ಹಬ್ಬದ ಸಂಭ್ರಮ ಕಸಿಯಬಹುದು ಅಜೀರ್ಣ, ಹೊಟ್ಟೆಯುಬ್ಬರದಂತಹ ಜೀರ್ಣಕ್ರಿಯೆ ಸಮಸ್ಯೆ; ತಕ್ಷಣ ಪರಿಹಾರ ಪಡೆಯಲು ಈ ಸಲಹೆ ಪಾಲಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  ಹಬ್ಬದ ಸಂಭ್ರಮ ಕಸಿಯಬಹುದು ಅಜೀರ್ಣ, ಹೊಟ್ಟೆಯುಬ್ಬರದಂತಹ ಜೀರ್ಣಕ್ರಿಯೆ ಸಮಸ್ಯೆ; ತಕ್ಷಣ ಪರಿಹಾರ ಪಡೆಯಲು ಈ ಸಲಹೆ ಪಾಲಿಸಿ

ಹಬ್ಬದ ಸಂಭ್ರಮ ಕಸಿಯಬಹುದು ಅಜೀರ್ಣ, ಹೊಟ್ಟೆಯುಬ್ಬರದಂತಹ ಜೀರ್ಣಕ್ರಿಯೆ ಸಮಸ್ಯೆ; ತಕ್ಷಣ ಪರಿಹಾರ ಪಡೆಯಲು ಈ ಸಲಹೆ ಪಾಲಿಸಿ

ಹಬ್ಬ ಎಂದರೆ ಬಗೆ ಬಗೆಯ ತಿನಿಸುಗಳಿಗೆ ಕೊರತೆ ಇರುವುದಿಲ್ಲ. ಈ ಸಮಯದಲ್ಲಿ ಖುಷಿ, ಸಂಭ್ರಮದ ನಡುವೆ ಅತಿಯಾಗಿ ತಿಂದು ಬಿಡುತ್ತೇವೆ. ಇದರಿಂದ ಅಜೀರ್ಣ, ಹೊಟ್ಟೆಯುಬ್ಬರ, ಗ್ಯಾಸ್ಟ್ರಿಕ್ ಮುಂತಾದ ಜೀರ್ಣಕ್ರಿಯೆ ಹಾಗೂ ಹೊಟ್ಟೆಗೆ ಸಂಬಂಧಿತ ಸಮಸ್ಯೆಗಳು ಕಾಡುತ್ತವೆ. ಇದರಿಂದ ತಕ್ಷಣಕ್ಕೆ ಪರಿಹಾರ ಪಡೆಯಲು ಇಲ್ಲಿದೆ ಸಲಹೆ.

ಹಬ್ಬದ ಸಮಯದಲ್ಲಿ ಕಾಡುವ ಅಜೀರ್ಣ, ಹೊಟ್ಟೆಯುಬ್ಬರದಂತಹ ಜೀರ್ಣಕ್ರಿಯೆ ಸಮಸ್ಯೆಗೆ ಪರಿಹಾರ
ಹಬ್ಬದ ಸಮಯದಲ್ಲಿ ಕಾಡುವ ಅಜೀರ್ಣ, ಹೊಟ್ಟೆಯುಬ್ಬರದಂತಹ ಜೀರ್ಣಕ್ರಿಯೆ ಸಮಸ್ಯೆಗೆ ಪರಿಹಾರ (PC: Canva)

ಖಾರ–ಸಿಹಿ ತಿಂಡಿಗಳು, ಸಾಂಪ್ರದಾಯಿಕ ತಿನಿಸುಗಳು ಹಬ್ಬದ ಸೀಸನ್‌ನಲ್ಲಿ ನಮ್ಮ ನಾಲಿಗೆ ಚಪಲ ಹೆಚ್ಚುವಂತೆ ಮಾಡುವುದು ಸುಳ್ಳಲ್ಲ. ಇದರಿಂದ ಸಿಕ್ಕಿದ್ದೇ ಚಾನ್ಸ್ ಎನ್ನುವ ರೀತಿ ಹಬ್ಬಗಳ ಸಮಯದಲ್ಲಿ ಅತಿಯಾಗಿ ತಿಂದು ಬಿಡುತ್ತೇವೆ. ಆದರೆ ಈ ಸಮಯದಲ್ಲಿ ಸೇವಿಸುವ ಆಹಾರಗಳು ಕೆಲವರಿಗೆ ಹೊಟ್ಟೆ ಹಾಗೂ ಜೀರ್ಣಕ್ರಿಯೆ ಸಂಬಂಧಿತ ಸಮಸ್ಯೆಗಳು ಹೆಚ್ಚುವಂತೆ ಮಾಡಬಹುದು.

