ಕನ್ನಡ ಸುದ್ದಿ  /  ಜೀವನಶೈಲಿ  /  ವಾತಾವರಣ ಬದಲಾದ ಕೂಡಲೇ ಸೈನಸ್‌ ಉಲ್ಬಣವಾಗುತ್ತಾ? ಪರಿಹಾರಕ್ಕೆ ಈ ಯೋಗಭಂಗಿಗಳನ್ನು ಅಭ್ಯಾಸ ಮಾಡಲು ಆರಂಭಿಸಿ

ವಾತಾವರಣ ಬದಲಾದ ಕೂಡಲೇ ಸೈನಸ್‌ ಉಲ್ಬಣವಾಗುತ್ತಾ? ಪರಿಹಾರಕ್ಕೆ ಈ ಯೋಗಭಂಗಿಗಳನ್ನು ಅಭ್ಯಾಸ ಮಾಡಲು ಆರಂಭಿಸಿ

ಮಳೆಗಾಲದಲ್ಲಿ ಶೀತ ವಾತಾವರಣವಿರುವ ಕಾರಣ ಸೈನಸ್‌ ಸಮಸ್ಯೆ ಉಲ್ಬಣಗೊಳ್ಳಬಹುದು. ಇದರಿಂದ ನೆಮ್ಮದಿ ಇಲ್ಲದಂತಾಗಬಹುದು. ಆದರೆ ಯೋಗಾಸನಗಳ ಮೂಲಕ ಕಾಡುವ ಸೈನಸ್‌ ಸಮಸ್ಯೆ ಪರಿಹಾರ ಕಂಡುಕೊಳ್ಳಬಹುದು. ಈ ಕೆಲವು ಯೋಗಭಂಗಿಗಳನ್ನು ಅಭ್ಯಾಸ ಮಾಡಿ ಮಳೆಗಾಲದಲ್ಲಿ ಸೈನಸ್‌ ಸಮಸ್ಯೆಯಿಂದ ದೂರಾಗಿ.

ವಾತಾವರಣ ಬದಲಾದ ಕೂಡಲೇ ಸೈನಸ್‌ ಉಲ್ಬಣವಾದ್ರೆ, ಪರಿಹಾರಕ್ಕೆ ಈ ಯೋಗಭಂಗಿಗಳನ್ನು ಅಭ್ಯಾಸ ಮಾಡಿ
ವಾತಾವರಣ ಬದಲಾದ ಕೂಡಲೇ ಸೈನಸ್‌ ಉಲ್ಬಣವಾದ್ರೆ, ಪರಿಹಾರಕ್ಕೆ ಈ ಯೋಗಭಂಗಿಗಳನ್ನು ಅಭ್ಯಾಸ ಮಾಡಿ

ವಾತಾವರಣ ಬದಲಾದ ಕೂಡಲೇ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಆರೋಗ್ಯ ಸಮಸ್ಯೆಗಳಲ್ಲಿ ಸೈನುಟಿಸ್‌ ಕೂಡ ಒಂದು. ಅಲರ್ಜಿ, ಸೋಂಕುಗಳು, ಹಿಮಗಾಳಿ ಹೀಗೆ ಹಲವು ಕಾರಣಗಳಿಂದ ಮಳೆಗಾಲದಲ್ಲಿ ಸೈನಸ್‌ ಸಮಸ್ಯೆ ಹೆಚ್ಚಾಗಬಹುದು. ಇದು ಸೈನಸ್‌ ಕುಳಿಗಳ ಉರಿಯೂತಕ್ಕೂ ಕಾರಣವಾಗಬಹುದು. ಸೈನಸ್‌ ಸಮಸ್ಯೆ ಹೆಚ್ಚುವುದರಿಂದ ಮೂಗು ಬ್ಲಾಕ್‌ ಆಗುವುದು, ಉಸಿರಾಟದ ತೊಂದರೆ, ಕಣ್ಣುಗಳು, ಕೆನ್ನೆಯ ಭಾಗ, ಹಣೆಯ ಸುತ್ತ ನೋವು ಕಾಣಿಸಿಕೊಳ್ಳುವುದು, ಕೆಮ್ಮು, ತಲೆನೋವು, ಜ್ವರ, ಗಂಟಲು ನೋವು ಇಂತಹ ರೋಗಲಕ್ಷಣಗಳು ಎದುರಾಗಬಹುದು.

