ದೀಪಾವಳಿಯಲ್ಲಿ ಯರ್ರಾಬಿರ್ರಿ ತಿಂದಿದ್ದೀರಾ: ಹಬ್ಬದ ನಂತರ ಜೀರ್ಣಕ್ರಿಯೆ ಹೆಚ್ಚಿಸಲು ಇಲ್ಲಿವೆ 5 ಟಿಪ್ಸ್
ದೀಪಾವಳಿ ಹಬ್ಬದಲ್ಲಿ ಸಿಹಿತಿಂಡಿಗಳು, ಎಣ್ಣೆ ಪದಾರ್ಥಗಳಿಂದ ಮಾಡಿದ ಭಕ್ಷ್ಯ ಸೇರಿದಂತೆ ಇನ್ನಿತರೆ ಖಾದ್ಯಗಳನ್ನು ಬಹುತೇಕರು ಯರ್ರಾಬಿರ್ರಿಯಾಗಿ ತಿನ್ನುತ್ತಾರೆ. . ಈ ರೀತಿ ತಿನ್ನುವುದರಿಂದ ಆರೋಗ್ಯ ಹಾಳಾಗುತ್ತದೆ. ಅಜೀರ್ಣದಂತಹ ಪರಿಸ್ಥಿತಿಗೆ ಕಾರಣವಾಗುತ್ತದೆ. ಹೀಗಾಗಿ ಜೀರ್ಣಕ್ರಿಯೆ ಹೆಚ್ಚಿಸಲು 5 ಪರಿಣಾಮಕಾರಿ ಸಲಹೆಗಳು ಇಲ್ಲಿವೆ.
ಇತ್ತೀಚೆಗಷ್ಟೇ ದೀಪಾವಳಿ ಹಬ್ಬ ಮುಗಿದಿದೆ. ಹಬ್ಬಗಳಲ್ಲಿ ಸಿಹಿತಿಂಡಿಗಳು, ಎಣ್ಣೆ ಪದಾರ್ಥಗಳಿಂದ ಮಾಡಿದ ಭಕ್ಷ್ಯ ಸೇರಿದಂತೆ ಇನ್ನಿತರೆ ಖಾದ್ಯಗಳನ್ನು ಬಹುತೇಕರು ಯರ್ರಾಬಿರ್ರಿಯಾಗಿ ತಿನ್ನುತ್ತಾರೆ. ಅಷ್ಟೇ ಅಲ್ಲ, ವೀಕೆಂಡ್ ಬಂತು ಅಂದ್ರೂ ಕೆಲವರು ತಮಗಿಷ್ಟ ಬಂದ ಹಾಗೆ, ಇಷ್ಟಪಟ್ಟ ಖಾದ್ಯಗಳನ್ನೆಲ್ಲಾ ಒಂದೇ ಬಾರಿಗೆ ತಿನ್ನುತ್ತಾರೆ. ಈ ರೀತಿ ತಿನ್ನುವುದರಿಂದ ಆರೋಗ್ಯ ಹಾಳಾಗುತ್ತದೆ. ಅಜೀರ್ಣದಂತಹ ಪರಿಸ್ಥಿತಿಗೆ ಕಾರಣವಾಗುತ್ತದೆ. ಜೀರ್ಣಾಂಗ ವ್ಯವಸ್ಥೆಯಲ್ಲಿನ ಅಡಚಣೆಯು ಮಲಬದ್ಧತೆ ಮತ್ತು ಹೊಟ್ಟೆ ಉಬ್ಬರವನ್ನು ಉಂಟುಮಾಡುವುದು ಮಾತ್ರವಲ್ಲದೆ ಹೊಟ್ಟೆಯಲ್ಲಿನ ಕೊಬ್ಬಿನ ಹೆಚ್ಚಳಕ್ಕೂ ಕಾರಣವಾಗುತ್ತದೆ. ಸಂಸ್ಕರಿತ ಆಹಾರವನ್ನು ಸೇವಿಸುವುದರಿಂದ ದೇಹದಲ್ಲಿ ವಿಟಮಿನ್ ಮತ್ತು ಮಿನರಲ್‍ಗಳ ಕೊರತೆ ಹೆಚ್ಚುತ್ತದೆ. ಹೀಗಾಗಿ, ಹಬ್ಬದ ಋತುವಿನ ನಂತರ ದೇಹವನ್ನು ನಿರ್ವಿಷಗೊಳಿಸಲು ಮತ್ತು ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಕೆಲವು ವಿಶೇಷ ಆಹಾರಗಳನ್ನು ಸೇವಿಸುವುದು ಅವಶ್ಯಕ. ಇದರಿಂದ ಅಸಿಡಿಟಿ ಮತ್ತು ಫುಡ್ ಪಾಯ್ಸನಿಂಗ್, ಹೊಟ್ಟೆ ಉಬ್ಬರ ಸಮಸ್ಯೆಯಿಂದ ದೂರವಿರಬಹುದು.
