ವ್ಯಾಯಾಮ ಮಾಡುವ ಸಂದರ್ಭ ಈ 5 ಲಕ್ಷಣಗಳು ಕಾಣಿಸಿದರೆ ನಿರ್ಲಕ್ಷ್ಯ ಮಾಡಬೇಡಿ, ಹೃದ್ರೋಗದ ಸಂಕೇತವೂ ಆಗಿರಬಹುದು ಎಚ್ಚರ-health tips 5 warning signs of heart problems during exercise you must not ignore heart attack signs rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ವ್ಯಾಯಾಮ ಮಾಡುವ ಸಂದರ್ಭ ಈ 5 ಲಕ್ಷಣಗಳು ಕಾಣಿಸಿದರೆ ನಿರ್ಲಕ್ಷ್ಯ ಮಾಡಬೇಡಿ, ಹೃದ್ರೋಗದ ಸಂಕೇತವೂ ಆಗಿರಬಹುದು ಎಚ್ಚರ

ವ್ಯಾಯಾಮ ಮಾಡುವ ಸಂದರ್ಭ ಈ 5 ಲಕ್ಷಣಗಳು ಕಾಣಿಸಿದರೆ ನಿರ್ಲಕ್ಷ್ಯ ಮಾಡಬೇಡಿ, ಹೃದ್ರೋಗದ ಸಂಕೇತವೂ ಆಗಿರಬಹುದು ಎಚ್ಚರ

ಇತ್ತೀಚಿನ ಜಡಜೀವನಶೈಲಿಯಿಂದಾಗಿ ಬೇಡವೆಂದರೂ ಇಲ್ಲದ ಆರೋಗ್ಯ ಸಮಸ್ಯೆಗಳು ನಮ್ಮನ್ನು ಬಾಧಿಸುತ್ತಿವೆ. ಇದರಲ್ಲಿ ಹೃದ್ರೋಗವು ಒಂದು. ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆಯೂ ದಿನೇ ದಿನೇ ಹೆಚ್ಚುತ್ತಿದೆ. ವ್ಯಾಯಾಮ ಮಾಡುವಾಗ ಕಾಣಿಸುವ ಈ ಲಕ್ಷಣಗಳನ್ನು ನೀವೂ ಎಂದಿಗೂ ನಿರ್ಲಕ್ಷ್ಯ ಮಾಡಬಾರದು. ಇದು ಹೃದ್ರೋಗದ ಸಂಕೇತವೂ ಆಗಿರಬಹುದು ಎಚ್ಚರ.

ವ್ಯಾಯಾಮ ಮಾಡುವಾಗ ಕಾಣಿಸುವ ಈ 5 ಲಕ್ಷಣಗಳು
ವ್ಯಾಯಾಮ ಮಾಡುವಾಗ ಕಾಣಿಸುವ ಈ 5 ಲಕ್ಷಣಗಳು (PC: Canva)

ಕಳೆದ ಕೆಲವು ವರ್ಷಗಳಿಂದ ಹೃದ್ರೋಗದಿಂದ ಸಾವನ್ನಪ್ಪುವವರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಸದ್ದೇ ಇಲ್ಲದೇ ಬರುವ ಹೃದಯಾಘಾತವು ಜನರ ಪ್ರಾಣ ತೆಗೆಯುತ್ತಿದೆ. ಜಡಜೀವನಶೈಲಿ ಹಾಗೂ ದೈಹಿಕ ಚಟುವಟಿಕೆಯ ಕೊರತೆಯು ಹೃದ್ರೋಗ ಸಮಸ್ಯೆ ಹೆಚ್ಚಲು ಪ್ರಮುಖ ಕಾರಣವಾಗಿದೆ. ಆ ಕಾರಣಕ್ಕೆ ಪ್ರತಿದಿನ ಯೋಗ, ವ್ಯಾಯಾಮದಂತಹ ಯಾವುದಾದರೂ ದೈಹಿಕ ಚಟುವಟಿಕೆಯಲ್ಲಿ ತೊಡಗಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ. ಹೃದಯದ ಆರೋಗ್ಯಕ್ಕೆ ಇದು ಬಹಳ ಮುಖ್ಯ.

