೆ ಮತ್ತು ಹೆಚ್ಚುವರಿ ಸಹಾಯವನ್ನು ನಿರೀಕ್ಷಿಸುತ್ತಾರೆ ಎಂದು ತಜ್ಞರು ಹೇಳುತ್ತಾರೆ. 

ಈಡಿಯಟ್‌ ಸಿಂಡ್ರೋಮ್‌ ಆರೋಗ್ಯದ ಆತಂಕವನ್ನು ಹೇಗೆ ಹೆಚ್ಚಿಸಬಹುದು?

ನಿಮಗಿರುವ ಸಮಸ್ಯೆಯ ಬಗ್ಗೆ ಅತಿಯಾಗಿ ಯೋಚಿಸುತ್ತೀರಾ? ಇಂಟರ್ನೆಟ್‌ ಆರೋಗ್ಯ ಮಾಹಿತಿಯ ನಿಧಿಯಾಗಿರಬಹುದು. ಆದರೆ ನೀವು ನಿರಂತರವಾಗಿ ರೋಗಲಕ್ಷಣಗಳನ್ನು ಸಂಶೋಧಿಸುತ್ತಿದ್ದರೆ ಆತಂಕ ಹಾಗೂ ಒತ್ತಡ ಎದುರಾಗಬಹುದು.

ಸಂದೇಶಗಳನ್ನು ತಪ್ಪಾಗಿ ಅರ್ಥೈಸುವುದೇ?

ಸೈಬರ್‌ಕಾಂಡ್ರಿಯಾ ಅಥವಾ ಈಡಿಯರ್‌ ಸಿಂಡ್ರೋಮ್‌ ನಿಮ್ಮ ರೋಗಲಕ್ಷಣಗಳನ್ನು ತಪ್ಪಾಗಿ ಅರ್ಥೈಸಲು ಕಾರಣವಾಗಬಹುದು. ನಿಮ್ಮಗಿಲ್ಲದ ಗಂಭೀರ ಕಾಯಿಲೆ ನಿಮಗೆ ಇದೆ ಎಂದು ನೀವು ನಂಬಬಹುದು.

ವೈದ್ಯರ ಬಳಿ ಹೋಗದೇ ಇರುವುದು?

ಆನ್‌ಲೈನ್‌ನಲ್ಲಿ ವಿಷಯಗಳನ್ನು ಹುಡುಕುತ್ತಾ, ಅದಕ್ಕೆ ಪರಿಹಾರ ಸಂಗ್ರಹಿಸುತ್ತಾ ನೀವು ವೃತ್ತಿಪರರನ್ನು ಭೇಟಿ ಮಾಡದೇ ಇರಬಹುದು. ಚಿಕಿತ್ಸೆ ಹಾಗೂ ಪರೀಕ್ಷೆ ತಡವಾಗಬಹುದು. ಆದರೆ ಯಾವುದೇ ಸಮಸ್ಯೆ ಆಗಿರಲಿ ಆರಂಭಿಕ ರೋಗನಿರ್ಣಯ ಬಹಳ ಮುಖ್ಯ.

ಸೈಬರ್‌ಕಾಂಡ್ರಿಯಾ ಆನ್‌ಲೈನ್ ಮಾಹಿತಿಯ ಆಧಾರದ ಮೇಲೆ ಔಷಧಿಗಳನ್ನು ನಿಲ್ಲಿಸಲು ಅಥವಾ ಬದಲಾಯಿಸಲು ನಿಮ್ಮನ್ನು ಪ್ರಚೋದಿಸುತ್ತದೆ, ಇದು ಅಪಾಯಕಾರಿ ಮತ್ತು ಗಂಭೀರವಾದ ಆರೋಗ್ಯ ಪರಿಣಾಮಗಳನ್ನು ಉಂಟುಮಾಡಬಹುದು.

ಈಡಿಯಟ್‌ ಸಿಂಡ್ರೋಮ್‌ವನ್ನು ನಿರ್ವಹಿಸಲು ಸಲಹೆ

ಎಲ್ಲ ವೆಬ್‌ಸೈಟ್‌ ಒಂದೇ ರೀತಿ ಇರುವುದಿಲ್ಲ. ವಿಶ್ವಾಸಾರ್ಹ ಮೂಲಗಳನ್ನು ಹುಡುಕಿ. ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳು ಮತ್ತು ಜರ್ನಲ್‌ಗಳ ವೆಬ್‌ಸೈಟ್‌ಗಳಲ್ಲಿ ನೀವು ಕಂಡುಕೊಂಡ ಮಾಹಿತಿ ಸರಿ ಇದ್ಯಾ ಪರಿಶೀಲಿಸಿ.

ವೃತ್ತಿಪರ ಮಾರ್ಗದರ್ಶನ ಪಡೆಯಿರಿ. ಸಂದೇಹವಿದ್ದಲ್ಲಿ, ವೈದ್ಯರನ್ನು ಭೇಟಿ ಮಾಡಿ. ಅವರು ನಿಮ್ಮ ರೋಗಲಕ್ಷಣಗಳನ್ನು ಸರಿಯಾಗಿ ಮೌಲ್ಯಮಾಪನ ಮಾಡಬಹುದು, ನಿಮ್ಮ ಕಾಳಜಿಯನ್ನು ಪರಿಹರಿಸಬಹುದು ಮತ್ತು ಸರಿಯಾದ ಚಿಕಿತ್ಸೆಯ ಕೋರ್ಸ್ ಅನ್ನು ಒದಗಿಸಬಹುದು.

ಆರೋಗ್ಯದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಇಂಟರ್ನೆಟ್ ಬಳಸಿ, ಆದರೆ ರೋಗನಿರ್ಣಯ ಮತ್ತು ಚಿಕಿತ್ಸೆಯ ಸಲಹೆಗಾಗಿ ವೈದ್ಯಕೀಯ ವೃತ್ತಿಪರರು ಅತ್ಯುತ್ತಮ ಸಂಪನ್ಮೂಲವಾಗಿದೆ ಎಂಬುದನ್ನು ನೆನಪಿಡಿ.

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)