ಜೀರ್ಣಕ್ರಿಯೆ ಹೆಚ್ಚಿಸಲು 5 ಪರಿಣಾಮಕಾರಿ ಸಲಹೆಗಳು ಇಲ್ಲಿವೆ
ಪ್ರೋಬಯಾಟಿಕ್‌ಗಳನ್ನು ಸೇವಿಸಿ: ಪ್ರೋಬಯಾಟಿಕ್‌ಗಳನ್ನು ಸೇವಿಸುವುದರಿಂದ ದೇಹದಲ್ಲಿ ಪ್ರೋಟೀನ್ ಮತ್ತು ವಿಟಮಿನ್‌ಗಳ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಇದರಲ್ಲಿರು ಉತ್ತಮ ಬ್ಯಾಕ್ಟೀರಿಯಾಗಳು ಕರುಳಿನ ಮೈಕ್ರೋಬಯೋಟಾದ ಪ್ರಮಾಣವನ್ನು ಹೆಚ್ಚಿಸುತ್ತದೆ. ಮೈಕ್ರೋಬಯೋಟಾವನ್ನು ಸಮತೋಲನದಲ್ಲಿಡಬಹುದು. ಅಲ್ಲದೆ, ಕರುಳಿನ ಪಿಎಚ್ ಮಟ್ಟವು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಇದರಿಂದಾಗಿ ಕರುಳಿನ ಚಲನೆಯು ನಿಯಮಿತವಾಗಿರುತ್ತದೆ. ಇದಕ್ಕಾಗಿ ಮೊಸರು, ಚೀಸ್, ಇಡ್ಲಿ, ಉಪ್ಪಿನಕಾಯಿ ಮತ್ತು ಲಸ್ಸಿಯನ್ನು ಆಹಾರದಲ್ಲಿ ಸೇರಿಸಬಹುದು.
ಫೈಬರ್ ಭರಿತ ಆಹಾರವನ್ನು ಸೇವಿಸಿ: ಋತುಮಾನದ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವುದರಿಂದ ದೇಹವು ಅಗತ್ಯವಾದಷ್ಟು ಫೈಬರ್ ಅನ್ನು ಪಡೆಯುತ್ತದೆ. ಆಹಾರದಲ್ಲಿ ಇದರ ಪ್ರಮಾಣವನ್ನು ಹೆಚ್ಚಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯು ಸಮತೋಲನದಲ್ಲಿರುತ್ತದೆ. ಜತೆಗೆ ಇದು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಇದು ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ. ಇದಕ್ಕಾಗಿ ಸೇಬು, ಪೇರಳೆ, ಬೀನ್ಸ್, ಬ್ರೊಕೊಲಿ, ಬೆರ್ರಿ ಹಣ್ಣುಗಳು, ಆವಕಾಡೊ, ಬೀಜಗಳು ಮತ್ತು ಧಾನ್ಯಗಳನ್ನು ಸೇವಿಸುವುದು ಉತ್ತಮ.
