Pregnancy Plan: ಪ್ರೆಗ್ನೆನ್ಸಿ ಪ್ಲಾನ್ ಇದ್ಯಾ? ಗರ್ಭಧಾರಣೆಗೆ ನಿಮ್ಮ ದೇಹವನ್ನು ಹೀಗೆ ತಯಾರು ಮಾಡಿ
ಮದುವೆಯಾದ ಮೇಲೆ ದಂಪತಿಗಳು ಮಕ್ಕಳು ಮಾಡಿಕೊಳ್ಳುವ ಬಗ್ಗೆ ಯೋಚಿಸುವುದು ಸಹಜ. ಇದಕ್ಕೆ ಆರ್ಥಿಕವಾಗಿ, ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಿದ್ಧರಾಗಬೇಕು. ಈ ಎಲ್ಲದರ ಜೊತೆಗೆ ಹೆಣ್ಣುಮಕ್ಕಳು ಗರ್ಭ ಧರಿಸಲು ಮೊದಲು ಈ ಕೆಲವು ವ್ಯಾಯಾಮಗಳನ್ನು ಮಾಡುವ ಅಭ್ಯಾಸವನ್ನು ರೂಢಿಸಿಕೊಂಡು ದೇಹವನ್ನು ಸಿದ್ಧಪಡಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ.
ಮದುವೆಯಾಗಿ ಒಂದಿಷ್ಟು ತಿಂಗಳು ಕಳೆದಿದ್ದು, ಮಕ್ಕಳು ಮಾಡಿಕೊಳ್ಳುವ ಬಗ್ಗೆ ಯೋಚಿಸ್ತಾ ಇದೀರಾ, ಇದಕ್ಕಾಗಿ ಒಂದಿಷ್ಟು ಸಿದ್ಧತೆ ಅವಶ್ಯ. ಮಗು ಹೊಂದಬೇಕು ಎಂದು ಯೋಚಿಸುವ ಮೊದಲು ನೀವು ಆರ್ಥಿಕವಾಗಿ ಸ್ಥಿರವಾಗಿದ್ದೀರಾ, ತಾಯಿಯಾದವಳು ಮಗು ಹೆರಲು ದೈಹಿಕವಾಗಿ ಸಿದ್ಧಳಾಗಿದ್ದಾಳಾ, ಗಂಡ-ಹೆಂಡತಿ ಇಬ್ಬರೂ ಮಗು ಪಡೆಯಲು ಮಾನಸಿಕವಾಗಿ ಸಿದ್ಧರಾಗಿದ್ದೀರಾ ಎಂಬೆಲ್ಲ ವಿಷಯಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳಾಗುವುದು ಕಷ್ಟಸಾಧ್ಯವಾಗಿದೆ. ಹಲವರಿಗೆ ಮಕ್ಕಳಾಗದ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಮಗು ಮಾಡಿಕೊಳ್ಳುವ ಮೊದಲು ಮಹಿಳೆಯು ತನ್ನ ದೇಹವನ್ನು ಸಿದ್ಧಪಡಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ದೇಹವು ಸಾಕಷ್ಟು ಸದೃಢವಾಗಿಲ್ಲ ಎಂದರೆ ಅಥವಾ ಬಲವಾಗಿಲ್ಲ ಎಂದರೆ ಗರ್ಭಾವಸ್ಥೆಯ ಸಮಯದಲ್ಲಿ ಬೆನ್ನುನೋವು, ಕಾಲುನೋವು, ಸ್ನಾಯುಸೆಳೆತದಂತಹ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಹಾಗಾಗಿ ಸುರಕ್ಷಿತ ಗರ್ಭಧಾರಣೆಗಾಗಿ ನೀವು ನಿಮ್ಮ ದೇಹವನ್ನು ಹೀಗೆ ಸಿದ್ಧಪಡಿಸಿಕೊಳ್ಳಿ.
