ಒಳ ಉಡುಪುಗಳನ್ನು ಸರಿಯಾಗಿ ವಾಶ್‌ ಮಾಡದೇ ಇದ್ದರೆ ತಪ್ಪಿದ್ದಲ್ಲ ಸಮಸ್ಯೆ; ಇದನ್ನು ಎಷ್ಟು ದಿನಗಳಿಗೊಮ್ಮೆ, ಹೇಗೆ ತೊಳೆಯಬೇಕು; ಮಾಹಿತಿ
ಕನ್ನಡ ಸುದ್ದಿ  /  ಜೀವನಶೈಲಿ  /  ಒಳ ಉಡುಪುಗಳನ್ನು ಸರಿಯಾಗಿ ವಾಶ್‌ ಮಾಡದೇ ಇದ್ದರೆ ತಪ್ಪಿದ್ದಲ್ಲ ಸಮಸ್ಯೆ; ಇದನ್ನು ಎಷ್ಟು ದಿನಗಳಿಗೊಮ್ಮೆ, ಹೇಗೆ ತೊಳೆಯಬೇಕು; ಮಾಹಿತಿ

ಒಳ ಉಡುಪುಗಳನ್ನು ಸರಿಯಾಗಿ ವಾಶ್‌ ಮಾಡದೇ ಇದ್ದರೆ ತಪ್ಪಿದ್ದಲ್ಲ ಸಮಸ್ಯೆ; ಇದನ್ನು ಎಷ್ಟು ದಿನಗಳಿಗೊಮ್ಮೆ, ಹೇಗೆ ತೊಳೆಯಬೇಕು; ಮಾಹಿತಿ

ಒಣ ಉಡುಪುಗಳನ್ನು ವಾಶ್‌ ಮಾಡುವ ವಿಚಾರದಲ್ಲಿ ಹಲವು ರೀತಿಯ ಗೊಂದಲಗಳು ಇರಬಹುದು. ಈ ವಿಷಯವನ್ನು ಮುಕ್ತವಾಗಿ ಮಾತನಾಡಲು ಸಂಕೋಚವಾಗಬಹುದು. ಹಾಗಂತ ಒಳ ಉಡುಪುಗಳ ವಿಚಾರದಲ್ಲಿ ಕೆಲವೊಂದು ಮಾಹಿತಿಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಇದನ್ನು ಎಷ್ಟು ದಿನಗಳಿಗೊಮ್ಮೆ ತೊಳೆಯಬೇಕು, ತೊಳೆಯುವ ಕ್ರಮವೇನು, ಸರಿಯಾಗಿ ತೊಳೆಯದಿದದ್ದರೆ ಏನಾಗುತ್ತದೆ ಈ ಕುರಿತ ಮಾಹಿತಿ.

ಒಣ ಉಡುಪುಗಳನ್ನು ತೊಳೆಯುವ ವಿಧಾನ
ಒಣ ಉಡುಪುಗಳನ್ನು ತೊಳೆಯುವ ವಿಧಾನ

ನಾವು ಪ್ರತಿದಿನ ಸ್ನಾನ ಮಾಡುವ ಮೂಲಕ ನಮ್ಮ ದೇಹವನ್ನು ಸ್ವಚ್ಛ ಮಾಡಿಕೊಳ್ಳುವಂತೆ ನಾವು ಧರಿಸುವ ಬಟ್ಟೆಗಳನ್ನೂ ಸ್ವಚ್ಚ ಮಾಡಿಕೊಳ್ಳಬೇಕು. ಅದರಲ್ಲೂ ಒಳ ಉಡುಪುಗಳನ್ನು ಪ್ರತಿನಿತ್ಯ ತಪ್ಪದೇ ತೊಳೆಯುವ ಅಭ್ಯಾಸ ಅವಶ್ಯ.

