ಕನ್ನಡ ಸುದ್ದಿ  /  ಜೀವನಶೈಲಿ  /  ಕೇಸರಿ ಹಾಲು ಕುಡಿಯುವುದರಿಂದ ಮಗು ಬೆಳ್ಳಗಾಗುತ್ತಾ? ಗರ್ಭಿಣಿಯರಿಗೆ ಕೇಸರಿ ಸೇವಿಸಲು ಹೇಳುವ ಉದ್ದೇಶವಿದು

ಕೇಸರಿ ಹಾಲು ಕುಡಿಯುವುದರಿಂದ ಮಗು ಬೆಳ್ಳಗಾಗುತ್ತಾ? ಗರ್ಭಿಣಿಯರಿಗೆ ಕೇಸರಿ ಸೇವಿಸಲು ಹೇಳುವ ಉದ್ದೇಶವಿದು

ಗರ್ಭಿಣಿಯರು ಕೇಸರಿ ಹಾಲು ಕುಡಿಯುವ ಅಭ್ಯಾಸ ಹಿಂದಿನಿಂದಲೂ ರೂಢಿಯಲ್ಲಿದೆ. ಇದನ್ನು ಕುಡಿಯುವುದರಿಂದ ಮಗು ಬೆಳ್ಳಗೆ ಹುಟ್ಟುತ್ತದೆ ಎಂದು ಕೆಲವರು ಹೇಳುತ್ತಾರೆ. ಹಾಗಾದ್ರೆ ಕೇಸರಿ ಹಾಲು ಕುಡಿಯುವುದರಿಂದ ಮಗು ಬೆಳ್ಳಗಾಗುತ್ತಾ, ಗರ್ಭಿಣಿಯರು ಇದನ್ನು ಕುಡಿಯುವ ಉದ್ದೇಶವೇನು? ಎಂಬಿತ್ಯಾದಿ ವಿವರ ಇಲ್ಲಿದೆ.

ಕೇಸರಿ ಹಾಲು ಕುಡಿಯುವುದರಿಂದ ಮಗು ಬೆಳ್ಳಗಾಗುತ್ತಾ? ಗರ್ಭಿಣಿಯರಿಗೆ ಕೇಸರಿ ಸೇವಿಸಲು ಹೇಳುವ ಉದ್ದೇಶವಿದು
ಕೇಸರಿ ಹಾಲು ಕುಡಿಯುವುದರಿಂದ ಮಗು ಬೆಳ್ಳಗಾಗುತ್ತಾ? ಗರ್ಭಿಣಿಯರಿಗೆ ಕೇಸರಿ ಸೇವಿಸಲು ಹೇಳುವ ಉದ್ದೇಶವಿದು

ಗರ್ಭಿಣಿಯರು ಮಹಿಳೆಯರು ತಮ್ಮ ಹೊಟ್ಟೆಯಲ್ಲಿರುವ ಮಗುವಿನ ಬೆಳವಣಿಗೆಗಾಗಿ ಉತ್ತಮ ಆಹಾರಕ್ರಮಗಳನ್ನು ಅನುಸರಿಸುತ್ತಾರೆ. ಹಣ್ಣು, ತರಕಾರಿಗಳು, ಧಾನ್ಯಗಳ ಜೊತೆಗೆ ಕೇಸರಿ ಹಾಲು ಸೇವನೆ ಕೂಡ ಇವರ ಆಹಾರಕ್ರಮದ ಭಾಗವಾಗಿರುತ್ತದೆ. ಗರ್ಭಿಣಿಯರು ಕೇಸರಿ ಹಾಲು ಸೇವಿಸಲು ಕಾರಣವೇನು ಎಂಬುದು ಹಲವರಿಗೆ ಪ್ರಶ್ನೆಯಾಗಿರಬಹುದು. ಕೆಲವರು ಮಗು ಹೊಟ್ಟೆಯಲ್ಲಿರುವಾಗ ಕೇಸರಿ ಹಾಲು ಕುಡಿಯುವುದರಿಂದ ಮಗು ಬೆಳ್ಳಗಾಗುತ್ತದೆ ಎಂದು ಹೇಳುತ್ತಾರೆ. ಹಾಗಾದ್ರೆ ಈ ಮಾತು ನಿಜವೇ? ಗರ್ಭಾವಸ್ಥೆಯಲ್ಲಿ ಕೇಸರಿ ಹಾಲು ಕುಡಿಯಲು ಶಿಫಾರಸು ಮಾಡುವುದೇಕೆ? ಈ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಕೇಸರಿ ಸೇವನೆಯಿಂದ ಮಗು ಬೆಳ್ಳಗೆ ಹುಟ್ಟುತ್ತಾ?

