Women Health: 30 ರಿಂದ 40 ವರ್ಷ ದಾಟಿದ ಮಹಿಳೆಯರು ತಪ್ಪದೇ ಮಾಡಿಸಬೇಕಾದ ವೈದ್ಯಕೀಯ ಪರೀಕ್ಷೆಗಳಿವು
ಕನ್ನಡ ಸುದ್ದಿ  /  ಜೀವನಶೈಲಿ  /  Women Health: 30 ರಿಂದ 40 ವರ್ಷ ದಾಟಿದ ಮಹಿಳೆಯರು ತಪ್ಪದೇ ಮಾಡಿಸಬೇಕಾದ ವೈದ್ಯಕೀಯ ಪರೀಕ್ಷೆಗಳಿವು

Women Health: 30 ರಿಂದ 40 ವರ್ಷ ದಾಟಿದ ಮಹಿಳೆಯರು ತಪ್ಪದೇ ಮಾಡಿಸಬೇಕಾದ ವೈದ್ಯಕೀಯ ಪರೀಕ್ಷೆಗಳಿವು

ಮಹಿಳೆಯರಿಗೆ ಮೂವತ್ತು ವರ್ಷ ದಾಟುತ್ತಿದ್ದಂತೆ ಒಂದೊಂದೇ ಆರೋಗ್ಯ ಸಂಬಂಧಿ ಸಮಸ್ಯೆಗಳು ಆರಂಭವಾಗುವುದು ಸಹಜ. 40ರ ಬಳಿಕವಂತೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದೇ ದೊಡ್ಡ ಸವಾಲು. ಹೀಗಾಗಿ 30 ಹಾಗೂ 40ರ ಆಸುಪಾಸಿನಲ್ಲಿರುವ ಮಹಿಳೆಯರು ಕಡ್ಡಾಯವಾಗಿ ಮಾಡಿಸಲೇಬೇಕಾದ ವೈದ್ಯಕೀಯ ಪರೀಕ್ಷೆಯ ವಿವರ ಇಲ್ಲಿದೆ ನೋಡಿ.

0 ರಿಂದ 40 ವರ್ಷ ದಾಟಿದ ಮಹಿಳೆಯರು ತಪ್ಪದೇ ಮಾಡಿಸಬೇಕಾದ ವೈದ್ಯಕೀಯ ಪರೀಕ್ಷೆಗಳಿವು
0 ರಿಂದ 40 ವರ್ಷ ದಾಟಿದ ಮಹಿಳೆಯರು ತಪ್ಪದೇ ಮಾಡಿಸಬೇಕಾದ ವೈದ್ಯಕೀಯ ಪರೀಕ್ಷೆಗಳಿವು

ಮನೆ-ಕಚೇರಿ ಎಂದು ಜವಾಬ್ದಾರಿಗಳಲ್ಲೇ ಜೀವನವನ್ನು ಕಳೆದು ಬಿಡುವ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ವಹಿಸುವುದಿಲ್ಲ. 30 ರಿಂದ 40 ವರ್ಷ ಆಗುತ್ತಿದ್ದಂತೆ ಒಂದಿಲ್ಲೊಂದು ಕಾಯಿಲೆಗಳು ಮಹಿಳೆಯರಿಗೆ ತಿಳಿಯದ ಹಾಗೆಯೇ ಅವರನ್ನು ಆವರಿಸಿಕೊಳ್ಳುತ್ತಾ ಹೋಗುತ್ತದೆ. ಹೀಗಾಗಿ ಮಹಿಳೆಯರು ಮೂವತ್ತು ವಯಸ್ಸು ದಾಟುತ್ತಿದ್ದಂತೆಯೇ ಕೆಲವು ಆರೋಗ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ನಲವತ್ತರ ಬಳಿಕ ಮಹಿಳೆಯರಿಗೆ ಮುಟ್ಟು ನಿಲ್ಲುವ ಸಮಯ ಕೂಡ ಬರುವುದರಿಂದ ಈ ಸಂದರ್ಭದಲ್ಲಿ ಎಷ್ಟು ಆರೋಗ್ಯದ ಬಗ್ಗೆ ಕಾಳಜಿ ಮಾಡಿದರೂ ಸಹ ಅದು ಕಡಿಮೆಯೇ.

30-40ರ ಮಹಿಳೆಯರು ಕಡ್ಡಾಯವಾಗಿ ಮಾಡಿಸಬೇಕಾದ ಪರೀಕ್ಷೆಗಳು 

ಪ್ಯಾಪ್ ಸ್ಮೀಯರ್ ಮತ್ತು HPV ಪರೀಕ್ಷೆ: 30ರ ಹರೆಯದಲ್ಲಿ ಎಲ್ಲಾ ಮಹಿಳೆಯರು ಪ್ಯಾಪ್ ಸ್ಮೀಯರ್ ಮತ್ತು HPV ಪರೀಕ್ಷೆಗಳಿಗೆ ಒಳಗಾಗುವುದು ಉತ್ತಮವಾಗಿದೆ. ಈ ಎರಡೂ ಪರೀಕ್ಷೆಗಳು ಮಹಿಳೆಯರಲ್ಲಿ ಈ ವಯಸ್ಸಿನಲ್ಲಿ ಕಾಣಿಸಿಕೊಳ್ಳುವ ಗರ್ಭಕಂಠದ ಕ್ಯಾನ್ಸರ್ ಪತ್ತೆ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. 30ರ ಬಳಿಕ ಪ್ರತಿ ಮೂರರಿಂದ ಐದು ವರ್ಷಗಳಿಗೆ ಒಮ್ಮೆ ಮಹಿಳೆಯರು ಈ ಪರೀಕ್ಷೆಗೆ ಒಳಗಾಗುತ್ತಲೇ ಇರಬೇಕು.