ಟ್ರೆಂಡಿಂಗ್​ ಸುದ್ದಿ

ಆದರೆ ವಾತಾವರಣ ಬದಲಾದಂತೆ ಹೆಚ್ಚಾಗುವ ಸೈನಸ್‌ ಸಮಸ್ಯೆಗೆ ಯೋಗಾಸನಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎನ್ನುತ್ತಾರೆ ಅಕ್ಷರ ಯೋಗ ಕೇಂದ್ರದ ಸಂಸ್ಥಾಪಕ ಹಿಮಾಲಯನ್ ಸಿದ್ಧಾ ಅಕ್ಷರ್. ʼಇದು ಬಿಳಿ ರಕ್ತ ಕಣಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ, ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ಎಂಡಾರ್ಫಿನ್‌ಗಳನ್ನು ಬಿಡುಗಡೆ ಮಾಡುತ್ತದೆ. ನಿರ್ದಿಷ್ಟ ಯೋಗಭಂಗಿಗಳು ಆಮ್ಲಜನಕದ ಹರಿವನ್ನು ಸುಧಾರಿಸುತ್ತದೆ ಹಾಗೂ ಮೂಗಿನ ಹೊಳ್ಳೆಯಲ್ಲಿ ಗಾಳಿಯು ಸರಾಗವಾಗಿ ಚಲಿಸುವಂತೆ ಮಾಡುತ್ತದೆ. ಯೋಗವು ಅಡ್ರಿನಾಲಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ, ಉರಿಯೂತವನ್ನು ಕಡಿಮೆ ಮಾಡಲು ರಕ್ತನಾಳಗಳನ್ನು ಸಂಕುಚಿತಗೊಳಿಸಲು ಸಹಾಯ ಮಾಡುತ್ತದೆ. ಯೋಗದೊಂದಿಗೆ ಧೂಮಪಾನ ನಿಷೇದಿಸುವುದು, ಆಗಾಗ್ಗೆ ಕೈ ತೊಳೆಯವುದು ಇಂತಹ ಪ್ರತಿರಕ್ಷಣಾ ಕ್ರಮಗಳನ್ನು ಅನುಸರಿಸುವುದು ಮುಖ್ಯವಾಗುತ್ತದೆ. ಹಾಗಾದರೆ ಸೈನಸ್‌ ನಿವಾರಣೆಗೆ ಯಾವೆಲ್ಲಾ ಯೋಗಭಂಗಿಗಳು ನೆರವಾಗುತ್ತವೆ ನೋಡಿ. 

ಕೋಬ್ರಾ ಭಂಗಿ (ಭುಜಂಗಾಸನ)

ಹೊಟ್ಟೆ ನೆಲಕ್ಕೆ ತಾಕುವಂತೆ ಮಲಗಿ, ಅಂಗೈಗಳನ್ನು ನೆಲಕ್ಕೆ ಆನಿಸಿ ದೇಹದ ಮೇಲ್ಭಾಗವನ್ನು ಎತ್ತುವುದು. ಪಾದದ ಕಾಲ್ಬೆರಳುಗಳನ್ನು ನೆಲಕ್ಕೆ ಆನಿಸಿ ಇರಿಸಿಕೊಂಡಿರಬೇಕು. ಹೀಗೆ ಮಾಡಿದ ನಂತರ ದೀರ್ಘವಾಗಿ ಉಸಿರಾಡಬೇಕು. ಉಸಿರನ್ನು ಒಳಗೆ ಎಳೆದುಕೊಂಡು ಭುಜ ಹಾಗೂ ತಲೆಯ ಭಾಗವನ್ನು 30 ಡಿಗ್ರಿ ಕೋನಕ್ಕೆ ಮೇಲಕ್ಕೆತ್ತಬೇಕು. 10 ಸೆಕೆಂಡುಗಳ ಕಾಲ ಇದೇ ಭಂಗಿಯಲ್ಲಿ ಇರಬೇಕು. ಹೀಗೆ ಮಾಡುವಾಗ ಹೊಕ್ಕುಳದಿಂದ ಕೆಳ ಭಾಗ ನೆಲಕ್ಕೆ ತಾಕಿರುತ್ತದೆ. ನಂತರ ನಿಧಾನಕ್ಕೆ ತಲೆಯನ್ನು ಕೆಳಗೆ ತರುತ್ತಾ ಉಸಿರು ಬಿಡಿ.