ದೇಹವನ್ನು ಡಿಹೈಡ್ರೇಟ್ ಮಾಡದಂತೆ ನೋಡಿಕೊಳ್ಳಬೇಕು: ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರು ದೊರಕದಿದ್ದರೆ ದೌರ್ಬಲ್ಯ, ಆಯಾಸ ಮತ್ತು ಮಲಬದ್ಧತೆಗೆ ಕಾರಣವಾಗುತ್ತದೆ. ಪೌಷ್ಟಿಕತಜ್ಞರ ಪ್ರಕಾರ, ನೀರನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿ. ಇದು ದೇಹದಲ್ಲಿನ ಖನಿಜಗಳ ಕೊರತೆಯನ್ನು ಪೂರೈಸುವ ಮೂಲಕ ಟಾಕ್ಸಿನ್‌ಗಳನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ನೀರನ್ನು ಹೊರತುಪಡಿಸಿ, ಶುಂಠಿ ಚಹಾ, ಪುದೀನ ನೀರು ಮತ್ತು ಅರಿಶಿನ ಹಾಲು ಸೇರಿದಂತೆ ಆರೋಗ್ಯಕರ ಪಾನೀಯಗಳನ್ನು ಸೇವಿಸಬಹುದು.
ವ್ಯಾಯಾಮ: ದೇಹವನ್ನು ಶಕ್ತಿಯುತವಾಗಿರಿಸಲು, ಪ್ರತಿದಿನ 20 ರಿಂದ 30 ನಿಮಿಷಗಳ ಕಾಲ ಬೈಕಿಂಗ್, ಜಾಗಿಂಗ್, ಟೆನ್ನಿಸ್ ಸೈಕ್ಲಿಂಗ್ ಸೇರಿದಂತೆ ಹೆಚ್ಚಿನ ತೀವ್ರತೆಯ ವ್ಯಾಯಾಮ ಮತ್ತು ಕಾರ್ಡಿಯೋ ಮಾಡಬಹುದು. ಇದು ಹೊಟ್ಟೆಯನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಸ್ನಾಯು ಸೆಳೆತವನ್ನು ತೆಗೆದುಹಾಕಬಹುದು. ನಿತ್ಯ ವ್ಯಾಯಾಮ ಮಾಡುವುದರಿಂದ ಹಬ್ಬದ ಋತುವಿನಲ್ಲಿ ದೇಹದಲ್ಲಿ ಕ್ಯಾಲೋರಿ ಹೆಚ್ಚಾಗುವುದನ್ನು ತಡೆಯಬಹುದು.
ಎಣ್ಣೆ ಮತ್ತು ಸಕ್ಕರೆಯ ಸೇವನೆಯನ್ನು ಸೇವಿಸದಿರಿ: ಸಕ್ಕರೆಯು ದೇಹದಲ್ಲಿ ಅಧಿಕ ರಕ್ತದ ಸಕ್ಕರೆಯ ಅಪಾಯವನ್ನು ಹೆಚ್ಚಿಸುತ್ತದೆ. ಇದಲ್ಲದೆ, ಸಿಹಿ ತಿನಿಸುಗಳ ಅತಿಯಾದ ಸೇವನೆಯು ಆಸಿಡ್ ರಿಫ್ಲಕ್ಸ್‌ಗೆ ಕಾರಣವಾಗುತ್ತದೆ. ಸಕ್ಕರೆ ಭರಿತ ಆಹಾರವು ದೇಹಕ್ಕೆ ತ್ವರಿತ ಶಕ್ತಿಯನ್ನು ಒದಗಿಸಿದರೆ, ಅದನ್ನು ಅತಿಯಾಗಿ ಸೇವಿಸುವುದರಿಂದ ಹೊಟ್ಟೆ ಉಬ್ಬರ, ಅಜೀರ್ಣ ಮತ್ತು ಆಮ್ಲೀಯತೆ ಉಂಟಾಗುತ್ತದೆ.
ಅಧ್ಯಯನವೊಂದರ ಪ್ರಕಾರ, ಅತಿಯಾದ ಸಕ್ಕರೆ ಸೇವನೆಯು ಕರುಳಿನ ತಡೆಗೋಡೆಯನ್ನು ಅಡ್ಡಿಪಡಿಸುತ್ತದೆ. ಕರುಳಿನ ಮೈಕ್ರೋಬಯೋಟಾ ಡಿಸ್ಬಯೋಸಿಸ್ ಅಪಾಯವನ್ನು ಹೆಚ್ಚಿಸುತ್ತದೆ. ಇದು ಲೋಳೆಪೊರೆಯ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಜತೆಗೆ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.