Parrot Fever: ಏನಿದು ಗಿಳಿಜ್ವರ? ಯುರೋಪ್‌ನಲ್ಲಿ ಹರಡುತ್ತಿರುವ ಈ ಮಾರಣಾಂತಿಕ ಕಾಯಿಲೆಗೆ ಕಾರಣ, ಇದರ ಲಕ್ಷಣಗಳ ಕುರಿತ ಮಾಹಿತಿ ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  Parrot Fever: ಏನಿದು ಗಿಳಿಜ್ವರ? ಯುರೋಪ್‌ನಲ್ಲಿ ಹರಡುತ್ತಿರುವ ಈ ಮಾರಣಾಂತಿಕ ಕಾಯಿಲೆಗೆ ಕಾರಣ, ಇದರ ಲಕ್ಷಣಗಳ ಕುರಿತ ಮಾಹಿತಿ ಇಲ್ಲಿದೆ

Parrot Fever: ಏನಿದು ಗಿಳಿಜ್ವರ? ಯುರೋಪ್‌ನಲ್ಲಿ ಹರಡುತ್ತಿರುವ ಈ ಮಾರಣಾಂತಿಕ ಕಾಯಿಲೆಗೆ ಕಾರಣ, ಇದರ ಲಕ್ಷಣಗಳ ಕುರಿತ ಮಾಹಿತಿ ಇಲ್ಲಿದೆ

ಪ್ರಪಂಚದಾದ್ಯಂತ ಬ್ಯಾಕ್ಟೀರಿಯಾಗಳಿಂದ ಹರಡುವ ಸೋಂಕಿನ ದಿನೇ ದಿನೇ ಪ್ರಮಾಣ ಹೆಚ್ಚುತ್ತಿದೆ. ಇದೀಗ ಯುರೋಪ್‌ನಲ್ಲಿಗಿಳಿ ಜ್ವರ ಆರಂಭವಾಗಿದ್ದು, ಈಗಾಗಲೇ 5 ಮಂದಿ ಸಾವನ್ನಪ್ಪಿದ್ದಾರೆ. ಇದೊಂದು ಅಪರೂಪದ ಮಾರಣಾಂತಿಕ ಕಾಯಿಲೆಯಾಗಿದ್ದು, ಇದನ್ನ ಸಿಟ್ಟಾಕೋಸಿಸ್‌ ಎಂದೂ ಕರೆಯುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಈ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಏನಿದು ಗಿಳಿ ಜ್ವರ
ಏನಿದು ಗಿಳಿ ಜ್ವರ

ಕಳೆದ ಮೂರ್ನಾಲ್ಕು ದಿನಗಳಿಂದ ಪ್ರಪಂಚದಾದ್ಯಂತ ಫ್ಯಾರಟ್‌ ಫೀವರ್‌ದೇ ಸದ್ದು. ಉಸಿರಾಟದ ಸೋಂಕು ಉಂಟು ಮಾಡುವ ಸಮಸ್ಯೆ ಇದಾಗಿದ್ದು, ಇದನ್ನು ಸಿಟ್ಟಾಕೋಸಿಸ್‌ ಎಂದೂ ಕರೆಯುತ್ತಾರೆ. ಈಗಾಗಲೇ ಈ ಸೋಂಕಿನಿಂದ ಯರೋಪ್‌ನಲ್ಲಿ 5 ಮಂದಿ ಸಾವನ್ನಪ್ಪಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಪ್ರಕಾರ ಡೆನ್ಮಾರ್ಕ್‌ನಲ್ಲಿ 4 ಮಂದಿ ಸಾವನ್ನಪ್ಪಿದ್ದಾರೆ. ನೆದರಲ್ಯಾಂಡ್‌ನಲ್ಲಿ ಒಬ್ಬರು, ಆಸ್ಟ್ರೀಯಾ, ಜರ್ಮನಿ ಮತ್ತು ಸ್ವೀಡನ್‌ನಾದ್ಯಂತ ಹಲವರು ಈ ವೈರಸ್‌ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಯರೋಪಿನಾದ್ಯಂತ ಸಂಚಲನ ಸೃಷ್ಟಿಸಿರುವ ಈ ವೈರಸ್‌ ಈಗ ಪ್ರಪಂಚದಾದ್ಯಂತ ಜನರಲ್ಲಿ ಭಯ ಹುಟ್ಟಿಸುತ್ತಿರುವುದು ಸುಳ್ಳಲ್ಲ. ಹಾಗಾದರೆ ಈ ಗಿಳಿ ಜ್ವರಕ್ಕೆ ಕಾರಣವೇನು, ಇದರ ಲಕ್ಷಣಗಳೇನು, ಚಿಕಿತ್ಸೆ ಏನು ಎಂಬಿತ್ಯಾದಿ ಕುರಿತ ವಿವರವಾದ ಮಾಹಿತಿ ಇಲ್ಲಿದೆ.

ಏನಿದು ಗಿಳಿ ಜ್ವರ?