ಬೆಕ್ಕು-ದನ ಭಂಗಿ (ಮಾರ್ಜರಿಯಾಸನ)

ಬೆಕ್ಕು-ಹಸುವಿನ ಭಂಗಿಯು ಸೈನಸ್‌ ಪರಿಹಾರಕ್ಕೆ ಪ್ರಯೋಜನಕಾರಿಯಾದ ಯೋಗಭಂಗಿಯಾಗಿದೆ. ಇದು ಕಾಲು ಹಾಗೂ ಕೈಗಳನ್ನು ನೆಲಕ್ಕೆ ಊರಿ ಮಾಡುವ ಯೋಗಾಸನವಾಗಿದೆ. ಹಸುವಿನ ರೀತಿ ಬೆನ್ನು ಬಾಗಿಸಿ. ನಂತರ ತಲೆಯನ್ನು ಮೇಲಕ್ಕೆ ಎತ್ತಿ ದೀರ್ಘವಾಗಿ ಉಸಿರಾಡಿ. ಈ ಯೋಗಭಂಗಿಯು ನಮ್ಯತೆ ಮತ್ತು ರಕ್ತಪರಿಚಲನೆಯನ್ನು ಸುಧಾರಿಸುತ್ತದೆ. ಸೈನಸ್‌ ನಿವಾರಣೆಗೆ ಇದು ಉತ್ತಮ ಪರಿಹಾರ.

ಹಸುಗೂಸಿನ ಭಂಗಿ (ಬಾಲಾಸನ)

ಕಾಲುಗಳನ್ನು ಹಿಂದಕ್ಕೆ ಮಡಚಿ ಕಾಲಿನ ಮೇಲೆ ಕುಳಿತುಕೊಳ್ಳಿ. ದೇಹವನ್ನು ಮುಂದಕ್ಕೆ ಬಾಗಿಸಿ ಎರಡೂ ಕೈಗಳನ್ನು ಚಾಚಿ. ಇದು ನಮ್ಮ ಬೆನ್ನಿನ ಭಾಗವನ್ನು ಹಿಗ್ಗಿಸುತ್ತದೆ. ಅಲ್ಲದೇ ಆಳವಾದ ಉಸಿರಾಟವನ್ನು ಉತ್ತೇಜಿಸುತ್ತದೆ. ಸೈನಸ್‌ ನಿವಾರಣೆಗೆ ಈ ವ್ಯಾಯಾಮ ಕೂಡ ಉತ್ತಮ.

ಬ್ರಿಡ್ಜ್‌ ಪೋಸ್‌ (ಸೇತು ಬಂಧಾಸನ)

ಬೆನ್ನು ನೆಲಕ್ಕೆ ತಾಕುವಂತೆ ಮಲಗಿ. ನಿಮ್ಮ ಮೊಣಕಾಲುಗಳನ್ನು ಬಗ್ಗಿಸಿ ಪಾದವನ್ನು ನೆಲಕ್ಕೆ ಊರಿ ಸೊಂಟದ ಭಾಗವನ್ನು ಮೇಲಕ್ಕೆ ಎತ್ತಿ. ಇದು ಸೇತುವೆಯ ರೀತಿ ಕಾಣುತ್ತದೆ. ಈ ಭಂಗಿಯು ರಕ್ತಪರಿಚಲನೆಯನ್ನು ಸುಧಾರಿಸಿ, ಸೈನಸ್‌ ದಟ್ಟಣೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಅಧೋಮುಖಾಸನ

ಇದು ದೇಹವನ್ನು ನೆಲದ ಕಡೆಗೆ ಬಾಗಿಸಿ ಕೈ ಕಾಲುಗಳನ್ನು ನೆಲಕ್ಕೆ ಊರಿ ದೇಹದ ಭಾಗವನ್ನು ಮೇಲಕ್ಕೆ ಎತ್ತುವುದು. ಈ ವಿಲೋಮವು ಗುರುತ್ವಾಕರ್ಷಣೆಯು ನಿಮ್ಮ ಸೈನಸ್‌ಗಳನ್ನು ಬರಿದಾಗಿಸಲು ಸಹಾಯ ಮಾಡುತ್ತದೆ, ದಟ್ಟಣೆಯಿಂದ ಪರಿಹಾರವನ್ನು ನೀಡುತ್ತದೆ.

