ಕಾಲೇಜಿನಲ್ಲಿ ಎಲ್ಲಾ ಹುಡುಗಿಯರು ನನ್ನ ಇಷ್ಟಪಡುತ್ತಾರೆ ಎನ್ನುತ್ತಿರುವ ಚೀನಾ ಯುವಕನಿಗೆ ಪ್ರೀತಿಯ ಭ್ರಮೆ; ಏನಿದು ಹೊಸ ಕಾಯಿಲೆ
ಕನ್ನಡ ಸುದ್ದಿ  /  ಜೀವನಶೈಲಿ  /  ಕಾಲೇಜಿನಲ್ಲಿ ಎಲ್ಲಾ ಹುಡುಗಿಯರು ನನ್ನ ಇಷ್ಟಪಡುತ್ತಾರೆ ಎನ್ನುತ್ತಿರುವ ಚೀನಾ ಯುವಕನಿಗೆ ಪ್ರೀತಿಯ ಭ್ರಮೆ; ಏನಿದು ಹೊಸ ಕಾಯಿಲೆ

ಕಾಲೇಜಿನಲ್ಲಿ ಎಲ್ಲಾ ಹುಡುಗಿಯರು ನನ್ನ ಇಷ್ಟಪಡುತ್ತಾರೆ ಎನ್ನುತ್ತಿರುವ ಚೀನಾ ಯುವಕನಿಗೆ ಪ್ರೀತಿಯ ಭ್ರಮೆ; ಏನಿದು ಹೊಸ ಕಾಯಿಲೆ

ಕಾಲೇಜಿನ ಎಲ್ಲಾ ಹುಡುಗಿಯರು ನನ್ನ ತುಂಬಾ ಇಷ್ಟಪಡುತ್ತಾರೆ ಎಂಬ ಪ್ರೀತಿಯ ಭ್ರಮೆಯಲ್ಲಿದ್ದ ಚೀನಾ ಯುವಕನಲ್ಲಿ ವಿಚಿತ್ರ ವರ್ತನೆ ಪತ್ತೆಯಾಗಿದೆ. ವೈದ್ಯಕೀಯ ಚಿಕಿತ್ಸೆ ನಂತರ ಆತ ಮತ್ತೆ ಮೊದಲಿನಂತೆ ಆಗಿದ್ದಾನೆ. ಏನಿದು ಪ್ರೀತಿಯ ಭ್ರಮೆ?

ಚೀನಾದಲ್ಲಿ 20 ವರ್ಷದ ಯುವಕನಿಗೆ ಪ್ರೀತಿಯ ಭ್ರಮೆ ಎಂಬ ಕಾಯಿಲೆ ಪತ್ತೆಯಾಗಿದೆ. ಸದ್ಯ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ರೋಗದ ಲಕ್ಷಣಗಳನ್ನು  ತಿಳಿಯಿರಿ.
ಚೀನಾದಲ್ಲಿ 20 ವರ್ಷದ ಯುವಕನಿಗೆ ಪ್ರೀತಿಯ ಭ್ರಮೆ ಎಂಬ ಕಾಯಿಲೆ ಪತ್ತೆಯಾಗಿದೆ. ಸದ್ಯ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ರೋಗದ ಲಕ್ಷಣಗಳನ್ನು ತಿಳಿಯಿರಿ. (Unsplash)

ಚೀನಾದಲ್ಲಿ 20 ವರ್ಷದ ಯುವಕನೊರ್ವನಿಗೆ ‘ಪ್ರೀತಿಯ ಭ್ರಮೆ’ (Delusional Love Disorder) ಎಂಬ ಅಸಾಮಾನ್ಯ ಅಸ್ವಸ್ಥತೆ ಇರುವುದು ಪತ್ತೆಯಾಗಿದೆ. ವರದಿಗಳ ಪ್ರಕಾರ, ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಎರಡನೇ ವರ್ಷದ ವಿದ್ಯಾರ್ಥಿ ತನ್ನ ಎಲ್ಲಾ ಮಹಿಳಾ ಸಹಪಾಠಿಗಳು ತನ್ನನ್ನು ಇಷ್ಟಪಡುತ್ತಾರೆ ಎಂದು ದೃಢವಾಗಿ ನಂಬಿದ್ದಾನೆ. ಅಷ್ಟೇ ಅಲ್ಲ ಸಮಯ ಕಳೆದಂತೆ, ಆತನ ಸ್ಥಿತಿಯು ಹದಗೆಟ್ಟಿದೆ. ಕಾಲೇಜಿನಲ್ಲಿ ಹುಡುಗಿಯರು ನನ್ನನ್ನು ತುಂಬಾ ಪ್ರೀತಿಸುತ್ತಿದ್ದಾರೆ ಎಂದು ಭಾವಿಸಿ ಅವರ ಬಳಿ ಅನುಚಿತವಾಗಿ ವರ್ತಿಸುವುದು, ಪ್ರೀತಿಯನ್ನು ವ್ಯಕ್ತಪಡಿಸಲು ಪ್ರಾರಂಭಿಸಿದ್ದಾನೆ. ಯುವಕನ ವರ್ತನೆ ಅಚ್ಚರಿ ತರಿಸಿತ್ತು. ಅಂತಿಮವಾಗಿ ಈತನಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಿದ ಬಳಿಕ ಮೊದಲಿನಂತೆ ಸಾಮಾನ್ಯ ಯುವಕರಂತೆ ವರ್ತಿಸುತ್ತಿದ್ದಾನೆ.

