ಕಲಬೆರಕೆ ಬಾದಾಮಿ ತಿಂದ್ರೆ ಆರೋಗ್ಯಕ್ಕೆ ಹಾನಿ ತಪ್ಪಿದ್ದಲ್ಲ; ನಕಲಿ ಬಾದಾಮಿ ಪತ್ತೆ ಮಾಡೋ ಟ್ರಿಕ್ಸ್ ಇಲ್ಲಿದೆ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಕಲಬೆರಕೆ ಬಾದಾಮಿ ತಿಂದ್ರೆ ಆರೋಗ್ಯಕ್ಕೆ ಹಾನಿ ತಪ್ಪಿದ್ದಲ್ಲ; ನಕಲಿ ಬಾದಾಮಿ ಪತ್ತೆ ಮಾಡೋ ಟ್ರಿಕ್ಸ್ ಇಲ್ಲಿದೆ ನೋಡಿ

ಕಲಬೆರಕೆ ಬಾದಾಮಿ ತಿಂದ್ರೆ ಆರೋಗ್ಯಕ್ಕೆ ಹಾನಿ ತಪ್ಪಿದ್ದಲ್ಲ; ನಕಲಿ ಬಾದಾಮಿ ಪತ್ತೆ ಮಾಡೋ ಟ್ರಿಕ್ಸ್ ಇಲ್ಲಿದೆ ನೋಡಿ

ಈಗೀಗ ಮಾರುಕಟ್ಟೆಯಲ್ಲಿ ಸಿಗುವ ಪ್ರತಿ ವಸ್ತುವೂ ಕಲಬೆರಕೆ ಆಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ನಕಲಿ ಬಾದಾಮಿ ಹಾವಳಿಯು ಜಾಸ್ತಿಯಾಗಿದೆ. ಇದನ್ನ ತಿನ್ನುವುದರಿಂದ ಆರೋಗ್ಯಕ್ಕೆ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚು. ಹಾಗಾದರೆ ಮಾರುಕಟ್ಟೆಯಲ್ಲಿ ಸಿಗುವ ನಕಲಿ ಬಾದಾಮಿಯನ್ನು ಗುರುತಿಸುವುದು ಹೇಗೆ.

ನಕಲಿ ಬಾದಾಮಿ ಗುರುತಿಸುವುದು ಹೇಗೆ
ನಕಲಿ ಬಾದಾಮಿ ಗುರುತಿಸುವುದು ಹೇಗೆ

ಬಹುತೇಕರು ಪ್ರತಿದಿನ ಬಾದಾಮಿ ತಿನ್ನುವ ಅಭ್ಯಾಸ ರೂಢಿಸಿಕೊಂಡಿರುತ್ತಾರೆ. ವಿಶೇಷವಾಗಿ ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಸಲುವಾಗಿ ಬಾದಾಮಿಯನ್ನು ತಿನ್ನಲಾಗುತ್ತದೆ. ಪ್ರತಿದಿನ ಬಾದಾಮಿ ತಿನ್ನುವುದರಿಂದ ದೇಹಕ್ಕೆ ಸಾಕಷ್ಟು ಪೋಷಕಾಂಶಗಳು ದೊರೆಯುತ್ತವೆ. ರೋಗನಿರೋಧಕ ಶಕ್ತಿ ಹೆಚ್ಚುವುದರಿಂದ ಚಳಿಗಾಲದಲ್ಲಿ ಕಾಡುವ ಹಲವು ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಬಾದಾಮಿಯಲ್ಲೂ ಕಲಬೆರಕೆ ಶುರುವಾಗಿದೆ. ನಕಲಿ ಬಾದಾಮಿ ಹಾವಳಿ ಮಾರುಕಟ್ಟೆಯಲ್ಲಿ ಜೋರಾಗಿದೆ. 

