ಕನ್ನಡ ಸುದ್ದಿ  /  Lifestyle  /  Health News What Is Reason Behind For Constant Genital Itching Diabetes Is The Main Cause For This Women Health Arc

Genital Itching: ಗುಪ್ತಾಂಗದಲ್ಲಿ ನಿರಂತರ ತುರಿಕೆ ಉಂಟಾಗಲು ಇದೂ ಕಾರಣ, ನಿರ್ಲಕ್ಷ್ಯ ಸಲ್ಲ; ನಿವಾರಣೆಗೆ ಈ ಕ್ರಮ ಪಾಲಿಸಿ

ಗುಪ್ತಾಂಗ ಅಥವಾ ಜನನಾಂಗದ ಸುತ್ತ ಅತಿಯಾದ ತುರಿಕೆ ಅಥವಾ ಉರಿ ಉಂಟಾಗುವುದಕ್ಕೆ ಕಾರಣ ಯೀಸ್ಟ್‌ ಸೋಂಕು. ರಕ್ತದಲ್ಲಿ ಗ್ಲುಕೋಸ್‌ ಪ್ರಮಾಣವು ಅನಿರೀಕ್ಷಿತ ಮಟ್ಟದಲ್ಲಿ ಏರಿಕೆಯಾದಾಗ ಯೀಸ್ಟ್‌ ಬೆಳವಣಿಗೆಗೆ ಪೂರಕ ವಾತಾವರಣ ಉಂಟಾಗುತ್ತದೆ. ಸಕ್ಕರೆದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾದಾಗ ಈ ಸೋಂಕಿನ ವಿರುದ್ಧ ಹೋರಾಡಲು ಅಗತ್ಯವಿರುವ ದೇಹದ ಸಾಮರ್ಥ್ಯವು ಕುಂಠಿತವಾಗುತ್ತದೆ.

ಗುಪ್ತಾಂಗದಲ್ಲಿ ನಿರಂತರ ತುರಿಕೆ ಉಂಟಾಗಲು ಇದೂ ಕಾರಣ, ನಿರ್ಲಕ್ಷ್ಯ ಸಲ್ಲ; ನಿವಾರಣೆಗೆ ಈ ಕ್ರಮ ಪಾಲಿಸಿ (ಸಾಂಕೇತಿಕ ಚಿತ್ರ)
ಗುಪ್ತಾಂಗದಲ್ಲಿ ನಿರಂತರ ತುರಿಕೆ ಉಂಟಾಗಲು ಇದೂ ಕಾರಣ, ನಿರ್ಲಕ್ಷ್ಯ ಸಲ್ಲ; ನಿವಾರಣೆಗೆ ಈ ಕ್ರಮ ಪಾಲಿಸಿ (ಸಾಂಕೇತಿಕ ಚಿತ್ರ)

ಮನುಷ್ಯ ದೇಹವು ಬಹಳ ಸೂಕ್ಷ್ಮ. ದೇಹದಲ್ಲಿ ಕೊಂಚ ವ್ಯತ್ಯಾಸವಾದರೂ ಅದರ ಪರಿಣಾಮವನ್ನು ನಾವು ಎದುರಿಸುತ್ತೇವೆ. ಕೆಲವೊಮ್ಮೆ ಸೂಕ್ಷ್ಮ ಜೀವಿಗಳು, ಫಂಗಸ್‌ಗಳು ದೇಹದೊಳಗೆ ಸೇರಿಕೊಂಡರೆ ಅದಕ್ಕೆ ದೇಹವು ಪ್ರತಿರೋಧವನ್ನು ವ್ಯಕ್ತಪಡಿಸುತ್ತದೆ. ಆ ಜೀವಿಗಳ ಬೆಳವಣಿಗೆಯಾಗುತ್ತಿದೆ ಎಂಬುದನ್ನು ಕೆಲವು ಚಿಹ್ನೆಗಳ ಮುಖಾಂತರ ತೋರಿಸುತ್ತದೆ. ಅವುಗಳಲ್ಲಿ ಗುಪ್ತಾಂಗ ಅಥವಾ ಜನನಾಂಗದ ತುರಿಕೆಯೂ ಒಂದು. ಇದೊಂಥರಾ ಹೇಳಿಕೊಳ್ಳಲಾಗ ಸಮಸ್ಯೆ. ಹಲವರಲ್ಲಿ ಈ ಸಮಸ್ಯೆ ಕಾಡುವುದು ಸಹಜ.

