ಅನಾರೋಗ್ಯಕರವಾದರೂ ಈ 5 ತಿನಿಸುಗಳು ಭಾರತದಲ್ಲಿ ತುಂಬಾ ಜನಪ್ರಿಯ, ಸ್ನ್ಯಾಕ್ಸ್‌ ಪ್ರಿಯರು ನೀವಾಗಿದ್ದರೆ ತಿನ್ನುವ ಮುನ್ನ ಯೋಚಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  ಅನಾರೋಗ್ಯಕರವಾದರೂ ಈ 5 ತಿನಿಸುಗಳು ಭಾರತದಲ್ಲಿ ತುಂಬಾ ಜನಪ್ರಿಯ, ಸ್ನ್ಯಾಕ್ಸ್‌ ಪ್ರಿಯರು ನೀವಾಗಿದ್ದರೆ ತಿನ್ನುವ ಮುನ್ನ ಯೋಚಿಸಿ

ಅನಾರೋಗ್ಯಕರವಾದರೂ ಈ 5 ತಿನಿಸುಗಳು ಭಾರತದಲ್ಲಿ ತುಂಬಾ ಜನಪ್ರಿಯ, ಸ್ನ್ಯಾಕ್ಸ್‌ ಪ್ರಿಯರು ನೀವಾಗಿದ್ದರೆ ತಿನ್ನುವ ಮುನ್ನ ಯೋಚಿಸಿ

ಭಾರತೀಯರು ಆಹಾರಪ್ರಿಯರು. ಅದರಲ್ಲೂ ಕರಿದ, ಮಸಾಲೆ ಸೇರಿಸಿದ, ಸಿಹಿಯಂಶ ಇರುವ ಪದಾರ್ಥಗಳೇ ನಮಗೆ ಹೆಚ್ಚು ಇಷ್ಟವಾಗೋದು. ಭಾರತದಲ್ಲಿ ಜನಪ್ರಿಯವಾಗಿರುವ ಈ 5 ಸ್ನ್ಯಾಕ್‌ಗಳಿಂದ ಆರೋಗ್ಯಕ್ಕೆ ತೊಂದರೆ ತಪ್ಪಿದ್ದಲ್ಲ. ನೀವು ಸ್ನ್ಯಾಕ್ಸ್ ಪ್ರಿಯರಾಗಿದ್ದರೆ ಈ ವಿಚಾರ ನಿಮಗೆ ತಿಳಿದಿರಲೇಬೇಕು. ಬಾಯಿರುಚಿಗಿಂತ ಆರೋಗ್ಯ ಮುಖ್ಯ ನೆನಪಿರಲಿ.

ಭಾರತದಲ್ಲಿ ಸಾಕಷ್ಟು ಜನಪ್ರಿಯವಾಗಿರುವ ಅನಾರೋಗ್ಯಕರ ತಿನಿಸುಗಳು
ಭಾರತದಲ್ಲಿ ಸಾಕಷ್ಟು ಜನಪ್ರಿಯವಾಗಿರುವ ಅನಾರೋಗ್ಯಕರ ತಿನಿಸುಗಳು (PC: Canva)