ಮುಂಬೈನ ಮದರ್‌ ಹುಡ್‌ ಆಸ್ಪತ್ರೆಯ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞೆ ಡಾ. ಸುರಭಿ ಸಿದ್ಧಾರ್ಥ ಅವರು ಮಗುವಿನ ಚರ್ಮದ ಬಣ್ಣ ಸುಧಾರಿಸಲು ಕೇಸರಿ ದಳವು ಯಾವುದೇ ಮಾಂತ್ರಿಕ ಶಕ್ತಿಯನ್ನು ಹೊಂದಿಲ್ಲ ಎಂದು ಹೇಳುತ್ತಾರೆ. ಅವರ ಪ್ರಕಾರ ಕೇಸರಿ ಹಾಲು ಮಗುವಿನ ಬಣ್ಣ ಬೆಳ್ಳಗೆ ಮಾಡುವುದಿಲ್ಲ. ಬದಲಾಗಿ ಇದು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಉರಿಯೂತವನ್ನು ಕಡಿಮೆ ಮಾಡಲು, ತಾಯಿ ಮತ್ತು ಮಗುವಿನ ಒಟ್ಟಾರೆ ಯೋಗಕ್ಷೇಮವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ, ಇದು ಮಹಿಳೆಯ ಆಹಾರಕ್ರಮಕ್ಕೆ ಉತ್ತಮ ಸೇರ್ಪಡೆಯಾಗಿದೆʼ ಎಂದು ಅವರು ಹೇಳುತ್ತಾರೆ.

ʼಚರ್ಮದ ಬಣ್ಣವು ಆನುವಂಶಿಕ ಅಂಶಗಳಿಂದ ನಿರ್ಧರಿಸಲ್ಪಡುತ್ತದೆ, ಗರ್ಭಾವಸ್ಥೆಯಲ್ಲಿ ಸೇವಿಸುವ ನಿರ್ದಿಷ್ಟ ಆಹಾರಕ್ರಮಗಳಿಂದʼ ಎಂದು ಮೋತಿ ನಗರದ ಅಪೊಲೊ ಕ್ರೇಡಲ್ ಮಕ್ಕಳ ಆಸ್ಪತ್ರೆ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಸಲಹೆಗಾರರಾದ ಡಾ. ಸೀಮಾ ಶರ್ಮಾ ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಗರ್ಭಿಣಿಯರು ಕೇಸರಿ ಸೇವಿಸುವುದರಿಂದಾಗುವ ಪ್ರಯೋಜನಗಳಿವು 

ಗರ್ಭಾವಸ್ಥೆಯಲ್ಲಿ ಜೀರ್ಣಕ್ರಿಯೆ ಸಮಸ್ಯೆಗಳು ಎದುರಾಗುತ್ತವೆ. ಗರ್ಭಿಣಿಯರು ಕೇಸರಿ ಸೇವಿಸುವುದರಿಂದ ಜೀರ್ಣಕ್ರಿಯೆ ವೃದ್ಧಿಯಾಗುತ್ತದೆ. ಹಾಲು ಅಥವಾ ಗಂಜಿಯೊಂದಿಗೆ ಕೇಸರಿ ಸೇರಿಸಿ ಸೇವಿಸುವುದರಿಂದ ಮಲಬದ್ಧತೆ ಸೇರಿದಂತೆ ಜೀರ್ಣಕ್ರಿಯೆ ಸಮಸ್ಯೆಗೆ ಸಂಬಂಧಿಸಿದ ತೊಂದರೆಗಳು ನಿವಾರಣೆಯಾಗುತ್ತವೆ.

ಕೇಸರಿಯಲ್ಲಿ ಖಿನ್ನತೆ ನಿವಾರಿಸುವ ಅಂಶವಿದೆ. ಇದು ಮನಸ್ಥಿತಿಯನ್ನು ಸುಧಾರಿಸಿ, ಆತಂಕವನ್ನು ನಿವಾರಿಸುತ್ತದೆ. ಹಾಗಾಗಿ ಇದು ತಾಯಿಯೊಂದಿಗೆ ಮಗುವಿಗೂ ಉತ್ತಮ ತಜ್ಞರು ಹೇಳುತ್ತಾರೆ. ಕೇಸರಿಯು ʼಗರ್ಭಾವಸ್ಥೆಯಲ್ಲಿ ಒತ್ತಡ ಮತ್ತು ಆತಂಕವನ್ನು ನಿವಾರಿಸಲು ಸಹಾಯ ಮಾಡುವ ಮನಸ್ಥಿತಿ ಸುಧಾರಿಸುವ ಗುಣಲಕ್ಷಣಗಳನ್ನು ಹೊಂದಿದೆʼ ಡಾ. ಸುರಭಿ ಹೇಳುತ್ತಾರೆ.

ಕೇಸರಿಯು ಗರ್ಭಾವಸ್ಥೆಯಲ್ಲಿ ರಕ್ತದೊತ್ತಡದ ಸಮಸ್ಯೆಗಳನ್ನು ಸಹ ನಿರ್ವಹಿಸುತ್ತದೆ. ಮೊದಲ ತ್ರೈಮಾಸಿಕದಲ್ಲಿ ಬೆಳಗಿನ ಬೇನೆಯು ಪ್ರಮುಖ ಸಮಸ್ಯೆಯಾಗಿದೆ. ಮಧ್ಯಮ ಪ್ರಮಾಣದಲ್ಲಿ ಕೇಸರಿಯನ್ನು ಸೇವಿಸುವುದರಿಂದ ನೋವು ಹಾಗೂ ವಾಕರಿಕೆಯ ಸಮಸ್ಯೆಯಿಂದ ಪರಿಹಾರ ನೀಡುತ್ತದೆʼ ತಜ್ಞರು ಅಭಿಪ್ರಾಯ ಪಡುತ್ತಾರೆ.

ಗರ್ಭಾಶಯದಲ್ಲಿ ಮಗುವಿನ ಬೆಳವಣಿಗೆಯಾದಂತೆ, ತಾಯಿಯ ದೇಹದ ಸ್ನಾಯುಗಳು ವಿಸ್ತರಿಸುತ್ತವೆ ಮತ್ತು ಜಾಗವನ್ನು ಸರಿಹೊಂದಿಸುತ್ತವೆ. ಈ ಕಾರ್ಯವಿಧಾನದ ಸಮಯದಲ್ಲಿ, ತಾಯಿಯು ಬೆನ್ನು, ಹೊಟ್ಟೆ ಮತ್ತು ಕಾಲುಗಳಲ್ಲಿ ತೀವ್ರವಾದ ಸೆಳೆತ ಮತ್ತು ನೋವನ್ನು ಪಡೆಯಬಹುದು. ಕೇಸರಿಯನ್ನು ಮಿತವಾಗಿ ಸೇವಿಸುವುದರಿಂದ ಈ ನೋವಿನ ಅವಧಿಯಲ್ಲಿ ನಿಮಗೆ ಉಪಶಮನ ಸಿಗಬಹುದುʼ ತಜ್ಞರಾದ ರಾಧಿಕಾ ಕಲ್ಪತರು ಹೇಳುತ್ತಾರೆ.

ಗರ್ಭಾವಸ್ಥೆಯಲ್ಲಿ ಮಹಿಳೆಯರು ರಕ್ತಹೀನತೆಯ ಸಮಸ್ಯೆಯನ್ನು ಎದುರಿಸಬಹುದು. ಗರ್ಭಾವಸ್ಥೆಯಲ್ಲಿ ಕಬ್ಬಿಣದ ಅಂಶವಿರುವ ಆಹಾರ ಮತ್ತು ಪೂರಕಗಳನ್ನು ಹೊಂದಲು ಅಮ್ಮಂದಿರಿಗೆ ಸಲಹೆ ನೀಡಲಾಗುತ್ತದೆ. ಪ್ರತಿದಿನ ಸ್ವಲ್ಪ ಪ್ರಮಾಣದ ಕೇಸರಿ ಸೇವನೆಯು ಕಬ್ಬಿಣ ಮತ್ತು ಹಿಮೋಗ್ಲೋಬಿನ್ ಮಟ್ಟವನ್ನು ಕಾಯ್ದುಕೊಳ್ಳುತ್ತದೆ. ಆ ಕಾರಣಕ್ಕೆ ಕೇಸರಿ ಹಾಲು ಸೇವನೆ ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.