ಜನನಾಗ ಅಥವಾ ಗುಪ್ತಾಗಂದ ಸುತ್ತ ಉಂಟಾಗುವ ನಿರಂತರ ತುರಿಕೆಗೆ ಯೀಸ್ಟ್‌ ಎಂಬ ಫಂಗಸ್‌ ಕಾರಣ. ಇದೊಂದು ಸಾಮಾನ್ಯ ಪರಿಸ್ಥಿತಿಯಾಗಿದ್ದು ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಅತಿಯಾದ ಮಧುಮೇಹದಿಂದ ಇದರ ಉತ್ಪತ್ತಿ ಹೆಚ್ಚಾಗಿದ್ದು, ಅದು ನಿರಂತರ ತುರಿಕೆ ಮತ್ತು ಕಿರಿಕಿರಿಯ ಅನುಭವ ಉಂಟಾಗುತ್ತದೆ.

ತಜ್ಞರ ಪ್ರಕಾರ, ಯೀಸ್ಟ್‌ ಎಂಬ ಶಿಲೀಂಧ್ರವು ಸಕ್ಕರೆಯನ್ನು ಅವಲಂಬಿಸಿದೆ. ಅಂದರೆ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾದವರಲ್ಲಿ ಇದರ ಬೆಳವಣಿಗೆ ಹೆಚ್ಚು. ಮಧುಮೇಹ ಇದ್ದವರಲ್ಲಿ ಸಕ್ಕರೆಯ ಪ್ರಮಾಣವು ಅಧಿಕವಾಗಿರುತ್ತದೆ. ಹೀಗಾಗಿಯೇ ಅವರು ಹೆಚ್ಚಾಗಿ ಈ ಸೋಂಕಿಗೆ ಒಳಗಾಗುತ್ತಾರೆ. ಅಂಕಿ-ಅಂಶದ ಪ್ರಕಾರ ಜನನಾಂಗದ ಯೀಸ್ಟ್‌ ಸೋಂಕು ಸಾಮಾನ್ಯ ಸಮಸ್ಯೆ. ಸುಮಾರು 72 ಪ್ರತಿಶತದಷ್ಟು ಮಹಿಳೆಯರು ಅವರ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಈ ಸೋಂಕಿಗೆ ತುತ್ತಾಗುತ್ತಾರೆ. ಇದಕ್ಕೆ ಚಿಕಿತ್ಸೆ ತೆಗದುಕೊಳ್ಳದೇ ಹಾಗೆ ಉಳಿದರೆ ಮುಂದೆ ಇದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಯೀಸ್ಟ್‌ ಸೋಂಕಿಗೆ ಕಾರಣ

ಟೈಪ್‌ 2 ಡಯಾಬಿಟಿಸ್‌ನಿಂದ ಬಳಲುತ್ತಿರುವವರಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇವರಲ್ಲಿ ದೇಹವು ಸಕ್ಕರೆಯನ್ನು ಸಂಸ್ಕರಿಸುವ ವ್ಯವಸ್ಥೆಯ ಸಾಮರ್ಥ್ಯ ಕಳೆದುಕೊಂಡಿರುತ್ತದೆ. ಇದು ಯೀಸ್ಟ್‌ ಸೋಂಕಿಗೆ ಒಳಗಾಗುವಂತೆ ಮಾಡುತ್ತದೆ. ಸಂಶೋಧನೆಗಳ ಪ್ರಕಾರ ಮಧುಮೇಹ ಹೊಂದಿರುವವರಲ್ಲಿ ಸಕ್ಕರೆಯ ಅಂಶವು ಅಧಿಕವಾಗಿರುತ್ತದೆ. ಅದು ಬ್ಯಾಕ್ಟೀರಿಯಾ ಮತ್ತು ಯೀಸ್ಟ್‌ ಸಮತೋಲನಕ್ಕೆ ಅಡ್ಡಿಪಡಿಸುತ್ತದೆ. ರಕ್ತದಲ್ಲಿ ಸಕ್ಕರೆಯ ಪ್ರಮಾಣವು ಅಧಿಕವಾದಾಗ ದೇಹದಿಂದ ಹೊರಹೋಗುವ ದ್ರವಗಳ ಮೂಲಕ ಅದನ್ನು ಹೊರಹಾಕಲು ಪ್ರಾರಂಭಿಸಬಹುದು. ಇದು ಯೀಸ್ಟ್‌ ಉತ್ಪತ್ತಿಗೆ ಕಾರಣವಾಗಿದೆ. ‌ ರಕ್ತದಲ್ಲಿನ ಅಧಿಕ ಸಕ್ಕರೆಯು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹಾಳುಮಾಡುತ್ತದೆ. ಇದರಿಂದ ಸೋಂಕು ತಡೆಗಟ್ಟುವುದು ಮತ್ತು ಹೋಗಲಾಡಿಸುವುದು ಕಷ್ಟವಾಗುತ್ತದೆ.

ಇದನ್ನೂ ಓದಿ:

ರೋಗ ಲಕ್ಷಣಗಳು

* ಗುಪ್ತಾಂಗ ಅಥವಾ ಜನನಾಂಗದಲ್ಲಿ ನಿರಂತರ ತುರಿಕೆ

* ಗುಪ್ತಾಂಗದ ಸುತ್ತ ಕೆಂಪಾಗುವಿಕೆ ಮತ್ತು ನೋವು

* ಬಿಳಿ ದ್ರವ ವಿಸರ್ಜನೆ

* ಮೂತ್ರ ವಿಸರ್ಜಿಸುವಾಗ ನೋವು ಅಥವಾ ಉರಿ

ಮಧುಮೇಹದ ಲಕ್ಷಣಗಳು

* ಅತಿಯಾದ ಹಸಿವು ಮತ್ತು ಆಯಾಸ

* ಅಧಿಕ ಮೂತ್ರ ವಿಸರ್ಜನೆ

* ಯಾವಾಗಲೂ ಬಾಯಾರಿಕೆಯ ಅನುಭವ

* ಬಾಯಿ ಒಣಗುವಿಕೆ

* ಚರ್ಮದ ತುರಿಕೆ

* ಮಂದ ದೃಷ್ಟಿ

ಯೀಸ್ಟ್‌ ಸೋಂಕು ತಡೆಗಟ್ಟುವ ಮಾರ್ಗೋಪಾಯಗಳು

* ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು.

* ಬಿಗಿಯಾದ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸುವುದು.

* ಹತ್ತಿಯ ಒಳ ಉಡುಪುಗಳನ್ನು ಧರಿಸುವುದು. ಇದು ತೇವಾಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.

* ವ್ಯಾಯಾಮದ ನಂತರ ಬಟ್ಟೆಗಳನ್ನು ಬದಲಿಸುವುದು.

* ತುಂಬಾ ಬಿಸಿಯಾದ ನೀರಿನಲ್ಲಿ ಸ್ನಾನ ಮಾಡುವುದು ಮತ್ತು ಬಿಸಿನೀರಿನ ಟಬ್‌ಗಳಲ್ಲಿ ಕುಳಿತುಕೊಳ್ಳುವುದನ್ನು ತಪ್ಪಿಸುವುದು.

* ಡೌಚ್‌ ಸ್ಪ್ರೇಗಳ ಬಳಕೆಯನ್ನು ಬಿಡುವುದು.

* ಋತುಚಕ್ರದ ಸಮಯದಲ್ಲಿ ಪ್ಯಾಡ್‌ಗಳನ್ನು ಆಗಾಗ ಬದಲಿಸುವುದು ಮತ್ತು ಪರಿಮಳಯುಕ್ತ ಪ್ಯಾಡ್‌ಗಳನ್ನು ಬಳಸದೇ ಇರುವುದು.

(This copy first appeared in Hindustan Times Kannada website. To read more like this please logon to kannada.hindustantimes.com)