ʼಗಿಳಿ ಜ್ವರವನ್ನು ಸಿಟ್ಟಾಕೋಸಿಸ್‌ ಎಂದೂ ಕರೆಯುತ್ತಾರೆ. ಇದು ಅಪರೂಪದ ಗಂಭೀರ ಸಮಸ್ಯೆ ಉಂಟು ಮಾಡುವ ವೈರಸ್‌ ಆಗಿದ್ದ, ಕ್ಲಮೈಡಿಯ ಸಿಟ್ಟಾಸಿ ಎಂಬ ಬ್ಯಾಕ್ಟೀರಿಯಾನಿಂದ ಇದು ಉಂಟಾಗುತ್ತದೆ. ಇದು ಪಕ್ಷಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ವಿಶೇಷವಾಗಿ ಗಿಳಿಗಳು, ಪಾರಿವಾಳಗಳು ಹಾಗೂ ಕೋಳಿಗಳ ಮೇಲೆ ಇದು ಪರಿಣಾಮ ಬೀರುತ್ತದೆ. ಈ ಬ್ಯಾಕ್ಟೀರಿಯಾವು ಗಾಳಿಯಿಂದ ಮನುಷ್ಯರಿಗೂ ಹರಡುತ್ತದೆʼ ಎಂದು ಹಿಂದೂಸ್ತಾನ್‌ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆʼ ಗುರುಗ್ರಾಮದ ಫೋರ್ಟಿಸ್‌ ಆಸ್ಪತ್ರೆಯ ವೈದ್ಯೆ ಡಾ. ನೇಹಾ ರಸ್ತೋಗಿ.

ಗಿಳಿ ಜ್ವರ ಮನುಷ್ಯರ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಯಾವುದೇ ವ್ಯಕ್ತಿಯು ಬ್ಯಾಕ್ಟೀರಿಯಾದ ಸಂಪರ್ಕಕ್ಕೆ ಬಂದಾಗ ಆ ವ್ಯಕ್ತಿಯು ಜ್ವರ, ಶೀತ, ತಲೆನೋವು, ಸ್ನಾಯು ಸೆಳೆತ ಆಯಾಸದಂತಹ ರೋಗಲಕ್ಷಣಗಳು ಕಾಣುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಇದು ನ್ಯೂಮೋನಿಯಾ ಹಾಗೂ ಇತರ ಉಸಿರಾಟ ತೊಂದರೆಗಳಿಗೆ ಕಾರಣವಾಗುತ್ತದೆ.

ಗಿಳಿ ಜ್ವರವು ಕ್ಲಮೈಡಿಯ ಸಿಟ್ಟಾಸಿ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ಸೋಂಕು. ಇದು ಸೋಂಕಿತ ಪಕ್ಷಿಗಳ ನೇರ ಸಂಪರ್ಕದ ಮೂಲಕ ಅಥವಾ ಅವುಗಳ ಹಿಕ್ಕೆ, ಗರಿಗಳು ಹಾಗೂ ಉಸಿರಾಟದ ಮೂಲಕ ಮನುಷ್ಯರಿಗೆ ಹರಡುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಅಥವಾ ಈ ಮೊದಲೇ ಉಸಿರಾಟದ ಸಮಸ್ಯೆ ಇರುವವರು ಈ ಸೋಂಕಿನಿಂದ ಹೆಚ್ಚು ತೊಂದರೆಗೆ ಒಳಗಾಗಬಹುದು.

ಗಿಳಿ ಜ್ವರದಿಂದ ಸುರಕ್ಷಿತವಾಗಿರುವುದು ಹೇಗೆ?

ಗಿಳಿ ಜ್ವರವನ್ನು ತಡೆಗಟ್ಟಲು ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಪಕ್ಷಿಗಳನ್ನು ನಿರ್ವಹಿಸುವಾಗ ಅಥವಾ ಪಕ್ಷಿಗಳು ಇರುವ ಪ್ರದೇಶಗಳಲ್ಲಿ ಕೆಲಸ ಮಾಡುವವರು ಉತ್ತಮ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು. ನಿಮ್ಮ ಮನೆಗಳಲ್ಲಿ ಕೋಳಿ, ಪಾರಿವಾಳ, ಗಿಳಿಯಂತಹ ಪಕ್ಷಿಗಳಿದ್ದರೆ ಅವುಗಳ ಗೂಡು ಅಥವಾ ಅವು ಇರುವ ಜಾಗವನ್ನು ಮುಟ್ಟಿದ ನಂತರ ಸ್ವಚ್ಛವಾಗಿ ಕೈ ತೊಳೆದುಕೊಳ್ಳಬೇಕು. ಗ್ಲೌಸ್‌ ಹಾಗೂ ಮಾಸ್ಕ್‌ ತಪ್ಪದೇ ಧರಿಸಿ. ಇದರ ಅಪಾಯಗಳ ಬಗ್ಗೆ ಎಲ್ಲರಲ್ಲೂ ಜಾಗೃತಿ ಮೂಡಿಸುವುದು ಉತ್ತಮ. ಅಗತ್ಯವಿದ್ದರೆ ವೈದ್ಯಕೀಯ ಆರೈಕೆ ಪಡೆಯುವುದು ಅವಶ್ಯ.

ಗಿಳಿ ಜ್ವರದಿಂದ ಸದ್ಯಕ್ಕೆ ಭಾರತಕ್ಕೆ ಯಾವುದೇ ಅಪಾಯವಿಲ್ಲ. ಆದರೂ ಈ ರೀತಿ ಸೋಂಕುಗಳು ಬೇಗನೆ ಹರಡುವ ಸಾಧ್ಯತೆ ಇರುವ ಕಾರಣ ಎಚ್ಚರ ವಹಿಸುವುದು ಉತ್ತಮ.

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner