ದಿನಾ ಮೌತ್ ವಾಶ್ ಬಳಸ್ತಿದ್ದೀರಾ.. ನಿಮ್ಮ ಹಾರ್ಟು, ಕರಳು ಚೆನ್ನಾಗಿರಬೇಕು ಅಂದ್ರೆ ಬಳಸಬೇಡಿ ಅಂತಿದ್ದಾರೆ ಅಮೆರಿಕದ ಈ ಡಾಕ್ಟರ್-health tips are you using mouthwash a heart surgeon says you might want to stop and lists things to avoid uks ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ದಿನಾ ಮೌತ್ ವಾಶ್ ಬಳಸ್ತಿದ್ದೀರಾ.. ನಿಮ್ಮ ಹಾರ್ಟು, ಕರಳು ಚೆನ್ನಾಗಿರಬೇಕು ಅಂದ್ರೆ ಬಳಸಬೇಡಿ ಅಂತಿದ್ದಾರೆ ಅಮೆರಿಕದ ಈ ಡಾಕ್ಟರ್

ದಿನಾ ಮೌತ್ ವಾಶ್ ಬಳಸ್ತಿದ್ದೀರಾ.. ನಿಮ್ಮ ಹಾರ್ಟು, ಕರಳು ಚೆನ್ನಾಗಿರಬೇಕು ಅಂದ್ರೆ ಬಳಸಬೇಡಿ ಅಂತಿದ್ದಾರೆ ಅಮೆರಿಕದ ಈ ಡಾಕ್ಟರ್

ಏನೇ ಹೇಳಿ ಹಾರ್ಟ್‌ ಮತ್ತು ಕರುಳು ಎರಡೂ ಚೆನ್ನಾಗಿರಬೇಕು. ಹಾಗಾಗಿ ಕೆಲವೊಂದು ಅಭ್ಯಾಸಗಳನ್ನು ಬಿಡಬೇಕಾಗುತ್ತೆ. ಅಂದ ಹಾಗೆ, ನೀವು ದಿನಾ ಮೌತ್ ವಾಶ್ ಬಳಸ್ತಿದ್ದೀರಾ.. ನಿಮ್ಮ ಹಾರ್ಟು, ಕರಳು ಚೆನ್ನಾಗಿರಬೇಕು ಅಂದ್ರೆ ಬಳಸಬೇಡಿ ಅಂತಿದ್ದಾರೆ ಅಮೆರಿಕದ ಈ ಡಾಕ್ಟರ್. ಬೇರೇನು ವಿವರಿಸಿದ್ದಾರೆ ನೋಡೋಣ.

ದಿನಾ ಮೌತ್ ವಾಶ್ ಬಳಸ್ತಿದ್ದೀರಾ.. ಹಾಗಾದರೆ ಇದು ನಿಮ್ಮ ಗಮನಕ್ಕೆ. ನಿಮ್ಮ ಹಾರ್ಟು, ಕರಳು ಚೆನ್ನಾಗಿರಬೇಕು ಅಂದ್ರೆ ಬಳಸಬೇಡಿ ಅಂತಿದ್ದಾರೆ ಅಮೆರಿಕದ ಈ ಡಾಕ್ಟರ್. (ಸಾಂಕೇತಿಕ ಚಿತ್ರ)
ದಿನಾ ಮೌತ್ ವಾಶ್ ಬಳಸ್ತಿದ್ದೀರಾ.. ಹಾಗಾದರೆ ಇದು ನಿಮ್ಮ ಗಮನಕ್ಕೆ. ನಿಮ್ಮ ಹಾರ್ಟು, ಕರಳು ಚೆನ್ನಾಗಿರಬೇಕು ಅಂದ್ರೆ ಬಳಸಬೇಡಿ ಅಂತಿದ್ದಾರೆ ಅಮೆರಿಕದ ಈ ಡಾಕ್ಟರ್. (ಸಾಂಕೇತಿಕ ಚಿತ್ರ) (Pexels)

ಹೃದಯ ಕೆಲಸ ಮಾಡೋದು ನಿಲ್ಲಿಸಿದ್ರೆ ಬದುಕಿನ ಯಾತ್ರೆ ಮುಗಿದಂತೆಯೇ. ಯಾವುದಕ್ಕೂ ಹಾರ್ಟ್ ಚೆನ್ನಾಗಿರಬೇಕು ಅಲ್ವ. ಹೃದಯದ ರಕ್ತನಾಳಗಳ ಕಾಯಿಲೆ ಹೆಚ್ಚು ಕಾಳಜಿವಹಿಸಬೇಕಾದ ವಿಷಯ. ವಿಶ್ವ ಹೃದಯ ದಿನದ ನಿಮಿತ್ತವಾಗಿ ಹೇಳುವುದಾದರೆ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಪ್ರಕಾರ, ಜಗತ್ತಿನಲ್ಲಿ ಸಂಭವಿಸುವ ಹೆಚ್ಚು ಸಾವುಗಳಿಗೆ ಇದೇ ಕಾಯಿಲೆ ಕಾರಣ. ಪ್ರತಿ ವರ್ಷ ಅಂದಾಜು 1.79 ಕೋಟಿ ಜನ ಹೃದಯದ ರಕ್ತನಾಳಗಳ ಕಾಯಿಲೆಯಿಂದ ಮೃತಪಡುತ್ತಿದ್ದಾರೆ ಎಂದು ಡಬ್ಲ್ಯುಎಚ್ಒ ಅಂಕಿ ಅಂಶ ಹೇಳಿದೆ. ಸಾವಿನ ಸಂಖ್ಯೆ ನೋಡಿದಾಗ ಸ್ವಲ್ಪ ಕಳವಳ ಉಂಟುಮಾಡುವಂಥದ್ದಾಗಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ನ ಅಂಕಿ ಅಂಶ ಪ್ರಕಾರ ಭಾರತದಲ್ಲಿ ಹೃದಯದ ರಕ್ತನಾಳಗಳ ಕಾಯಿಲೆಯಿಂದ 1990ರಲ್ಲಿ 22.6 ಲಕ್ಷ ಸಾವು ಸಂಭವಿಸಿತ್ತು. 2020ರಲ್ಲಿ ಇದು 47.7 ಲಕ್ಷಕ್ಕೆ ಏರಿಕೆಯಾಗಿದೆ. ಭಾರತದಲ್ಲಿ ಪರಿಧಮನಿಯ ಹೃದ್ರೋಗದ ಹರಡುವಿಕೆಯ ಪ್ರಮಾಣವನ್ನು ಕಳೆದ ಹಲವು ದಶಕಗಳಿಂದ ಗಮನಿಸುತ್ತಿದ್ದು, ಗ್ರಾಮೀಣ ಜನಸಂಖ್ಯೆಯಲ್ಲಿ 1.6 ಪ್ರತಿಶತದಿಂದ 7.4 ಪ್ರತಿಶತದವರೆಗೆ ಮತ್ತು ನಗರ ಜನಸಂಖ್ಯೆಯಲ್ಲಿ 1 ಪ್ರತಿಶತದಿಂದ 13.2 ಪ್ರತಿಶತದವರೆಗೆ ಏರಿಕೆಯಾಗಿದೆ ಎಂದು ಅದು ವಿವರಿಸಿದೆ.