ಒಳ ಉಡುಪುಗಳು ದೇಹಕ್ಕೆ ಅಂಟಿಕೊಂಡಿರುವ ಕಾರಣ ಬೆವರು ಹಾಗೂ ಕೊಳೆ ಅದಕ್ಕೆ ಹೆಚ್ಚು ಅಂಟಿರುತ್ತದೆ. ಅದನ್ನು ಸ್ವಚ್ಛ ಮಾಡದೇ ಇದ್ದರೆ ಬ್ಯಾಕ್ಟೀರಿಯಾಗಳು ಹರಡುವ ಸಾಧ್ಯತೆ ಹೆಚ್ಚು. ಒಳ ಉಡುಪುಗಳನ್ನು ತೊಳೆಯದೇ ಇದ್ದರೆ, ಅವು ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ.

ಹಾಗಾದರೆ ಒಳ ಉಡುಪುಗಳನ್ನು ತೊಳೆಯುವ ಸರಿಯಾದ ವಿಧಾನ ಯಾವುದು, ಒಳ ಉಡುಪುಗಳನ್ನು ಸರಿಯಾಗಿ ತೊಳೆಯದೇ ಇದ್ದರೆ ಏನಾಗುತ್ತದೆ, ಎಷ್ಟು ದಿನಗಳಿಗೊಮ್ಮೆ ಒಳ ಉಡುಪುಗಳನ್ನು ತೊಳೆಯಬೇಕು, ಒಳ ಉಡುಪುಗಳನ್ನು ತೊಳೆಯುವುದು ಹೇಗೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಬಿಸಿ ನೀರು ಬಳಕೆ ಉತ್ತಮ, ಆದರೆ…

ಒಳ ಉಡುಪುಗಳನ್ನು ತೊಳೆಯುವಾಗ ಕೆಲವು ಸಾಮಾನ್ಯ ನಿಯಮಗಳಿವೆ. ಮೊದಲಿಗೆ ಡೆಲಿಕೇಟ್‌ ಇರುವ ಬಟ್ಟೆಗಳನ್ನು ಬೇರ್ಪಡಿಸಿ. ಒಳ ಉಡುಪುಗಳನ್ನು ಒಮ್ಮೆ ಕೈಯಲ್ಲಿ ತೊಳೆದು ನಂತರ ಮಷಿನ್‌ಗೆ ಹಾಕುವುದು ಸೂಕ್ತ. ಮಷಿನ್‌ ಹಾಕುವ ಮುನ್ನ ಮಷಿನ್‌ನ ಸೆಟ್ಟಿಂಗ್‌ ಅನ್ನು ಗಮನಿಸಿ. ಒಳ ಉಡುಪುಗಳನ್ನು ಬಿಸಿನೀರಿನಲ್ಲಿ ತೊಳೆಯುವುದು ಉತ್ತಮ ವಿಧಾನ. ವಾಷಿಂಗ್‌ ಮಷಿನ್‌ನಲ್ಲಿ ತೊಳೆಯುವಾಗಲೂ ಬಿಸಿನೀರಿನ ಆಯ್ಕೆ ಮಾಡಬಹುದು ಎಂದು ತಜ್ಞರು ಹೇಳುತ್ತಾರೆ.

ʼಒಳ ಉಡುಪುಗಳನ್ನು ತೊಳೆಯುವ ಬ್ಯಾಕ್ಟೀರಿಯಾಗಳನ್ನು ಕೊಲ್ಲಲ್ಲು 60 ಡಿಗ್ರಿ ಸೆಲ್ಸಿಯಸ್‌ ಬಿಸಿನೀರಿನಲ್ಲಿ ತೊಳೆಯುವುದು ಉತ್ತಮʼ ಎಂದು ಅಮೆರಿಕ ಮೂಲದ ಜವಳಿ ತಜ್ಞ ಲೆವೆನ್‌ಹಾಪ್ಟ್‌ ಹೇಳುತ್ತಾರೆ. ಆದರೆ ಅತಿಯಾದ ತಾಪಮಾನ ಅಥವಾ ಬಿಸಿನೀರು ಬಟ್ಟೆಯನ್ನು ಹಾಳು ಮಾಡುತ್ತದೆ ಎಂಬುದನ್ನು ಅವರು ಸೇರಿಸುತ್ತಾರೆ. ಒಳ ಉಡುಪುಗಳನ್ನು ತೊಳೆಯುವಾಗ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಡಿಟರ್ಜೆಂಟ್‌ ಬಳಕೆ ಕೂಡ ಉತ್ತಮ ಎನ್ನುತ್ತಾರೆ ಫ್ರೆಜ್‌.