ಭಾರತದ ಬೀದಿಬದಿ ಆಹಾರಗಳು ಪ್ರಪಂಚದಾದ್ಯಂತ ಖ್ಯಾತಿ ಪಡೆದಿವೆ. ಈ ಖಾದ್ಯಗಳ ಹೆಸರು ಕೇಳಿದ್ರೆ ಬಾಯಲ್ಲಿ ನೀರೂರುತ್ತದೆ. ವಿವಿಧ ರೀತಿಯ ಮಸಾಲೆಗಳಿಂದ ತಯಾರಿಸುವ ಈ ಖಾದ್ಯಗಳ ಪರಿಮಳಕ್ಕೆ ನಾವು ಮನ ಸೋಲುತ್ತೇವೆ. ಈ ಆಹಾರಗಳು ನಮ್ಮ ದೇಶದ ವಿವಿಧ ರಾಜ್ಯ ಹಾಗೂ ಸಂಸ್ಕೃತಿಯನ್ನು ಪ್ರತಿನಿಧಿಸುತ್ತವೆ. ಭಾರತದ ಸ್ಟ್ರೀಟ್‌ಫುಡ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವ, ನಮ್ಮಲ್ಲಿ ಸಾಕಷ್ಟು ಜನಪ್ರಿಯವಾಗಿರುವ ಈ ಕೆಲವು ಖಾದ್ಯಗಳು ಆರೋಗ್ಯಕ್ಕೆ ಹಾನಿಕರ. ಇವುಗಳ ನಿರಂತರ ಸೇವನೆಯಿಂದ ಆರೋಗ್ಯ ಸಮಸ್ಯೆ ಕಾಡುವುದು ಖಚಿತ.

ಅತಿಯಾದ ಉಪ್ಪಿನಾಂಶ, ಎಣ್ಣೆ, ಸಿಹಿಯಂಶ ಹಾಗೂ ಮಸಾಲೆಗಳಿಂದ ತುಂಬಿರುವ ಈ ಆಹಾರಗಳು ನಾಲಿಗೆಗೆ ರುಚಿ ಎನ್ನಿಸಿದರೂ ಆರೋಗ್ಯಕ್ಕೆ ಖಂಡಿತ ಒಳ್ಳೆಯದಲ್ಲ. ಇವುಗಳ ನಿರಂತರ ಸೇವನೆಯಿಂದ ಅಧಿಕರಕ್ತದೊತ್ತಡ, ಕೊಲೆಸ್ಟ್ರಾಲ್ ಹಾಗೂ ಬೊಜ್ಜಿನ ಸಮಸ್ಯೆಗಳು ಹೆಚ್ಚುತ್ತವೆ ಎಂದು ಹೇಳಲಾಗುತ್ತದೆ. ಹಾಗಾದರೆ ಭಾರತದಲ್ಲಿ ಜನಪ್ರಿಯವಾಗಿದ್ದೂ ಆರೋಗ್ಯಕ್ಕೆ ಹಾನಿ ಎನ್ನಿಸುವ ಪ್ರಸಿದ್ಧ ತಿನಿಸುಗಳು ಯಾವುವು ನೋಡಿ.

ಬಿಸ್ಕತ್ತುಗಳು

ಭಾರತೀಯರಿಗೆ ಚಹಾ ಕುಡಿಯುವಾಗ ಬಿಸ್ಕತ್ತು ಅಥವಾ ಕುಕ್ಕಿಸ್‌ಗಳನ್ನು ನೆಂಜಿಕೊಂಡು ತಿಂದು ಅಭ್ಯಾಸ. ಆದರೆ ಆರೋಗ್ಯಕ್ಕೆ ಹಾನಿ ಎನ್ನಿಸುವ ಆಹಾರಗಳ ಪಟ್ಟಿಯಲ್ಲಿ ಬಿಸ್ಕತ್ತಿಗೆ ಅಗ್ರಸ್ಥಾನವಿದೆ. ಇದರಲ್ಲಿ ಬೆಣ್ಣೆ, ಸಕ್ಕರೆ ಮತ್ತು ಸಂಸ್ಕರಿಸಿದ ಹಿಟ್ಟಿನಂತಹ ಅಂಶಗಳಿದ್ದು, ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತವೆ. ಒಂದು ಸಾಮಾನ್ಯ ಗಾತ್ರದ್ದು ಬಿಸ್ಕತ್ತು 200-300ರಷ್ಟು ಕ್ಯಾಲೋರಿಗಳನ್ನು ಹೊಂದಿರುತ್ತದೆ ಎಂದು ತಜ್ಞರು ಹೇಳುತ್ತಾರೆ. ಹಿಟ್ಟು ಹಾಗೂ ಬೆಣ್ಣೆಯಿಂದ ಕಾರ್ಬೋಹೈಡ್ರೇಟ್‌ಗಳು ಮತ್ತು ಕೊಬ್ಬಿನಾಂಶ ಬಹುಪಾಲು ದೇಹಕ್ಕೆ ಸೇರುತ್ತದೆ. ಆ ಕಾರಣಕ್ಕೆ ಇದನ್ನು ಮಿತವಾಗಿ ಸೇವಿಸಿದಷ್ಟೂ ಉತ್ತಮ.