ಹೃದಯ ಜೋಪಾನ ಅಂತಿದ್ದಾರೆ ಅಮೆರಿಕದ ಈ ಡಾಕ್ಟರ್‌

ಇದೊಂದು ರೀತಿ ದಿಗ್ಭ್ರಮೆಗೊಳಿಸುವ ಅಂಕಿ ಅಂಶ. ಇನ್ನೊಂದೆಡೆ ಉತ್ತಮ ರೀತಿಯಲ್ಲಿ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ತಿಳಿವಳಿಕೆಯುಳ್ಳ ಮತ್ತು ಆರೋಗ್ಯಕರ ಜೀವನಶೈಲಿ ಆಯ್ಕೆಗಳನ್ನು ಅಳವಡಿಸಿಕೊಳ್ಳುವುದಕ್ಕೆ ಎಚ್ಚರಿಕೆ ಗಂಟೆಯೂ ಹೌದು. ಅಮೆರಿಕದ ಸೇಂಟ್ ಜೋಸೆಫ್ಸ್ / ಕ್ಯಾಂಡ್ಲರ್ ಫಿಸಿಶಿಯನ್ ನೆಟ್ವರ್ಕ್‌ನಲ್ಲಿ ಹೃದಯರಕ್ತನಾಳದ ಶಸ್ತ್ರಚಿಕಿತ್ಸಕರಾಗಿರುವ ಡಾ.ಜೆರೆಮಿ ಲಂಡನ್ ಅವರು ನಿಮ್ಮ ಹಾರ್ಟ್‌ ಅನ್ನು ನೀವು ಪ್ರೀತಿಸ್ತೀರಾದರೆ ಇವೆಲ್ಲ ಬಿಟ್ಟುಬಿಡಿ ಎಂದು ಒಂದು ಸಣ್ಣ ಪಟ್ಟಿಯನ್ನು ಇನ್‌ಸ್ಟಾಗ್ರಾಂನಲ್ಲಿ ಮುಂದಿಟ್ಟಿದ್ದಾರೆ.

ಹಾರ್ಟ್‌, ಕರಳು ಚೆನ್ನಾರಬೇಕು ಅಂದ್ರೆ ಈ ನಾಲ್ಕನ್ನು ಬಿಟ್ಟುಬಿಡಿ

ಮೌತ್ ವಾಷ್, ಧೂಮಪಾನ, ಪ್ರೊಸೆಸ್ಡ್ ಫುಡ್, ಮದ್ಯಪಾನ ಈ ನಾಲ್ಕು ಹೃದಯದ ಆರೋಗ್ಯದ ಮೇಲೆ ಹೇಗೆ ನಕಾರಾತ್ಮಕ ಪರಿಣಾಮ ಬೀರುತ್ತವೆ ಮತ್ತು ಅದರ ಆರೋಗ್ಯ ಹದಗೆಡಿಸುತ್ತದೆ ಎಂಬುದರ ಬಗ್ಗೆ ಡಾ.ಜೆರೆಮಿ ಲಂಡನ್ ಅವರು ಒಳನೋಟಗಳನ್ನು ಒದಗಿಸಿದ್ದಾರೆ.

1) ಮೌತ್ ವಾಶ್: ದಿನಾ ಮೌತ್ ವಾಶ್ ಬಳಸ್ತಾ ಇದ್ದೀರಾ.. ಅದರಲ್ಲೇನು ತೊಂದರೆ ಬಾಯಿ ಫ್ರೆಶ್ ಆಗಿ ತಾಜಾತನ ಹರಡುತ್ತಲ್ಲ ಎಂಬ ಭಾವನೆ ನಿಮ್ಮದಾಗಿರಬಹುದು. ಅದರಿಂದ ಏನೂ ಅಪಾಯ ಇಲ್ಲ ಎಂದೂ ಭಾವಿಸಿರಬಹುದು. ಮೌತ್ ವಾಶ್ ನಲ್ಲಿ ವಿಶೇಷವಾಗಿ ಆಲ್ಕೋಹಾಲ್ ಇರುವ ಮೌತ್ ವಾಶ್ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದನ್ನು ಉಪಯೋಗಿಸಿ ಬಾಯಿ ತೊಳೆದಾಗ ಬಾಯಿಯಲ್ಲಿ ಕರುಳಿಗೆ ಬೇಕಾದ ಒಳ್ಳೆಯ ಬ್ಯಾಕ್ಟೀರಿಯಾವನ್ನು ನಾಶ ಮಾಡುತ್ತದೆ. ಇದರಿಂದ ಕರಳಿನ ಆರೋಗ್ಯ ಹಾಳಾಗುತ್ತದೆ.