ಹಬ್ಬದ ಅಡುಗೆ ತಿಂದ ಮೇಲೆ ಅಜೀರ್ಣ, ಹೊಟ್ಟೆಯುಬ್ಬರ, ಗ್ಯಾಸ್ಟ್ರಿಕ್‌ ಮುಂತಾದ ಹೊಟ್ಟೆಗೆ ಸಂಬಂಧಿತ ಸಮಸ್ಯೆಗಳು ಕಾಡಬಹುದು. ಬಹುತೇಕರು ಹಬ್ಬದ ಊಟದ ನಂತರ ಇಂತಹ ಸಮಸ್ಯೆಗಳನ್ನು ಎದುರಿಸುತ್ತಾರೆ. ನಿಮಗೂ ಅಥವಾ ನಿಮ್ಮ ಮನೆಯಲ್ಲಿ ಯಾರಿಗಾದರೂ ಈ ರೀತಿ ಸಮಸ್ಯೆಯಾದರೆ ತಕ್ಷಣ ಪರಿಹಾರ ಪಡೆಯಲು ಇಲ್ಲಿದೆ ಕೆಲವು ಸಿಂಪಲ್ ಟಿಪ್ಸ್‌.

ಸಾಕಷ್ಟು ನೀರು ಕುಡಿಯಿರಿ

ಹೊಟ್ಟೆಯುಬ್ಬರ, ಅಜೀರ್ಣಕ್ಕೆ ಸರಳವಾದ ಪರಿಹಾರವೆಂದರೆ ಹೈಡ್ರೇಟ್ ಆಗಿರುವುದು. ಸಾಕಷ್ಟು ನೀರು ಕುಡಿಯುವುದು ಹೆಚ್ಚುವರಿ ಸೋಡಿಯಂ ಅನ್ನು ಹೊರಹಾಕಲು ಸಹಾಯ ಮಾಡುತ್ತದೆ. ಸೋಡಿಯಂ ಅಂಶವು ಹೊಟ್ಟೆಯುಬ್ಬರಕ್ಕೆ ಕಾರಣವಾಗಬಹುದು. ಜೀರ್ಣಕ್ರಿಯೆಗೆ ಸಹಾಯ ಮಾಡುವ ಶುಂಠಿ ಅಥವಾ ಪುದೀನಾ ಮುಂತಾದ ಕುದಿಸಿದ ಬೆಚ್ಚಗಿನ ನೀರು ಅಥವಾ ಗಿಡಮೂಲಿಕೆ ಚಹಾಗಳನ್ನು ಕುಡಿಯುವುದನ್ನು ಪರಿಗಣಿಸಿ. ಕಾರ್ಬೊನೇಟೆಡ್ ಪಾನೀಯಗಳನ್ನು ತಪ್ಪಿಸುವುದು ಹೊಟ್ಟೆಯಲ್ಲಿ ಗ್ಯಾಸ್‌ ಸಂಗ್ರಹವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಮಿತವಾಗಿ ತಿನ್ನಲು ಮರಿಬೇಡಿ

ಹಬ್ಬಗಳ ಸಮಯದಲ್ಲಿ ಬಗೆ ಬಗೆಯ ಖ್ಯಾದಗಳು ಇರುವುದು ಸಹಜ. ಆದರೆ ಇದೆ ಎಂದು ಸಿಕ್ಕಿದ್ದನ್ನೆಲ್ಲಾ ತಿಂದರೆ ಹೊಟ್ಟೆಯುಬ್ಬರ, ಅಜೀರ್ಣದಂತಹ ಸಮಸ್ಯೆ ಕಾಡುತ್ತದೆ. ಹಾಗಾಗಿ ಹಬ್ಬದ ಸಮಯದಲ್ಲಿ ಮಿತವಾಗಿ ತಿನ್ನುವುದು ಕೂಡ ಮುಖ್ಯವಾಗುತ್ತದೆ. ಯಾವುದೇ ಆಹಾರವನ್ನಾದ್ರೂ ಮಿತವಾಗಿ ಸೇವಿಸಿ. ನೀವು ತಿನ್ನುವ ಪ್ರತಿ ತುತ್ತನ್ನ ಚೆನ್ನಾಗಿ ಜಗಿದು ತಿನ್ನಿ.