ಗರ್ಭಧರಿಸುವ ಮೊದಲು ಸಿಯಾಟಿಕಾ, ಪ್ಲಾಂಟರ್, ಫ್ಯಾಸಿಟಿಸ್, ಹಿಮ್ ಸಮಸ್ಯೆಗಳು ಅಥವಾ ಬೆನ್ನುನೋವಿನಂತಹ ಯಾವುದೇ ನಿರಂತರವಾದ ಮಸ್ಕ್ಯುಲೋಸ್ಕೆಲಿಟಲ್ ಸಮಸ್ಯೆಗಳಿಗೆ ಹಾಜರಾಗಲು ಇದು ನಿರ್ಣಾಯಕವಾಗಿದೆ. ಬೆನ್ನುಮೂಳೆಯ ಒತ್ತಡ ಮತ್ತು ಹಾರ್ಮೋನಿನ ಬದಲಾವಣೆಗಳಿಂದಾಗಿ ಗರ್ಭಾವಸ್ಥೆಯಲ್ಲಿ ಸಮಸ್ಯೆಗಳು ಹೆಚ್ಚಬಹುದು. ಹಾಗಾಗಿ ಗರ್ಭ ಧರಿಸಲು ಯೋಚಿಸುವ ಕೆಲವು ತಿಂಗಳ ಮೊದಲು ಈ ಸಮಸ್ಯೆಗಳನ್ನು ನಿಭಾಯಿಸಲು ವೈದ್ಯರನ್ನು ಸಂರ್ಪಕಿಸಿ.
ಕಾರ್ಡಿಯೋ ವ್ಯಾಯಾಮಗಳು
ನೀವು ಗರ್ಭಿಣಿಯಾಗಲು ಯೋಚಿಸುತ್ತಿದ್ದರೆ ಕಾರ್ಡಿಯೋ ವ್ಯಾಯಾಮಗಳ ಮೇಲೆ ಹೆಚ್ಚು ಗಮನ ಹರಿಸಿ, ಆ ಮೂಲಕ ದೇಹ ಫಿಟ್ ಆಗಿರುವಂತೆ ನೋಡಿಕೊಳ್ಳಿ. ಕಾರಣ ಗರ್ಭಾವಸ್ಥೆಯಲ್ಲಿ ರಕ್ತದ ಹರಿವಿನ ಪ್ರಮಾಣವು ಶೇ 45 ರಷ್ಟು ಹೆಚ್ಚಾಗುತ್ತದೆ. ಜೊತೆಗೆ ಹೃದಯ ಬಡಿತವೂ ಏರಿಕೆಯಾಗುತ್ತದೆ. ಅವರು ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡದ ಅಪಾಯವನ್ನೂ ಎದುರಿಸಬಹುದು. ವೈದ್ಯರ ಪ್ರಕಾರ ಈ ಸಮಸ್ಯೆಗಳನ್ನು ಎದುರಿಸಲು ನೀವು ಕ್ಯಾರ್ಡಿಯೋ ಎಕ್ಸ್‌ಸೈಜ್‌ಗಳು ಈ ಎಲ್ಲಾ ಒತ್ತಡಗಳನ್ನು ನಿಭಾಯಿಸಲು ನಮಗೆ ಸಹಾಯ ಮಾಡುತ್ತವೆ. ವಾಕಿಂಗ್, ರನ್ನಿಂಗ್, ಈಜು, ಸೈಕ್ಲಿಂಗ್, ಡಾನ್ಸ್‌ನಂತಹ ಆಯ್ಕೆಗಳು ಉತ್ತಮವಾಗಿವೆ. ಗರ್ಭಿಣಿಯಾಗಿದ್ದಾಗಲೂ ಕಾರ್ಡಿಯೊ ವ್ಯಾಯಾಮಗಳನ್ನು ಮಾಡಬಹುದು. ಆದರೆ ಈ ಬಗ್ಗೆ ವೈದ್ಯರ ಸಲಹೆ ಪಡೆಯುವುದು ಬಹಳ ಮುಖ್ಯ.
