ಕನ್ನಡ ಸುದ್ದಿ  /  ಜೀವನಶೈಲಿ  /  Hair Care: ನಾರಿಮಣಿಯರೇ, ಅತಿಯಾಗಿ ಕೂದಲು ಉದುರೋದ್ರಿಂದ ಚಿಂತೆ ಆಗಿದ್ಯಾ? ಈ ಅಂಶಗಳೂ ಕಾರಣವಿರಬಹುದು ಗಮನಿಸಿ

Hair Care: ನಾರಿಮಣಿಯರೇ, ಅತಿಯಾಗಿ ಕೂದಲು ಉದುರೋದ್ರಿಂದ ಚಿಂತೆ ಆಗಿದ್ಯಾ? ಈ ಅಂಶಗಳೂ ಕಾರಣವಿರಬಹುದು ಗಮನಿಸಿ

ಮಹಿಳೆಯರ ಸೌಂದರ್ಯ ಹೆಚ್ಚಿಸುವಲ್ಲಿ ಕೂದಲಿನ ಪಾತ್ರ ಕೂಡ ಮಹತ್ವದ್ದು. ಆದರೆ ಇತ್ತೀಚಿನ ದಿನಗಳಲ್ಲಿ ವಿವಿಧ ಕಾರಣಗಳಿಂದಾಗಿ ಮಹಿಳೆಯರಲ್ಲಿ ಕೂದಲು ಉದುರುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕೂದಲು ತೆಳುವಾಗಲು ಹಾಗೂ ಉದುರಲು ಕಾರಣವಾಗುವ ಪ್ರಮುಖ ಅಂಶಗಳು ಯಾವುದು ಎಂಬುದನ್ನು ತಿಳಿಯೋಣ.

ನಾರಿಮಣಿಯರೇ, ಅತಿಯಾಗಿ ಕೂದಲು ಉದುರೋದ್ರಿಂದ ಚಿಂತೆ ಆಗಿದ್ಯಾ? ಈ ಅಂಶಗಳೂ ಕಾರಣವಿರಬಹುದು ಗಮನಿಸಿ
ನಾರಿಮಣಿಯರೇ, ಅತಿಯಾಗಿ ಕೂದಲು ಉದುರೋದ್ರಿಂದ ಚಿಂತೆ ಆಗಿದ್ಯಾ? ಈ ಅಂಶಗಳೂ ಕಾರಣವಿರಬಹುದು ಗಮನಿಸಿ

ಕೂದಲು ಉದುರುವ ವಿಚಾರದಲ್ಲಿ ಪುರುಷರಿಗೆ ಹೋಲಿಸಿದರೆ, ಮಹಿಳೆಯರಿಗೆ ಕೂದಲು ಉದುರುವುದು ಅಂಥ ಗಂಭೀರ ವಿಷಯ ಎಂದು ಅನ್ನಿಸದಿದ್ದರೂ ಸಹ ಜಗತ್ತಿನಾದ್ಯಂತ ಲಕ್ಷಾಂತರ ಜನ ಮಹಿಳೆಯರು ಕೂದಲು ಉದುರುವಿಕೆ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಕೂದಲು ಉದುರುವುದು ಒಂದು ಆತಂಕಕಾರಿ ವಿಷಯವೇ ಆಗಿದ್ದು ಸರಿಯಾದ ಸಮಯಕ್ಕೆ ಇದನ್ನು ಪತ್ತೆ ಮಾಡಿ ಪರಿಣಾಮಕಾರಿ ಚಿಕಿತ್ಸೆಯನ್ನು ಪಡೆಯುವುದು ಅತ್ಯಗತ್ಯವಾಗಿದೆ. ಮಹಿಳೆಯರಲ್ಲಿ ಕೂದಲು ಉದುರಲು ಅನೇಕ ಕಾರಣಗಳನ್ನು ನೀಡಬಹುದು. ಇದಕ್ಕೆ ಆನುವಂಶಿಕ, ಹಾರ್ಮೋನ್‌ನಲ್ಲಿ ಏರಿಳಿತ, ವೈದ್ಯಕೀಯ ಹಾಗೂ ಜೀವನಶೈಲಿಯಲ್ಲಿ ಕಾಣಿಸಿಕೊಳ್ಳುವ ಬದಲಾವಣೆಗಳೇ ಕಾರಣ ಎಂದು ಹೇಳಬಹುದು.

ಟ್ರೆಂಡಿಂಗ್​ ಸುದ್ದಿ

ಸೌಂದರ್ಯಶಾಸ್ತ್ರದಲ್ಲಿ ಸಾಕಷ್ಟು ಅಧ್ಯಯನವನ್ನು ಮಾಡಿರುವ ಡರ್ಮಟಾಲಜಿಸ್ಟ್ ಡಾ. ಸ್ತುತಿ ಖರೆ ಶುಕ್ಲಾ ಈ ವಿಚಾರವಾಗಿ ಮಾತನಾಡಿದ್ದು ಮಹಿಳೆಯರಲ್ಲಿ ಕೂದಲು ಉದುರುವಿಕೆಗೆ ಕಾರಣಗಳನ್ನು ಪಟ್ಟಿ ಮಾಡಿದ್ದಾರೆ.

