World Lupus Day: ದೇಹದ ಅಂಗಾಂಗಗಳನ್ನು ಕಾಡುವ ಲೂಪಸ್; ಏನಿದು ವಿಚಿತ್ರ ಕಾಯಿಲೆ, ಇದರಿಂದ ಪಾರಾಗೋದು ಹೇಗೆ?
ʼಲೂಪಸ್ʼ ಈ ಹೆಸರು ನಿಮಗೆ ವಿಚಿತ್ರವಾಗಿ ಕೇಳಿಸಬಹುದು. ಇದೊಂದು ಅಪರೂಪದ ಕಾಯಿಲೆ. ಈ ಕಾಯಿಲೆ ಬಂದರೆ, ಅದನ್ನು ನಿಭಾಯಿಸುವುದು ತುಂಬಾ ಕಷ್ಟವಾಗುತ್ತದೆ. ಇದು ಚರ್ಮದಿಂದ ಹೃದಯದವರೆಗೆ ನಮ್ಮ ದೇಹದ ಎಲ್ಲಾ ಅಂಗಗಳ ಮೇಲೆ ದಾಳಿ ಮಾಡುತ್ತದೆ. ವಿಶ್ವ ಲೂಪಸ್ ದಿನಾಚರಣೆಯ ಸಂದರ್ಭ ಈ ಕಾಯಿಲೆಯ ಬಗ್ಗೆ ವಿವರವಾಗಿ ತಿಳಿಯಿರಿ.
ಪ್ರತಿವರ್ಷ ಮೇ 10ರಂದು ವಿಶ್ವ ಲೂಪಸ್ ದಿನವನ್ನು ಆಚರಿಸಲಾಗುತ್ತದೆ. ಲೂಪಸ್ ಎಂದರೆ ಏನು ಎಂಬುದು ಹಲವರಿಗೆ ತಿಳಿದಿಲ್ಲ. ಇದೊಂದು ಅಪರೂಪದ ಕಾಯಿಲೆ. ಈ ಕಾಯಿಲೆ ಒಮ್ಮೆ ಬಂತು ಎಂದರೆ ದೇಶದ ಎಲ್ಲಾ ಭಾಗಗಳಿಗೂ ಆವರಿಸುತ್ತದೆ. ಇದು ಚರ್ಮ, ಹೃದಯ, ಮೂತ್ರಪಿಂಡಗಳು, ಶ್ವಾಸಕೋಶಗಳು ಹೀಗೆ ಎಲ್ಲಾ ಅಂಗಾಂಗಗಳ ಮೇಲೂ ದಾಳಿ ಮಾಡುತ್ತವೆ. ಅದಕ್ಕಾಗಿಯೇ ಲೂಪಸ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವನ್ನು ಪರಿಗಣಿಸಿ ವಿಶ್ವ ಲೂಪಸ್ ದಿನವನ್ನು ಆಚರಿಸಲಾಗುತ್ತದೆ.
ಲೂಪಸ್ ಎಂದರೇನು?
ಮೊದಲೇ ಹೇಳಿದಂತೆ ಇದೊಂದು ಅಪರೂಪದ ರೋಗ. ಈ ರೋಗವನ್ನು ಆರಂಭದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ನೀಡಬೇಕು. ಇಲ್ಲದಿದ್ದರೆ ಪರಿಸ್ಥಿತಿ ಕೈ ಮೀರುತ್ತದೆ. ಇದೊಂದು ವಿಚಿತ್ರ ಕಾಯಿಲೆ ಎನ್ನಬಹುದು.
ನಮ್ಮ ದೇಹದಲ್ಲಿನ ಪ್ರತಿರಕ್ಷಣಾ ವ್ಯವಸ್ಥೆಯು ದೇಹವನ್ನು ನಿರಂತರವಾಗಿ ರಕ್ಷಿಸುತ್ತದೆ. ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಂತಹ ಸೂಕ್ಷ್ಮಜೀವಿಗಳು ಹೊರಗಿನಿಂದ ದೇಹವನ್ನು ಪ್ರವೇಶಿಸಿದಾಗ, ಅದು ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ ಮತ್ತು ಅವುಗಳ ಮೇಲೆ ದಾಳಿ ಮಾಡುತ್ತದೆ. ಅವುಗಳನ್ನು ತಟಸ್ಥಗೊಳಿಸಿ, ದೇಹದಿಂದ ಹೊರಹಾಕುತ್ತದೆ. ಆದರೆ ಲೂಪಸ್ ಕಾಯಿಲೆಯಲ್ಲಿ ಇದು ಸಂಪೂರ್ಣ ವ್ಯತಿರಿಕ್ತವಾಗಿರುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಯು ದೇಹದ ಮೇಲೆ ದಾಳಿ ಮಾಡುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಯಿಂದ ಉತ್ಪತ್ತಿಯಾಗುವ ಪ್ರತಿಕಾಯಗಳು ನಮ್ಮ ದೇಹದ ಅಂಗಾಂಶಗಳ ಮೇಲೆ ದಾಳಿ ಮಾಡುತ್ತವೆ. ಅದಕ್ಕಾಗಿಯೇ ಇದನ್ನು ಸ್ವಯಂ ನಿರೋಧಕ ಕಾಯಿಲೆ ಎಂದು ಕರೆಯಲಾಗುತ್ತದೆ.