ಹೀಗೆ ಒಣಗಿಸಿ

ಒಳ ಉಡುಪುಗಳನ್ನು ಒಗೆದ ಮೇಲೆ ಅದನ್ನು ಒಣಗಿಸುವ ರೀತಿಯು ಬಹಳ ಮುಖ್ಯವಾಗುತ್ತದೆ. ಒಳ ಉಡುಪುಗಳನ್ನು ಒಣಗಿಸುವ ನೇತು ಹಾಕಬೇಕು. ಕೆಲವೊಮ್ಮೆ ಯಾರಾದರೂ ನೋಡಿದರೆ ಎಂಬ ಸಂಕೋಚಕ್ಕೆ ಒಳ ಉಡುಪುಗಳನ್ನು ಅಡ್ಡಲಾಗಿ ಒಣಗಿಸುತ್ತೇವೆ, ಇದರಿಂದ ಅರ್ಧಂಬರ್ಧ ಒಣಗುವ ಮೂಲಕ ಬ್ಯಾಕ್ಟೀರಿಯಾಗಳ ಉತ್ಪತ್ತಿಗೆ ಕಾರಣವಾಗಬಹುದು ಎನ್ನುತ್ತಾರೆ ತಜ್ಞ ರಿಚರ್ಡ್ಸನ್‌. ಬಾಕ್ಸರ್‌ಗಳು ಮತ್ತು ಹತ್ತಿ ಜಾಕಿ ಶಾರ್ಟ್ಸ್‌ಗಳನ್ನು ಗಾಳಿಯಲ್ಲಿ ಒಣಗಿಸುವುದು ಉತ್ತಮ. ಅವುಗಳನ್ನು ಡ್ರೈಯರ್‌ಗೆ ಹಾಕುವ ಬದಲು ನೇರವಾಗಿ ಬಿಸಿಲಿನಲ್ಲಿ ಒಣಗಿಸುವುದರಿಂದ ಅವುಗಳ ಹೆಚ್ಚು ಬಾಳಿಕೆ ಬರುತ್ತವೆ ಎನ್ನುವುದು ರಿಚರ್ಡನ್ಸ್‌ ಅವರ ಅಭಿಪ್ರಾಯ.