ಆನುವಂಶಿಕ ಕಾರಣ

ಮಹಿಳೆಯರಲ್ಲಿ ಕೂದಲು ಉದುರಲು ಸಾಮಾನ್ಯ ಕಾರಣವೆಂದರೆ ಆಂಡ್ರೊಜೆನೆಟಿಕ್ ಅಲೋಪೆಸಿಯಾ ಆಗಿದೆ. ಮಹಿಳೆಯರಲ್ಲಿ ಆಂಡ್ರೊಜೆನ್ ಸಣ್ಣ ಪ್ರಮಾಣದಲ್ಲಿ ಇರುತ್ತದೆ. ಈ ಹಾರ್ಮೋನ್‌ಗಳು ಕೂದಲಿನ ಬೆಳವಣಿಗೆಯ ಚಕ್ರದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಇದರಿಂದ ಕೂದಲು ತೆಳುವಾಗುತ್ತದೆ. ಕೂದಲಿನ ಬೆಳವಣಿಗೆಯೂ ಕುಂಠಿತವಾಗುತ್ತದೆ.

ಹಾರ್ಮೋನ್‌ಗಳಲ್ಲಿ ಬದಲಾವಣೆ

ಮಹಿಳೆಯರಲ್ಲಿ ಕೂದಲು ಉದುರಲು ಮತ್ತೊಂದು ಪ್ರಮುಖ ಕಾರಣ ಏನೆಂದರೆ ಹಾರ್ಮೋನ್‌ಗಳಲ್ಲಿ ಉಂಟಾಗುವ ಬದಲಾವಣೆ ಎಂದು ಹೇಳಬಹುದು. ಪಿಸಿಓಎಸ್‌, ಗರ್ಭಧಾರಣೆ, ಋತುಬಂಧ ಹಾಗೂ ಥೈರಾಯ್‌ನಿಂದ ಅಸ್ವಸ್ಥತೆ ಉಂಟಾದ ಸಂದರ್ಭದಲ್ಲಿ ಹಾರ್ಮೋನ್‌ಗಳಲ್ಲಿ ವಿಪರೀತ ಬದಲಾವಣೆ ಉಂಟಾಗುತ್ತದೆ. ಇದರಿಂದ ಕೂದಲು ತೆಳುವಾಗುವುದು ಮಾತ್ರವಲ್ಲದೇ ಕೂದಲು ಉದುರುವುದು ಕೂಡ ಹೆಚ್ಚಾಗುತ್ತದೆ.

ಮಾನಸಿಕ ಆರೋಗ್ಯ

ಮಾನಸಿಕವಾಗಿ ಮಹಿಳೆಯರು ಅನುಭವಿಸುವ ಒತ್ತಡದಿಂದಾಗಿ ಟೆಲೋಜೆನ್ ಎಫ್ಲುವಿಯಮ್‌ನಂತಹ ಕೂದಲು ಉದುರುವಿಕೆ ಸ್ಥಿತಿ ಉಂಟಾಗುತ್ತದೆ. ದೀರ್ಘಕಾಲದ ಒತ್ತಡವು ಅತಿ ಹೆಚ್ಚಿನ ಪ್ರಮಾಣದಲ್ಲಿ ಕೂದಲು ಉದುರುವಿಕೆ ಉಂಟು ಮಾಡುತ್ತದೆ.

ಔಷಧಿಗಳು ಹಾಗೂ ಚಿಕಿತ್ಸೆ

ನಾವು ಯಾವುದೋ ಕಾಯಿಲೆಯ ಸುಧಾರಣೆಗೆಂದು ತೆಗೆದುಕೊಳ್ಳುವ ಔಷಧಿಯ ಅಡ್ಡಪರಿಣಾಮದಿಂದಾಗಿ ಕೂದಲು ಉದುರಬಹುದು. ಕೀಮೋಥೆರಪಿ ಕೂಡ ಕೂದಲು ಸಂಪೂರ್ಣವಾಗಿ ಉದುರಿ ಹೋಗುವಂತೆ ಮಾಡುತ್ತದೆ. ಅಧಿಕ ರಕ್ತದೊತ್ತೆ, ಖಿನ್ನತೆ ಹಾಗೂ ಗರ್ಭ ನಿರೋಧಕ ಔಷಧಿ ಸೇರಿದಂತೆ ಇತರೆ ಮದ್ದುಗಳು ಕೂದಲನ್ನು ತೆಳುವಾಗಿಸುತ್ತದೆ,

ಮಹಿಳೆಯರಲ್ಲಿ ಕೂದಲು ಉದುರುವಿಕೆ ಎನ್ನುವುದು ಒಂದು ಬಹುಮುಖಿ ಸಮಸ್ಯೆಯಾಗಿದೆ. ಆನುವಂಶಿಕ ಕಾರಣದಿಂದ ನಮ್ಮ ಜೀವನಶೈಲಿಯವರೆಗೆ ವಿವಿಧ ಕಾರಣಗಳನ್ನು ನಾವು ನೀಡಬಹುದು. ನಮ್ಮ ಕೂದಲು ಉದುರುವಿಕೆಗೆ ನಿಜವಾದ ಕಾರಣವೇನು ಎಂದು ತಿಳಿದುಕೊಂಡ ಬಳಿಕ ಕೂದಲು ಉದುರುವಿಕೆಯನ್ನು ತಡೆಯಲು ಮಾರ್ಗ ಹುಡುಕಿಕೊಳ್ಳಬಹುದಾಗಿದೆ. ಮಹಿಳೆಯರು ಕೂದಲಿನ ಸಮಗ್ರ ಆರೈಕೆ ಮಾಡುವ ಮೂಲಕ ತೆಳುವಾಗುವುದು ಹಾಗೂ ಉದುರುವಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿದೆ.