ಕೆಲವು ತರಕಾರಿಗಳು ಆರೋಗ್ಯಕ್ಕೆ ಒಳ್ಳೆಯದಲ್ಲ; ಮೂತ್ರಪಿಂಡದಲ್ಲಿ ಕಲ್ಲಾಗುವ ಅಪಾಯ ಹೆಚ್ಚಿಸುತ್ತವೆ ಈ 7 ತರಕಾರಿಗಳು
ಕನ್ನಡ ಸುದ್ದಿ  /  ಜೀವನಶೈಲಿ  /  ಕೆಲವು ತರಕಾರಿಗಳು ಆರೋಗ್ಯಕ್ಕೆ ಒಳ್ಳೆಯದಲ್ಲ; ಮೂತ್ರಪಿಂಡದಲ್ಲಿ ಕಲ್ಲಾಗುವ ಅಪಾಯ ಹೆಚ್ಚಿಸುತ್ತವೆ ಈ 7 ತರಕಾರಿಗಳು

ಕೆಲವು ತರಕಾರಿಗಳು ಆರೋಗ್ಯಕ್ಕೆ ಒಳ್ಳೆಯದಲ್ಲ; ಮೂತ್ರಪಿಂಡದಲ್ಲಿ ಕಲ್ಲಾಗುವ ಅಪಾಯ ಹೆಚ್ಚಿಸುತ್ತವೆ ಈ 7 ತರಕಾರಿಗಳು

ಮೂತ್ರಪಿಂಡದ ಕಲ್ಲುಗಳ ಸಮಸ್ಯೆಇಂದು ಬಹಳಷ್ಟು ಜನರನ್ನು ಕಾಡುತ್ತಿರುವ ಸಾಮಾನ್ಯ ಸಮಸ್ಯೆಯಾಗಿದೆ.ಮೂತ್ರಪಿಂಡದ ಕಲ್ಲುಗಳನ್ನು ಉಂಟುಮಾಡುವ ಕೆಲವು ಬಗೆಯ ತರಕಾರಿಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಬೇಕು. ಅಂತಹ ತರಕಾರಿಗಳನ್ನು ಸೀಮಿತ ಪ್ರಮಾಣದಲ್ಲಿ ತಿನ್ನುವುದು ಆರೋಗ್ಯಕ್ಕೆ ಉತ್ತಮ. ಇಲ್ಲಿದೆ ಈ ಬಗ್ಗೆ ಇನ್ನಷ್ಟು ಮಾಹಿತಿ.

ಮೂತ್ರಪಿಂಡದಲ್ಲಿ ಕಲ್ಲಾಗುವ ಅಪಾಯ ಹೆಚ್ಚಿಸುತ್ತವೆ ಈ 7 ತರಕಾರಿಗಳು
ಮೂತ್ರಪಿಂಡದಲ್ಲಿ ಕಲ್ಲಾಗುವ ಅಪಾಯ ಹೆಚ್ಚಿಸುತ್ತವೆ ಈ 7 ತರಕಾರಿಗಳು (Shutterstock)