ಜೀರ್ಣಕಾರಿ ಆರೋಗ್ಯ ಸೇವಿಸುವುದು

ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳಂತಹ ನಾರಿನಾಂಶ ಸಮೃದ್ಧವಾಗಿರುವ ಆಹಾರಗಳು ಆರೋಗ್ಯಕರ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ ಮತ್ತು ಮಲಬದ್ಧತೆಯನ್ನು ತಡೆಯುತ್ತದೆ. ಹೆಚ್ಚುವರಿಯಾಗಿ ಕರುಳಿನ ಆರೋಗ್ಯವನ್ನು ಬೆಂಬಲಿಸುವ ಮೊಸರು, ಕೆಫೀರ್ ಅಥವಾ ಹುದುಗಿಸಿದ ತರಕಾರಿಗಳಂತಹ ಪ್ರೋಬಯಾಟಿಕ್-ಭರಿತ ಆಹಾರಗಳನ್ನು ಸೇರಿಸಿ. ಶುಂಠಿ, ಅರಿಶಿನ ಮತ್ತು ಜೀರಿಗೆಯಂತಹ ಮಸಾಲೆಗಳು ಅವುಗಳ ಜೀರ್ಣಕಾರಿ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ ಮತ್ತು ಹಬ್ಬದ ಭಕ್ಷ್ಯಗಳಿಗೆ ಸುಲಭವಾಗಿ ಸೇರಿಸಬಹುದು.

ಲಘು ದೈಹಿಕ ಚಟುವಟಿ

ಹಬ್ಬದ ಭೋಜನದಲ್ಲಿ ತೊಡಗಿದ ನಂತರ, ಲಘು ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಜೀರ್ಣಕ್ರಿಯೆಗೆ ಗಮನಾರ್ಹವಾಗಿ ಸಹಾಯ ಮಾಡುತ್ತದೆ. ನಡಿಗೆ, ಸ್ಟ್ರೆಚಿಂಗ್‌ ಅಥವಾ ನೃತ್ಯವು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತೇಜಿಸಲು ಮತ್ತು ಉಬ್ಬುವಿಕೆಯ ಭಾವನೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುವುದಲ್ಲದೆ ನಿಮ್ಮ ಮನಸ್ಥಿತಿ ಮತ್ತು ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ.

ನೈಸರ್ಗಿಕ ಪರಿಹಾರ

ನೀವು ಅಜೀರ್ಣ ಅಥವಾ ಹೊಟ್ಟೆಯುಬ್ಬರದಂತಹ ಸಮಸ್ಯೆಗಳಿಂದ ತೊಂದರೆ ಅನುಭವಿಸುತ್ತಿದ್ದರೆ, ನೈಸರ್ಗಿಕ ಪದಾರ್ಥಗಳು ಪರಿಹಾರವನ್ನು ನೀಡಬಹುದು. ಶುಂಠಿ, ಪುದಿನಾ ಅಥವಾ ಕ್ಯಾಮೊಮೈಲ್‌ನಿಂದ ತಯಾರಿಸಿದ ಗಿಡಮೂಲಿಕೆ ಚಹಾಗಳು ಜೀರ್ಣಾಂಗವನ್ನು ಶಮನಗೊಳಿಸುತ್ತದೆ ಮತ್ತು ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ.

ಹಬ್ಬದ ಸಮಯದಲ್ಲಿ ತಯಾರಿಸುವ ಆಹಾರಗಳಿಗೆ ಮಸಾಲೆ, ಉಪ್ಪು, ಖಾರ, ಸಿಹಿ ಅತಿಯಾಗಿ ಬಳಸುವ ಕಾರಣ ಜೀರ್ಣಕ್ರಿಯೆ ಸಮಸ್ಯೆಗಳು ಕಾಡುವುದು ಸಹಜ. ಹಾಗಾಗಿ ಈ ಮೇಲಿನ ಸಲಹೆಗಳನ್ನು ಪಾಲಿಸುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

Whats_app_banner