ಲೂಪಸ್ ದೇಹದ ಒಂದು ಭಾಗಕ್ಕೆ ಸೀಮಿತವಾಗಿಲ್ಲ. ಇದು ದೇಹದ ಎಲ್ಲಾ ಅಂಗಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತದೆ. ಲೂಪಸ್ ಇರುವ ಜನರಲ್ಲಿ ಮುಖದ ಮೇಲೆ ಚಿಟ್ಟೆಯ ಆಕಾರದ ದದ್ದುಗಳು ಕಾಣಿಸಬಹುದು. ಈ ದದ್ದು ತೋಳದ ಮುಖದ ಮೇಲಿನ ಚುಕ್ಕೆಗಳಂತೆ ಕಾಣುತ್ತದೆ. ಅದಕ್ಕಾಗಿಯೇ ಈ ಕಾಯಿಲೆಗೆ ಲೂಪಸ್ ಎಂದು ಹೆಸರಿಸಲಾಗಿದೆ. ಲೂಪಸ್ ಎಂದರೆ ಲ್ಯಾಟಿನ್ ಭಾಷೆಯಲ್ಲಿ ತೋಳ ಎಂದರ್ಥ.
ಸೋಂಕಿನ ನಂತರ ಲೂಪಸ್ ತಕ್ಷಣವೇ ಹೋಗುವುದಿಲ್ಲ. ಇದು ಕಾಣಿಸಿದ ಜನರು ಆರೋಗ್ಯವಂತರಾಗಿ ಕಾಣುತ್ತಾರೆ. ರೋಗಲಕ್ಷಣಗಳು ಕಣ್ಮರೆಯಾಗಲು ಕನಿಷ್ಠ ಮೂರು ವರ್ಷಗಳು ಬೇಕಾಗುತ್ತದೆ. ಆಲಸ್ಯ ಭಾವನೆ ಮತ್ತು ಜ್ವರದ ಲಕ್ಷಣಗಳು ಆಗಾಗ ಕಾಣಿಸಬಹುದು.
ಈ ರೋಗಲಕ್ಷಣಗಳು ಆಗಾಗ ಬಂದು ಹೋಗವುದು ಮಾಡಬಹುದು. ಲೂಪಸ್ ಎಂದು ಪತ್ತೆಯಾದ ತಕ್ಷಣ, ಕೆಲವರಿಗೆ ಹೃದಯ, ಶ್ವಾಸಕೋಶ ಮತ್ತು ಮೂತ್ರಪಿಂಡಗಳಿಗೆ ಹಾನಿಯಾಗುತ್ತದೆ. ಆದ್ದರಿಂದಲೇ ಇದನ್ನು ಮಾರಣಾಂತಿಕ ಕಾಯಿಲೆ ಎಂದು ಹೇಳಲಾಗುತ್ತದೆ.
ಲೂಪಸ್ ಸಂಭವಿಸಲು ಕಾರಣವೇನು?
ಈ ರೋಗ ಹರಡಲು ಕಾರಣವೇನು ಎಂದು ವೈದ್ಯಲೋಕಕ್ಕೂ ಇಲ್ಲಿಯವರೆಗೆ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಜೀನ್‌ಗಳಲ್ಲಿನ ಬದಲಾವಣೆಗಳು ಇದಕ್ಕೆ ಕಾರಣ ಎಂದು ಭಾವಿಸಲಾಗಿದೆ. ಮಾನಸಿಕ ಒತ್ತಡ, ನೇರಳಾತೀತ ಬೆಳಕು ಮತ್ತು ಜೀನ್‌ಗಳಿಗೆ ಹರಡುವ ಕೆಲವು ಸಾಂಕ್ರಾಮಿಕ ಅಂಶಗಳು ಲೂಪಸ್ ಬೆಳವಣಿಗೆಗೆ ಕೊಡುಗೆ ನೀಡುತ್ತವೆ ಎಂದು ಹೇಳಲಾಗುತ್ತದೆ. ಮಹಿಳೆಯರು ಹೆಚ್ಚಾಗಿ ಲೂಪಸ್ ಕಾಯಿಲೆಗೆ ಒಳಗಾಗುತ್ತಾರೆ. ಅದರಲ್ಲೂ 15 ರಿಂದ 45 ವರ್ಷಗಳವರೆಗಿನ ಮಹಿಳೆಯರು ಈ ಕಾಯಿಲೆಗೆ ಹೆಚ್ಚು ತುತ್ತಾಗುತ್ತಾರೆ.
ಲೂಪಸ್‌ನ ಲಕ್ಷಣಗಳು
ಲೂಪಸ್ ಇರುವ ಜನರು ಕೂದಲು ಉದುರುವಿಕೆಯಿಂದ ಬಳಲುತ್ತಿದ್ದಾರೆ. ನೀವು ಬಿಸಿಲಿನಲ್ಲಿ ಹೋದಾಗ, ಶಾಖವು ಕೆನ್ನೆಯ ಮೇಲೆ ಚಿಟ್ಟೆಯ ಆಕಾರದ ದದ್ದುಗಳನ್ನು ಉಂಟುಮಾಡುತ್ತದೆ. ಅಲ್ಲಿ ಚರ್ಮ ತೇವವಾಗುತ್ತದೆ. ಕಿವಿ, ಕುತ್ತಿಗೆ ಮತ್ತು ಬೆನ್ನಿನ ಮೇಲೂ ಕಲೆಗಳು ರೂಪುಗೊಳ್ಳುತ್ತವೆ. ನಾಲಿಗೆ, ಕಂಕುಳ ಮತ್ತು ಕೆನ್ನೆಯ ಒಳಭಾಗದಲ್ಲಿ ಹುಣ್ಣುಗಳಾಗಬಹುದು. ಯಾವುದೇ ಕಾರಣವಿಲ್ಲದೆ ಜ್ವರ ಬರುತ್ತದೆ. ತೀವ್ರ ಆಲಸ್ಯ ಭಾವನೆ ನಿಮ್ಮನ್ನು ಆವರಿಸಬಹುದು. ಕೀಲು ನೋವುಗಳೂ ಕಾಣಿಸಬಹುದು. ತಲೆನೋವು ಮತ್ತು ಮೈಗ್ರೇನ್ ಸಂಭವಿಸುತ್ತದೆ. ಶೀತ ವಾತಾವರಣದಲ್ಲಿ ಬೆರಳುಗಳು ಮತ್ತು ಕಾಲ್ಬೆರಳುಗಳು ನೀಲಿ ಬಣ್ಣಕ್ಕೆ ತಿರುಗುತ್ತವೆ ಅಥವಾ ಕೆಂಪಾಗುತ್ತವೆ. ಇವೆಲ್ಲವೂ ಲೂಪಸ್‌ನ ಗುಣಲಕ್ಷಣಗಳಾಗಿವೆ. ಈ ರೋಗಲಕ್ಷಣಗಳನ್ನು ಗುಣವಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ.
ಲೂಪಸ್ ಕಾಯಿಲೆಗೆ ಚಿಕಿತ್ಸೆ
ಲೂಪಸ್ ರೋಗವನ್ನು ಕೆಲವು ರೀತಿಯ ಔಷಧಗಳನ್ನು ಬಳಸುವುದರ ಮೂಲಕ ನಿಯಂತ್ರಿಸಬಹುದು. ರೋಗ ತೀವ್ರಗೊಂಡರೆ ಬದುಕುಳಿಯುವುದು ಕಷ್ಟವಾಗಬಹುದು. ಆದರೆ ನಿಮಗೆ ಲೂಪಸ್ ಇದ್ದರೂ ಸಹ, ನೀವು ಔಷಧಿಯನ್ನು ತೆಗೆದುಕೊಂಡು ಉದ್ಯೋಗ, ಮದುವೆ, ಮಕ್ಕಳು ವಿಚಾರವಾಗಿ ಮುಂದುವರಿಯಬಹುದು. ಆದರೆ ಔಷಧಯ್ನು ಎಂದಿಗೂ ನಿಲ್ಲಿಸಬಾರದು. ಇದಕ್ಕೆ ಸ್ಟೀರಾಯ್ಡ್ ಔಷಧಗಳನ್ನೂ ನೀಡಲಾಗುತ್ತದೆ. ಚಿಕಿತ್ಸೆಗಳನ್ನೂ ಮಾಡಲಾಗುತ್ತದೆ.
ಲೂಪಸ್ ಹೃದಯ ಮತ್ತು ಮೂತ್ರಪಿಂಡಗಳ ಮೇಲೆ ದಾಳಿ ಮಾಡಿದರೆ, ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುತ್ತದೆ. ಇದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯು ಹೆಚ್ಚುವ ಸಾಧ್ಯತೆ ಇದೆ. ಇದರಿಂದ ಕಿಡ್ನಿಯ ಆರೋಗ್ಯ ಕೆಡಬಹುದು. ರಕ್ತದಲ್ಲಿನ ಪ್ಲೇಟ್ಲೆಟ್‌ಗಳು, ಬಿಳಿ ರಕ್ತ ಕಣಗಳು ಮತ್ತು ಕೆಂಪು ರಕ್ತ ಕಣಗಳ ಸಂಖ್ಯೆಯಲ್ಲಿ ಇಳಿಕೆಯಾಗಬಹುದು. ಉಸಿರಾಟದ ತೊಂದರೆ ಮತ್ತು ತೀವ್ರ ಕೆಮ್ಮು ಕೂಡ ಲೂಪಸ್‌ನ ಲಕ್ಷಣಗಳಾಗಿವೆ. ಈ ರೋಗಲಕ್ಷಣಗಳು ಕಂಡರೆ ನಿರ್ಲಕ್ಷ್ಯ ಮಾಡಬೇಡಿ.
ವಿಭಾಗ