Health Tips: ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ ಮಟ್ಟವನ್ನು ಕಡಿಮೆ ಮಾಡಲು ನಿಮಗೆ ಸಹಾಯ ಮಾಡಬಲ್ಲವು ಈ ನೈಸರ್ಗಿಕ ಡ್ರಿಂಕ್‌ಗಳು-health tips amazing morning drinks to reduce bad cholesterol level including green tea chia seeds rsm ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Health Tips: ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ ಮಟ್ಟವನ್ನು ಕಡಿಮೆ ಮಾಡಲು ನಿಮಗೆ ಸಹಾಯ ಮಾಡಬಲ್ಲವು ಈ ನೈಸರ್ಗಿಕ ಡ್ರಿಂಕ್‌ಗಳು

Health Tips: ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ ಮಟ್ಟವನ್ನು ಕಡಿಮೆ ಮಾಡಲು ನಿಮಗೆ ಸಹಾಯ ಮಾಡಬಲ್ಲವು ಈ ನೈಸರ್ಗಿಕ ಡ್ರಿಂಕ್‌ಗಳು

Health Tips: ದೇಹದಲ್ಲಿ ಕೊಲೆಸ್ಟ್ರಾಲ್‌ ಮಟ್ಟ ಹೆಚ್ಚಾದರೆ ಅದನ್ನು ಕರಗಿಸುವುದು ಬಹಳ ಕಷ್ಟ. ಆದರೆ ನೀವು ಪ್ರತಿದಿನ ಬೆಳಗ್ಗೆ ಬೀಟ್‌ರೂಟ್‌, ಕ್ಯಾರೆಟ್‌, ಶುಂಠಿರಸ ಸೇರಿದಂತೆ ಈ ಡ್ರಿಂಕ್‌ಗಳನ್ನು ಸೇವಿಸುವುದರಿಂದ ಸುಲಭವಾಗಿ ಕೊಲೆಸ್ಟ್ರಾಲ್‌ ಮಟ್ಟವನ್ನು ನಿಯಂತ್ರಿಸಬಹುದು.

ಕೆಟ್ಟ ಕೊಲೆಸ್ಟ್ರಾಲ್‌ ಮಟ್ಟವನ್ನು ಕಡಿಮೆ ಮಾಡುವ ನೈಸರ್ಗಿಕ ಡ್ರಿಂಕ್‌ಗಳು
ಕೆಟ್ಟ ಕೊಲೆಸ್ಟ್ರಾಲ್‌ ಮಟ್ಟವನ್ನು ಕಡಿಮೆ ಮಾಡುವ ನೈಸರ್ಗಿಕ ಡ್ರಿಂಕ್‌ಗಳು

Health Tips: ಆರೋಗ್ಯ ಚೆನ್ನಾಗಿದ್ದರೆ ದೈಹಿಕವಾಗಿ, ಮಾನಸಿಕವಾಗಿ ಬೇರೆ ಯಾವುದೇ ಸಮಸ್ಯೆ ಬರುವುದಿಲ್ಲ. ಉತ್ತಮ ಆರೋಗ್ಯ ನಮ್ಮದಾಗಿರಬೇಕೆಂದರೆ ನಮ್ಮ ಪ್ರತಿದಿನದ ಆಹಾರ ಪದ್ದತಿಯಲ್ಲಿ ಪೌಷ್ಠಿಕ ಆಹಾರವನ್ನು ಸೇವಿಸಬೇಕು. ಜೀವನಶೈಲಿ, ಹಾರ್ಮೋನ್ಸ್‌, ಒತ್ತಡ, ಅನಿಯಮಿತ ಊಟ ಹಾಗೂ ಇನ್ನಿತರ ಕಾರಣಗಳಿಂದ ದೇಹದಲ್ಲಿ ಕೊಲೆಸ್ಟ್ರಾಲ್‌ ಮಟ್ಟ ಹೆಚ್ಚಾಗುತ್ತದೆ.

ದೇಹದಲ್ಲಿ ಕೊಲೆಸ್ಟ್ರಾಲ್‌ ಹೆಚ್ಚಾದರೆ, ಇನ್ನಿತರ ಸಮಸ್ಯೆಗಳು ಉದ್ಭವವಾಗುತ್ತದೆ. ಅತಿ ಆದರೆ ಮತ್ತೆ ಕೊಲೆಸ್ಟ್ರಾಲ್‌ ಕಡಿಮೆ ಮಾಡುವುದು ಬಹಳ ಕಷ್ಟದ ಕೆಲಸ. ಹೊರಗೆ ದೊರೆಯುವ ಹರ್ಬಲ್‌ ಪೌಡರ್‌ ಅಥವಾ ಇನ್ನಿತರ ಪದಾರ್ಥಗಳನ್ನು ಬಳಸಿ ನೀವು ಕೊಲೆಸ್ಟ್ರಾಲ್‌ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುವುದರ ಬದಲಿಗೆ ಮನೆಯಲ್ಲೇ ನೈಸರ್ಗಿಕವಾಗಿ ದೊರೆಯುವ ಪದಾರ್ಥಗಳಿಂದಲೇ ನಿಮ್ಮ ಆರೋಗ್ಯ ಸುಧಾರಿಸಿಕೊಳ್ಳಬಹುದು. ಪ್ರತಿ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಡ್ರಿಂಕ್‌ಗಳನ್ನು ಸೇವಿಸಿ.