ಅದಲ್ಲದೆ ಗಮನಿಸಬೇಕಾದ ಅಂಶ ಇದು. ಬಾಯಿಯ ಬ್ಯಾಕ್ಟೀರಿಯಾವು ನೈಟ್ರಿಕ್ ಆಕ್ಸೈಡ್ ಅನ್ನು ಉತ್ಪಾದಿಸುತ್ತದೆ. ಇದು ರಕ್ತದೊತ್ತಡವನ್ನು ನಿರ್ವಹಿಸುತ್ತದೆ ಮತ್ತು ನಿಯಂತ್ರಿಸುತ್ತದೆ. ಮೌತ್ ವಾಶ್ ನೊಂದಿಗೆ ಬಾಯಿಯ ಬ್ಯಾಕ್ಟೀರಿಯಾ ನಾಶವಾದರೆ ಆಗ ಅಧಿಕ ರಕ್ತದೊತ್ತಡ ಅಥವಾ ಹೈಪರ್ ಟೆನ್ಶನ್‌ ಹೆಚ್ಚಾಗಬಹುದು. ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ.

2) ಧೂಮಪಾನ : "ಧೂಮಪಾನವು ನಿಮ್ಮ ಆರೋಗ್ಯವನ್ನು ನೀವೇ ಕೈಯಾರೆ ಹಾಳು ಮಾಡುವುದಕ್ಕೆ ಇರುವ ಏಕೈಕ ಕೆಟ್ಟ ವಿಚಾರ." ಎಂದು ಹೇಳುವ ಡಾ.ಲಂಡನ್‌, ಧೂಮಪಾನವು ರಕ್ತನಾಳಗಳ ಒಳ ಪದರಕ್ಕೆ ನೇರವಾಗಿ ಹಾನಿಮಾಡುತ್ತದೆ. ಇದು ಹೃದಯದಲ್ಲಿ ಅಡೆತಡೆಗಳು ಮತ್ತು ಅಪಧಮನಿ ದಪ್ಪವಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಇದು ಕೊಬ್ಬು ಸಂಗ್ರಹವಾಗಲು ಅಂದರೆ ಅಪಧಮನಿ ಗೋಡೆಗಳಲ್ಲಿ ಕೊಲೆಸ್ಟ್ರಾಲ್ ಸಂಗ್ರಹಕ್ಕೆ ಕಾರಣವಾಗುತ್ತದೆ. ಧೂಮಪಾನವು ಕ್ಯಾನ್ಸರ್‌ಗೂ ಕಾರಣ.

3) ಸಂಸ್ಕರಿತ ಆಹಾರ (ಪ್ರೊಸೆಸ್ಡ್ ಫುಡ್‌): ಶರೀರದ ಮೇಲೆ ಮಾರಕವೆನಿಸುವ ಹಾನಿಕಾರಕ ಪರಿಣಾಮಗಳಿಗೆ ಈಗಾಗಲೇ ಕುಖ್ಯಾತಿ ಪಡೆದಿರುವ ವಿಷಯ ಇದು. ಹೆಚ್ಚು ಹೆಚ್ಚು ಸಂಸ್ಕರಿತ ಆಹಾರ ಸೇವಿಸಿದರೆ ಅದು ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದು ಸರಳವಾಗಿ ಹೇಳಬಹುದು. ಆದ್ದರಿಂದ ನಮ್ಮ ಆಹಾರ ಕ್ರಮದಿಂದ ಪ್ರೊಸೆಸ್ಡ್‌ ಫುಡ್ ಅನ್ನು ತೆಗೆದು ಹಾಕಬೇಕು. ಆಹಾರ ಎಂಬುದು ಪೌಷ್ಟಿಕಾಂಶದಿಂದ ಕೂಡಿರಬೇಕು. ಅದು ಜೀವಕೋಶಗಳಿಗೆ ಶಕ್ತಿ ತುಂಬಬೇಕು. ಆದರೆ ಪ್ರೊಸೆಸ್ಡ್‌ ಫುಡ್‌ ಪ್ಯಾಕೆಟ್‌ನಲ್ಲಿ ಏನೇ ಇದ್ದರೂ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ. ನೀವು ಏನು ತಿನ್ನುತ್ತೀರೋ ಅದೇ ಪರಿಸ್ಥಿತಿ ನಿಮ್ಮದೂ ಆಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