ಗೋಲ್‌ಗಪ್ಪಾ

ಈಗೀಗಂತೂ ಬೀದಿಗೊಂದರಂತೆ ಗೋಲ್‌ಗಪ್ಪ ಸ್ಟಾಲ್‌ಗಳು ಕಾಣಿಸುತ್ತವೆ. ಭಾರತೀಯ ಫೇವರಿಟ್ ಬೀದಿ ಬದಿ ಆಹಾರಗಳಲ್ಲಿ ಗೋಲ್‌ಗಪ್ಪಕ್ಕೆ ಟಾಪ್ ಒನ್‌ ಸ್ಥಾನ. ಕೊತ್ತಂಬರಿ ನೀರು, ಪುದಿನಾ ಚಟ್ನಿ, ಆಲೂಗೆಡ್ಡೆ ಮಿಶ್ರಣ, ಕಡಲೆಕಾಳು ಈ ಎಲ್ಲವನ್ನೂ ಪುರಿಯೊಳಗೆ ಸೇರಿಸಿ ಕೊಟ್ಟಾಗ ಅದನ್ನ ತಿನ್ನುತ್ತಿದ್ದರೆ ಆಹಾ ಎಂದೆನ್ನಿಸದೇ ಇರದು. ಆದರೆ ಇದು ಆರೋಗ್ಯಕ್ಕೆ ಹಾನಿಕಾರ, ಅತಿಯಾಗಿ ಗೋಲ್‌ಗಪ್ಪ ತಿಂದರೆ ಆರೋಗ್ಯಕ್ಕೆ ಹಾನಿ ತಪ್ಪಿದ್ದಲ್ಲ. ಇದರಿಂದ ವಾಂತಿ, ಅತಿಸಾರದಂತಹ ಸಮಸ್ಯೆಗಳು ಎದುರಾಗಬಹುದು. 

ಬಾಳೆಕಾಯಿ ಚಿಪ್ಸ್

ಇದಂತೂ ಮಕ್ಕಳಿಂದ ಹಿಡಿದು ದೊಡ್ಡವವರೆಗೆ ಎಲ್ಲರಿಗೂ ಇಷ್ಟ. ತಜ್ಞರ ಪ್ರಕಾರ, ಒಂದು ಕಪ್ ಅಥವಾ 72 ಗ್ರಾಂ ಬಾಳೆಕಾಯಿ ಚಿಪ್ಸ್‌ನಲ್ಲಿ 24ಗ್ರಾಂ ಅಷ್ಟು ಕೊಬ್ಬಿನಾಂಶ ಇರುತ್ತದೆ. ಶೇ 21 ಗ್ರಾಂ ಸ್ಯಾಚುರೇಟೆಡ್ ಕೊಬ್ಬಿನಾಂಶವಾಗಿರುತ್ತದೆ. ಒಂದು ಕಪ್ ಬಾಳೆಹಣ್ಣು ಚಿಪ್ಸ್ 385 ರಷ್ಟು ಕ್ಯಾಲೊರಿಗಳಿಂದ ತುಂಬಿರುತ್ತದೆ. ತೂಕ ಹೆಚ್ಚಳ ಸೇರಿದಂತೆ ಹಲವು ಸಮಸ್ಯೆಗಳಿಗೆ ಬಾಳೆಕಾಯಿ ಚಿಪ್ಸ್ ತಿನ್ನುವುದು ಕಾರಣವಾಗುತ್ತದೆ. ಇದರಲ್ಲಿ ಉಪ್ಪಿನಾಂಶ ಕೂಡ ಹೆಚ್ಚಿದ್ದು, ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳು ಕಾಡಬಹುದು. 

