ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ ನೆಲ್ಲಿಕಾಯಿ ಚ್ಯವನಪ್ರಾಶ; ಮನೆಯಲ್ಲೇ ತಯಾರಿಸುವ ಸರಳ ವಿಧಾನವಿದು
ಮಳೆಗಾಲದಲ್ಲಿ ಶೀತ, ಕೆಮ್ಮು, ಜ್ವರದಂಥ ಕಾಯಿಲೆಗಳು ಕಾಡುವುದು ಸಾಮಾನ್ಯ. ಇದಕ್ಕಾಗಿ ನೀವು ಮನೆಯಲ್ಲೇ ತಯಾರಿಸಬಹುದಾದ ನೆಲ್ಲಿಕಾಯಿ ಚ್ಯವನಪ್ರಾಶವನ್ನು ಸೇವಿಸಬಹುದು. ಮಕ್ಕಳಿಗೂ ಪ್ರತಿನಿತ್ಯ ಇದನ್ನು ಕೊಡಬಹುದು. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದನ್ನು ತಯಾರಿಸುವುದು ಹೇಗೆ ಎಂಬ ಬಗ್ಗೆ ಸರಳ ಮಾಹಿತಿ ಇಲ್ಲಿದೆ.

ಪ್ರತಿಯೊಂದು ಆರೋಗ್ಯ ಸಮಸ್ಯೆಗೂ ಭಾರತೀಯ ಆಯುರ್ವೇದದಲ್ಲಿ ಪರಿಹಾರವಿದೆ. ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆಗೆ ನೆಲ್ಲಿಕಾಯಿ ಚ್ಯವನಪ್ರಾಶ ಉತ್ತಮ ಪರಿಹಾರವಾಗಿದೆ. ನೆಲ್ಲಿಕಾಯಿ ಚ್ಯವನಪ್ರಾಶ ವಿಟಮಿನ್ ಸಿ ಅಧಿಕವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸುತ್ತದೆ. ನೆಲ್ಲಿಕಾಯಿಯು ಅಡಾಪ್ಟೋಜೆನಿಕ್ ಗುಣಲಕ್ಷಣಗಳನ್ನು ಸಹ ಹೊಂದಿದ್ದು, ಇದು ದೇಹವು ಒತ್ತಡಕ್ಕೆ ಹೊಂದಿಕೊಳ್ಳಲು ಅನುವು ಮಾಡಿಕೊಡುತ್ತದೆ.
ನೆಲ್ಲಿಕಾಯಿ ಚ್ಯವನಪ್ರಾಶವನ್ನು ಬೆಲ್ಲ, ತುಪ್ಪ, ಜೇನುತುಪ್ಪ, ನೆಲ್ಲಿಕಾಯಿ ಮತ್ತು ವಿವಿಧ ಭಾರತೀಯ ಮಸಾಲೆಗಳಿಂದ ತಯಾರಿಸಲಾಗುತ್ತದೆ. ಇದನ್ನು ಮನೆಯಲ್ಲಿಯೇ ಬಹಳ ಸುಲಭವಾಗಿ ತಯಾರಿಸಬಹುದು. ಇದನ್ನು ಪ್ರತಿದಿನ ಸೇವಿಸುವ ಮೂಲಕ ಆರೋಗ್ಯಕರ ದೇಹವು ವಿವಿಧ ಕಾಯಿಲೆಗಳ ವಿರುದ್ಧ ಹೋರಾಡಲು ಸುಲಭವಾಗುತ್ತದೆ. ಚ್ಯವನಪ್ರಾಶವನ್ನು ತಯಾರಿಸಿ ಮೂರು ತಿಂಗಳವರೆಗೆ ಹಾಗೇ ಇಡಬಹುದು. ಇದು ಕೆಡುವುದಿಲ್ಲ. ಇದನ್ನು ತಯಾರಿಸುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಬೇಕಾಗುವ ಪದಾರ್ಥಗಳು
ನೆಲ್ಲಿಕಾಯಿ: 500 ಗ್ರಾಂ, ಬೆಲ್ಲ: 500 ಗ್ರಾಂ, ದೇಸಿ ತುಪ್ಪ: 100 ಗ್ರಾಂ, ಕೇಸರಿ- ಸ್ವಲ್ಪ, ಬಿರಿಯಾನಿ ಎಲೆ- 3, ದಾಲ್ಚಿನ್ನಿ- 1 ಸಣ್ಣ ತುಂಡು, ಜೀರಿಗೆ- 1 ಟೀ ಚಮಚ, ಸೋಂಪು- 1 ಟೀ ಚಮಚ, ಒಣ ಶುಂಠಿ ಪುಡಿ- 2 ಟೀಸ್ಪೂನ್, ಉದ್ದನೆಯ ಕರಿಮೆಣಸು (ಕಾರ್ನ್ ರೀತಿ ಇರುವ)- 3 ರಿಂದ 4, ಲವಂಗ- 5, ಕರಿಮೆಣಸು- 6 ರಿಂದ 7, ಜಾಯಿಕಾಯಿ (ಪುಡಿ)- 1/2 ತುಂಡು, ಹಸಿರು ಏಲಕ್ಕಿ- 6 ರಿಂದ 7, ಕರಿ ಏಲಕ್ಕಿ- 2.