4) ಮದ್ಯಪಾನ: ಹ್ಯಾಪಿ ಅವರ್ಸ್‌ ಅಂತ ಕೇಳಿದ್ರೆ ಸಾಕು ಮದ್ಯಪ್ರಿಯರ ಕಿವಿ ಚುರುಕಾಗುತ್ತದೆ. ಬಾಯಿ ಮದ್ಯದ ರುಚಿಗೆ ತವಕಿಸಲಾರಂಭಿಸುತ್ತೆ ಅಲ್ವ. ಆದರೆ ಕುಡಿತದ ಪರಿಣಾಮ ಬಹಳ ಕೆಟ್ಟದ್ದು. ಹೆಚ್ಚೇನೂ ಕುಡಿಯಲ್ಲ. ಸ್ವಲ್ಪ ಅಷ್ಟೇ ಎಂದು ಹೇಳುತ್ತ ಮದ್ಯಪಾನ ಮಾಡುವವರೂ ಗಮನಿಸಿ. ಮದ್ಯವು ಶರೀರ ಪ್ರವೇಶಿಸಿದ ಕೂಡಲೇ ಅಲ್ಲಿ ಅದರ ವಿಭಜನೆ ಹೇಗೆ ನಡೆಯುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಿ. ಆಲ್ಕೋಹಾಲ್ ಪ್ರಾಥಮಿಕವಾಗಿ ಅಸಿಟೈಲ್ ಅಲ್ಡಿಹೈಡ್ ಮತ್ತು ಅಸಿಟೇಟ್ ಎಂಬ ಎರಡು ಸಂಯುಕ್ತಗಳಾಗಿ ವಿಭಜನೆಯಾಗುತ್ತದೆ. ಅಸಿಟೈಲ್ ಆಲ್ಡಿಹೈಡ್ ದೇಹದ ಪ್ರತಿಯೊಂದು ಜೀವಕೋಶಕ್ಕೂ ಅತ್ಯಂತ ವಿಷಕಾರಿಯಾಗಿದೆ. ಅಸಿಟೇಟ್ ಯಾವುದೇ ಕ್ಯಾಲೊರಿಗಳನ್ನು ಹೊಂದಿಲ್ಲ ಮತ್ತು ಯಾವುದೇ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿರುವುದಿಲ್ಲ. ಈ ಎರಡೂ ಅಂಶಗಳು ನಿಧಾನವಾಗಿ ಶರೀರದ ಶಕ್ತಿ ಕುಂದಿಸಿ, ಅನಾರೋಗ್ಯಕ್ಕೂ ಕಾರಣವಾಗುತ್ತವೆ.

ಹೌದು ಈ ನಾಲ್ಕು ಅಭ್ಯಾಸಗಳನ್ನು ಇಟ್ಟುಕೊಂಡು ನಿಮ್ಮನ್ನು ನೀವು ಪ್ರೀತಿಸಲಾಗದು. ಹಾರ್ಟು, ಕರುಳನ್ನೂ ಕಾಪಾಡಲಾಗದು ಎಂದೇ ಡಾ.ಜೆರೆಮಿ ಲಂಡನ್ ಅವರು ನಿಮ್ಮ ಹಾರ್ಟ್‌ ಅನ್ನು ನೀವು ಪ್ರೀತಿಸ್ತೀರಾದರೆ ಇವೆಲ್ಲ ಬಿಟ್ಟುಬಿಡಿ ಎಂದು ಹೇಳಿರುವಂಥದ್ದು.

mysore-dasara_Entry_Point