ಗರ್ಭಾವಸ್ಥೆಯು ಶ್ರೋಣೆಯ ಮೇಲೆ ಒತ್ತಡ ಉಂಟು ಮಾಡುತ್ತದೆ. ಶ್ರೋಣಿಯ ತಳದಲ್ಲಿ ಸ್ನಾಯುಗಳ ಜಾಲವಿರುತ್ತದೆ. ಈ ಪ್ರದೇಶದಲ್ಲಿ ದೌರ್ಬಲ್ಯವು ಗರ್ಭಾವಸ್ಥೆಯಲ್ಲಿ ಹಲವು ಸಮಸ್ಯೆಗಳು ಉಂಟಾಗಲು ಕಾರಣವಾಗಬಹುದು. ಶ್ರೋಣಿ ಬಲವರ್ಧನೆಗೆ ಕ್ಲಿಕ್ ಫ್ಲಿಕ್ ಕೆಗೆಲ್ಸ್, ಹೀಲ್ ಸ್ಲೈಡ್‌ಗಳು, ಹ್ಯಾಪಿ ಬೇಬಿ ಪೋಸ್, ಲುಂಜ್‌ಗಳು ಮತ್ತು ಸ್ಕ್ವಾಟ್‌ಗಳಂತಹ ವ್ಯಾಯಾಮಗಳನ್ನು ಪರಿಗಣಿಸಿ.
ಕೋರ್ ಮಸಲ್ಸ್ ವ್ಯಾಯಾಮ
ಗರ್ಭಾವಸ್ಥೆ ಮುಂದುವರಿದಂತೆ ಕೋರ್ ಸ್ನಾಯುಗಳು ಗರ್ಭಾಶಯ ಹಾಗೂ ಹೊಟ್ಟೆಯ ತ್ವರಿತ ಬೆಳವಣಿಗೆಯನ್ನು ಬೆಂಬಲಿಸಬೇಕು. ದುರ್ಬಲವಾದ ಸ್ನಾಯುಗಳು ಬೆನ್ನುನೋವು ಹಾಗೂ ಇತರ ಅಸ್ವಸ್ಥತೆಗೆ ಕಾರಣವಾಗಬಹುದು. ಯಾಕೆಂದರೆ ಅವು ಹೆಚ್ಚು ತೂಕವನ್ನು ಹೊರಲು ಹೆಣಗಾಡಬಹುದು. ಪ್ಲಾಂಕ್ಸ್ ಹಾಗೂ ಸೈಡ್ ಪ್ಲಾಂಕ್ಸ್ ವ್ಯಾಯಾಮಗಳ ಮೂಲಕ ಕೋರ್ ಸ್ನಾಯುಗಳನ್ನು ಬಲಪಡಿಸಿಕೊಳ್ಳಬೇಕು. ಉಸಿರಾಟ ವ್ಯಾಯಾಮಗಳೊಂದಿಗೆ ಕಿಬ್ಬೊಟ್ಟೆ ನಮತ್ಯೆಯನ್ನು ಹೆಚ್ಚಿಸಬಹುದು.
ಲೋವರ್ ಬಾಡಿ ಸದೃಢಗೊಳಿಸುವ ವ್ಯಾಯಾಮಗಳು
ಗರ್ಭಾವಸ್ಥೆಯಲ್ಲಿ ಹಾಗೂ ನಂತರದ ದಿನಗಳಲ್ಲಿ ಲೋವರ್ ಬಾಡಿ ಮಸಲ್‌ಗಳು ಹೆಚ್ಚು ಕೆಲಸ ಮಾಡುತ್ತದೆ. ಯಾಕೆಂದರೆ ಗರ್ಭಾವಸ್ಥೆಯಲ್ಲಿ ಹೆಚ್ಚುವರಿ ತೂಕ ಹೊಂದಿರುತ್ತಾರೆ ಹಾಗೂ ಮಗು ಜನಿಸಿದ ನಂತರ ಮಗುವನ್ನು ಸುರಕ್ಷಿತವಾಗಿ ಎತ್ತುವಲ್ಲಿ ಮತ್ತು ಕೆಳಕ್ಕೆ ಇಳಿಸುವುದು ಇಂತಹ ಕಾರ್ಯಗಳಿಗೆ ಲೋವರ್ ಬಾಡಿ ಸ್ನಾಯುಗಳ ಪಾತ್ರ ದೊಡ್ಡದು. ಇದಕ್ಕಾಗಿ ಅವುಗಳನ್ನು ಸ್ಟ್ರಾಂಗ್ ಮಾಡುವ ವ್ಯಾಯಾಮಗಳ ಮೇಲೆ ಗಮನ ಹರಿಸಬೇಕು.