ಈ ಎಲ್ಲದರ ನಡುವೆ ಅತಿಯಾಸ ಆಯಾಸ, ಅತಿಯಾಗಿ ವ್ಯಾಯಾಮ ಮಾಡುವುದು ಹಾಗೂ ವ್ಯಾಯಾಮ ಮಾಡುವಾಗ ನಿಮ್ಮ ಆರೋಗ್ಯ ಸ್ಥಿತಿಗಳ ಬಗ್ಗೆ ಗಮನ ಹರಿಸದಿರುವುದು ಕೂಡ ಮುಖ್ಯವಾಗುತ್ತದೆ. ಈ ಬಗ್ಗೆ ಗಮನ ಹರಿಸಿಲ್ಲ ಎಂದರೆ ದೀರ್ಘಾವಧಿಯಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಯುವಕರು ಹೃದಯಾಘಾತದಿಂದ ಸಾವನ್ನಪ್ಪುವ ಘಟನೆಗಳು ಹೆಚ್ಚುತ್ತಿವೆ. ಜೊತೆಗೆ ವ್ಯಾಯಾಮ ಮಾಡುವಾಗಲೇ ಹೃದಯಾಘಾತದಿಂದ ಮರಣ ಹೊಂದುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತವೆ. ವ್ಯಾಯಾಮ ಮಾಡುವಾಗ ಹೃದಯಾಘಾತದ ಜೊತೆ ಪಾರ್ಶ್ವವಾಯು ಸಮಸ್ಯೆ ಕೂಡ ಕಾಡುತ್ತಿದೆ.

ಈ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಹೇಗೆ?

ಹಲವರಿಗೆ ವ್ಯಾಯಾಮ ಅತಿ ಅವಶ್ಯ, ಪ್ರತಿ ನಿತ್ಯ ವ್ಯಾಯಾಮ ಮಾಡುವುದರಿಂದ ಹಲವು ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಬಹುದು. ಅದಾಗ್ಯೂ ಕೆಲವೊಂದು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲೇಬೇಕು. ಹಾಗಾದರೆ ಯಾರು ಹೆಚ್ಚು ಗಮನ ಹರಿಸಬೇಕು ನೋಡಿ.

* ವೈದ್ಯರು ಹೃದ್ರೋಗಕ್ಕೆ ಸಂಬಂಧಿಸಿದ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಸಮಸ್ಯೆಯನ್ನು ನೀವು ಎದುರಿಸುತ್ತಿದ್ದೀರಿ ಎಂದು ಹೇಳಿದ್ದರೆ.

* ಇತ್ತೀಚೆಗೆ ನೀವು ಹೃದಯಾಘಾತ ಅಥವಾ ಹೃದಯದ ಸಮಸ್ಯೆಯನ್ನು ಎದುರಿಸಿದ್ದರೆ.

* ನೀವು ಜಡಜೀವನಶೈಲಿ ಪಾಲಿಸುತ್ತಿದ್ದರೆ.

ಹೃದ್ರೋಗ ಹೊಂದಿರುವ ಎಲ್ಲರಿಗೂ ವ್ಯಾಯಾಮ ಸೂಕ್ತವಲ್ಲ ಎಂದು ವೈದ್ಯರು ಹೇಳುತ್ತಾರೆ. ನೀವು ವ್ಯಾಯಾಮ ಮಾಡಲು ಹೊಸಬರಾಗಿದ್ದರೆ, ಪ್ರತಿಕೂಲ ಪರಿಣಾಮಗಳನ್ನು ತಡೆಗಟ್ಟಲು ಸರಳ ವ್ಯಾಯಾಮಗಳ ಮೂಲಕ ನಿಧಾನಕ್ಕೆ ಆರಂಭಿಸುವುದು ಮುಖ್ಯ.

ಹೃದಯದ ಸಮಸ್ಯೆಗಳ ಪ್ರಮುಖ ಎಚ್ಚರಿಕೆ ಚಿಹ್ನೆಗಳು

ಹೃದಯಾಘಾತದ ಲಕ್ಷಣಗಳು ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತದೆ. ಹಾಗಾಗಿ ಈ ಹಿಂದೆ ಹೃದಯಾಘಾತವಾದರ ಲಕ್ಷಣಗಳು ನಿಮ್ಮಲ್ಲೂ ಕಾಣಿಸಿಕೊಳ್ಳಬೇಕು ಎಂದೇನಿಲ್ಲ. ಈ ಕೆಳಗಿನ ಯಾವುದೇ ರೋಗಲಕ್ಷಣಗಳು ಕಂಡು ಬಂದರೆ ತಕ್ಷಣವೇ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆಯಿರಿ.

ಎದೆಯ ಅಸ್ವಸ್ಥತೆ

ಹಲವರು ತೀವ್ರ ಹಾಗೂ ಹಠಾತ್ ಕಾಣಿಸುವ ಎದೆ ನೋವನ್ನು ಹೃದಯಾಘಾತ ಎಂದುಕೊಳ್ಳುತ್ತಾರೆ. ನಿಧಾನಕ್ಕೆ ಅಸ್ವಸ್ಥತೆಯ ಅನುಭವವಾಗುವುದು, ಅಹಿತಕರ ಒತ್ತಡ, ಹಿಸುದಂತಾಗುವುದು, ಎದೆಯ ಮಧ್ಯಭಾಗದಲ್ಲಿ ತುಂಬಿ ಇಟ್ಟಂತಹ ಅನುಭವಗಳಾದರೆ ತಕ್ಷಣಕ್ಕೆ ನೀವು ಮಾಡುತ್ತಿರುವ ಕೆಲಸವನ್ನು ನಿಲ್ಲಿಸಬೇಕು. ಎದೆಯಲ್ಲಿ ಸಣ್ಣಗೆ ನೋವು ಕಾಣಿಸಿಕೊಂಡು ಒಮ್ಮೆ ಬಂದು ಒಮ್ಮೆ ಹೋಗುವಂತೆ ಆಗಬಹುದು. ಈ ರೋಗಲಕ್ಷಣವು ಕೆಲವು ನಿಮಿಷಗಳಿಗಿಂತ ಹೆಚ್ಚು ಕಾಲ ಇದ್ದರೆ ವ್ಯಾಯಾಮವನ್ನು ನಿಲ್ಲಿಸಿ, ತಕ್ಷಣಕ್ಕೆ ವೈದ್ಯರ ಬಳಿ ಹೋಗಿ ಪರೀಕ್ಷೆ ಮಾಡಿಸಿ. ವೈದ್ಯಕೀಯ ಆರೈಕೆಯನ್ನು ಪಡೆಯಿರಿ.

ಉಸಿರಾಟದ ತೊಂದರೆ

ವ್ಯಾಯಾಮ ಮಾಡುವ ಸಂದರ್ಭ ಎದೆಯಲ್ಲಿ ಅಸ್ವಸ್ಥತೆ ಉಂಟಾಗಿ ಉಸಿರಾಟದಲ್ಲಿ ವಿಪರೀತ ತೊಂದರೆ ಎದುರಾದರೆ ಇದು ಹೃದಯಾಘಾತದ ಮುನ್ಸೂಚನೆ ಇರಬಹುದು. ಹಾಗಾಗಿ ಕೂಡಲೇ ವೈದ್ಯರ ಬಳಿಗೆ ತೋರಿಸಿ.

ತಲೆತಿರುಗುವಿಕೆ

ವ್ಯಾಯಾಮ ಮಾಡುವಾಗ ತಲೆಭಾರ, ತಲೆಸುತ್ತುವುದು ಇಂತಹ ಲಕ್ಷಣಗಳ ಕಂಡರೆ ನೀವು ಅದನ್ನು ಗಂಭೀರ ಎಚ್ಚರಿಕೆಯ ಸಂಕೇತವೆಂದು ಪರಿಗಣಿಸಬೇಕು ಮತ್ತು ತಕ್ಷಣವೇ ವ್ಯಾಯಾಮವನ್ನು ನಿಲ್ಲಿಸಬೇಕು.

ಹೃದಯ ಬಡಿತ ಅಸಹಜವಾಗಿರುವುದು

ನಿಮ್ಮ ಹೃದಯ ಬಡಿತದ ಸ್ಕಿಪ್ಪಿಂಗ್, ಬಡಿತ ಅಥವಾ ಬಡಿತದ ಸಂವೇದನೆಯು ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಸೂಚಿಸುತ್ತದೆ. ನೀವು ವ್ಯಾಯಾಮ ಮಾಡುವ ಸಂದರ್ಭ ಹೃದಯ ಬಡಿತದಲ್ಲಿ ವ್ಯತ್ಯಾಸವಾದರೆ ಅದು ನಿಮ್ಮ ಗಮನಕ್ಕೆ ಬಂದರೆ ತಕ್ಷಣಕ್ಕೆ ವ್ಯಾಯಾಮ ಮಾಡುವುದು ನಿಲ್ಲಿಸಿ, ವೈದ್ಯರಿಗೆ ತೋರಿಸಿ.

ವಿಪರೀತ ಬೆವರುವುದು

ವ್ಯಾಯಾಮದ ಸಮಯದಲ್ಲಿ ಬೆವರುವುದು ಸಾಮಾನ್ಯವಾದರೂ, ವಾಕರಿಕೆ ಮತ್ತು ತಣ್ಣನೆಯ ಬೆವರುವಿಕೆಗೆ ಒಳಗಾಗುವುದು ಹೃದಯ ಸಮಸ್ಯೆಯ ಸಂಭವನೀಯ ಎಚ್ಚರಿಕೆಯ ಚಿಹ್ನೆಗಳಾಗಿರಬಹುದು. ಸಾಮಾನ್ಯವಾಗಿ ಹೃದಯಘಾತವಾದ ಹಲವರು ಈ ಲಕ್ಷಣವನ್ನು ಎದುರಿಸಿದ್ದಾರೆ ಎನ್ನುತ್ತಾರೆ ತಜ್ಞರು.

ತುರ್ತು ಸಂದರ್ಭದಲ್ಲಿ ಏನು ಮಾಡಬೇಕು?

ಸಂಭವನೀಯ ಹೃದಯದ ಸಮಸ್ಯೆಯೊಂದಿಗೆ ಬಳಲುವಾಗ ಸಮಯವು ಅತ್ಯಂತ ನಿರ್ಣಾಯಕವಾಗಿದೆ. ಇದರಿಂದ ಕಾಯುವುದು ಅಥವಾ ಈ ಲಕ್ಷಣಗಳು ಕಂಡುಬಂದ ನಂತರವೂ ನಿರ್ಲಕ್ಷ್ಯ ಮಾಡಿ ವ್ಯಾಯಾಮ ಮುಂದುವರಿಸುವುದು ತಪ್ಪು, ಕೂಡಲೇ ವೈದ್ಯರನ್ನು ಸಂರ್ಪಕಿಸಿ, ತೊಂದರೆಯ ಬಗ್ಗೆ ಸಲಹೆ ಪಡೆಯಬೇಕು. ಸೂಕ್ತ ಪರೀಕ್ಷೆಗಳನ್ನು ಮಾಡಿಸಬೇಕು.

ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಪ್ರಕಾರ ​​ತುರ್ತು ಸೇವೆಗಳಿಗೆ ಕರೆ ಮಾಡಲು ಕೆಲವು ನಿಮಿಷಗಳಿಗಿಂತ ಹೆಚ್ಚು ಸಮಯ ಕಾಯದಂತೆ ಶಿಫಾರಸು ಮಾಡುತ್ತದೆ - ಹೆಚ್ಚೆಂದರೆ ಐದು ನಿಮಿಷಗಳ ಒಳಗಾಗಿ ನೀವು ಕರೆ ಮಾಡಬೇಕು. ನಿಮಗೆ ಹೃದಯಾಘಾತದ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯರ ಬಳಿ ಕರೆದ್ಯೊಯಲು ನಿಮ್ಮ ಅಕ್ಕಪಕ್ಕದಲ್ಲಿರುವವರಿಗೆ ಹೇಳಬೇಕು.

mysore-dasara_Entry_Point