1. ಗ್ರೀನ್‌ ಟೀ

ಗ್ರೀನ್‌ ಟೀ, ಪಾಲಿ ಫಿನಾಲ್‌ಗಳಲ್ಲಿ ಸಮೃದ್ಧವಾಗಿದೆ, ವಿಶೇಷವಾಗಿ ಕ್ಯಾಟೆಚಿನ್‌ಗಳು, ಉರಿಯೂತದ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಕ್ಯಾಟೆಚಿನ್‌ಗಳು ಕೊಲೆಸ್ಟ್ರಾಲ್‌ನೊಂದಿಗೆ ಸಂವಹನ ನಡೆಸಬಹುದು, ಇದು ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ನಿಯಮಿತವಾಗಿ ಗ್ರೀನ್‌ ಟೀ ಸೇವಿಸುವ ವ್ಯಕ್ತಿಗಳಲ್ಲಿ ಕೊಲೆಸ್ಟ್ರಾಲ್ ಮಟ್ಟದಲ್ಲಿ ಇಳಿಕೆ ಕಂಡುಬಂದಿದೆ ಎಂದು ಅಧ್ಯಯನಗಳು ತೋರಿಸಿವೆ.

2. ಚಿಯಾ ಸೀಡ್‌, ಸೋಯಾ ಮಿಲ್ಕ್‌

ಸೋಯಾ ಮಿಲ್ಕ್‌ ಹಾಗೂ ಚಿಯಾ ಸೀಡ್ಸ್‌ ಮಿಶ್ರಣವನ್ನು ಸೇವಿಸದರೆ ದೇಹಕ್ಕೆ ಹೇರಳವಾದ ಫೈಬರ್, ಪ್ರೋಟೀನ್ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳನ್ನು ಒದಗಿಸುತ್ತದೆ. ಚಿಯಾ ಬೀಜಗಳು ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಸಾಧಾರಣವಾಗಿ ಸುಧಾರಿಸುತ್ತದೆ ಎಂದು ಸಾಬೀತಾಗಿದೆ.

3. ಅರಿಶಿನ ಮತ್ತು ಸೋಯಾ ಮಿಲ್ಕ್‌

ಪ್ರಾಥಮಿಕ ಅಧ್ಯಯನದ ಪ್ರಕಾರ ಅರಿಶಿನವು ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಸಕ್ರಿಯ ಸಂಯುಕ್ತ, ಕರ್ಕ್ಯುಮಿನ್, ದೇಹದಲ್ಲಿ ಸ್ವತಂತ್ರ ರಾಡಿಕಲ್‌ಗಳನ್ನು ಎದುರಿಸುವ ಉತ್ಕರ್ಷಣಾ ನಿರೋಧಕ ಪರಿಣಾಮಗಳನ್ನು ಹೊಂದಿದೆ.

4. ಬೀಟ್‌ರೂಟ್‌ ಮತ್ತು ಕ್ಯಾರೆಟ್ ಜ್ಯೂಸ್

ಬೀಟ್‌ರೂಟ್‌ನಲ್ಲಿನ ನೈಟ್ರೇಟ್ ಅಂಶ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಬೀಟಾ-ಕ್ಯಾರೋಟಿನ್‌ನಂತಹ ಕ್ಯಾರೊಟಿನಾಯ್ಡ್‌ಗಳಲ್ಲಿ ಸಮೃದ್ಧವಾಗಿರುವ ಕ್ಯಾರೆಟ್‌, ಕೊಲೆಸ್ಟ್ರಾಲ್ ಹೀರಿಕೊಳ್ಳುತ್ತದೆ ಹಾಗೂ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇಲಿಗಳ ಮೇಲೆ ಈ ಅಧ್ಯಯನ ನಡೆಸಲಾಗಿದ್ದು ಮನುಷ್ಯರ ಆರೋಗ್ಯಕ್ಕೆ ಕೂಡಾ ಕ್ಯಾರೆಟ್‌ ಬೀಟ್‌ರೂಟ್‌ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ.

5. ಶುಂಠಿ, ನಿಂಬೆರಸ

ಶುಂಠಿಯು ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ, ಇದು ಹೃದಯ ಆರೋಗ್ಯಕ್ಕೆ ಬಹಳ ಒಳ್ಳೆಯದು. ಸ್ವಲ್ಪ ಶುಂಠಿ ಹಾಗೂ ನಿಂಬೆರಸವನ್ನು ಬೆರೆಸಿದ ನೀರನ್ನು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುತ್ತಾ ಬಂದರೆ ಕೊಲೆಸ್ಟ್ರಾಲ್‌ ಮಟ್ಟ ಕಡಿಮೆ ಆಗುತ್ತದೆ.

ಸ್ಟ್ರಾಬೆರಿ ಸ್ಮೂಥಿ

ಸ್ಟ್ರಾಬೆರಿ ಸ್ಮೂಥಿಗಳು ಆಹಾರದ ಫ್ಲೇವನಾಯ್ಡ್‌ಗಳನ್ನು ಒಳಗೊಂಡಿರುತ್ತವೆ. ಇದು ಕಿಬ್ಬೊಟ್ಟೆಯ ಕೊಬ್ಬಿನೊಂದಿಗೆ ವಯಸ್ಕರಲ್ಲಿ ಲಿಪಿಡ್ ಮತ್ತು ಲಿಪೊಪ್ರೋಟೀನ್ ಪ್ರೊಫೈಲ್‌ಗಳನ್ನು ವರ್ಧಿಸುತ್ತದೆ. ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.

ನಿಮ್ಮ ಆಹಾರದಲ್ಲಿ ಈ ಪೋಷಕಾಂಶ ಭರಿತ ಡ್ರಿಂಕ್‌ ಸೇರಿಸುವುದರಿಂದ ನಾಲಗೆಗೆ ರುಚಿ ಮಾತ್ರವಲ್ಲದೆ ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಳ್ಳಬಹುದು.

mysore-dasara_Entry_Point