ಕನ್ನಡ ಸುದ್ದಿ  /  Lifestyle  /  Health Tips Amazing Health Benefits Of Tulsi Leaves How To Eat Basil Leaves On Empty Stomach Arc

Tulsi: ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಈ ರೀತಿ ಸೇವಿಸಿದ್ರೆ ಸಿಗತ್ತೆ ಇಷ್ಟಲ್ಲಾ ಲಾಭ

ತಜ್ಞರ ಪ್ರಕಾರ ತುಳಸೀ ಎಲೆಗಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಹಳೆಯ ಕಾಲದಿಂದಲೂ ಮನೆಮದ್ದುಗಳಲ್ಲಿ ಬಳಸಲಾಗುತ್ತಿದ್ದ ತುಳಸಿಯು ದೇಹಕ್ಕೆ ಉತ್ತಮವಾಗಿದೆ. ತುಳಸಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಗರಿಷ್ಠ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ತುಳಸಿಯನ್ನು ಯಾವ ರೀತಿಯಲ್ಲಿ ಸೇವಿಸಬಹುದು ಇಲ್ಲಿದೆ ಓದಿ.

ತುಳಸಿ ಎಲೆಗಳು (freepik)
ತುಳಸಿ ಎಲೆಗಳು (freepik)

ಹಿಂದೂ ಧರ್ಮದಲ್ಲಿ ತುಳಸಿಗೆ ಬಹಳ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಧಾರ್ಮಿಕ ಕಾರ್ಯಗಳಲ್ಲಿ ತುಳಸಿಯನ್ನು ಮಂಗಳಕರವೆಂದು ಪರಿಗಣಿಸಲಾಗಿದೆ. ಪೂಜೆಗಳಲ್ಲಿ ತುಳಸಿ ಎಲೆಗಳನ್ನು ಬಳಸಲಾಗುತ್ತದೆ. ಪುರಾಣಗಳ ಪ್ರಕಾರ ಅಮೃತಕ್ಕಾಗಿ ದೇವತೆಗಳು ಮತ್ತು ಅಸುರರು ಸೇರಿ ಸಮುದ್ರ ಮಂಥನ ಮಾಡಿದಾಗ ಉದ್ಭವವಾದ ಸಸ್ಯ ತುಳಸಿ ಎಂದು ಹೇಳಲಾಗಿದೆ. ಧಾರ್ಮಿಕ ಪ್ರಾಮುಖ್ಯತೆಯಿರುವ ತುಳಸಿ ಎಲೆಗಳಲ್ಲಿ ಔಷಧೀಯ ಗುಣಗಳಿವೆ. ಹಿಂದಿನ ಕಾಲದಿಂದಲೂ ಆಯುರ್ವೇದ ಔಷಧಗಳಲ್ಲಿ ‌ಇದನ್ನು ‌ಬಳಸಲಾಗುತ್ತಿದೆ. ತುಳಸಿ ಎಲೆಯು ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿದೆ. ತುಳಸಿ ಎಲೆಯನ್ನು ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ತುಳಸಿಯನ್ನು ಯಾವೆಲ್ಲ ರೀತಿಯಲ್ಲಿ ಸೇವಿಸಬಹುದು ಎಂಬುದನ್ನು ನೋಡೋಣ.

ತುಳಸಿ ಮತ್ತು ಜೇನುತುಪ್ಪ

ಮಕ್ಕಳಲ್ಲಿ ಕಾಣಿಸುವ ಸಾಮಾನ್ಯ ಕಾಯಿಲೆಯಾದ ಶೀತ, ಕೆಮ್ಮು ಮತ್ತು ಗಂಟಲು ನೋವು ಮುಂತಾದ ಸಮಸ್ಯೆಗಳಿಗೆ ತುಳಸಿ ಉಪಯುಕ್ತವಾಗಿದೆ. ಅದಕ್ಕೆ ಬರೀ ತುಳಸಿ ಎಲೆಯನ್ನಷ್ಟೇ ತಿನ್ನುವುದಕ್ಕಿಂತ ಜೇನುತುಪ್ಪದೊಂದಿಗೆ ತಿಂದರೆ ಹೆಚ್ಚಿನ ಲಾಭ ಪಡೆದುಕೊಳ್ಳಬಹುದು. ಒಂದು ಚಮಚ ತುಳಸಿ ಎಲೆ ಪುಡಿಗೆ ಒಂದು ಚಮಚ ಜೇನುತುಪ್ಪ ಬೆರೆಸಿ ಸೇವಿಸಿ.

ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆ ತಿನ್ನಿ

ತಜ್ಞರ ಪ್ರಕಾರ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಯನ್ನು ತಿನ್ನುವುದರಿಂದಲೂ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ಎಳೆಯ ತುಳಸಿ ಎಲೆಗಳನ್ನು ಖಾಲಿ ಹೊಟ್ಟೆಯಲ್ಲಿ ಅಗಿದು ತಿನ್ನಿ. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದು ಖಿನ್ನತೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ತುಳಸಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ದೇಹದಲ್ಲಿರುವ ವಿಷಕಾರಿ ವಸ್ತುಗಳನ್ನು ಹೋಗಲಾಡಿಸುತ್ತದೆ. ಇದು ಉತ್ತಮ ಆ್ಯಂಟಿಆಕ್ಸಿಡೆಂಟ್‌ ಆಗಿದ್ದು, ಆ್ಯಂಟಿಬ್ಯಾಕ್ಟೀರಿಯಾ ಗುಣಲಕ್ಷಣವನ್ನು ಹೊಂದಿದೆ. ಆರೋಗ್ಯಕರ ಚರ್ಮವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ತುಳಸಿ ಟೀ

ತುಳಸಿಯನ್ನು ಟೀ ಜೊತೆಯೂ ಸೇವಿಸಿಬಹುದು. ಹರ್ಬಲ್‌ ಟೀ ಅಥವಾ ಹಾಲಿನಿಂದ ತಯಾರಿಸುವ ಚಹಾದಲ್ಲಿಯೂ ತುಳಸಿ ಎಲೆಗಳನ್ನು ಸೇರಿಸಬಹುದು. ಒಂದು ಕಪ್‌ ನೀರಿಗೆ ಚಹಾ ಎಲೆಗಳನ್ನು ಹಾಕಿ, ನಂತರ ಅದಕ್ಕೆ 6–7 ತುಳಸಿ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ. ಅದನ್ನು ಸೋಸಿಕೊಳ್ಳಿ. ನಂತರ ಕುಡಿಯಿರಿ.

ತುಳಸಿ ರಸ

ತುಳಸೀ ರಸವು ಗಂಟಲು ನೋವಿಸನಿಂದ ಹಿಡಿದು ಹೊಟ್ಟೆ ನೋವಿನವರೆಗಿನ ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸುತ್ತದೆ. 10–15 ತುಳಸಿ ಎಲೆಗಳನ್ನು ತೆಗೆದುಕೊಂಡು ಜಜ್ಜಿ ರಸವನ್ನು ತೆಗೆಯಿರಿ. ಆ ರಸವನ್ನು ಒಂದು ಕಪ್‌ ನೀರಿಗೆ ಬೆರೆಸಿ. ಇದು ಹೊಟ್ಟೆಯ ತೊಂದರೆಗಳನ್ನು ದೂರಮಾಡುತ್ತದೆ. ದೇಹದ ತೂಕ ಇಳಿಸಲು ಇದು ಉತ್ತಮವಾಗಿದೆ.

ತುಳಸಿ ಕಷಾಯ

ತುಳಸಿ ಎಲೆಯನ್ನು ಒಣಗಿಸಿ. ನಂತರ ಪುಡಿ ಮಾಡಿ. ಅದನ್ನು ನೀರಿಗೆ ಹಾಕಿ ಕುದಿಸಿ. ಆ ನೀರನ್ನು ಸೋಸಿ. ತುಳಸಿ ಕಷಾಯವನ್ನು ಈ ರೀತಿ ತಯಾರಿಸಿ. ಇದರಿಂದ ಬಹಳಷ್ಟು ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.

ತುಳಸಿ ಎಲೆಯ ಪ್ರಯೋಜನಗಳು

* ತೂಕ ಇಳಿಕೆಗೆ ಸಹಕಾರಿಯಾಗಿದೆ.

* ಮಧುಮೇಹ ನಿಯಂತ್ರಣದಲ್ಲಿಡುತ್ತದೆ.

* ಮೊಡವೆ ಮತ್ತು ಎಕ್ನಿ ಹೋಗಲಾಡಿಸುತ್ತದೆ.

* ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

* ದೇಹವನ್ನು ನಿರ್ವಿಷಗೊಳಿಸುತ್ತದೆ.

* ಒತ್ತಡ ನಿವಾರಿಸುತ್ತದೆ.

* ಜೀರ್ಣಕ್ರಿಯೆ ಸುಧಾರಿಸುತ್ತದೆ.

* ಉರಿಯೂತ ಶಮನ ಮಾಡುತ್ತದೆ. ಮತ್ತು ಸೋಂಕುಗಳಿಂದ ದೂರವಿರಿಸುತ್ತದೆ.

* ಕೂದಲು ಮತ್ತು ಚರ್ಮದ ಆರೋಗ್ಯ ಕಾಪಾಡುತ್ತದೆ.