ಸ್ವಯಂ ಸ್ತನಪರೀಕ್ಷೆ: 30ರ ಪ್ರಾಯ ದಾಟಿದ ಮಹಿಳೆಯರು ಪ್ರತಿ ಮೂರರಿಂದ ನಾಲ್ಕು ತಿಂಗಳಿಗೆ ಒಮ್ಮೆ ಮುಟ್ಟಿನ ಬಳಿಕ ಈ ಪರೀಕ್ಷೆಯನ್ನು ಮಾಡಿಸಬೇಕು. 20ನೇ ವಯಸ್ಸಿನಿಂದ ಪ್ರತಿ ಮೂರು ವರ್ಷಗಳಿಗೆ ಒಮ್ಮೆ ಹಾಗೂ 35ರ ಬಳಿಕ ವಾರ್ಷಿಕವಾಗಿ ಈ ಪರೀಕ್ಷೆಗೆ ಒಳಗಾಗುವುದು ಉತ್ತಮ.

ಮ್ಯಾಮೋಗ್ರಾಮ್ ಟೆಸ್ಟ್‌: ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ನ ಇರುವಿಕೆಯನ್ನು ಪತ್ತೆ ಮಾಡುವಲ್ಲಿ ಈ ಪರೀಕ್ಷೆಯು ಮಹತ್ವದ ಪಾತ್ರ ವಹಿಸುತ್ತದೆ. 40 ವರ್ಷದ ಬಳಿಕ ಮಹಿಳೆಯರು ಪ್ರತಿ ವರ್ಷ ಅಥವಾ 2 ವರ್ಷಗಳಿಗೆ ಒಮ್ಮೆ ಈ ಪರೀಕ್ಷೆಗೆ ಒಳಗಾಗಬೇಕು. ಸ್ತನ ಕ್ಯಾನ್ಸರ್‌ನ ಇತಿಹಾಸ ಹೊಂದಿರುವ ಕುಟುಂಬಕ್ಕೆ ಸೇರಿದ ಮಹಿಳೆಯರು 40 ವರ್ಷಕ್ಕೂ ಮೊದಲೇ ಈ ಪರೀಕ್ಷೆಗೆ ಒಳಗಾಗುವುದು ಒಳ್ಳೆಯದು.

ಮೂಳೆ ಪರೀಕ್ಷೆ: ಮಹಿಳೆಯರು ತಮ್ಮ 30 ಮತ್ತು 40ರ ಪ್ರಾಯದಲ್ಲಿ ಮೂಳೆಗೆ ಸಂಬಂಧಿಸಿದ ಪರೀಕ್ಷೆಗೆ ಒಳಗಾಗಬೇಕು. ಆಸ್ಟಿಯೊಪೊರೋಸಿಸ್‌ನಂತಹ ಅಪಾಯಕಾರಿ ಅಂಶಗಳನ್ನು ಹೊಂದಿದ್ದರಂತೂ ಮೂಳೆ ಪರೀಕ್ಷೆಗೆ ಒಳಗಾಗುವುದು ಕಡ್ಡಾಯವಾಗಿದೆ.

ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ ಪರೀಕ್ಷೆ: 30 ವರ್ಷದ ಬಳಿಕ ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಮಹಿಳೆಯರು ಈ ಪರೀಕ್ಷೆಗಳಿಗೆ ನಿಯಮಿತವಾಗಿ ಒಳಗಾಗುವುದು ಒಳ್ಳೆಯದು. ವಯಸ್ಸಾದಂತೆ ಹೃದ್ರೋಗ ಸಂಬಂಧಿ ಕಾಯಿಲೆಗಳು ಬರುವ ಅಪಾಯ ಹೆಚ್ಚಿರುತ್ತದೆ. ಹೀಗಾಗಿ ಹೃದಯದ ಆರೋಗ್ಯದ ಬಗ್ಗೆ ನಿಗಾ ಇರಿಸುವುದು ಒಳ್ಳೆಯದು.

ರಕ್ತದ ಗ್ಲೂಕೋಸ್ ಪರೀಕ್ಷೆ: 40ರ ಬಳಿಕ ಮಧುಮೇಹ ಕಾಯಿಲೆಯ ಅಪಾಯ ಕೂಡ ಜಾಸ್ತಿಯಾಗುತ್ತದೆ. ಅದರಲ್ಲೂ ಮಧುಮೇಹ ಕುಟುಂಬದ ಇತಿಹಾಸವಿದ್ದರಂತೂ ಹೆಚ್ಚು ಜಾಗರೂಕತೆಯಿಂದ ಇರಬೇಕು. ಹೀಗಾಗಿ ಆಗಾಗ ರಕ್ತದಲ್ಲಿ ಸಕ್ಕರೆ ಮಟ್ಟ ಎಷ್ಟಿದೆ ಎಂಬ ಪರೀಕ್ಷೆ ಮಾಡಿಸಬೇಕು.

ನಿಮಗೆ 30 ವರ್ಷ ದಾಟಿದ್ದರೆ ನೀವು ತಪ್ಪದೇ ಒಮ್ಮೆ ಈ ಎಲ್ಲಾ ಪರೀಕ್ಷೆಗಳನ್ನು ಮಾಡಿಸುವುದು ಉತ್ತಮ. ಇಲ್ಲದಿದ್ದರೆ ನೀವು ತೊಂದರೆ ಎದುರಿಸಬೇಕಾಗಬಹುದು. ಯಾವುದೇ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ಪಡೆಯುವುದು ಬಹಳ ಮುಖ್ಯ.

Whats_app_banner