ಪಾದಹಸ್ತಾಸನ

ನೇರವಾಗಿ ನಿಂತು ದೇಹವನ್ನು ಸಂಪೂರ್ಣವಾಗಿ ಪಾದದವರೆಗೆ ಬಾಗಿಸಿ. ಕೈಗಳಿಂದ ಕಾಲುಗಳನ್ನು ಹಿಡಿದುಕೊಳ್ಳಿ. ಇದು ತಲೆಯ ಭಾಗಕ್ಕೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಅಲ್ಲದೇ ಸೈನಸ್‌ ದಟ್ಟಣೆಯನ್ನು ನಿವಾರಿಸುತ್ತದೆ.

ನಾಡಿ ಶೋಧನ ಪ್ರಾಣಾಯಾಮ

ನೇರವಾಗಿ ಕುಳಿತುಕೊಳ್ಳಿ. ನಿಮ್ಮ ಬಲ ಹೆಬ್ಬೆರಳನ್ನು ಬಳಸಿ ನಿಮ್ಮ ಬಲ ಮೂಗಿನ ಹೊಳ್ಳೆಯನ್ನು ಮುಚ್ಚಿ ಮತ್ತು ಎಡಭಾಗದಿಂದ ಉಸಿರಾಡಿ. ನಂತರ, ನಿಮ್ಮ ಬಲ ಉಂಗುರದ ಬೆರಳಿನಿಂದ ಎಡ ಮೂಗಿನ ಹೊಳ್ಳೆಯನ್ನು ಮುಚ್ಚಿ ಮತ್ತು ಬಲಭಾಗದ ಮೂಲಕ ಬಿಡುತ್ತಾರೆ. ಪುನರಾವರ್ತಿಸಿ, ಮೂಗಿನ ಹೊಳ್ಳೆಗಳನ್ನು ಪರ್ಯಾಯವಾಗಿ ಮಾಡಿ. ಈ ಉಸಿರಾಟದ ತಂತ್ರವು ಗಾಳಿಯ ಹರಿವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ ಮತ್ತು ಸೈನಸ್ ಸಮಸ್ಯೆಗಳನ್ನು ನಿವಾರಿಸಬಹುದು.

ಯೋಗ ಮಾಡುವಾಗ ಅನುಸರಿಸಬೇಕಾದ ಹಾಗೂ ಮಾಡಬಾರದಂತಹ ಅಭ್ಯಾಸಗಳು

ಆರಂಭದಲ್ಲಿ ನಿಮ್ಮ ಮಿತಿಗಳನ್ನು ಗಮನಿಸಿ. ಕ್ರಮೇಣ ಮಿತಿಯನ್ನು ಹೆಚ್ಚಿಸಿ. ವಿಶ್ರಾಂತಿಯನ್ನು ಹೆಚ್ಚಿಸಲು ಆಳವಾದ, ನಿಯಂತ್ರಿತ ಉಸಿರಾಟದ ಮೇಲೆ ಕೇಂದ್ರೀಕರಿಸಿ. ಸರಿಯಾದ ಪ್ರಯೋಜನ ಪಡೆಯಲು ಭಂಗಿಗಳನ್ನು ಖಚಿತಪಡಿಸಿಕೊಳ್ಳಿ. ಯೋಗಭ್ಯಾಸಕ್ಕೂ ಮೊದಲು ಹಾಗೂ ನಂತರ ನೀರು ಕುಡಿಯಿರಿ.

ಸಾಧ್ಯವಿಲ್ಲದ ಭಂಗಿಗಳನ್ನು ಒಂದೇ ಬಾರಿಗೆ ಮಾಡಲು ಪ್ರಯತ್ನ ಮಾಡದಿರಿ. ಉಸಿರಾಟವನ್ನು ಕಾಪಾಡಿಕೊಳ್ಳಿ. ಅತಿಯಾದ ಯೋಗ ಮಾಡುವುದು ಸರಿಯಲ್ಲ.