ಬಾದಾಮಿಯಲ್ಲೂ ಇರುತ್ತೆ ರಾಸಾಯನಿಕ ಅಂಶ

ಮಾರುಕಟ್ಟೆಯಲ್ಲಿನ ಅನೇಕ ಉತ್ಪನ್ನಗಳು ಕಲಬೆರಕೆಯಿಂದ ಪ್ರಭಾವಿತವಾಗಿವೆ. ಕೊನೆಗೆ ಬಾದಾಮಿಯನ್ನೂ ಕಲಬೆರಕೆ ಮಾಡಿ ಮಾರಾಟ ಮಾಡುತ್ತಾರೆ. ಕೆಲವೊಮ್ಮೆ ಬಾದಾಮಿಯಲ್ಲಿ ರಾಸಾಯನಿಕಗಳು ಅಥವಾ ಕೃತಕ ಪದಾರ್ಥಗಳನ್ನು ಬಳಸಲಾಗುತ್ತದೆ. ಬಾದಾಮಿ ಮಾರಾಟವನ್ನು ಹೆಚ್ಚಿಸಲು, ಅವುಗಳನ್ನು ಹೆಚ್ಚು ಆಕರ್ಷಕವಾಗಿ ಕಾಣುವಂತೆ, ಅನೇಕ ಬಾರಿ ಮಾರಾಟಗಾರರು ಹೈಡ್ರೋಜನ್ ಪೆರಾಕ್ಸೈಡ್, ಬ್ಲೀಚಿಂಗ್ ಏಜೆಂಟ್ ಸೇರಿದಂತೆ ಹಾನಿಕಾರಕ ರಾಸಾಯನಿಕಗಳನ್ನು ಬಳಸುತ್ತಾರೆ. 

ಬಾದಾಮಿಯ ಬಣ್ಣವನ್ನು ಹೆಚ್ಚಿಸಲು ಈ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಆದರೆ ಇದು ಬಾದಾಮಿಯ ನೈಸರ್ಗಿಕ ಗುಣಮಟ್ಟ ಮತ್ತು ಪೌಷ್ಟಿಕಾಂಶದ ಅಂಶವನ್ನು ಕಡಿಮೆ ಮಾಡುತ್ತದೆ. ಇವು ದೇಹವನ್ನು ಪ್ರವೇಶಿಸಿ ವಿಷಕಾರಿಯಾಗುತ್ತವೆ. ಜೀರ್ಣಾಂಗ ವ್ಯವಸ್ಥೆ, ಯಕೃತ್ತು ಮತ್ತು ಮೂತ್ರಪಿಂಡಗಳ ಮೇಲೆ ಕೆಟ್ಟ ಪರಿಣಾಮ. ಆದ್ದರಿಂದ ಬಾದಾಮಿಯನ್ನು ಖರೀದಿಸುವ ಮೊದಲು, ಅದು ಒಳ್ಳೆಯದೋ ಅಥವಾ ರಾಸಾಯನಿಕಗಳೊಂದಿಗೆ ಕಲಬೆರಕೆಯಾಗಿದೆಯೇ ಎಂದು ಕಂಡುಹಿಡಿಯಲು ಪ್ರಯತ್ನಿಸಿ. ಇಲ್ಲಿ ನಾವು ಕೆಲವು ಸಲಹೆಗಳನ್ನು ನೀಡಿದ್ದೇವೆ. ಈ ಟ್ರಿಕ್ಸ್ ಮೂಲಕ ನಕಲಿ ಬಾದಾಮಿಯನ್ನು ಗುರುತಿಸಬಹುದು ನೋಡಿ.

ನಕಲಿ ಬಾದಾಮಿ ಗುರುತಿಸಲು ಟ್ರಿಕ್ಸ್‌

ನಿಜವಾದ ಬಾದಾಮಿ ಉದ್ದ ಮತ್ತು ದುಂಡಗಿನ ಆಕಾರವನ್ನು ಹೊಂದಿರುತ್ತದೆ. ಅವು ತಿಳಿ ಕಂದು ಅಥವಾ ಗಾಢ ಕಂದು ಬಣ್ಣದಲ್ಲಿರುತ್ತವೆ. ಅದೇ ನಕಲಿ ಬಾದಾಮಿಗೆ ಬಂದಾಗ, ಅವುಗಳ ಆಕಾರ ಅಸಾಮಾನ್ಯವಾಗಿದೆ. ಇದರ ಬಣ್ಣವೂ ಸ್ವಲ್ಪ ಭಿನ್ನವಾಗಿರುತ್ತದೆ.