ಪೂರ್ವ ಚೀನಾದ ಜಿಯಾಂಗ್ಸು ಪ್ರಾಂತ್ಯಕ್ಕೆ ಸೇರಿದ ಯುವಕನ ಹೆಸರು ಲಿಯು ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (ಎಸ್‌ಸಿಎಂಪಿ) ವರದಿ ಮಾಡಿದೆ. ಫೆಬ್ರವರಿಯಲ್ಲಿ ಲಿಯುಗೆ ಪ್ರೀತಿಯ ಭ್ರಮೆಯ ರೋಗ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದವು. ಆ ನಂತರ ಅದು ಹದಗೆಡುತ್ತಲೇ ಇತ್ತು.

ಪ್ರೀತಿಯ ಭ್ರಮೆಯಲ್ಲಿದ್ದ ಲಿಯು ಮುಂದೆ ಏನು ಮಾಡಿದ?

ಲಿಯು ಆರಂಭದಲ್ಲಿ ತನ್ನ ಕಾಲೇಜಿನಲ್ಲಿ ಓದುತ್ತಿರುವ ಎಲ್ಲಾ ಹುಡುಗಿರಯನ್ನ ನನ್ನ ತುಂಬಾ ಇಷ್ಟಪಡುತ್ತಾರೆ ಎಂದು ಭಾವಿಸಿಕೊಂಡಿದ್ದಾನೆ. ಹೀಗಾಗಿ ಅವರೆಲ್ಲರನ್ನೂ ಸಂಪರ್ಕಿಸಿದ್ದಾನೆ. ಆದರೆ ಈತನಿಗೆ ಹುಡುಗಿಯರಿಂದ ನಕಾರಾತ್ಮಕ ಪ್ರತಿಕ್ರಿಯೆಗಳು ಬಂದಿವೆ. ಹುಡುಗಿಯರು ತನ್ನ ಪ್ರೀತಿಯನ್ನು ಸ್ವೀಕರಿಸಲು ತುಂಬಾ ನಾಚಿಕೆಪಡುತ್ತಾರೆ. ಹೀಗಾಗಿ ತಿರಸ್ಕರಿಸುತ್ತಿದ್ದಾರೆ ಎಂದು ಭಾವಿಸಿಕೊಂಡಿದ್ದಾನೆ.

"ಕಾಲೇಜಿನ ಎಲ್ಲಾ ಹುಡುಗಿಯರು ನನ್ನಂತೆ" ಎಂದು ಲಿಯು ಹುವೈಯಾನ್ ನಂ 3 ಪೀಪಲ್ಸ್ ಆಸ್ಪತ್ರೆಯ ವೈದ್ಯ ಲು ಝೆನ್ಜಿಯಾವೊಗೆ ತಿಳಿಸಿದ್ದಾನೆ ಎಂದು ಎಸ್‌ಸಿಎಂಪಿ ವರದಿ ಮಾಡಿದೆ. ವಿಶ್ವವಿದ್ಯಾಲಯದಲ್ಲಿ ಅತ್ಯುತ್ತಮವಾಗಿ ಕಾಣುವ ವ್ಯಕ್ತಿ ತಾನೆಂದು ಲಿಯು ಭಾವಿಸಿಕೊಂಡಿದ್ದಾನೆ ಎಂದು ವೈದ್ಯರು ಅಲ್ಲಿನ ಸ್ಥಳೀಯ ಮಾಧ್ಯಮ ತಿಳಿಸಿರುವುದಾಗಿ ವರದಿಯಾಗಿದೆ. ಕಾಲೇಜಿನ ಮಹಿಳಾ ಸಹಪಾಠಿಗಳಿಗೆ ಈತ ತುಂಬಾ ತೊಂದರೆ ನೀಡಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾನೆ.