ಮಾಡುವ ವಿಧಾನ
ಎಲ್ಲಾ ಒಣ ಮಸಾಲೆಗಳನ್ನು ಹುರಿದು, ಅವುಗಳನ್ನು ನುಣ್ಣಗೆ ಪುಡಿಮಾಡಿ. ನಂತರ ಈ ಮಸಾಲೆಗಳನ್ನು ಒಂದು ಜರಡಿ ಮೂಲಕ ಫಿಲ್ಟರ್ ಮಾಡಿ. ಇನ್ನೊಂದೆಡೆ ನೆಲ್ಲಿಕಾಯಿಯನ್ನು ತೊಳೆದು 10 ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಿ. ಇದನ್ನು ಪ್ರೆಶರ್ ಕುಕ್ಕರ್ನಲ್ಲಿ 1 ಸೀಟಿ ಬರುವವರೆಗೆ ಬೇಯಿಸಬಹುದು. ಬೇಯಿಸಿದ ನಂತರ ನೆಲ್ಲಿಕಾಯಿಯನ್ನು ತಣ್ಣಗಾಗಲು ಬಿಡಿ. ಅದು ತಣ್ಣಗಾದ ನಂತರ ನೆಲ್ಲಿಕಾಯಿ ಬೀಜಗಳನ್ನು ತೆಗೆಯಿರಿ.
ನಂತರ ನೆಲ್ಲಿಕಾಯಿಯನ್ನು ನುಣ್ಣಗೆ ರುಬ್ಬಿಕೊಳ್ಳಿ. ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ. ನಂತರ ಅದಕ್ಕೆ ರುಬ್ಬಿದ ಮಿಶ್ರಣವನ್ನು ಸೇರಿಸಿ ಕೆಲ ನಿಮಿಷಗಳ ಕಾಲ ಬೇಯಿಸಿ. ಈ ಮಿಶ್ರಣ ಕ್ರಮೇಣ ದಪ್ಪವಾಗುತ್ತಾ ಬರುವಾಗ ಪುಡಿ ಮಾಡಿದ ಬೆಲ್ಲವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಸುಮಾರು 10 ನಿಮಿಷಗಳ ಕಾಲ ಬೇಯಿಸಿ.
10 ನಿಮಿಷ ಬೇಯಿಸಿದ ನಂತರ ಅದಕ್ಕೆ ಮಸಾಲೆ ಮಿಶ್ರಣದ ಪುಡಿಯನ್ನು ಸೇರಿಸಿ. ಮಿಶ್ರಣವು ಸ್ವಲ್ಪ ಅಂಟಿಕೊಳ್ಳುವವರೆಗೆ ಬೇಯಿಸಿ. ನಂತರ ಈ ಮಿಶ್ರಣಕ್ಕೆ ಕೇಸರಿ ಸೇರಿಸಿ ಬೆರೆಸಿದರೆ ನೆಲ್ಲಿಕಾಯಿ ಚ್ಯವನಪ್ರಾಶ ಸಿದ್ಧ.
ಸಂಪೂರ್ಣವಾಗಿ ತಣ್ಣಗಾದ ನಂತರ, ಅದನ್ನು ಗಾಜಿನ ಕಂಟೇನರ್ಗೆ ವರ್ಗಾಯಿಸಿ. ಗಾಜಿನ ಕಂಟೇನರ್ನಲ್ಲಿ ಇಡುವುದರಿಂದ ಈ ಚ್ಯವನಪ್ರಾಶವನ್ನು ಒಂದು ವರ್ಷದವರೆಗೆ ಬಳಸಬಹುದು. ಇದು ಕೆಡುವುದಿಲ್ಲ.
ಚ್ಯವನಪ್ರಾಶದ ಲಾಭಗಳು
ಅಂದಹಾಗೆ, ಈ ಚ್ಯವನಪ್ರಾಶವು ದೇಹದಿಂದ ಟಾಕ್ಸಿನ್ ಅನ್ನು ಹೊರಹಾಕಲು ಸಹಾಯ ಮಾಡುತ್ತದೆ. ಹಾಗೆಯೇ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ. ಅದರ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದಾಗಿ, ಇದು ಚೈತನ್ಯವನ್ನು ತರುತ್ತದೆ. ಹಾಗೆಯೇ ಚ್ಯವನಪ್ರಾಶವು ಮೆದುಳಿನ ಕಾರ್ಯಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ವರದಿ: ಪ್ರಿಯಾಂಕಾ ಗೌಡ
ಆರೋಗ್ಯ ಸಲಹೆಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | Mood Disorders: ಪದೇ ಪದೇ ಮೂಡ್ ಚೇಂಜ್ ಆಗುತ್ತಾ, ವಿಟಮಿನ್ ಕೊರತೆಯು ಕಾರಣವಿರಬಹುದು, ನಿರ್ಲಕ್ಷ್ಯ ಮಾಡ್ಬೇಡಿ