ಕಚೋರಿ

ರುಚಿಕರವಾದ, ಕಚೋರಿಗಳು ಸಹ ಅನಾರೋಗ್ಯಕರವಾಗಿವೆ. ಏಕೆಂದರೆ ಅವುಗಳು ಸಾಮಾನ್ಯವಾಗಿ ಡೀಪ್-ಫ್ರೈಡ್ ಆಗಿರುತ್ತವೆ, ಹೆಚ್ಚಿನ ಕ್ಯಾಲೋರಿಗಳು ಮತ್ತು ಅನಾರೋಗ್ಯಕರ ಕೊಬ್ಬಿನಿಂದ ತುಂಬಿರುತ್ತವೆ. ತಜ್ಞರ ಪ್ರಕಾರ, ಒಂದು ಕಚೋರಿಯು 200-300ರಷ್ಟು ಕ್ಯಾಲೋರಿಗಳನ್ನು ಹೊಂದಿರುತ್ತದೆ, ಇದು ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವ ಮತ್ತು ನಿಮ್ಮ ಹೃದ್ರೋಗದ ಅಪಾಯವನ್ನು ಹೆಚ್ಚಿಸುವ ಅನಾರೋಗ್ಯಕರ ಕೊಬ್ಬಿನ ಪ್ರಮಾಣವನ್ನು ಹೆಚ್ಚಿಸುತ್ತದೆ. ಅಲ್ಲದೆ ಕಚೋರಿಯಲ್ಲಿ ಸಿಹಿಯಂಶ ಕೂಡ ಹೆಚ್ಚಿರುತ್ತದೆ. ಇದರಿಂದಲೂ ಆರೋಗ್ಯಕ್ಕೆ ಹಾನಿ ತಪ್ಪಿದ್ದಲ್ಲ.

ಮೊಮೊಸ್

ಗೋಲ್‌ಗಪ್ಪದಂತೆ ಮೊಮೊಸ್‌ ಸ್ಟಾಲ್‌ಗಳು ನಮ್ಮ ನಗರದ ಪ್ರತಿಯೊಂದು ಮೂಲೆ ಮತ್ತು ಮೂಲೆಗಳಲ್ಲಿ ಕಂಡುಬರುತ್ತವೆ ಮತ್ತು ಅವೆಲ್ಲವೂ ಕಿಕ್ಕಿರಿದು ತುಂಬಿರುತ್ತವೆ. ಇದು ಬಾಯಿಗೆ ರುಚಿಸುವುದಾದರೂ ನಿಜವಾದರೂ ನಮ್ಮ ಜೀರ್ಣಕಾರಿ ಆರೋಗ್ಯವನ್ನು ಹಾಳುಮಾಡುತ್ತದೆ ಮತ್ತು ಅವುಗಳನ್ನು ಪ್ರತಿದಿನ ತಿನ್ನುವುದರಿಂದ ಮಲಬದ್ಧತೆ, ಆಮ್ಲೀಯತೆ ಮತ್ತು ಹೊಟ್ಟೆಯುಬ್ಬರ ಮುಂತಾದ ಸಮಸ್ಯೆಗಳಿಗೆ ಕಾರಣವಾಗಬಹುದು. ಮೊಮೊಸ್ ಉಬ್ಬುವುದು, ಅಜೀರ್ಣ ಮತ್ತು ಆಸಿಡ್ ರಿಫ್ಲಕ್ಸ್ ಅನ್ನು ಉಂಟುಮಾಡುತ್ತದೆ.

Whats_app_banner