ಒಳ ಉಡುಪುಗಳನ್ನು ಸರಿಯಾಗಿ ತೊಳೆಯದಿದ್ದರೆ ಏನಾಗುತ್ತದೆ

ಒಳ ಉಡುಪುಗಳನ್ನು ಸರಿಯಾಗಿ ತೊಳೆಯದೇ ಇದ್ದರೆ ಬ್ಯಾಕ್ಟೀರಿಯಾಗಳು ಹೆಚ್ಚಬಹುದು. ಇದರಿಂದ ವಾಸನೆ, ಇನ್‌ಫೆಕ್ಷನ್‌, ತುರಿಕೆ, ದದ್ದು, ಕಜ್ಜಿ, ಯೀಸ್ಟ್‌ ಸೋಂಕಿನಂತಹ ತೊಂದರೆಗಳು ಉಂಟಾಗಬಹುದು ಎನ್ನುತ್ತಾರೆ ವೈದ್ಯ ಲಾರಾ ಪರ್ಡಿ. ದೇಹ ಹಾಗೂ ಚರ್ಮದ ಸೂಕ್ಷ್ಮ ಪ್ರದೇಶಗಳಲ್ಲಿ ನಾವು ಒಳ ಉಡುಪುಗಳನ್ನು ಧರಿಸುತ್ತೇವೆ. ಆ ಸೂಕ್ಷ್ಮ ಜಾಗದಲ್ಲಿ ನಿರ್ಜೀವ ಕೋಶಗಳು, ಲೋಷನ್‌, ಬೆವರಿನಂತಹ ದೇಹದ ದ್ರವಗಳು ಸಂಗ್ರಹವಾಗಿ ಕಿರಿಕಿರಿ ಉಂಟು ಮಾಡಬಹುದು. ಆ ಕಾರಣಕ್ಕೆ ಯಾವುದೇ ಕಾರಣಕ್ಕೂ ಒಮ್ಮೆ ಧರಿಸಿದ ಒಳ ಉಡುಪುಗಳನ್ನು ವಾಶ್‌ ಮಾಡದೇ ಇನ್ನೊಮ್ಮೆ ಧರಿಸಬೇಡಿ ಎಂದು ಡಾ. ಪರ್ಡಿ ಹೇಳುತ್ತಾರೆ.

ಒಮ್ಮೆ ಬಳಸಿದ್ದನ್ನು ತೊಳೆಯಲು ಹಾಕಿ ಬೇರೆಯದನ್ನು ಧರಿಸಿ. ಪ್ರತಿ ಬಾರಿಯೂ ಹೊಸದಾಗಿ ಒಳ ಉಡುಪುಗಳನ್ನು ಧರಿಸುವುದರಿಂದ ಬ್ಯಾಕ್ಟೀರಿಯಾಗಳ ಹಾನಿಯಿಂದ ಚರ್ಮವನ್ನು ರಕ್ಷಿಸಬಹುದು.

ಒಳ ಉಡುಪುಗಳನ್ನು ಎಷ್ಟು ಬಾರಿ ತೊಳೆಯಬೇಕು?

ಒಂದು ಬಾರಿ ಧರಿಸಿದ ಉಡುಪನ್ನು ಒಂದು ಬಾರಿ ತೊಳೆಯಬೇಕು ಎಂದು ತಜ್ಞರು ಹೇಳುತ್ತಾರೆ. ನೀವು ಒಮ್ಮೆ ಧರಿಸಿದ ಜೀನ್ಸ್‌ ಪ್ಯಾಂಟ್‌ ಅಥವಾ ಶರ್ಟ್‌ ಅನ್ನು ಎರಡು ಬಾರಿ, ಮೂರು ಧರಿಸಬಹುದು, ಆದರೆ ಒಳ ಉಡುಪುಗಳನ್ನು ಎಂದಿಗೂ ಹಾಗೆ ಮಾಡದಿರಿ ಎನ್ನುತ್ತಾರೆ ತಜ್ಞರು. ಅದನ್ನು ಪ್ರತಿದಿನ ತೊಳೆಯುವ ಅಭ್ಯಾಸ ರೂಢಿಸಿಕೊಳ್ಳಿ ಎನ್ನುತ್ತಾರೆ ಡಾ ಪರ್ಡಿ. ನೀವು ಒಳ ಉಡುಪುಗಳನ್ನು ಎಷ್ಟು ಬಾರಿ ವಾಶ್‌ ಮಾಡುತ್ತೀರಿ ಎಂಬುದರ ಜೊತೆಗೆ ಹೇಗೆ ತೊಳೆಯುತ್ತೀರಿ ಎಂಬುದು ಮುಖ್ಯವಾಗುತ್ತದೆ.

ಒಳ ಉಡುಪುಗಳನ್ನು ತೊಳೆಯುವುದು ಹೇಗೆ?