ರುಚಿ ಹೀಗಿರುತ್ತೆ: ನಿಜವಾದ ಬಾದಾಮಿಯು ಸಿಹಿ, ಕೆನೆ ರುಚಿಯನ್ನು ಹೊಂದಿರುತ್ತದೆ. ಅದೇ ಕಲಬೆರಕೆ ಬಾದಾಮಿ ತಿಂದರೆ ಕಹಿ ರುಚಿ ಹೊಂದಿರುತ್ತದೆ.

ನೀರಿನ ಪರೀಕ್ಷೆ: ನಿಜವಾದ ಬಾದಾಮಿಯನ್ನು ನೀರಿನಲ್ಲಿ ಕೆಲವು ಗಂಟೆಗಳ ಕಾಲ ನೆನೆಸಿದ ನಂತರ, ಅವುಗಳ ಸಿಪ್ಪೆಯನ್ನು ಸುಲಭವಾಗಿ ಸುಲಿಯಲು ಬರುತ್ತದೆ. ಆದರೆ ನಕಲಿ ಬಾದಾಮಿ ಸಿಪ್ಪೆಗಳು ಅಷ್ಟು ಸುಲಭವಾಗಿ ಬಿಡಿಸಲು ಸಾಧ್ಯವಾಗುವುದಿಲ್ಲ.

ಎಣ್ಣೆಯಂಶ: ನಿಜವಾದ ಬಾದಾಮಿಯನ್ನು ಕೈಯಲ್ಲಿ ಉಜ್ಜಿದಾಗ ಅವುಗಳಿಂದ ಸ್ವಲ್ಪ ಎಣ್ಣೆಯಂಶ ಬಿಡುಗಡೆಯಾಗುತ್ತದೆ. ನಕಲಿ ಬಾದಾಮಿಯನ್ನು ಕೈಯಿಂದ ಗಟ್ಟಿಯಾಗಿ ಪುಡಿ ಮಾಡುವುದರಿಂದ ಹೆಚ್ಚು ಎಣ್ಣೆ ಉತ್ಪತ್ತಿಯಾಗುವುದಿಲ್ಲ. ಈ ವಿಧಾನಗಳ ಮೂಲಕ ಬಾದಾಮಿ ಅಸಲಿಯೋ ನಕಲಿಯೋ ಎಂದು ತಿಳಿಯಬಹುದು.

ಬಾದಾಮಿ ಆರೋಗ್ಯ ಪ್ರಯೋಜನಗಳು

ಬಾದಾಮಿ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇವುಗಳಲ್ಲಿ ಪ್ರೊಟೀನ್, ಮೆಗ್ನೀಸಿಯಮ್, ವಿಟಮಿನ್ ಇ, ಫೈಬರ್ ಮತ್ತು ಆರೋಗ್ಯಕರ ಕೊಬ್ಬುಗಳಿವೆ. ಅವುಗಳನ್ನು ರಾತ್ರಿಯಿಡೀ ನೆನೆಸಿ ಮತ್ತು ಬೆಳಿಗ್ಗೆ ತಿನ್ನುವುದರಿಂದ ಸಾಕಷ್ಟು ಪೋಷಕಾಂಶಗಳು ದೊರೆಯುತ್ತದೆ. ಅದರಲ್ಲೂ ಮಧುಮೇಹ ಇರುವವರು ಬಾದಾಮಿಯನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು. ಅಧಿಕ ರಕ್ತದೊತ್ತಡವೂ ನಿಯಂತ್ರಣದಲ್ಲಿರುತ್ತದೆ. ಇವುಗಳನ್ನು ತಿನ್ನುವುದರಿಂದ ನೀವು ಬೇಗನೆ ತೂಕವನ್ನು ಕಳೆದುಕೊಳ್ಳಬಹುದು. ಹಸಿವನ್ನು ಕಡಿಮೆ ಮಾಡುತ್ತದೆ ಮತ್ತು ತೂಕ ನಷ್ಟವನ್ನು ಉತ್ತೇಜಿಸುತ್ತದೆ. ಇಷ್ಟೆಲ್ಲಾ ಪ್ರಯೋಜನ ಹೊಂದಿರುವ ಬಾದಾಮಿಯನ್ನು ಕಲಬೆರಕೆ ತಿಂದರೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಚ್ಚರ.

Whats_app_banner