ಹಾರ್ಮೋನ್ ಬದಲಾವಣೆಗಳು, ಬೆಳೆಯುತ್ತಿರುವ ಹೊಟ್ಟೆ ಮತ್ತು ಉಸಿರಾಟದ ತೊಂದರೆಗಳು ಬೆಳಿಗ್ಗೆ ಎದ್ದ ನಂತರ ನೀವು ದಣಿದ ಭಾವನೆಯನ್ನು ಉಂಟುಮಾಡಬಹುದು. ಅದಕ್ಕಾಗಿ ನೀವು ಮಲಗುವ ಮೊದಲು ಕೇಸರಿ ಹಾಲನ್ನು ಸೇವಿಸಿದರೆ, ಅದು ನಿಮಗೆ ಶಾಂತವಾದ ರಾತ್ರಿಯ ನಿದ್ರೆಯನ್ನು ಹೊಂದಲು ಸಹಾಯ ಮಾಡುತ್ತದೆ ಎಂದ ಡಾ. ಶರ್ಮಾ ಹೇಳುತ್ತಾರೆ.

ಈ ಅವಧಿಯಲ್ಲಿ ಮೊಡವೆಗಳು, ಬಿರುಕುಗಳು ಮತ್ತು ಪಿಗ್ಮೆಂಟೇಶನ್ ಸಾಮಾನ್ಯ ಸಮಸ್ಯೆಗಳು. ʼಕೇಸರಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಚರ್ಮದ ಸಮಸ್ಯೆಗಳನ್ನು ನಿವಾರಿಸುತ್ತದೆ ಮತ್ತು ಚರ್ಮದ ಟೋನ್ (ಬಣ್ಣವಲ್ಲ) ಸುಧಾರಿಸುತ್ತದೆʼ ಎಂದು ಕಲ್ಪತರು ಹೇಳುತ್ತಾರೆ.

ಗರ್ಭಾವಸ್ಥೆಯು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸಬಹುದು. ಕೇಸರಿಯನ್ನು ನಿಯಮಿತವಾಗಿ ಸೇವಿಸುವುದರಿಂದ ನೀವು ಹವಾಮಾನದಲ್ಲಿನ ಬದಲಾವಣೆಗಳು ಮತ್ತು ಇತರ ಸಾಮಾನ್ಯ ಸೋಂಕುಗಳಿಂದ ಅಲರ್ಜಿಗಳು ಮತ್ತು ಸೋಂಕುಗಳಿಂದ ರಕ್ಷಿಸಲ್ಪಡುತ್ತೀರಿ.

ಎಷ್ಟು ಕೇಸರಿ ಸೇವಿಸಬಹುದು?

ಕೇಸರಿ ಆರೋಗ್ಯಕ್ಕೆ ಒಳ್ಳೆಯದು ಎಂದುಕೊಂಡು ಗರ್ಭಿಣಿಯರು ಕೇಸರಿಯನ್ನು ಬೇಕಾಬಿಟ್ಟಿ ಸೇವಿಸುವಂತಿಲ್ಲ. ಪ್ರತಿದಿನ ಸೇವಿಸಬೇಕಾದ ಸುರಕ್ಷಿತ ಪ್ರಮಾಣದ ಬಗ್ಗೆ ನಿಮಗೆ ಮಾರ್ಗದರ್ಶನ ನೀಡುವ ತಜ್ಞರು ನೀಡಿದ ಸೂಚನೆಗಳನ್ನು ಅನುಸರಿಸಿ. 2-3 ಕೇಸರಿಗಳನ್ನು ಹಾಲಿಗೆ ಸೇರಿಸಬಹುದು. ಕೇಸರಿ ಹಾಲು ಕುಡಿಯುವುದು ವೈಯಕ್ತಿಕ ಆಯ್ಕೆಯಾಗಿದೆ. ಕೇಸರಿಯು ಗರ್ಭಿಣಿ ಮಹಿಳೆಯರಲ್ಲಿ ವಾಕರಿಕೆ, ಆತಂಕ ಮತ್ತು ರಕ್ತಸ್ರಾವದಂತಹ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು, ಆದ್ದರಿಂದ ಎಚ್ಚರಿಕೆಯಿಂದಿರಿ ಮತ್ತು ತಜ್ಞರು ಅದನ್ನು ನಿಮಗೆ ಶಿಫಾರಸು ಮಾಡುವವರೆಗೆ ಅದನ್ನು ನೀವೇ ತೆಗೆದುಕೊಳ್ಳಬೇಡಿʼ ಎಂದು ಡಾ. ಸುರಭಿ ಸಲಹೆ ನೀಡುತ್ತಾರೆ.