ಇಂದು ಬಹಳಷ್ಟು ಜನರಿಗೆ ಕಾಡುವ ಸಾಮಾನ್ಯ ಸಮಸ್ಯೆಯೆಂದರೆ ಮೂತ್ರಪಿಂಡದಲ್ಲಿನ ಕಲ್ಲುಗಳು. ಕಿಡ್ನಿಯಲ್ಲಿ ಕಲ್ಲುಗಳಾದರೆ ತುಂಬಾ ನೋವಿನಿಂದ ಕೂಡಿರುತ್ತದೆ. ಅದರ ನೋವು ಎಷ್ಟಿರುತ್ತದೆ ಅಂದರೆ ಅದನ್ನು ಅನುಭವಿಸುವವರಿಗೆ ಮಾತ್ರ ಗೊತ್ತಿರುತ್ತದೆ. ಒಂದು ನಿಮಿಷವೂ ಸಹಿಸಲಾಗದಷ್ಟು ನೋವಿನಿಂದ ಕೂಡಿರುತ್ತದೆ. ಇತ್ತೀಚಿನ ದಿನಗಳಲ್ಲಿ, ಮೂತ್ರಪಿಂಡದ ಕಲ್ಲುಗಳು ಬಹಳ ಸಾಮಾನ್ಯ ಸಮಸ್ಯೆಯಾಗಿ ಮಾರ್ಪಟ್ಟಿವೆ. ಇದಕ್ಕೆ ಹಲವು ಕಾರಣಗಳಿವೆ. ಕೆಟ್ಟ ಆಹಾರ ಪದ್ಧತಿ ಮತ್ತು ಜೀವನಶೈಲಿಯಿಂದಾಗಿ ಈ ಸಮಸ್ಯೆ ಹೆಚ್ಚಾಗುತ್ತಿದೆ. ಇದಕ್ಕಾಗಿ ನೀವು ತಿನ್ನುವ ಆಹಾರದತ್ತ ಗಮನಹರಿಸಿ. ದಿನವಿಡೀ ಸಾಕಷ್ಟು ನೀರು ಕುಡಿಯಬೇಕು. ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಹೆಚ್ಚಿಸುವ ಕೆಲವು ತರಕಾರಿಗಳು ಇಲ್ಲಿವೆ. ಅವು ಯಾವ್ಯಾವು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಪಾಲಕ್ ಸೊಪ್ಪು

ಪಾಲಕ್ ಸೊಪ್ಪು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಇದು ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು, ಆದರೆ ಅತಿಯಾಗಿ ತಿನ್ನುವುದು ಒಳ್ಳೆಯದಲ್ಲ. ಪಾಲಕ್ ಸೊಪ್ಪನ್ನು ಯಾವಾಗಲೂ ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು. ಪಾಲಕ್‍ನಲ್ಲಿ ಆಕ್ಸಲೇಟ್ ಪ್ರಮಾಣವು ತುಂಬಾ ಹೆಚ್ಚಾಗಿದೆ. ಈ ಆಕ್ಸಲೇಟ್ ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗುತ್ತದೆ. ನೀವು ಈಗಾಗಲೇ ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯನ್ನು ಹೊಂದಿದ್ದರೆ ಪಾಲಕ್ ಅನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿ.

ಬದನೆಕಾಯಿ

ಬದನೆಕಾಯಿ ಹೆಚ್ಚು ಸೇವಿಸುವುದರಿಂದಲೂ ಮೂತ್ರಪಿಂಡಗಳಲ್ಲಿ ಕಲ್ಲುಗಳನ್ನು ಉಂಟುಮಾಡಬಹುದು. ಬದನೆಕಾಯಿ ನಮ್ಮ ದೇಹಕ್ಕೆ ಒಳ್ಳೆಯದು. ಇದು ಉತ್ಕರ್ಷಣ ನಿರೋಧಕಗಳು, ಫೈಬರ್, ವಿವಿಧ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಆದರೆ, ಈ ಎಲ್ಲಾ ಪೋಷಕಾಂಶಗಳ ಜೊತೆಗೆ, ಬದನೆಕಾಯಿಯಲ್ಲಿ ಆಕ್ಸಲೇಟ್ ಪ್ರಮಾಣವೂ ತುಂಬಾ ಹೆಚ್ಚಾಗಿದೆ. ಹೀಗಾಗಿ ಮೂತ್ರಪಿಂಡದಲ್ಲಿ ಕಲ್ಲಿನ ಸಮಸ್ಯೆಗಳ ಅಪಾಯ ಹೆಚ್ಚು. ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯನ್ನು ಹೊಂದಿದ್ದರೆ ಆದಷ್ಟು ಸೀಮಿತ ಪ್ರಮಾಣದಲ್ಲಿ ಸೇವಿಸಿ.