ಲಿಯು ಪ್ರದರ್ಶಿಸಿದ ಇತರ ರೋಗಲಕ್ಷಣಗಳು ಯಾವುವು?

ಲಿಯು ಯಾವಾಗಲೂ ಉತ್ಸುಕನಾಗಿದ್ದನು. ನಡವಳಿಕೆಯಲ್ಲಿ ಬದಲಾವಣೆಗಳು ಕಾಣುತ್ತಿದ್ದವು. ತರಗತಿಗಳ ಸಮಯದಲ್ಲಿ ಸ್ವಲ್ಪ ವಿಚಲಿತನಾಗಲು ಪ್ರಾರಂಭಿಸಿದ. ರಾತ್ರಿಯಿಡೀ ಎಚ್ಚರವಾಗಿರುತ್ತಿದ್ದ. ಹಣವನ್ನು ವ್ಯರ್ಥ ಮಾಡಲು ಪ್ರಾರಂಭಿಸಿದನು. ಈ ಹಠಾತ್ ಬದಲಾವಣೆಯ ನಂತರ ಈತನನ್ನು ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿ ವೈದ್ಯರು "ಲಿಯು ಗೆ ಪ್ರೀತಿಯ ಭ್ರಮೆ ಇರುವುದನ್ನು ಪತ್ತೆ ಹಚ್ಚಿದ್ದಾರೆ.

ಪ್ರೀತಿಯ ಭ್ರಮೆಗೆ ಕಾರಣವೇನು?

ವೈದ್ಯರಾದ ಲು ಅವರ ಪ್ರಕಾರ, ಇದು ಸಾಮಾನ್ಯವಾಗಿ ಮಾರ್ಚ್ ಮತ್ತು ಏಪ್ರಿಲ್ ನಡುವೆ ಕಂಡುಬರುತ್ತದೆ. ಆ ಅವಧಿಯಲ್ಲಿನ ಹವಾಮಾನ ಬದಲಾವಣೆಯು "ದೇಹದಲ್ಲಿ ಅಂತಃಸ್ರಾವಕ ಮಟ್ಟದಲ್ಲಿ ಏರಿಳಿತ"ಕ್ಕೆ ಕಾರಣವಾಗಬಹುದು. ಈ ಸ್ಥಿತಿಯಿಂದ ಬಳಲುತ್ತಿರುವ ಜನರು ಹೈಪರ್ ಆಗುತ್ತಾರೆ. ನಿದ್ರೆಯ ಕೊರತೆಯನ್ನ ಅನುಭವಿಸುತ್ತಾರೆ. ಅವರು ಲೈಂಗಿಕ ವ್ಯಸನದಿಂದ ಬಳಲುತ್ತಾರೆ ಎಂದು ಹೇಳಿದ್ದಾರೆ.

ಪ್ರೀತಿಯ ಭ್ರಮೆ ತೀವ್ರವಾದ ಸಂದರ್ಭಗಳಲ್ಲಿ ರೋಗಿಗಳು ಕೋಪಗೊಳ್ಳಬಹುದು. ಜನರ ಮೇಲೆ ದಾಳಿ ಮಾಡಬಹುದು" ಎಂದು ಡಾ.ಲು ಚೀನಾದ ಸ್ಥಳೀಯ ಸಂಸ್ಥೆಗೆ ತಿಳಿಸಿದ್ದಾರೆ. ರೋಗಲಕ್ಷಣಗಳನ್ನು ಪ್ರದರ್ಶಿಸುವ ಯಾರಾದರೂ, ಸೌಮ್ಯವಾಗಿದ್ದರೂ ಸಹ, ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು ಎಂದು ವೈದ್ಯರು ಒತ್ತಿ ಹೇಳಿದರು. ಲಿಯುಗೆ ಸಂಬಂಧಿಸಿದಂತೆ, ಅವನಿಗೆ ಔಷಧಿಗಳು ಮತ್ತು ಮನೋಚಿಕಿತ್ಸೆಯೊಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಚೀನಾದ 20 ವರ್ಷದ ಲಿಯುಗೆ ಚಿಕಿತ್ಸೆ ಮುಂದುವರಿಸಲಾಗಿದ್ದು, ಆತ ಚೇತರಿಸಿಕೊಳ್ಳುತ್ತಿದ್ದಾನೆ. ಬೇಸಿಗೆಯಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ತಂಪುಪಾನೀಯಗಳಂತಹ ದ್ರವ ರೂಪದ ಆಹಾರವನ್ನೇ ಹೆಚ್ಚಾಗಿ ಸೇವಿಸಬೇಕೆಂದು ವೈದ್ಯರು ಸಲಹೆ ನೀಡುತ್ತಾರೆ.

Whats_app_banner