ಒಳ ಉಡುಪು ತಯಾರಕರು ಅವುಗಳನ್ನು ತೊಳೆಯುವ ವಿಧಾನವನ್ನು ಕವರ್‌ ಮೇಲೆ ಬರೆದಿರಬಹುದು. ಆದರೆ ಅದು ಉತ್ತಮವಾಗಿದ್ದರೂ ಸೂಕ್ತವಲ್ಲ. ಒಳ ಉಡುಪುಗಳನ್ನು ವಾಶಿಂಗ್‌ ಮಷಿನ್‌ಗೆ ಬೇರೆ ಬಟ್ಟೆಗಳ ಜೊತೆ ಹಾಕದೇ ಇರುವುದು ಉತ್ತಮ ಎನ್ನುವುದು ತಜ್ಞರ ಅಭಿಪ್ರಾಯ. ಒಳ ಉಡುಪುಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಡಿಟರ್ಜೆಂಟ್‌ ಪುಡಿ ಸೇರಿಸಿ ನೀರಿನಲ್ಲಿ ನೆನೆಸಿ ನಂತರ ಕೈಯಿಂದ ಒಗೆಯುವುದು ಉತ್ತಮ ವಿಧಾನ ಎನ್ನುತ್ತಾರೆ ತಜ್ಞರು.

ಕೈಯಿಂದ ಒಳಉಡುಪು ತೊಳೆಯುವ ವಿಧಾನ

ಹಂತ 1: ಬೆಚ್ಚಗಿನ ನೀರನ್ನು ಬಕೆಟ್‌ನಲ್ಲಿ ತುಂಬಿಸಿ.

ಹಂತ 2: ಬಕೆಟ್‌ಗೆ ಸ್ವಲ್ಪ ಡಿಟರ್ಜೆಂಟ್‌ ಪುಡಿ ಹಾಕಿ. ನಿಮ್ಮ ಬಟ್ಟೆಗೆ ಅನುಗುಣವಾಗಿ ಡಿಟರ್ಜೆಂಟ್‌ ಪುಡಿ ಹಾಕುವುದನ್ನು ಮರೆಯದಿರಿ.

ಹಂತ 3: ಆ ನೀರಿನಲ್ಲಿ ನಿಮ್ಮ ಒಳ ಉಡುಪುಗಳನ್ನು ಅದ್ದಿ.

ಹಂತ 4: ಇದನ್ನು 20 ನಿಮಿಷಗಳ ಕಾಲ ನೆನೆಯಲು ಬಿಡಿ.

ಹಂತ 5: ಇದನ್ನು ಚೆನ್ನಾಗಿ ನೀರಿನಲ್ಲಿ ತೊಳೆಯಿರಿ. ಡಿಟರ್ಜೆಂಟ್‌ನ ಲವಶೇಷವೂ ಉಳಿಯದಂತೆ ಮತ್ತೆ ಮತ್ತೆ ಚೆನ್ನಾಗಿ ತೊಳೆಯುವುದು ಮಖ್ಯವಾಗುತ್ತದೆ. ಅಂಚುಗಳಲ್ಲಿ ಸೋಪಿನ ನೊರೆ ಹಿಡಿಯದಂತೆ ಎಲ್ಲವನ್ನೂ ಚೆನ್ನಾಗಿ ಸ್ವಚ್ಛ ಮಾಡಿ.

ಹಂತ 6: ನಂತರ ಇದನ್ನು ಬಿಸಿಲು ಹಾಗೂ ಗಾಳಿಯಲ್ಲಿ ಆರಲು ಬಿಡಿ.

ವಾಷಿಂಗ್‌ ಮಷಿನ್‌ನಲ್ಲಿ ತೊಳೆಯುವುದು

ಹಂತ 1: ಬಣ್ಣ ಬಿಡುವ ಹಾಗೂ ಹತ್ತಿಯ ಬಟ್ಟೆಗಳನ್ನು ಪ್ರತ್ಯೇಕಿಸಿ ಎಂದು ಲೆವೆನ್‌ಹಾಪ್ಟ್‌ ಹೇಳುತ್ತಾರೆ.