ಟೊಮೆಟೊ

ಟೊಮೆಟೊ ಇಲ್ಲದೆ ಯಾವುದೇ ಸಾಂಬಾರ್, ಪಲ್ಯ ಅಪೂರ್ಣವೇ ಸರಿ. ಆದರೆ, ಹೆಚ್ಚು ಟೊಮೆಟೊ ಸೇವನೆಯೂ ಒಳ್ಳೆಯದಲ್ಲ. ಇವು ಮೂತ್ರಪಿಂಡದಲ್ಲಿ ಕಲ್ಲು ಉಂಟಾಗಲು ಕಾರಣವಾಗುತ್ತದೆ. ಟೊಮೆಟೊ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದ ಆಕ್ಸಲೇಟ್ ಇರುವುದರಿಂದ, ಇದು ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಹೆಚ್ಚಿಸುತ್ತದೆ. ವಿಶೇಷವಾಗಿ ಹಸಿ ಟೊಮೆಟೊವನ್ನು ನಿಯತವಾಗಿ ಸೇವಿಸುವುದು ಒಳ್ಳೆಯದಲ್ಲ.

ಸೌತೆಕಾಯಿ

ಸೌತೆಕಾಯಿಯು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಅವುಗಳನ್ನು ಅತಿಯಾಗಿ ಸೇವಿಸುವುದು ಹಾನಿಕಾರಕ. ಸೌತೆಕಾಯಿ ಮತ್ತು ಸೌತೆಕಾಯಿ ಬೀಜಗಳು ಹೆಚ್ಚಿನ ಪ್ರಮಾಣದ ಆಕ್ಸಲೇಟ್ ಸಂಯುಕ್ತಗಳನ್ನು ಹೊಂದಿರುತ್ತವೆ. ಇದು ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಹೆಚ್ಚಿಸುತ್ತದೆ. ನೀವು ಈಗಾಗಲೇ ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯನ್ನು ಹೊಂದಿದ್ದರೆ, ಸೌತೆಕಾಯಿಯನ್ನು ಕಡಿಮೆ ಸೇವಿಸುವುದು ಉತ್ತಮ.

ಆಲೂಗಡ್ಡೆ

ನ್ಯಾಷನಲ್ ಕಿಡ್ನಿ ಫೌಂಡೇಶನ್‌ನ ವರದಿಯ ಪ್ರಕಾರ, ಆಲೂಗಡ್ಡೆ ಮತ್ತು ಸೋಯಾಬೀನ್ ಅನ್ನು ಬಹುತೇಕ ಮಂದಿ ಹೆಚ್ಚಾಗಿ ತಿನ್ನುತ್ತಾರೆ. ಇವುಗಳಲ್ಲಿ ಆಕ್ಸಲೇಟ್ ಪ್ರಮಾಣ ಸಮೃದ್ಧವಾಗಿದೆ. ಇದು ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು. ಇವೆರಡನ್ನೂ ಪ್ರತಿದಿನ ತಿಂದರೆ ಮೂತ್ರಪಿಂಡಗಳಿಗೆ ಸ್ವಲ್ಪ ಹಾನಿಕಾರಕವಾಗಬಹುದು. ಅಲ್ಲದೆ, ಈಗಾಗಲೇ ಮೂತ್ರಪಿಂಡದ ಕಲ್ಲಿನ ಸಮಸ್ಯೆಗಳನ್ನು ಹೊಂದಿರುವವರು ತಮ್ಮ ಆಹಾರದಲ್ಲಿ ಆಲೂಗಡ್ಡೆ ಮತ್ತು ಸೋಯಾಬೀನ್ ಸೇವಿಸುವುದನ್ನು ಆದಷ್ಟು ಕಡಿಮೆ ಮಾಡುವುದು ಒಳಿತು.

(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.)

Whats_app_banner