ಹಂತ 2: ಥಾಂಗ್ಸ್‌, ಲೇಸ್‌, ಹುಕ್ಕುಗಳು, ಪಟ್ಟಿಗಳಿರುವ ಬಟ್ಟೆಗಳನ್ನು ಮಷಿನ್‌ ವಾಶ್‌ ಮಾಡದೇ ಇರುವುದು ಉತ್ತಮ. ಬಾಕ್ಸರ್‌ಗಳು, ಹತ್ತಿಯ ಬಟ್ಟೆಗಳನ್ನು ಮಷಿನ್‌ನಲ್ಲಿ ತೊಳೆಯಬಹುದು.

ಹಂತ 3: ನಿಮ್ಮ ವಾಷಿಂಗ್‌ ಮಷಿನ್‌ ನಿಯಾಮಾನುಸಾರ ಡಿಟರ್ಜೆಂಟ್‌ ಪುಡಿ ಸೇರಿಸಿ. ಒಳ ಉಡುಪುಗಳಿಗೆ ಹೆಚ್ಚು ಡಿಜರ್ಟೆಂಟ್‌ ಬಳಸದೇ ಇರುವುದು ಉತ್ತಮ.

ಹಂತ 4: ಹೆಚ್ಚು ಶುಚಿಗೊಳಿಸಲು ಆಕ್ಸಿಜನ್‌ ಬ್ಲೀಚ್‌ ಅನ್ನು ಕೂಡ ಸೇರಿಸಬಹುದು. ಕೆಲವ ಒಳ ಉಡುಪು, ಲಾಂಡ್ರಿ ಉಡುಪು ಮಾತ್ರವಲ್ಲ, ಎಲ್ಲಾ ರೀತಿಯ ಬಟ್ಟೆಗಳಿಗೂ ಆಕ್ಸಿಜನ್‌ ಬ್ಲೀಚ್‌ ಉತ್ತಮ. ಇದು ಬೆವರು ಮತ್ತು ಕಲೆಗಳನ್ನು ಸ್ವಚ್ಛಗೊಳಿಸಲು ನೆರವಾಗುತ್ತದೆ. ಇದು ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ.

ಹಂತ 5: ನೀರು ಹರಿಸಿ

ಹಂತ 6: ವಾಷಿಂಗ್‌ ಮಷಿನ್‌ನಲ್ಲಿ ಬಿಸಿ ನೀರಿನ ಆಯ್ಕೆ ಮಾಡಿ.

ಹಂತ 7: ಬಟ್ಟೆ ಒಗೆದ ನಂತರ ಡ್ರೈ ಮಾಡಬಹುದು ಅಥವಾ ನೇರವಾಗಿ ಬಿಸಿಲಿನಲ್ಲಿ ಒಣಗಿಸಬಹುದು.

ಒಳ ಉಡುಪುಗಳ ವಿಚಾರದಲ್ಲಿ ಎಂದಿಗೂ ಕಂಜೂಸಿ ಮಾಡಬಾರದು ಎಂದು ಲೆವೆನ್‌ಹಾಪ್ಟ್‌ ಹೇಳುತ್ತಾರೆ. ಆರಾಮದಾಯಕ ಹಾಗೂ ದೀರ್ಘಕಾಲ ಬಾಳಿಕೆ ಬರುವ ಉತ್ತಮ ಹಾಗೂ ಹೆಚ್ಚು ಬೆಲೆಬಾಳುವ ಬ್ರ್ಯಾಂಡೆಡ್‌ ಒಳ ಉಡುಪುಗಳನ್ನು ಖರೀದಿಸಿ ಎಂದು ಅವರು ಸಲಹೆ ನೀಡುತ್ತಾರೆ.

Whats_app_banner